ಕನ್ನಡ ಸುದ್ದಿ  /  ಜೀವನಶೈಲಿ  /  Mango Pakoda: ಮಾವಿನಕಾಯಿಯಿಂದ ತಯಾರಿಸಬಹುದು ಡಿಫ್ರೆಂಟ್‌ ರುಚಿಯ ಬಿಸಿ ಬಿಸಿ ಪಕೋಡಾ; ಸೀಸನ್‌ ಮುಗಿಯವ ಮೊದಲು ಮಾಡಿ ತಿನ್ನಿ

Mango Pakoda: ಮಾವಿನಕಾಯಿಯಿಂದ ತಯಾರಿಸಬಹುದು ಡಿಫ್ರೆಂಟ್‌ ರುಚಿಯ ಬಿಸಿ ಬಿಸಿ ಪಕೋಡಾ; ಸೀಸನ್‌ ಮುಗಿಯವ ಮೊದಲು ಮಾಡಿ ತಿನ್ನಿ

ಮಾವಿನಕಾಯಿ ಸೀಸನ್‌ನಲ್ಲಿ ಬಗೆ ಬಗೆಯ ರೆಸಿಪಿಗಳನ್ನು ತಯಾರಿಸಬೇಕು ಎಂದು ಅನ್ನಿಸುವುದು ಸಹಜ. ಅದರಲ್ಲೂ ಈಗ ಮಳೆ ಶುರುವಾಗಿದೆ. ಸಂಜೆ ಹೊತ್ತಿಗೆ ಡಿಫ್ರೆಂಟ್‌ ರುಚಿಯ ಸ್ನ್ಯಾಕ್ಸ್‌ ತಯಾರಿಸುವ ಬಯಕೆ ನಿಮಗಿದ್ದರೆ ನೀವು ಮಾವಿನಕಾಯಿ ಪಕೋಡಾ ಟ್ರೈ ಮಾಡಬಹುದು. ಇದು ಸಿಹಿ-ಹುಳಿ ರುಚಿ ನೀಡಿದ್ದು ಸಖತ್‌ ಟೇಸ್ಟಿ ಆಗಿರುತ್ತೆ.

 ಡಿಫ್ರೆಂಟ್‌ ರುಚಿಯ ಬಿಸಿ ಬಿಸಿ ಮಾವಿನಕಾಯಿ ಪಕೋಡಾ
ಡಿಫ್ರೆಂಟ್‌ ರುಚಿಯ ಬಿಸಿ ಬಿಸಿ ಮಾವಿನಕಾಯಿ ಪಕೋಡಾ

ಏಪ್ರಿಲ್‌-ಮೇ ತಿಂಗಳು ಎಂದರೆ ಮಾವಿನ ಕಾಲ. ಬೇಸಿಗೆಯಲ್ಲಿ ಮಾತ್ರ ಮಾವಿನಕಾಯಿ ಸಿಗಲು ಸಾಧ್ಯ. ಋತುಮಾನಕ್ಕನುಗುಣವಾಗಿ ದೊರೆಯುವ ಬಗೆ ಬಗೆ ಮಾವಿನಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಮಾವಿನಕಾಯಿಯಿಂದ ರುಚಿಯಾದ ಪಕೋಡ ಅಥವಾ ಬೋಂಡ ತಯಾರಿಸಬಹುದು ಎಂದರೆ ನೀವು ನಂಬಲೇಬೇಕು. ಮಳೆಗಾಲದ ಇಳಿ ಸಂಜೆ ಹೊತ್ತಿಗೆ ಈ ಮಾವಿನಕಾಯಿ ಪಕೋಡಾ ನಿಮಗೆ ಸಖತ್‌ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ಇದನ್ನು ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತೆ. ಮಕ್ಕಳಿಗೂ ಇಷ್ಟವಾಗುವ ರೆಸಿಪಿ ಇದು.

ಟ್ರೆಂಡಿಂಗ್​ ಸುದ್ದಿ

ಮಾವಿನಕಾಯಿ ಪಕೋಡ ರೆಸಿಪಿ

ಮಾವಿನಕಾಯಿ ಪಕೋಡಕ್ಕೆ ಬೇಕಾಗುವ ಸಾಮಗ್ರಿಗಳು: ಮಾವಿನಕಾಯಿ - 1, ಕಡಲೆ ಹಿಟ್ಟು - 1 ಕಪ್, ಕೊತ್ತಂಬರಿ ಪುಡಿ - 4 ಚಮಚ, ಮೆಣಸಿನಕಾಯಿ - ಅರ್ಧ ಚಮಚ, ಅರಿಶಿನ - ಕಾಲು ಚಮಚ, ಜೀರಿಗೆ - ಒಂದು ಚಮಚ, ಎಣ್ಣೆ - ಕರಿಯಲು, ಉಪ್ಪು - ರುಚಿಗೆ

ಮಾವಿನಕಾಯಿ ಪಕೋಡ ತಯಾರಿಸುವ ವಿಧಾನ: ಒಂದು ಬಟ್ಟಲಿನಲ್ಲಿ ಮಾವಿನಕಾಯಿಯನ್ನು ತುಂಬಾ ನುಣ್ಣಗೆ ತುರಿದುಕೊಳ್ಳಿ. ಅದೇ ಬಟ್ಟಲಿನಲ್ಲಿ ಕಡಲೆಹಿಟ್ಟು, ಅರಿಶಿನ, ಜೀರಿಗೆ, ಮೆಣಸಿನಕಾಯಿ, ಉಪ್ಪು ಮತ್ತು ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಚಿಮುಕಿಸಿ. ಪಕೋಡ ಹಿಟ್ಟನ್ನು ನಿಮಗೆ ಬೇಕಾದಷ್ಟು ದಪ್ಪವಾಗಿ ತಯಾರಿಸಿಕೊಳ್ಳಿ. ಈಗ ಒಲೆಯ ಮೇಲೆ ಕಡಾಯಿ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ತುರಿದ ಮಾವಿನ ಮಿಶ್ರಣವನ್ನು ಪಕೋಡಾಗಳಂತೆ ಹರಡಿ. ಚೆನ್ನಾಗಿ ಕರಿಯಿರಿ. ಈಗ ನಿಮ್ಮ ಮುಂದೆ ರುಚಿಯಾದ ಮಾವಿನಕಾಯಿ ಪಕೋಡ ತಿನ್ನಲು ಸಿದ್ಧ. ಇದು ಹುಳಿ, ಸಿಹಿ ಮತ್ತು ಮಸಾಲೆ ರುಚಿಯಿಂದ ಸಖತ್‌ ಟೇಸ್ಟಿ ಆಗಿರುತ್ತದೆ.

ಬೇಸಿಗೆಯಲ್ಲಿ ಮಾತ್ರ ಮಾವಿನಕಾಯಿ ಸಿಗುತ್ತದೆ. ಹಾಗಾಗಿ ಇವುಗಳನ್ನು ಆಯಾ ಸೀಸಸ್‌ಗಳಲ್ಲಿ ತಿನ್ನಬೇಕು. ಮಾವಿನಕಾಯಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಪಕೋಡವನ್ನು ನೀವು ಈ ಮಾವಿನ ಸೀಸನ್‌ನಲ್ಲಿ ಟ್ರೈ ಮಾಡಿ.

ಮಾವಿನಹಣ್ಣಿನ ಈ ರೆಸಿಪಿಗಳನ್ನೂ ಓದಿ 

Mango Recipe: ಬಾಯಲ್ಲಿ ನೀರೂರಿಸುತ್ತೆ ಮಾವಿನಹಣ್ಣಿನ ರಸಗುಲ್ಲ; ಈ ಮ್ಯಾಂಗೋ ಸೀಸನ್‌ನಲ್ಲಿ ತಪ್ಪದೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

ಮಾವಿನಹಣ್ಣಿನ ಸೀಸನ್‌ನಲ್ಲಿ ಅದೆಷ್ಟು ಬಗೆಯ ಸಿಹಿತಿನಿಸುಗಳನ್ನು ಮಾಡಿದ್ರೂ ಕಡಿಮೆಯೇ. ಅದರಲ್ಲೂ ಹೊಸ ಬಗೆಯ ಸಿಹಿಖಾದ್ಯವನ್ನು ಸವಿಯಬೇಕು ಅಂದುಕೊಂಡವರು ಮಾವಿನಹಣ್ಣಿನ ರಸಗುಲ್ಲವನ್ನು ಒಮ್ಮೆಯಾದರೂ ತಯಾರಿಸಿ ತಿನ್ನಬೇಕು. ಇದರ ರುಚಿಗೆ ನೀವು ಫಿದಾ ಆಗೋದು ಪಕ್ಕಾ. ಅದನ್ನು ತಯಾರಿಸುವ ವಿಧಾನ ಇಲ್ಲಿದೆ.

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ಅಡುಗೆಪ್ರಿಯರಿಗೆ ಬಗೆಬಗೆ ಅಡುಗೆ ಮಾಡಿ ಬಡಿಸುವುದು ಎಂದರೆ ಏನೋ ಹರುಷ. ಈಗಂತೂ ಮಾವಿನಹಣ್ಣಿನ ಕಾಲ. ಮಾವಿನಹಣ್ಣು ಮಾತ್ರವಲ್ಲ ಇದರಿಂದ ತಯಾರಿಸುವ ತಿನಿಸುಗಳು ಕೂಡ ಸಖತ್‌ ರುಚಿಯಾಗಿರುತ್ತವೆ. ಮಾವಿನಹಣ್ಣಿನಿಂದ ಏನೆಲ್ಲಾ ಸಿಹಿಖಾದ್ಯಗಳನ್ನು ತಯಾರಿಸಬಹುದು ನೋಡಿ. ನೀವು ಇದನ್ನು ಮನೆಯಲ್ಲಿ ತಯಾರಿಸಿ, ಮನೆಯವರನ್ನು ಖುಷಿ ಪಡಿಸಬಹುದು

 

 

ವಿಭಾಗ