ಸಂಜೆ ಚಹಾದೊಂದಿಗೆ ಸವಿಯಿರಿ ಗೋಧಿ ಹಿಟ್ಟಿನ ಗರಿಗರಿ ಸ್ನಾಕ್ಸ್: ಮಕ್ಕಳು ಇಷ್ಟಪಟ್ಟು ತಿಂತಾರೆ ನೋಡಿ
ಗೋಧಿ ಹಿಟ್ಟನ್ನು ಬಳಸಿಬಗೆ-ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಖಾರದ ಭಕ್ಷ್ಯಗಳಿಂದ ಹಿಡಿದು ಸಿಹಿ ಭಕ್ಷ್ಯಗಳವರೆಗೆ ಗೋಧಿ ಹಿಟ್ಟಿನಿಂದ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಮನೆಗೆ ಯಾರಾದರೂ ಅನಿರೀಕ್ಷಿತ ಅತಿಥಿ ಬಂದರೆ ಏನಪ್ಪಾ ಮಾಡುವುದು ಅಂತಾ ಯೋಚಿಸುತ್ತಿದ್ದರೆ ತಟ್ಟನೆ ಮಾಡಬಹುದು ಗೋಧಿ ಹಿಟ್ಟಿನ ಈ ಗರಿಗರಿ ಸ್ನಾಕ್ಸ್.
ಗೋಧಿ ಹಿಟ್ಟನ್ನು ಬಳಸಿ ತರಹೇವಾರಿ ತಿಂಡಿ, ಸ್ನಾಕ್ಸ್ ಗಳನ್ನು ತಯಾರಿಸಬಹುದು. ಖಾರದ ಭಕ್ಷ್ಯಗಳಿಂದ ಹಿಡಿದು ಸಿಹಿ ಭಕ್ಷ್ಯಗಳವರೆಗೆ ಗೋಧಿ ಹಿಟ್ಟಿನಿಂದ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಮನೆಗೆ ಯಾರಾದರೂ ಅನಿರೀಕ್ಷಿತ ಅತಿಥಿ ಬಂದರೆ ಏನಪ್ಪಾ ಮಾಡುವುದು ಅಂತಾ ಯೋಚಿಸುತ್ತಿದ್ದರೆ ತಟ್ಟನೆ ಮಾಡಬಹುದು ಗೋಧಿ ಹಿಟ್ಟಿನ ಈ ಗರಿಗರಿ ಸ್ನಾಕ್ಸ್. ಅಲ್ಲದೆ ಮಕ್ಕಳು ಶಾಲೆಯಿಂದ ಬರುತ್ತಿದ್ದಂತೆ ಸಂಜೆ ಹಾಲಿನ ಜೊತೆ ಈ ತಿಂಡಿಯನ್ನು ಮಾಡಿಕೊಟ್ಟರೆ, ಖಂಡಿತಾ ಇಷ್ಟಪಟ್ಟು ತಿನ್ನುವುದರಲ್ಲಿ ಸಂಶಯವೇ ಇಲ್ಲ. ರುಚಿ, ವಿನ್ಯಾಸದಲ್ಲಿ ರಾಜಿ ಮಾಡಿಕೊಳ್ಳದೆ ಸಂಜೆಯ ಚಹಾದ ಜತೆ ಸವಿಯಲು ರುಚಿಕರವಾದ ಗೋಧಿ ಹಿಟ್ಟಿನ ಕ್ರಿಸ್ಪಿ ಸ್ನಾಕ್ಸ್ ಅನ್ನು ತಯಾರಿಸಬಹುದು. ಇದನ್ನು ಮಾಡುವುದು ಹೇಗೆ ಇಲ್ಲಿ ತಿಳಿದುಕೊಳ್ಳಿ.
ಗೋಧಿ ಹಿಟ್ಟಿನ ಈ ಕ್ರಿಸ್ಪಿ ಸ್ನಾಕ್ಸ್ ತಯಾರಿಸುವುದು ಹೇಗೆ, ಇಲ್ಲಿದೆ
ಬೇಕಾಗುವ ಸಾಮಗ್ರಿ: ಗೋಧಿ ಹಿಟ್ಟು- 1 ಕಪ್, ಒಣ ಮೆಣಸಿನಕಾಯಿ (Red Chilli) ಫ್ಲೇಕ್ಸ್- ½ ಟೀ ಚಮಚ, ಎಳ್ಳು ಬೀಜ- 1 ಟೀ ಚಮಚ, ಓಂ ಕಾಳು- ½ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ- 1 ಟೀ ಚಮಚ.
ಮಾಡುವ ವಿಧಾನ: ಗೋಧಿ ಹಿಟ್ಟಿಗೆ ಚಿಲ್ಲಿ ಫ್ಲೇಕ್ಸ್, ಎಳ್ಳು ಬೀಜ, ಓಂ ಕಾಳು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ಸ್ವಲ್ವವೇ ನೀರು ಬೆರೆಸುತ್ತಾ ಮಿಶ್ರಣ ಮಾಡಿ. 1 ಚಮಚ ಬಿಸಿ ಎಣ್ಣೆಯನ್ನು ಈ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮೇಲೆ ಸ್ವಲ್ಪ ಎಣ್ಣೆ ಹಾಕಿ ಸವರಿ ಕೆಲಕಾಲ ಮುಚ್ಚಿಡಿ. ನಂತರ ಹಿಟ್ಟಿನ ಮುದ್ದೆಯನ್ನು ಚೆನ್ನಾಗಿ ನಾದಿ ಕಟ್ ಮಾಡಿಕೊಳ್ಳಿ. ನಂತರ ಚಪಾತಿ ಹಿಟ್ಟನ್ನು ಲಟ್ಟಿಸುವಂತೆ ಲಟ್ಟಿಸಿಕೊಳ್ಳಿ. ನಂತರ ತವಾದಲ್ಲಿ ಲಟ್ಟಿಸಿರುವ ಚಪಾತಿಯನ್ನು ಸ್ವಲ್ಪ ಬಿಸಿ ಮಾಡಿ. ಬಳಿಕ ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ನಂತರ ಇದನ್ನು ಕಾದ ಬಿಸಿ ಎಣ್ಣೆಯಲ್ಲಿ ಕರಿಯಿರಿ. ಗೋಲ್ಡನ್ ಬ್ರೌನ್ ಆಗುವವರೆಗೆ ಕರಿದರೆ ರುಚಿಕರವಾದ ಗೋಧಿ ಹಿಟ್ಟಿನ ಸ್ನಾಕ್ಸ್ ತಿನ್ನಲು ಸಿದ್ಧ.
ಸಂಜೆ ವೇಳೆಗೆ ಚಹಾದ ಜತೆ ತಿನ್ನಲು ಏನೂ ಇಲ್ಲ, ಏನು ಮಾಡುವುದು ಎಂದು ಯೋಚಿಸುತ್ತಿದ್ದರೆ, ತ್ವರಿಕವಾಗಿ ತಯಾರಿಸಬಹುದಾದ ಈ ಗರಿಗರಿ ಸ್ನಾಕ್ಸ್ ಅನ್ನು ತಯಾರಿಸಬಹುದು. ಅದರಲ್ಲೂ ಮಳೆ ಬರುತ್ತಿರುವಾಗ ದಿಢೀರನೇ ಏನಾದರೂ ಕ್ರಿಸ್ಪಿ ಸ್ನಾಕ್ಸ್ ತಿನ್ನಬೇಕು ಎನಿಸಿದರೆ ಗೋಧಿ ಹಿಟ್ಟಿನ ಈ ಗರಿಗರಿ ತಿಂಡಿಯನ್ನು ತಯಾರಿಸಬಹುದು. ಮನೆಯವರು ಎಲ್ಲರೂ ಕೂಡ ಖಂಡಿತಾ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟೇ ಇಲ್ಲ.
ವಿಭಾಗ