ಗೋಧಿಹಿಟ್ಟಿನಿಂದ ಈ ರೀತಿ ತಿಂಡಿ ಮಾಡಿದ್ರೆ ಮನೆಯವರಿಗೆಲ್ಲಾ ಇಷ್ಟ ಆಗುತ್ತೆ, ಮಳೆಗಾಲದ ಸಂಜೆಗಿದು ಹೇಳಿ ಮಾಡಿಸಿದ ಸ್ನ್ಯಾಕ್ಸ್‌
ಕನ್ನಡ ಸುದ್ದಿ  /  ಜೀವನಶೈಲಿ  /  ಗೋಧಿಹಿಟ್ಟಿನಿಂದ ಈ ರೀತಿ ತಿಂಡಿ ಮಾಡಿದ್ರೆ ಮನೆಯವರಿಗೆಲ್ಲಾ ಇಷ್ಟ ಆಗುತ್ತೆ, ಮಳೆಗಾಲದ ಸಂಜೆಗಿದು ಹೇಳಿ ಮಾಡಿಸಿದ ಸ್ನ್ಯಾಕ್ಸ್‌

ಗೋಧಿಹಿಟ್ಟಿನಿಂದ ಈ ರೀತಿ ತಿಂಡಿ ಮಾಡಿದ್ರೆ ಮನೆಯವರಿಗೆಲ್ಲಾ ಇಷ್ಟ ಆಗುತ್ತೆ, ಮಳೆಗಾಲದ ಸಂಜೆಗಿದು ಹೇಳಿ ಮಾಡಿಸಿದ ಸ್ನ್ಯಾಕ್ಸ್‌

ಸಂಜೆ ಹೊತ್ತಿಗೆ ಏನಾದ್ರೂ ತಿನ್‌ಬೇಕು ಅಂತ ಮನಸ್ಸಿಗೆ ಬರೋದು ಸಹಜ. ಅದರಲ್ಲೂ ಮಳೆಗಾಲದ ಸಂಜೆ ಅಂದ್ರೆ ಕೇಳ್ಬೇಕಾ, ತುಂಬಾನೇ ಬೋರ್‌ ಆಗ್ತಾ ಇರುತ್ತೆ. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಸ್ಯ್ನಾಕ್ಸ್‌ ತಿನ್ನುವ ಆಸೆ ಮೂಡುತ್ತೆ. ನಿಮ್ಮನೇಲೂ ಹಾಗೆ ಇದ್ರೆ ಗೋಧಿಹಿಟ್ಟಿನಿಂದ ಈ ವಿಶೇಷ ತಿಂಡಿಯನ್ನು ಮಾಡಿ ಮನೆಯವರನ್ನೆಲ್ಲಾ ಖುಷಿ ಪಡಿಸಬಹುದು.

ಗೋಧಿಹಿಟ್ಟಿನಿಂದ ಈ ರೀತಿ ತಿಂಡಿ ಮಾಡಿದ್ರೆ ಮನೆಯವರಿಗೆಲ್ಲಾ ಇಷ್ಟ ಆಗುತ್ತೆ
ಗೋಧಿಹಿಟ್ಟಿನಿಂದ ಈ ರೀತಿ ತಿಂಡಿ ಮಾಡಿದ್ರೆ ಮನೆಯವರಿಗೆಲ್ಲಾ ಇಷ್ಟ ಆಗುತ್ತೆ

ಮಕ್ಕಳು ಸಂಜೆಯ ಹೊತ್ತಿಗೆ ಕುರುಕಲು ತಿಂಡಿ ಕೇಳೋದು ಸಹಜ. ಹಾಗಂತ ದಿನ ಒಂದೇ ರೀತಿಯ ತಿಂಡಿ ಮಾಡಿ ಕೊಟ್ರು ಅವರು ತಿನ್ನೊಲ್ಲ. ಪ್ರತಿದಿನ ಭಿನ್ನವಾಗಿ ಮಾಡೋದು ಖಂಡಿತ ಕಷ್ಟವೇ, ಹೊರಗಡೆ ತಿಂಡಿ ಕೊಟ್ರೆ ಮಕ್ಕಳ ಆರೋಗ್ಯ ಕೆಡುತ್ತೆ. ಅದಕ್ಕಾಗಿ ನೀವು ಮನೆಯಲ್ಲೇ ಏನಾದ್ರೂ ವಿಶೇಷ ತಿಂಡಿ ಮಾಡಬಹುದು.

ಗೋಧಿಹಿಟ್ಟು ಆರೋಗ್ಯಕ್ಕೆ ಉತ್ತಮ, ಇದರಿಂದ ಮಾಡುವ ಕುರುಕಲು ತಿಂಡಿಗಳು ನಮ್ಮ ನಾಲಿಗೆಯ ರುಚಿಯನ್ನು ಹೆಚ್ಚಿಸಬಹುದು. ಉತ್ತರ ಭಾರತ ಭಾಗದಲ್ಲಿ ತಯಾರಿಸುವ ಶಂಕರಪೊಳೆ ರೀತಿಯ ನಮಕ್‌ ಪಾರಾ ತಿಂಡಿಯನ್ನು ನೀವು ಮನೆಯಲ್ಲಿ ಮಾಡಿ ಮಕ್ಕಳು ಹಾಗೂ ಮನೆಯವರನ್ನು ಖುಷಿ ಪಡಿಸಬಹುದು. ಈ ತಿಂಡಿಯನ್ನು ತುಂಬಾ ಸುಲಭವಾಗಿ ಕೇವಲ 10 ನಿಮಿಷದಲ್ಲಿ ಮಾಡಬಹುದು. ಒಮ್ಮೆ ಮಾಡಿಟ್ಟರೆ ಒಂದು ತಿಂಗಳ ಕಾಲ ಸಂಗ್ರಹಿಸಿ ಇಡಬಹುದು. ಈಗ ಸದಾ ಸೀದಾ ನಮಕ್ ಪಾರಾ ಮಾಡುವುದು ಹೇಗೆ ಎಂದು ನೋಡೋಣ. ಈ ತಿಂಡಿ ನಿಮಗೆ ಇಷ್ಟವಾದ್ರೆ ಇನ್ನೊಮ್ಮೆ ತಯಾರಿಸುವಾಗ ಕರಿಬೇವು, ಕಸೂರಿ ಮೇತಿ, ಗರಂಮಸಾಲ, ಅರಿಶಿನ... ಹೀಗೆ ನಾನಾ ಪದಾರ್ಥಗಳನ್ನು ಬದಲಾಯಿಸಿ ವಿವಿಧ ರುಚಿಗಳಲ್ಲಿ ಮಾಡಬಹುದು.

ನಮಕ್‌ ಪಾರಾ ರೆಸಿಪಿ

ನಮಕ್‌ ಪಾರಾ ಮಾಡಲು ಬೇಕಾಗುವ ಸಾಮಗ್ರಿಗಳು: ಗೋಧಿಹಿಟ್ಟು - 1 ಕಪ್, ಮೈದಾ - 1 ಕಪ್, ನೀರು - 1 ಚಮಚ, ಕಾಳುಮೆಣಸಿನ ಪುಡಿ - ಅರ್ಧ ಚಮಚ, ಜೀರಿಗೆ - ಅರ್ಧ ಚಮಚ, ಅಡಿಗೆ ಸೋಡಾ - ಕಾಲು ಚಮಚ, ಎಣ್ಣೆ - 2 ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ -ಕರಿಯಲು

ನಮಕ್ ಪಾರಾ ತಯಾರಿಸುವ ವಿಧಾನ

ಮೊದಲು ಗೋಧಿಹಿಟ್ಟು, ಮೈದಾ, ಸೋಡಾ ಮತ್ತು ಉಪ್ಪು ಸೇರಿಸಿ ಎಲ್ಲವನ್ನೂ ಒಟ್ಟಿಗೆ ಜರಡಿ ಹಿಡಿಯಿರಿ. ಜರಡಿ ಹಿಡಿದ ಹಿಟ್ಟಿಗೆ ಜೀರಿಗೆ, ಕಾಳುಮೆಣಸಿನ ಪುಡಿ ಮತ್ತು ಅಡುಗೆ ಸೋಡಾ ಸೇರಿಸಿ ಒಮ್ಮೆ ಕಲೆಸಿ. ಈಗ ಸ್ವಲ್ಪ ಎಣ್ಣೆ ಹಾಕಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿ ಹಿಟ್ಟನ್ನು ಗಟ್ಟಿಯಾಗಿ ಕಲೆಸಿ. ಈ ಹಿಟ್ಟಿನೊಂದಿಗೆ ಸ್ವಲ್ಪ ದಪ್ಪ ಚಪಾತಿಯನ್ನು ತಯಾರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹಿಟ್ಟು ತೆಳವಾಗಬಾರದು.

ಹಿಟ್ಟು ಸೇರಿಸಿದ ನಂತರ, ಕನಿಷ್ಠ ಇಪ್ಪತ್ತರಿಂದ ಹದಿನೈದು ನಿಮಿಷಗಳ ಕಾಲ ಅದನ್ನು ಪಕ್ಕಕ್ಕೆ ಇರಿಸಿ. ಹಿಟ್ಟನ್ನು ಮುಚ್ಚಳ ಅಥವಾ ಒದ್ದೆಯಾದ ಬಟ್ಟೆಯಿಂದ ಮುಚ್ಚಲು ಮರೆಯಬೇಡಿ. ಈಗ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿ, ಸ್ವಲ್ಪ ಗೋಧಿ ಹಿಟ್ಟನ್ನು ಉದುರಿಸಿ ಚಪಾತಿಯಂತೆ ದಪ್ಪವಾಗಿ ಒತ್ತಿರಿ. ಚಾಕುವಿನ ಸಹಾಯದಿಂದ, ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಸಾಮಾನ್ಯವಾಗಿ ಅವುಗಳನ್ನು ವಜ್ರ ಅಥವಾ ರೋಂಬಸ್ ಆಕಾರದಲ್ಲಿ ತಯಾರಿಸಲಾಗುತ್ತದೆ. ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ಕತ್ತರಿಸಿದ ತುಂಡುಗಳನ್ನು ಫ್ರೈ ಮಾಡಿ. ಅವು ಗರಿಗರಿಯಾಗುವವರೆಗೆ ಅವುಗಳನ್ನು ಫ್ರೈ ಮಾಡಿ. ಇದನ್ನು ಪ್ಲೇಟ್‌ ಮೇಲೆ ಹರಡಿ. ತಣ್ಣಗಾದ ನಂತರ ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ತುಂಬಿಸಿ ಇಡಿ. ನೀವು ಅವುಗಳನ್ನು ಕನಿಷ್ಠ ಒಂದು ವಾರದಿಂದ ಎರಡು ವಾರಗಳವರೆಗೆ ತಿನ್ನಬಹುದು. ಚಹಾ ಕುಡಿಯುವಾಗ ನೆಂಜಿಕೊಳ್ಳಲು ಕೂಡ ಇದಕ್ಕಿಂತ ಬೆಸ್ಟ್‌ ತಿಂಡಿ ಇನ್ನೊಂದಿಲ್ಲ.

Whats_app_banner