Paneer Chili Recipe: ಮನೆಯಲ್ಲೂ ಸಖತ್ತಾಗಿ ಮಾಡಬಹುದು ರೆಸ್ಟೊರೆಂಟ್ ಶೈಲಿಯ ಪನೀರ್ ಚಿಲ್ಲಿ; ಮತ್ಯಾಕೆ ತಡ, ಇಂದೇ ಮಾಡಿ ಟೇಸ್ಟ್ ನೋಡಿ
ಹೋಟೆಲ್‌ನಲ್ಲಿ ತಿಂದ ಪನೀರ್ ಚಿಲ್ಲಿ ಮತ್ತೆ ಮತ್ತೆ ತಿನ್ನಬೇಕು ಅನ್ನಿಸಬಹುದು. ಹಾಗಂತ ಪದೇ ಪದೇ ಹೋಟೆಲ್‌ಗೆ ಹೋಗಿ ತಿನ್ನೋಕೆ ಆಗುತ್ತಾ. ಚಿಂತೆ ಬೇಡ, ಮನೆಯಲ್ಲೂ ಸುಲಭವಾಗಿ, ಟೇಸ್ಟಿಯಾಗಿ ಪನೀರ್ ಚಿಲ್ಲಿ ಮಾಡಬಹುದು. ರೆಸಿಪಿ ಇಲ್ಲಿದೆ ನೋಡಿ. ಭಾನುವಾರದಂತಹ ರಜಾದಿನಗಳಲ್ಲಿ ಹೊಸ ರೆಸಿಪಿ ಟ್ರೈ ಮಾಡಲು ಇದು ಬೆಸ್ಟ್.
ಭಾನುವಾರ ರಜಾದಿನ. ಮನೆಯಲ್ಲಿ ಏನಾದ್ರೂ ಸ್ಪೆಷಲ್ ಮಾಡಿ ತಿನ್ನಬೇಕು ಎಂದು ಅನ್ನಿಸುವುದು ಸಹಜ. ಹೋಟೆಲ್‌ಗಳಲ್ಲಿ ಸಿಗುವ ಕೆಲವು ತಿನಿಸುಗಳ ರುಚಿ ಬಾಯಲ್ಲಿ ಹಾಗೇ ಇರುತ್ತದೆ. ಅದನ್ನು ಮತ್ತೆ ಮತ್ತೆ ತಿನ್ನಬೇಕು ಎಂದು ಅನ್ನಿಸುವುದೂ ಸಹಜ. ಹಾಗಂತ ಪದೇ ಪದೇ ಹೋಟೆಲ್‌ಗೆ ಹೋಗೋದು ಆಗದೆ ಇರುವ ಮಾತು.
ಹೋಟೆಲ್‌ನಲ್ಲಿ ಸಿಗುವ ಚೈನಿಸ್ ಫುಡ್‌ಗಳಂತೂ ಬೇಡವೆಂದರೂ ನಮ್ಮ ಜಿಹ್ವ ಚಾಪಲ್ಯವನ್ನು ಹೆಚ್ಚಿಸುತ್ತದೆ. ಅದರಲ್ಲಿ ಪನ್ನೀರ್ ಚಿಲ್ಲಿ ಕೂಡ ಒಂದು. ಖಾರ ಖಾರವಾಗಿ, ಸಿಹಿ ಸಿಹಿ ಸಖತ್ ಟೇಸ್ಟಿ ಆಗಿ ಇರುವ ಪನ್ನೀರ್ ಚಿಲ್ಲಿಯನ್ನು ಮನೆಯಲ್ಲೂ ಮಾಡಿ ತಿನ್ನಬಹುದು. ಮತ್ಯಾಕೆ ತಡ, ಇಂದೇ ಮಾಡಿ ಟೇಸ್ಟ್ ನೋಡಿ. ರೆಸಿಪಿ ಇಲ್ಲಿದೆ.
ಇನ್ನಷ್ಟು ಜೀವನಶೈಲಿಗೆ ಸಂಬಂಧಿಸಿದ ಲೇಖನಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ಬೇಕಾಗುವ ಸಾಮಗ್ರಿಗಳು: ಪನೀರ್- 500 ಗ್ರಾಂ, ಕೆಂಪು ಬಣ್ಣದ ಕ್ಯಾಪ್ಸಿಕಂ - 2, ಹಸಿಮೆಣಸು - 50 ಗ್ರಾಂ, ಹಳದಿ ಬಣ್ಣದ ಕ್ಯಾಪ್ಸಿಕಂ - 2, ಈರುಳ್ಳಿ - 4, ಶುಂಠಿ ಪುಡಿ - 1 ಚಮಚ, ಬೆಳ್ಳುಳ್ಳಿ ಪೇಸ್ಟ್ - 4 ಚಮಚ, ಕಾರ್ನ್‌ಫ್ಲೋರ್ - 2 ಚಮಚ, ವೆಜಿಟೇಬಲ್ ಸಾಸ್ - 2 ಚಮಚ, ಸೋಯಾ ಸಾಸ್ - 2 ಚಮಚ, ಟೊಮೆಟೊ ಕೆಚಪ್ - 4 ಚಮಚ, ಹಸಿಮೆಣಸಿನಕಾಯಿ ಸಾಸ್ - 2 ಚಮಚ, ಹಸಿಮೆಣಸಿನಕಾಯಿ ಪೇಸ್ಟ್ - 2 ಚಮಚ, ಬೆಣ್ಣೆ - 2 ಚಮಚ, ವಿನೇಗರ್ - 2 ಚಮಚ, ಎಣ್ಣೆ - 1 ಕಪ್, ಉಪ್ಪು - ರುಚಿಗೆ,
ಪನೀರ್ ಚಿಲ್ಲಿ ತಯಾರಿಸುವ ವಿಧಾನ: ಮೊದಲು ಪನೀರ್, ಈರುಳ್ಳಿ ಮತ್ತು ಕ್ಯಾಪ್ಸಿಕಂ ಅನ್ನು ಕತ್ತರಿಸಿಕೊಳ್ಳಿ. ಕತ್ತರಿಸಿಕೊಂಡ ಕ್ಯಾಪ್ಸಿಕಂ ಅನ್ನು ನೀರಿನಲ್ಲಿ ತೊಳೆದು ಪಕ್ಕಕ್ಕೆ ಇರಿಸಿ. ಶುಂಠಿಯನ್ನು ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಹಸಿರು ಮೆಣಸಿನಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
ಚಿಕ್ಕ ಬೌಲ್‌ನಲ್ಲಿ ಪನೀರ್ ಹಾಕಿ, ಅದಕ್ಕೆ ಕಾರ್ನ್ ಫ್ಲೋರ್, ಉಪ್ಪು, ಶುಂಠಿಪುಡಿ, ವಿನೇಗರ್, ಹಸಿಮೆಣಸಿನ ಪೇಸ್ಟ್ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. 15 ನಿಮಿಷಗಳ ಕಾಲ ನೆನೆಸಿಡಿ.
ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ನೆನೆಸಿಟ್ಟುಕೊಂಡ ಪನೀರ್ ತುಂಡುಗಳನ್ನು ಹಾಕಿ ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ನಂತರ ಪಾನ್‌ವೊಂದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಬೆಳ್ಳುಳ್ಳಿ ಪೇಸ್ಟ್, ಶುಂಠಿ ಮತ್ತು ಕತ್ತರಿಸಿದ ಹಸಿ ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ. ನಂತರ ಕತ್ತರಿಸಿದ ಕ್ಯಾಪ್ಸಿಕಂ ಹಾಕಿ ಒಂದು ನಿಮಿಷ ಹುರಿಯಿರಿ. ಅದಕ್ಕೆ ಈರುಳ್ಳಿ ಸೇರಿಸಿ ಒಂದು ನಿಮಿಷ ಫ್ರೈ ಮಾಡಿ. ನಂತರ ಟೊಮೆಟೊ ಕೆಚಪ್, ಗ್ರೀನ್ ಚಿಲ್ಲಿ ಸಾಸ್ ಮತ್ತು ಸೋಯಾ ಸಾಸ್ ಸೇರಿಸಿ. ಅದಕ್ಕೆ ಬೆಣ್ಣೆಯನ್ನು ಸೇರಿಸಿ. ಎರಡು ಮೂರು ನಿಮಿಷ ಕೈಯಾಡಿಸಿ. ಅಂತಿಮವಾಗಿ ಈ ಮಿಶ್ರಣಕ್ಕೆ ಹುರಿದ ಪನೀರ್ ತುಂಡುಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಮ್ಮ ಮುಂದೆ ಪನೀರ್ ಚಿಲ್ಲಿ ತಿನ್ನಲು ಸಿದ್ಧ. ಬೇಕಿದ್ದರೆ ಈರುಳ್ಳಿ ಹೂವಿನ ಅಲಂಕರಿಸಬಹುದು.
ಇದನ್ನೂ ಓದಿ
Chutney Recipe: 5 ನಿಮಿಷದಲ್ಲಿ ರೆಡಿ ಆಗುವ ಸೂಪರ್ ಟೇಸ್ಟಿ ಚಟ್ನಿ ರೆಸಿಪಿ ಇಲ್ಲಿದೆ; ಅನ್ನ, ದೋಸೆ, ಚಪಾತಿಗೆ ಇದು ಬೆಸ್ಟ್ ಕಾಂಬಿನೇಷನ್
ಬೆಳಗೆದ್ದು ತಿಂಡಿಗೆ ಏನು ಮಾಡೋದು, ಮಧ್ಯಾಹ್ನ ಊಟಕ್ಕೆ ನೆಂಜಿಕೊಳ್ಳಲು ಏನೂ ಮಾಡಿಲ್ಲ, ಚಪಾತಿ ಜೊತೆ ಸಾಗು, ಪಲ್ಯ ತಿಂದು ಬೇಸರ ಆಗಿದೆ, ಏನು ಮಾಡಬೇಕು ತಿಳಿತಿಲ್ಲ. ಇಡ್ಲಿ ಮಾಡಿದ್ದೆ, ಸಾಂಬಾರ್ ಮಾಡೋಕೆ ಟೈಮ್ ಇಲ್ಲ ಈ ಎಲ್ಲಾ ಚಿಂತೆಯನ್ನು ದೂರ ಮಾಡುವ, 5 ನಿಮಿಷದಲ್ಲಿ ತಯಾರಿಸಬಹುದಾದ, ಅನ್ನ, ಇಡ್ಲಿ, ದೋಸೆ ಜೊತೆ ಬೆಸ್ಟ್ ಕಾಂಬಿನೇಷನ್ ಚಟ್ನಿ ರೆಸಿಪಿ ಇಲ್ಲಿದೆ.