Tawa Pulao: ಅನ್ನ ಮಿಕ್ಕಿದೆ ಅಂತ ಎಸಿಬೇಡಿ, ಮುಂಬೈ ಶೈಲಿಯ ತವಾ ಪಲಾವ್ ಮಾಡಿ, ಮನೆಮಂದಿಗೆಲ್ಲಾ ಖಂಡಿತ ಇಷ್ಟ ಆಗುತ್ತೆ
Pulao with leftover rice: ಮಧ್ಯಾಹ್ನ ಮಾಡಿದ ಅನ್ನ ಉಳಿದಾಗ ಸಂಜೆ ಎಸೆಯಲು ಬೇಜಾರಾಗೋದು ಖಂಡಿತ. ಹಾಗಂತ ಅದೇ ಅನ್ನ ತಿನ್ನಲು ಕೂಡ ಯಾರೂ ಒಪ್ಪುವುದಿಲ್ಲ. ಹಾಗಿದ್ದಾಗ ನೀವು ಆ ಅನ್ನದಿಂದ ಮುಂಬೈ ಶೈಲಿಯ ತವಾ ಪಲಾವ್ ಮಾಡಿ. ಇದರಿಂದ ಮನೆಯವರೆಲ್ಲಾ ಇಷ್ಟಪಟ್ಟು ತಿನ್ನದೇ ಇದ್ರೆ ಕೇಳಿ. ಇದನ್ನು ಮಾಡೋದು ಕೂಡ ತುಂಬಾ ಸುಲಭ.
Mumbai Style Tawa Pulao Recipe: ಕೆಲವೊಮ್ಮೆ ಎಷ್ಟೇ ಅಳತೆಗೆ ತಕ್ಕ ಹಾಗೆ ಮಾಡಿದ್ರು ಮಾಡಿದ ಅಡುಗೆ ಹಾಗೇ ಮಿಕ್ಕಿತ್ತೆ, ಅದರಲ್ಲೂ ಬಹುತೇಕ ಮನೆಯಲ್ಲಿ ಪ್ರತಿದಿನದಂತೆ ಅನ್ನ ಮಿಕ್ಕುತ್ತೆ. ಇದನ್ನ ಎಸೆಯೋಣ ಅಂದ್ರೆ ಬೇಸರ ಆಗುತ್ತೆ, ರಾತ್ರಿ ಊಟಕ್ಕೆ ತಿನ್ನೋದಕ್ಕೂ ಯಾರೂ ಒಪ್ಪೊಲ್ಲ. ಹಾಗಂತ ಅದನ್ನು ಏನ್ ಮಾಡೋದು ಅಂತ ಯೋಚ್ನೆ ಬರುತ್ತೆ, ಹಾಗಿದ್ದಾಗ ನೀವು ಮುಂಬೈ ಶೈಲಿಯ ತವಾ ಪಲಾವ್ ಮಾಡಿ.
ರಾತ್ರಿ ಊಟಕ್ಕೆ ಮಿಕ್ಕಿರುವ ರೈಸ್‌ನಿಂದ ತವಾ ಪಲಾವ್ ಮಾಡಿಕೊಟ್ರೆ ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಇದು ಡಿಫ್ರೆಂಟ್ ರುಚಿ ಇರುವ ಕಾರಣ ಮನೆಯವರಿಗೆಲ್ಲಾ ಖಂಡಿತ ಇಷ್ಟ ಆಗುತ್ತೆ. ಇದನ್ನು ಮಾಡೋದು ಕೂಡ ತುಂಬಾ ಸುಲಭ. ಹಾಗಾದರೆ ಇದನ್ನು ಮಾಡಲು ಏನೆಲ್ಲಾ ಬೇಕು, ತಯಾರಿಸೋದು ಹೇಗೆ ಎಂಬ ವಿವರ ಇಲ್ಲಿದೆ.
ಮುಂಬೈ ಸ್ಟೈಲ್ ತವಾ ಪುಲಾವ್‌ಗೆ ಬೇಕಾಗುವ ಸಾಮಗ್ರಿಗಳು
ಅನ್ನ – 4 ಕಪ್, ಬೆಣ್ಣೆ ಅಥವಾ ತುಪ್ಪ – 2 ಚಮಚ, ಈರುಳ್ಳಿ – 1 ತೆಳುವಾಗಿ ಕತ್ತರಿಸಿದ್ದು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ, ಅವರೆಕಾಳು ಅಥವಾ ಬಟಾಣಿ – ಅರ್ಧ ಕಪ್, ಕ್ಯಾಪ್ಸಿಕಂ – ಅರ್ಧ ಕಪ್, ಕ್ಯಾರೆಟ್ – 2 ತೆಳುವಾಗಿ ಕತ್ತರಿಸಿದ್ದು, ಟೊಮೆಟೊ – 2 ಕತ್ತರಿಸಿದ್ದು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ, ಹಸಿಮೆಣಸು – 2, ಆಲೂಗೆಡ್ಡೆ – 2 (ಬೇಯಿಸಿಕೊಂಡಿದ್ದು), ಗರಂಮಸಾಲ – 2 ಚಮಚ, ಪಾವ್ ಬಾಜಿ ಮಸಾಲ – ಬೇಕಿದ್ದರೆ 1 ಚಮಚ ಸೇರಿಸಿ.
ಮುಂಬೈ ಶೈಲಿಯ ತವಾ ಪವಾಲ್ ಮಾಡುವ ವಿಧಾನ
ಮೊದಲು ಕಡಾಯಿಯನ್ನು ತೆಗೆದುಕೊಂಡು ಬೆಣ್ಣೆ ಅಥವಾ ತುಪ್ಪ ಸೇರಿಸಿ ಕರಗಿಸಿ. ಬಿಸಿಯಾದ ನಂತರ ಈರುಳ್ಳಿ ಚೂರುಗಳು, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.ಹಸಿರು ವಾಸನೆ ಹೋದ ನಂತರ ಕ್ಯಾಪ್ಸಿಕಂ ತುಂಡುಗಳು ಮತ್ತು ಟೊಮೆಟೊ ತುಂಡುಗಳನ್ನು ಹಾಕಿ ಫ್ರೈ ಮಾಡಿ.ಸ್ವಲ್ಪ ಉಪ್ಪು, ಗರಂ ಮಸಾಲ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಬೇಯಲು ಬಿಡಿ. ಬೇಯಿಸಿದ ಮತ್ತು ಕತ್ತರಿಸಿದ ಆಲೂಗಡ್ಡೆ ತುಂಡುಗಳು, ಹಸಿರು ಅಥವಾ ಬೇಯಿಸಿದ ಬಟಾಣಿಗಳನ್ನು ಇದಕ್ಕೆ ಸೇರಿಸಬೇಕು. ನಂತರ ಅನ್ನವನ್ನು ಉದುರುದುರಾಗಿಸಿ ಈ ಮಸಾಲೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ. ಇದನ್ನು ರಾಯಿತಾ ಅಥವಾ ಪಾಪಡ್ ಜೊತೆ ತಿನ್ನಲು ಚೆನ್ನಾಗಿರುತ್ತದೆ.
ವಿಭಾಗ