ನೀವು ಪೈನಾಪಲ್ ಕೇಸರಿಬಾತ್ ತಿಂದಿರಬಹುದು: ಅನಾನಸು-ಬಾದಾಮಿ ಹಲ್ವಾ ಸವಿದಿದ್ದೀರಾ, ಇಲ್ಲವಾದಲ್ಲಿ ಇಂದೇ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಪೈನಾಪಲ್ ಕೇಸರಿಬಾತ್ ತಿಂದಿರಬಹುದು: ಅನಾನಸು-ಬಾದಾಮಿ ಹಲ್ವಾ ಸವಿದಿದ್ದೀರಾ, ಇಲ್ಲವಾದಲ್ಲಿ ಇಂದೇ ಟ್ರೈ ಮಾಡಿ

ನೀವು ಪೈನಾಪಲ್ ಕೇಸರಿಬಾತ್ ತಿಂದಿರಬಹುದು: ಅನಾನಸು-ಬಾದಾಮಿ ಹಲ್ವಾ ಸವಿದಿದ್ದೀರಾ, ಇಲ್ಲವಾದಲ್ಲಿ ಇಂದೇ ಟ್ರೈ ಮಾಡಿ

ನೀವು ಅನಾನಸು ಕೇಸರಿಬಾತ್ ತಿಂದಿರಬಹುದು. ಆದರೆ, ಎಂದಾದರೂ ಅನಾನಸು ಬಾದಾಮಿ ಹಲ್ವಾ ತಿಂದಿದ್ದೀರಾ?ಇಲ್ಲವಾದಲ್ಲಿ ಇಂದೇ ಟ್ರೈ ಮಾಡಿ. ತುಂಬಾ ರುಚಿಕರವಾಗಿರುವ ಈ ಸಿಹಿಖಾದ್ಯವನ್ನು ತಯಾರಿಸುವುದು ತುಂಬಾನೇ ಸಿಂಪಲ್. ಇಲ್ಲಿದೆ ಅನಾನಸು-ಬಾದಾಮಿ ಹಲ್ವಾ ರೆಸಿಪಿ ಮಾಡುವ ವಿಧಾನ.

ಪೈನಾಪಲ್ ಕೇಸರಿಬಾತ್ ತಿಂದಿರಬಹುದು: ಅನಾನಸು-ಬಾದಾಮಿ ಹಲ್ವಾ ಸವಿದಿದ್ದೀರಾ? ಇಲ್ಲವಾದಲ್ಲಿ ಇಂದೇ ಟ್ರೈ ಮಾಡಿ
ಪೈನಾಪಲ್ ಕೇಸರಿಬಾತ್ ತಿಂದಿರಬಹುದು: ಅನಾನಸು-ಬಾದಾಮಿ ಹಲ್ವಾ ಸವಿದಿದ್ದೀರಾ? ಇಲ್ಲವಾದಲ್ಲಿ ಇಂದೇ ಟ್ರೈ ಮಾಡಿ

ಕೆಲವೊಮ್ಮೆ ಖಾರದ ಖಾದ್ಯ ತಿನ್ನಬೇಕು ಎಂದು ಆಸೆಯಾದ್ರೆ, ಕೆಲವೊಮ್ಮೆ ಸಿಹಿ ತಿನಿಸು ತಿನ್ನುವ ಕಡುಬಯಕೆಯಾಗುವುದು ಸಹಜ. ನಿಮಗೂ ಏನಾದರೂ ಸಿಹಿತಿನಿಸು ತಿನ್ನಬೇಕು ಎನಿಸಿದರೆ ಅನಾನಸು-ಬಾದಾಮಿ ಹಲ್ವಾ ರೆಸಿಪಿಯನ್ನು ಟ್ರೈ ಮಾಡಬಹುದು. ಅನಾನಸು, ಬಾದಾಮಿ, ಸಕ್ಕರೆ, ತುಪ್ಪ, ಒಣಹಣ್ಣುಗಳನ್ನು ಸೇರಿಸಿ ತಯಾರಿಸಲಾಗುವ ಈ ಭಕ್ಷ್ಯವು ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಯಾಗಿದೆ. ನೀವು ಅನಾನಸು ಕೇಸರಿಬಾತ್ ತಿಂದಿರಬಹುದು. ಆದರೆ, ಎಂದಾದರೂ ಅನಾನಸು ಬಾದಾಮಿ ಹಲ್ವಾ ತಿಂದಿದ್ದೀರಾ? ಇಲ್ಲವಾದಲ್ಲಿ ಇಂದೇ ಟ್ರೈ ಮಾಡಿ. ಇದನ್ನು ತಯಾರಿಸುವುದು ತುಂಬಾನೇ ಸರಳ. ಇಲ್ಲಿದೆ ಅನಾನಸು-ಬಾದಾಮಿ ಹಲ್ವಾ ರೆಸಿಪಿ ಮಾಡುವ ವಿಧಾನ:

ಅನಾನಸು-ಬಾದಾಮಿ ಹಲ್ವಾ ರೆಸಿಪಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು: ಅನಾನಸು- 250 ಗ್ರಾಂ, ಬಾದಾಮಿ- 250 ಗ್ರಾಂ, ಸಕ್ಕರೆ- 125 ಗ್ರಾಂ, ತುಪ್ಪ- 150 ಗ್ರಾಂ, ಖೋಯಾ- 150 ಗ್ರಾಂ, ಏಲಕ್ಕಿ- ¼ ಟೀ ಚಮಚ, ಗೋಡಂಬಿ ಹಾಗೂ ದ್ರಾಕ್ಷಿ- 15 ಗ್ರಾಂ ನಷ್ಟು.

ಮಾಡುವ ವಿಧಾನ: ಅನಾನಸನ್ನು ಸಿಪ್ಪೆ ಸುಳಿದು ಸಣ್ಣಗೆ ಕತ್ತರಿಸಿ. ಮಧ್ಯಮ ಉರಿಯಲ್ಲಿ ಬಾಣಲೆಯನ್ನಿಟ್ಟು ತುಪ್ಪವನ್ನು ಬಿಸಿ ಮಾಡಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಅನಾನಸು ಸೇರಿಸಿ, ತುಪ್ಪದಲ್ಲಿ ಚೆನ್ನಾಗಿ ಹುರಿಯಿರಿ. ತೇವಾಂಶವು ಒಣಗುವವರೆಗೆ ಮಧ್ಯಮ ಉರಿಯಲ್ಲಿ ನಿರಂತರವಾಗಿ ಅನಾನಸು ಅನ್ನು ಚೆನ್ನಾಗಿ ಬೇಯಿಸಿ.

ಇನ್ನೊಂದೆಡೆ ಬಾಣಲೆಯಲ್ಲಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ಬಾದಾಮಿ ಸೇರಿಸಿ. 2 ರಿಂದ 3 ನಿಮಿಷಗಳ ಕಾಲ ಕುದಿಸಿ. ನಂತರ ಅದನ್ನು ಹೊರತೆಗೆದು ಸ್ವಲ್ಪ ಆರಿದ ನಂತರ ಬಾದಾಮಿಯ ಸಿಪ್ಪೆ ತೆಗೆಯಿರಿ. ಇದನ್ನು ಮಿಕ್ಸಿ ಜಾರಿಗೆ ಹಾಕಿ, ಪೇಸ್ಟ್ ಮಾಡಿ.

ತುಪ್ಪ ಹಾಗೂ ಹುರಿದ ಅನಾನಸು ಇರುವ ಬಾಣಲೆಗೆ ಬಾದಾಮಿ ಪೇಸ್ಟ್ ಸೇರಿಸಿ. ಹಲ್ವಾ ಬರುವವರೆಗೆ ಹುರಿಯಬೇಕು. ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಖೋಯಾ ಸೇರಿಸಿ ಚೆನ್ನಾಗಿ ಬೆರೆಸಿ. ಮಿಶ್ರಣವನ್ನು ಚೆನ್ನಾಗಿ ಬೆರೆಸಿದ ನಂತರ, ಹಲ್ವಾದ ರೂಪ ಪಡೆದ ನಂತರ ಸ್ಟೌವ್ ಆಫ್ ಮಾಡಿ. ಇದಕ್ಕೆ ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ. ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ, ಒಣದ್ರಾಕ್ಷಿಯನ್ನು ಹಲ್ವಾಗೆ ಸೇರಿಸಿ. ಇಷ್ಟು ಮಾಡಿದರೆ ರುಚಿಕರವಾದ ಅನಾನಸು-ಬಾದಾಮಿ ಹಲ್ವಾ ಸವಿಯಲು ಸಿದ್ಧ.

ಹಬ್ಬ-ಹರಿದಿನ ಹುಟ್ಟುಹಬ್ಬ ಪಾರ್ಟಿ ಮಾತ್ರವಲ್ಲ ಸಿಹಿ ತಿನ್ನುವ ಕಡುಬಯಕೆ ಉಂಟಾದಾಗ ಈ ಹಲ್ವಾವನ್ನು ತಯಾರಿಸಬಹುದು. ಯಾರಾದರೂ ಸಡನ್ನಾಗಿ ಅತಿಥಿಗಳು ಬಂದಾಗ ಈ ಸಿಹಿಖಾದ್ಯವನ್ನು ತಯಾರಿಸಿ ಕೊಡಬಹುದು. ಇದನ್ನು ತಯಾರಿಸಲು ಹೆಚ್ಚೇನು ಸಮಯ ಹಿಡಿಯುವುದಿಲ್ಲವಾದ್ದರಿಂದ ಈ ರೆಸಿಪಿಯನ್ನು ನಿಮಗೆ ಬೇಕೆಂದಾಗ ಮಾಡಿ ಸವಿಯಬಹುದು. ಓದಿದ್ರಲ್ವಾ ರೆಸಿಪಿ ಮಾಡುವದು ಹೇಗೆ ಎಂಬುದನ್ನು. ಹಾಗಿದ್ದರೆ ಇನ್ಯಾಕೆ ತಡ ಇಂದೇ ಪ್ರಯತ್ನಿಸಿ ನೋಡಿ. ಮನೆಮಂದಿಯೆಲ್ಲಾ ಇಷ್ಟಪಡುತ್ತಾರೆ.

Whats_app_banner