ಕನ್ನಡ ಸುದ್ದಿ  /  ಜೀವನಶೈಲಿ  /  Mango Cake: ಓವನ್ ಇಲ್ಲದೇ ತಯಾರಿಸಿ ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಕೇಕ್; ಇದರ ರುಚಿಗೆ ನೀವು ಫಿದಾ ಆಗೋದು ಪಕ್ಕಾ

Mango Cake: ಓವನ್ ಇಲ್ಲದೇ ತಯಾರಿಸಿ ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಕೇಕ್; ಇದರ ರುಚಿಗೆ ನೀವು ಫಿದಾ ಆಗೋದು ಪಕ್ಕಾ

ಕೇಕ್‌ ಪ್ರಿಯರು ನೀವಾಗಿದ್ದರೆ ಒಂದೇ ರುಚಿಯ ಕೇಕ್‌ ತಿಂದು ಬೇಸರ ಆಗಿದ್ದರೆ ಮಾವಿನಹಣ್ಣಿನ ಕೇಕ್‌ ತಯಾರಿಸಿ ತಿನ್ನಬಹುದು. ಇದರ ರುಚಿಯೇ ಸಖತ್‌ ಡಿಫ್ರೆಂಟ್‌. ಕೆಲವೇ ಸಾಮಗ್ರಿಗಳನ್ನು ಬಳಸಿಕೊಂಡು ಓವೆನ್‌ ಇಲ್ಲದೇ ಮಾವಿನ ಹಣ್ಣಿನ ಕೇಕ್ ತಯಾರಿಸುವ ವಿಧಾನ ಇಲ್ಲಿದೆ ನೋಡಿ.

ಓವನ್ ಇಲ್ಲದೇ ತಯಾರಿಸಿ ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಕೇಕ್
ಓವನ್ ಇಲ್ಲದೇ ತಯಾರಿಸಿ ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಕೇಕ್

ಕೇಕ್ ಎಂದರೆ ಸಾಕು ವ್ಹಾವ್ ಎನ್ನುವವರು ಒಂದಷ್ಟು ಜನರಿದ್ದರೆ ಮಾವಿನ ಹಣ್ಣಿನ ರುಚಿಗೆ ಫಿದಾ ಆಗುವವರು ಮತ್ತೊಂದಿಷ್ಟು ಜನರಿದ್ದಾರೆ. ಈಗ ಎರಡೂ ವಿಷಯವನ್ನು ಒಟ್ಟಿಗೆ ಹೇಳಲು ಕಾರಣವಿದೆ. ಮಾವಿನ ಹಣ್ಣಿನ ಸೀಸನ್ ನಡೆಯುತ್ತಿದೆ. ಹೀಗಾಗಿ ಮಾವಿನ ಹಣ್ಣನ್ನು ಬಳಕೆ ಮಾಡಿ ಮನೆಯಲ್ಲಿ ಸುಲಭವಾಗಿ ಕೇಕ್ ತಯಾರಿಸಬಹುದು ಎಂದರೆ ನಂಬುತ್ತೀರಾ..? ಅದೂ ಓವನ್ ಬಳಕೆ ಮಾಡದೆ. ಹೌದು..! ಓವನ್ ಬಳಕೆ ಮಾಡದೇ ಮನೆಯಲ್ಲಿಯೇ ಸುಲಭವಾಗಿ ಮಾವಿನಹಣ್ಣಿನ ಕೇಕ್ ತಯಾರಿಸಬಹುದಾಗಿದೆ. ಮಾವಿನಹಣ್ಣಿನ ರುಚಿಕರವಾದ ಕೇಕ್ ತಯಾರಿಸಲು ಯಾವೆಲ್ಲ ಪದಾರ್ಥಗಳು ಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನ ಕೇಕ್‌ ರೆಸಿಪಿ

ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು - 1 ಹಾಗೂ 1/2 ಕಪ್ (ಪ್ರತ್ಯೇಕ), ಬೇಕಿಂಗ್ ಪೌಡರ್ - 1 ಚಮಚ, ಅಡಿಗೆ ಸೋಡಾ - 1/4 ಚಮಚ, ಏಲಕ್ಕಿ ಪುಡಿ - 1/2 ಚಮಚ, ಉಪ್ಪು - 1/4 ಚಮಚ, ಸಕ್ಕರೆ - 2/3 ಕಪ್, ತಾಜಾ ಮಾವಿನ ಹಣ್ಣಿನ ತಿರುಳು - 3/4 ಕಪ್, 1/4 ಕಪ್ - ಹಾಲು, ಎಣ್ಣೆ - 1/3 ಕಪ್

ಮಾವಿನಹಣ್ಣಿನ ಕೇಕ್ ತಯಾರಿಸುವ ವಿಧಾನ: ಕಡಿಮೆ ಉರಿಯಲ್ಲಿ ಪಾತ್ರೆಯನ್ನು ಐದು ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ. ಈಗ ಈ ಪಾತ್ರೆಗೆ ಎಣ್ಣೆ ಸವರಿಕೊಂಡು ಬಳಿಕ ಸಲ್ಪ ಗೋಧಿಹಿಟ್ಟಿನ್ನು ಸಂಪೂರ್ಣ ಪಾತ್ರೆಗೆ ಲೇಪಿಸಿ. ಅಥವಾ ನೀವು ಮಾರುಕಟ್ಟೆಗಳಲ್ಲಿ ಸುಲಭವಾಗಿ ಸಿಗುವ ಪರ್ಚಮೆಂಟ್ ಪೇಪರ್ ಕೂಡ ಬಳಕೆ ಮಾಡಬಹುದು. ತ್ತೊಂದು ಪಾತ್ರೆಯಲ್ಲಿ ಗೋಧಿಹಿಟ್ಟು, ಬೇಕಿಂಗ್ ಪೌಡರ್, ಅಡಿಗೆ ಸೋಡಾ, ಬೇಕಿಂಗ್ ಸೋಡಾ, ಏಲಕ್ಕಿ ಪುಡಿ, ಉಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಈಗ ಇನ್ನೊಂದು ಪಾತ್ರೆಯಲ್ಲಿ ಹಾಲು, ಮಾವಿನ ಹಣ್ಣಿನ ತಿರುಳು, ಸಕ್ಕರೆ ಹುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಗೋಧಿ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ. ಯಾವುದೇ ರೀತಿಯ ಗಂಟು ಕಾಣದಂತೆ ಕಲಿಸಿಕೊಳ್ಳಿ. ತುಂಬಾ ಹೊತ್ತು ಮಿಶ್ರಣ ಮಾಡುವುದೂ ಬೇಡ. ಈ ರೀತಿ ಮಾಡುವುದರಿಂದ ಕೇಕ್ ಉಬ್ಬಿ ಬರುವುದಿಲ್ಲ.

ಈಗ ಈ ಮಿಶ್ರಣವನ್ನು ನೀವು ಗೋಧಿ ಹಿಟ್ಟು ಸವರಿಕೊಂಡ ಪಾತ್ರೆಗೆ ಹಾಕಿ, ಬೇಕಿದ್ದರೆ ಡ್ರೈಫ್ರೂಟ್‌ನಿಂದ ಕೇಕ್‌ ಅನ್ನು ಸಿಂಗರಿಸಬಹುದು. 30 ರಿಂದ 40 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕೇಕ್‌ ಅನ್ನು ಬೇಯಿಸಲು ಬಿಡಿ. ಈಗ ಒಂದು ಕಡ್ಡಿಯ ಸಹಾಯದಿಂದ ಕೇಕ್‌ಗೆ ಚುಚ್ಚಿ. ಕಡ್ಡಿಗೆ ಯಾವುದೇ ರೀತಿಯ ಹಿಟ್ಟು ಅಂಟುಕೊಳ್ಳದೇ ಸುಲಭವಾಗಿ ಕೇಕ್‌ನಿಂದ ಹೊರತೆಗೆಯಲು ಸಾಧ್ಯವಾದರೆ ನಿಮ್ಮ ಕೇಕ್ ಬೆಂದಿದೆ ಎಂದು ಅರ್ಥ.

10 ನಿಮಿಷಗಳ ಕಾಲ ಕೇಕ್‌ ಅನ್ನು ತಣ್ಣಗಾಗಲು ಬಿಡಿ. ಕೇಕ್‌ ಅನ್ನು ಒಂದು ಪ್ಲೇಟ್‌ಗೆ ಸ್ಥಳಾಂತರ ಮಾಡಿ. ಸಣ್ಣದಾಗಿ ಕತ್ತರಿಸಿ ಎಲ್ಲರಿಗೂ ಸವಿಯಲು ನೀಡಿ. ರುಚಿ ರುಚಿಕರವಾದ ಮಾವಿನ ಹಣ್ಣಿನ ಕೇಕ್ ಸವಿಯಲು ಸಿದ್ಧ.

ವಿಭಾಗ