ಕನ್ನಡ ಸುದ್ದಿ  /  ಜೀವನಶೈಲಿ  /  ಸಾಂಪ್ರದಾಯಿಕ ಶೈಲಿಯ ಮಾವಿನಕಾಯಿ ಬೂತ್ ಗೊಜ್ಜು ರೆಸಿಪಿ; ಹಳೆ ಕಾಲದ ಅಡುಗೆಯಾದ್ರೂ ಈಗಿನ ಕಾಲದವರ ಬಾಯಲ್ಲೂ ನೀರೂರಿಸುತ್ತೆ

ಸಾಂಪ್ರದಾಯಿಕ ಶೈಲಿಯ ಮಾವಿನಕಾಯಿ ಬೂತ್ ಗೊಜ್ಜು ರೆಸಿಪಿ; ಹಳೆ ಕಾಲದ ಅಡುಗೆಯಾದ್ರೂ ಈಗಿನ ಕಾಲದವರ ಬಾಯಲ್ಲೂ ನೀರೂರಿಸುತ್ತೆ

ಹೆಸರು ಕೇಳಿದಾಕ್ಷಣ ಬಾಯಲ್ಲಿ ನೀರೂರುವ ಮಾವಿನ ಕಾಯಿಯಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅವುಗಳಲ್ಲಿ ಮಾವಿನಕಾಯಿ ಬೂತ್‌ ಗೊಜ್ಜು ಕೂಡ ಒಂದು. ಈ ಸಾಂಪ್ರದಾಯಿಕ ದೇಸೀ ಖಾದ್ಯ ಹಳೆಯ ಕಾಲದ್ದದ್ದಾರೂ ಒಮ್ಮೆ ಮನೆಯಲ್ಲಿ ಮಾಡಿದ್ರೆ ಮತ್ತೆ ಮತ್ತೆ ಮಾಡಿ ತಿನ್ನಬೇಕು ಅನ್ನಿಸೋದು ಪಕ್ಕಾ, ಇದನ್ನು ತಯಾರಿಸೋದು ಹೇಗೆ ನೋಡಿ.

 ಮಾವಿನಕಾಯಿ ಬೂತ್ ಗೊಜ್ಜು
ಮಾವಿನಕಾಯಿ ಬೂತ್ ಗೊಜ್ಜು

ಈ ವರ್ಷದ ಬೇಸಿಗೆಕಾಲ ಪ್ರಾರಂಭವಾಗಿದೆ. ಬೆವರ ನೀರು ಬಿರು ಬಿಸಿಲನ್ನು ಸೂಚಿಸುತ್ತಿದೆ. ಬೇಸಿಗೆಕಾಲ ಸುಡು ಬಿಸಿಲಿಗಷ್ಟೇ ಫೇಮಸ್ ಅಲ್ಲ. ಈ ಕಾಲವು ಮಾವು, ಹಲಸು ಮುಂತಾದ ವಾರ್ಷಿಕ ಹಣ್ಣುಗಳಿಗೂ ಫೇಮಸ್. ಬರೀ ಹಣ್ಣುಗಳನ್ನು ಮಾತ್ರ ಸವಿದರೆ ಸಾಕೇ? ಅವುಗಳಿಂದ ತಯಾರಿಸುವ ಬಗೆ ಬಗೆಯ ರುಚಿಗಳನ್ನು ತಯಾರಿಸಿ ಸವಿಯಬೇಕಲ್ಲವೇ? ಅದರಲ್ಲೂ ಎಲ್ಲರ ಫೆವರೆಟ್ ಮಾವಿನಕಾಯಿಯಿಂದ ತಯಾರಿಸುವ ಅಡುಗೆಗಳ ರುಚಿಯೇ ಬೇರೆ. ಮಾವಿನಕಾಯಿಯ ಸಾಂಪ್ರದಾಯಿಕ ಅಡುಗೆಗಳು ಈಗಿನ ಕಾಲದವರಿಗೂ ರುಚಿಸುವುದರಲ್ಲಿ ಎರಡು ಮಾತಿಲ್ಲ. ಮನೆ ಮಂದಿಯಲ್ಲ ಪ್ರೀತಿಯಿಂದ ಸವಿಯುವ ಮಾವಿನಕಾಯಿ ಅಡುಗೆಗಳು ಒಂದೇ ಎರಡೇ. ಅಂತಹುದೇ ಒಂದು ಅಡುಗೆ ಮಾವಿನಕಾಯಿ ಬೂತ್ ಗೊಜ್ಜು. ಸಾಂಪ್ರದಾಯಿಕ ಶೈಲಿಯ ಅಡುಗೆಯಾದರೂ ಹೊಸ ರುಚಿಯ ಸಾಲಿಗೆ ಸೇರುತ್ತದೆ. ನೀವು ಮಾವಿನಕಾಯಿ ಮನೆಗೆ ತಂದಿದ್ದರೆ ಈ ಹೊಸ ರುಚಿ ಪ್ರಯತ್ನಿಸಿ. ಕಡಿಮೆ ಸಮಯದಲ್ಲಿ ಬೂತ್ ಗೊಜ್ಜು ಹೀಗೆ ತಯಾರಿಸಿ.

ಟ್ರೆಂಡಿಂಗ್​ ಸುದ್ದಿ

ಮಾವಿನಕಾಯಿ ಬೂತ್ ಗೊಜ್ಜು

ಬೇಕಾಗುವ ಸಾಮಗ್ರಿಗಳು: ಮಾವಿನಕಾಯಿ 1, ತೆಂಗಿನ ತುರಿ 1 ಕಪ್, ಹಸಿ ಮೆಣಸಿನಕಾಯಿ 2, ಬೆಳ್ಳುಳ್ಳಿ 8 -10, ಸಾಸಿವೆ - ¼ ಚಮಚ, ಕರಿಬೇವಿನ ಸೊಪ್ಪು 6-8, ಸಿಹಿ ಮೊಸರು - 1 ಕಪ್, ಕೆಂಪು ಮೆಣಸಿನಕಾಯಿ 1, ಅಡುಗೆ ಎಣ್ಣೆ

ತಯಾರಿಸುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ ನೀರು ಹಾಕಿ ಬಲಿತ ಮಾವಿನಕಾಯಿಯನ್ನು ಚೆನ್ನಾಗಿ ಕುದಿಸಿಕೊಳ್ಳಿ. ಮಾವಿನಕಾಯಿ ಬಿಸಿ ಆರಿದ ನಂತರ ಅದನ್ನು ಸ್ಮಾಶ್ ಮಾಡಿಕೊಳ್ಳಿ. ಮಿಕ್ಸಿ ಜಾರಿಗೆ ತೆಂಗಿನ ತುರಿ, ಹಸಿ ಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಿ. ಅದನ್ನು ಸ್ಮಾಶ್ ಮಾಡಿದ ಮಾವಿನಕಾಯಿಗೆ ಸೇರಿಸಿ. ಅದಕ್ಕೆ ಉಪ್ಪು ಮತ್ತು ಮೊಸರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನೀವು ತಯಾರಿಸುವ ಇತರೆ ಗೊಜ್ಜುಗಳ ಹದದಲ್ಲಿಯೇ ಇರಲಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ (ತೆಂಗಿನ ಎಣ್ಣೆ ಉತ್ತಮ), ಅದಕ್ಕೆ ಸಾಸಿವೆ, ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಹಾಕಿ. ಸಾಸಿವೆ ಸಿಡಿದ ನಂತರ ಒಗ್ಗರಣೆ ಮಾಡಿ. ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ. ಮಾವಿನಕಾಯಿ ಬೂತ್ ಗೊಜ್ಜು ಸವಿಯಲು ರೆಡಿ.

ಅನ್ನಕ್ಕೆ ಬೆಸ್ಟ್ ಕಾಬಿನೇಷನ್ ಆಗಿರುವ ಮಾವಿನಕಾಯಿ ಬೂತ್ ಗೊಜ್ಜಿಗೆ ಮೇಲಿನಿಂದ ಸ್ವಲ್ಪ ತೆಂಗಿನ ಎಣ್ಣೆ ಸೇರಿಯೂ ಸವಿಯಲಾಗುತ್ತದೆ. ಇದನ್ನು ಮಾವಿನಕಾಯಿ ಸೀಸನ್‌ನಲ್ಲಿ ಮಾತ್ರವಲ್ಲ ಮಳೆಗಾಲದಲ್ಲೂ ಸವಿಯಬಹುದು. ಉಪ್ಪು ನೀರಿನಲ್ಲಿ ಮಾವಿನಕಾಯಿಯನ್ನು ಬೇಯಿಸಿ, ಗಾಳಿಯಾಡದ ಭರಣಿಯಲ್ಲಿ ಶೇಖರಿಸಿಟ್ಟುಕೊಂಡರೆ ನಿಮಗೆ ಬೇಕಾದಾಗ ಬೂತ್ ಗೊಜ್ಜು ತಯಾರಿಸಬಹುದು.

ವಿಭಾಗ