ಕನ್ನಡ ಸುದ್ದಿ  /  Lifestyle  /  Food Recipe How To Make Chicken Popcorn At Home Tasty Crunchy Chicken Popcorn Making Method 4 Tips Must Follow Rst

Chicken Popcorn: ಮನೆಯಲ್ಲೇ ಮಾಡ್ಕೊಳ್ಳಿ ಸಖತ್‌ ಟೇಸ್ಟಿ, ಕ್ರಂಚಿ ಚಿಕನ್‌ ಪಾಪ್‌ಕಾರ್ನ್‌, ಈ 4 ಟಿಪ್ಸ್‌ ಅನುಸರಿಸಿ

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವವರೆಗೂ ಮಾಂಸಾಹಾರ ಪ್ರಿಯರಿಗೆ ಚಿಕನ್‌ ಪಾಪ್‌ಕಾರ್ನ್‌ ಎಂದರೆ ವಿಶೇಷ ಪ್ರೀತಿ. ಇದನ್ನು ಮನೆಯಲ್ಲೂ ಸುಲಭವಾಗಿ ತಯಾರಿಸಿ ತಿನ್ನಬಹುದು. ಪರ್ಫೆಕ್ಟ್‌ ಚಿಕನ್‌ ಪಾಪ್‌ಕಾರ್ನ್‌ ಮಾಡೋಕೆ ಈ 4 ಟಿಪ್ಸ್‌ ಅನುಸರಿಸೋದು ಮರಿಬೇಡಿ.

ಮನೆಯಲ್ಲೇ ಮಾಡ್ಕೊಳ್ಳಿ ಸಖತ್‌ ಟೇಸ್ಟಿ, ಕ್ರಂಚಿ ಚಿಕನ್‌ ಪಾಪ್‌ಕಾರ್ನ್‌, ಈ 4 ಟಿಪ್ಸ್‌ ಅನುಸರಿಸಿ
ಮನೆಯಲ್ಲೇ ಮಾಡ್ಕೊಳ್ಳಿ ಸಖತ್‌ ಟೇಸ್ಟಿ, ಕ್ರಂಚಿ ಚಿಕನ್‌ ಪಾಪ್‌ಕಾರ್ನ್‌, ಈ 4 ಟಿಪ್ಸ್‌ ಅನುಸರಿಸಿ

ಭಾನುವಾರದಂದು ಮನೆಯಲ್ಲಿ ಎಲ್ಲರೂ ಇದ್ದಾಗ ಏನಾದ್ರೂ ಸ್ಪೆಷಲ್‌ ಖಾದ್ಯ ಮಾಡ್ಬೇಕು ಅನ್ನೋದು ನಿಮ್ಮ ಪ್ಲಾನ್‌ ಆಗಿದ್ರೆ ನೀವು ಈ ಬಾರಿ ಚಿಕನ್‌ ಪಾಪ್‌ಕಾರ್ನ್‌ ಟ್ರೈ ಮಾಡ್ಬಹುದು. ಕೆಎಫ್‌ಸಿಯಲ್ಲಿ ಸಿಗುವ ಟೇಸ್ಟಿ, ಕ್ರಂಚಿ ಪಾಪ್‌ಕಾರ್ನ್‌ ಅನ್ನು ನೀವೂ ಮನೆಯಲ್ಲಿ ಮಾಡಬಹುದು. ಈ ಚಿಕನ್‌ ಪಾಪ್‌ಕಾರ್ನ್‌ ಮನೆಯಲ್ಲಿ ದೊಡ್ಡವರಿಂದ ಚಿಕ್ಕವರವರೆಗೆ ಎಲ್ರಿಗೂ ಇಷ್ಟ ಆಗೋದ್ರಲ್ಲಿ ಎರಡು ಮಾತಿಲ್ಲ. ಇದನ್ನು ಸಂಜೆ ಸ್ನ್ಯಾಕ್ಸ್‌ ರೂಪದಲ್ಲೂ ತಿನ್ನಬಹುದು. ಇದನ್ನು ಪರ್ಫೆಕ್ಟ್‌ ಆಗಿ ಮಾಡಬೇಕು ಅಂತಿದ್ರೆ, ಈ ಟಿಪ್ಸ್‌ ಖಂಡಿತ ನಿಮಗೆ ಹೆಲ್ಪ್‌ ಆಗುತ್ತೆ.

ಮನೆಯಲ್ಲೇ ಚಿಕನ್‌ ಪಾಪ್‌ಕಾರ್ನ್‌ ಮಾಡಲು ಇಲ್ಲಿದೆ 4 ಟಿಪ್ಸ್‌

ಸೂಕ್ತ ಮಾಂಸ ಆರಿಸಿಕೊಳ್ಳಲು

ನೀವು ಈಗಾಗಲೇ ಮನೆಯಲ್ಲಿ ಚಿಕನ್‌ ಪಾಪ್‌ಕಾರ್ನ್‌ ಟ್ರೈ ಮಾಡಿದ್ದು ಅದು ಪರ್ಫೆಕ್ಟಾಗಿ ಬಂದಿಲ್ಲ ಅಂದ್ರೆ ಅದಕ್ಕೆ ನೀವು ಆರಿಸಿದ ಮಾಂಸವೂ ಕಾರಣವಿರಬಹುದು. ದೊಡ್ಡ ದೊಡ್ಡ ಚಿಕನ್‌ ತುಂಡುಗಳಿಂದ ಪಾಪ್‌ಕಾರ್ನ್‌ ಚಿಕನ್‌ ಮಾಡಿದ್ರೆ ಅದು ಖಂಡಿತ ಪರ್ಫೆಕ್ಟಾಗಿ ಬರಲು ಸಾಧ್ಯವಿಲ್ಲ. ಚಿಕ್ಕ ತುಂಡುಗಳನ್ನು ಆರಿಸಿ. ಅಲ್ಲದೇ ಎದೆ ಹಾಗೂ ತೊಡೆ ಭಾಗದ ಮಾಂಸ ಚಿಕನ್‌ ಪಾಪ್‌ಕಾರ್ನ್‌ಗೆ ಹೇಳಿ ಮಾಡಿಸಿದ್ದು. ಮೂಳೆರಹಿತ ಮಾಂಸ ಆಯ್ಕೆ ಮಾಡುವುದು ಮುಖ್ಯವಾಗುತ್ತದೆ.

ಮ್ಯಾರಿನೇಟ್‌ ಮಾಡೋದು ಮರಿಬೇಡಿ

ಚಿಕನ್‌ ತುಂಡುಗಳಿಗೆ ವಿಶೇಷ ಘಮ ಹಾಗೂ ಸ್ವಾದ ಬರಲು ಮ್ಯಾರಿನೇಟ್‌ ಮಾಡುವುದು ಬಹಳ ಮುಖ್ಯವಾಗುತ್ತದೆ. ಚಿಕನ್‌ ಪಾಪ್‌ಕಾರ್ನ್‌ ಮಾಡುವಾಗ ತಾಜಾ ಚಿಕನ್‌ ತುಂಡುಗಳನ್ನು ಆರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅದರೊಂದಿಗೆ ಸುವಾಸನೆ ಬರಲು ಸೂಕ್ತ ಪದಾರ್ಥಗಳೊಂದಿಗೆ ಮ್ಯಾರಿನೇಟ್‌ ಮಾಡಿಕೊಳ್ಳಬೇಕು. ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಖಾರದಪುಡಿ, ಉಪ್ಪು ಸೇರಿಸಿ ಪೇಸ್ಟ್‌ ತಯಾರಿಸಿ ಇದರಲ್ಲಿ ಚಿಕನ್‌ ತುಂಡುಗಳನ್ನು ಮ್ಯಾರಿನೇಟ್‌ ಮಾಡುವುದು ಮುಖ್ಯವಾಗುತ್ತದೆ. ಕನಿಷ್ಠ 1 ಗಂಟೆಗಳ ಕಾಲ ಚಿಕನ್‌ ತುಂಡುಗಳನ್ನು ಮ್ಯಾರಿನೇಟ್‌ ಮಾಡುವುದು ಅವಶ್ಯ.

ಚಿಕನ್‌ಗೆ ಸರಿಯಾಗಿ ಕೋಟ್‌ ಮಾಡಿ

ಚಿಕನ್‌ ಪಾಪ್‌ಕಾರ್ನ್‌ ಗರಿಗರಿಯಾಗಿರಲು ಅದಕ್ಕೆ ಸರಿಯಾಗಿ ಕೋಟ್‌ ಮಾಡುವುದು ಮುಖ್ಯ. ಚಿಕನ್‌ ತುಂಡುಗಳು ಸಾಫ್ಟ್‌ ಆಗಿದ್ದು, ಸರಿಯಾಗಿ ಕೋಟ್‌ ಮಾಡಿದ್ರೆ ಕ್ರಿಸ್ಪಿ ಚಿಕನ್‌ ಪಾಪ್‌ಕಾರ್ನ್‌ ರೆಡಿಯಾಗುತ್ತದೆ. ಮ್ಯಾರಿನೇಟ್‌ ಮಾಡಿಟ್ಟುಕೊಂಡ ಚಿಕನ್‌ ತುಂಡುಗಳನ್ನು ಮಸಾಲೆ ಹಿಟ್ಟಿನಲ್ಲಿ ಅದ್ದಿ, ಅದನ್ನು ಒಡೆದ ಮೊಟ್ಟೆ ಹಾಗೂ ಮೊಸರಿನ ಮಿಶ್ರಣದಲ್ಲಿ ಅದ್ದಿ ಸರಿಯಾಗಿ ಕೋಟ್‌ ಮಾಡುವುದು ಮುಖ್ಯವಾಗುತ್ತದೆ.

ಕಾಯಿಸುವ ವಿಧಾನವೂ ಮುಖ್ಯವಾಗುತ್ತದೆ

ಚಿಕನ್‌ ಪಾಪ್‌ಕಾರ್ನ್‌ ತಯಾರಿಸುವಾಗ ಕೊನೆಯ ಹಂತವಾದ ಕಾಯಿಸುವ ವಿಧಾನದಲ್ಲಿ ಎಡವಬಾರದು. ದಪ್ಪ ತಳವಿರುವ ಬಾಣಲಿಯಲ್ಲಿ ಎಣ್ಣೆ ಬಿಸಿ ಮಾಡಿ, ಎಣ್ಣೆ ಚೆನ್ನಾಗಿ ಕಾದ ನಂತರ ಚಿಕನ್‌ ತುಂಡುಗಳನ್ನು ಹಾಕಿ. ಎಲ್ಲವನ್ನೂ ಒಂದೇ ಬಾರಿಗೆ ಎಣ್ಣೆಯಲ್ಲಿ ಬಿಡಬೇಡಿ. ಚಿಕನ್‌ ತುಂಡುಗಳನ್ನು 5 ರಿಂದ 6 ನಿಮಿಷ ಎಣ್ಣೆಯಲ್ಲಿ ಕಾಯಿಸಿ. ಪೋರ್ಕ್‌ ಬಳಸಿ ಚೆನ್ನಾಗಿ ಬೆಂದಿದೆ ಎಂದು ಖಚಿತವಾದ ಮೇಲೆ ತೆಗೆಯಿರಿ.

ನೋಡಿದ್ರಲ್ಲ ಚಿಕನ್‌ ಪಾಪ್‌ಕಾರ್ನ್‌ ಮನೆಯಲ್ಲಿ ಮಾಡೋದು ಮುಖ್ಯ ಅಲ್ಲ, ಅದು ಪರ್ಫೆಕ್ಟ್‌ ಆಗಿ ಬರಬೇಕು ಅಂದ್ರೆ ಈ ಮೇಲಿ ತಿಳಿಸಿರುವ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ನೀವು ಮನೆಯಲ್ಲಿ ಚಿಕನ್‌ ಪಾಪ್‌ಕಾರ್ನ್‌ ಮಾಡ್ಬೇಕು ಅಂತಿದ್ರೆ ಈ ಕ್ರಮ ಅನುಸರಿಸೋದು ಮರಿಬೇಡಿ.

ಇದನ್ನೂ ಓದಿ

ಒಂದೇ ರೀತಿ ಚಿಕನ್‌ ಖಾದ್ಯಗಳನ್ನ ತಿಂದು ಬೋರ್‌ ಆಗಿದ್ರೆ ಆರೆಂಜ್‌ ಚಿಕನ್‌ ಟ್ರೈ ಮಾಡಿ; ಇದರ ಹೆಸರಷ್ಟೇ ಅಲ್ಲ, ರುಚಿಯೂ ಡಿಫ್ರೆಂಟ್‌

Orange Chicken Recipe: ಚಿಕನ್‌ ಕಬಾಬ್‌, ಚಿಕನ್‌ 65, ಚಿಕನ್‌ ಲಾಲಿಪಾಪ್‌, ಚಿಕನ್‌ ಸಾರು ಇದೇ ಥರದ ಖಾದ್ಯಗಳನ್ನು ತಿಂದೂ ತಿಂದೂ ಬೇಸರ ಆಗಿದ್ಯಾ? ಹಾಗಿದ್ರೆ ಈ ಸ್ಪೆಷಲ್‌ ಆರೆಂಜ್‌ ಚಿಕನ್‌ ರೆಸಿಪಿ ಟ್ರೈ ಮಾಡಿ. ಇದರ ಹೆಸರಷ್ಟೇ ಅಲ್ಲ, ರುಚಿ ಕೂಡ ಡಿಫ್ರೆಂಟ್‌.

(This copy first appeared in Hindustan Times Kannada website. To read more like this please logon to kannada.hindustantimes.com)