ಸಂಡೆ ಏನಾದ್ರೂ ಸ್ಪೆಷಲ್‌ ಮಾಡ್ಬೇಕು ಅಂತಿದ್ರೆ, ಮಶ್ರೂಮ್‌ ಪೆಪ್ಪರ್‌ ಫ್ರೈ ಮಾಡಿ; ಅಣಬೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಡೆ ಏನಾದ್ರೂ ಸ್ಪೆಷಲ್‌ ಮಾಡ್ಬೇಕು ಅಂತಿದ್ರೆ, ಮಶ್ರೂಮ್‌ ಪೆಪ್ಪರ್‌ ಫ್ರೈ ಮಾಡಿ; ಅಣಬೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ

ಸಂಡೆ ಏನಾದ್ರೂ ಸ್ಪೆಷಲ್‌ ಮಾಡ್ಬೇಕು ಅಂತಿದ್ರೆ, ಮಶ್ರೂಮ್‌ ಪೆಪ್ಪರ್‌ ಫ್ರೈ ಮಾಡಿ; ಅಣಬೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ

Mushroom Pepper Fry Recipe: ಅಣಬೆ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇದರಿಂದ ಬಗೆ ಬಗೆಯ ಖಾದ್ಯಗಳನ್ನೂ ತಯಾರಿಸಬಹುದು. ಮಶ್ರೂಮ್‌ ಫ್ರೈಡ್‌ ರೈಸ್‌, ಮಶ್ರೂಮ್‌ ಚಿಲ್ಲಿ, ಮಶ್ರೂಮ್‌ ಬಿರಿಯಾನಿ ಜೊತೆಗೆ ಮಶ್ರೂಮ್‌ನಿಂದ ಪೆಪ್ಪರ್‌ ಫ್ರೈ ಕೂಡ ಮಾಡಬಹುದು. ಮಶ್ರೂಮ್‌ ಪೆಪ್ಪರ್‌ ಫ್ರೈ ರೆಸಿಪಿ ಹಾಗೂ ಅಣಬೆಯ ಆರೋಗ್ಯ ಪ್ರಯೋಜನ ಹೀಗಿದೆ.

ಮಶ್ರೂಮ್‌ ಪೆಪ್ಪರ್‌ ಫ್ರೈ
ಮಶ್ರೂಮ್‌ ಪೆಪ್ಪರ್‌ ಫ್ರೈ

ಮಶ್ರೂಮ್‌ ಹಲವರಿಗೆ ಫೇವರಿಟ್‌. ಇದು ಆರೋಗ್ಯಕ್ಕೂ ಉತ್ತಮ. ಹಾಗಂತ ಪ್ರತಿದಿನ ಒಂದೇ ರೀತಿಯ ಮಶ್ರೂಮ್‌ ಖಾದ್ಯಗಳನ್ನು ಸೇವಿಸಿದ್ರೆ ನಾಲಿಗೆಗೆ ಬೇಜಾರು ಬರೋದು ಖಂಡಿತ. ಹಾಗಾಗಿ ಡಿಫರೆಂಟ್‌ ಆಗಿ ಏನಾದ್ರೂ ಟ್ರೈ ಮಾಡ್ಬೇಕು ಅನ್ನಿಸಬಹುದು. ಭಾನುವಾರ ಬೇರೆ, ಏನಾದ್ರೂ ರುಚಿ ರುಚಿಯಾಗಿ ತಿನ್ನಬೇಕು ಅನ್ನಿಸಿದ್ರೆ ಮಶ್ರೂಮ್‌ ಪೆಪ್ಪರ್‌ ಫ್ರೈ ಟ್ರೈ ಮಾಡಬಹುದು. ಇದು ಆರೋಗ್ಯಕ್ಕೂ ಉತ್ತಮ, ಬಾಯಿಗೂ ರುಚಿ.

ಚಿಕನ್‌, ಮಟನ್‌ ಪ್ಪೆಪರ್‌ ಫ್ರೈ ಸಾಮಾನ್ಯವಾಗಿ ಎಲ್ಲರೂ ತಿಂದಿರುತ್ತಾರೆ. ಆದ್ರೆ ಮಶ್ರೂಮ್‌ ಪೆಪ್ಪರ್‌ ಫ್ರೈ ಖಂಡಿತ ನಿಮಗೆ ಹೊಸ ರುಚಿ ಆಗಿರುತ್ತೆ. ಇದನ್ನು ತಯಾರಿಸೋಕೆ ವಿಶೇಷ ಮಸಾಲೆಗಳ ಅಗತ್ಯವಿರುವುದಿಲ್ಲ. ಅಡುಗೆಮನೆಯಲ್ಲೇ ಇರುವ ಪದಾರ್ಥಗಳಿಂದ ತಯಾರಿಸಬಹುದು. ಸರಿ ಇನ್ನೇಕೆ ತಡ ರೆಸಿಪಿ ನಾವು ಹೇಳ್ತೀವಿ, ನೀವು ಮನೆಯಲ್ಲಿ ತಯಾರಿಸಿ ತಿನ್ನಿ. ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸೋದಂತು ಪಕ್ಕಾ.

ಮಶ್ರೂಮ್‌ ಪೆಪ್ಪರ್‌ ಫ್ರೈ

ಬೇಕಾಗುವ ಸಾಮಗ್ರಿಗಳು: ಕೊಬ್ಬರಿ ಎಣ್ಣೆ - 2 ಚಮಚ, ಸಾಸಿವೆ - 1 ಚಮಚ, ಸಣ್ಣಗೆ ಹೆಚ್ಚಿದ ಶುಂಠಿ - ಒಂದೂವರೆ ಚಮಚ, ಒಣ ಮೆಣಸಿನಕಾಯಿ - 2-3, ಈರುಳ್ಳಿ - 1, ಟೊಮೆಟೊ ಪೇಸ್ಟ್ - 2 ಚಮಚ, ಕೊತ್ತಂಬರಿ ಪುಡಿ - 1 ಚಮಚ, ಜೀರಿಗೆ ಪುಡಿ - ಅರ್ಧ ಚಮಚ, ಉಪ್ಪು - ಸಾಕಷ್ಟು, ಗರಂ ಮಸಾಲಾ - 1/4 ಟೀಸ್ಪೂನ್, ಮೆಣಸು ಪುಡಿ - ಅರ್ಧ ಟೀ ಚಮಚ, ಮೆಣಸಿನ ಪುಡಿ - 1 ಚಮಚ, ಮಶ್ರೂಮ್‌ - 500 ಗ್ರಾಂ

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಸಾಸಿವೆ, ಶುಂಠಿ, ಬೆಳ್ಳುಳ್ಳಿ, ಕರಿಬೇವಿನ ಸೊಪ್ಪು ಮತ್ತು ಖಾರದಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ. ಇದು ಘಮ್ಮೆಂದು ಸುವಾಸನೆ ಬರುತ್ತದೆ. ಆಗ ಈರುಳ್ಳಿ ಹಾಕಿ ನಿಧಾನವಾಗಿ ಹುರಿಯಿರಿ. ನಂತರ ಟೊಮೆಟೊ ಪೇಸ್ಟ್, ಕೊತ್ತಂಬರಿ ಪುಡಿ, ಗರಂ ಮಸಾಲಾ ಸೇರಿಸಿ ಮತ್ತು 2-3 ನಿಮಿಷ ಬೇಯಿಸಿ.

ಈಗ ಮಶ್ರೂಮ್ ಹಾಕಿ ಪುನಃ 2 ನಿಮಿಷ ಫ್ರೈ ಮಾಡಿ. ನಂತರ ಕಾಳುಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ. ದೊಡ್ಡ ಉರಿಯಲ್ಲಿ ಫ್ರೈ ಮಾಡಿ. ನಂತರ ಪುನಃ ಸ್ವಲ್ಪ ಖಾರದ ಪುಡಿ ಸೇರಿಸಿ. ಆಗಾಗ್ಗೆ ಬೆರೆಸಿ. ಅಣಬೆಗಳು ಚೆನ್ನಾಗಿ ಬೆಂದ ನಂತರ ಉರಿಯಿಂದ ಇಳಿಸಿ ಬಡಿಸಿ.

ಅಣಬೆ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಪೊಟ್ಯಾಶಿಯಂ, ಪ್ರೊಟೀನ್, ತಾಮ್ರ, ಸೆಲೆನಿಯಂ, ರಂಜಕ, ಉತ್ಕರ್ಷಣ ನಿರೋಧಕಗಳು, ಫೈಟೊಕೆಮಿಕಲ್ಸ್ ಮತ್ತು ವಿಟಮಿನ್‌ಳನ್ನು ಒಳಗೊಂಡಿದೆ. ಇವು ನಮ್ಮ ದೇಹವನ್ನು ಅನೇಕ ರೋಗಗಳು ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ. ಅಣಬೆಯು ಪೋಷಕಾಂಶಗಳು ಮತ್ತು ಅನೇಕ ರೀತಿಯ ಕಿಣ್ವಗಳನ್ನು ಹೊಂದಿರುತ್ತವೆ. ಇವುಗಳಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಅಣಬೆ ಉಪಯುಕ್ತ. ಇದು ಮಲಬದ್ಧತೆ ಮತ್ತು ಅಜೀರ್ಣದಂತಹ ಹೊಟ್ಟೆಗೆ ಸಮಸ್ಯೆಗಳನ್ನೂ ಸಹ ನಿವಾರಿಸುತ್ತದೆ.

ಇದನ್ನೂ ಓದಿ

ಎಳನೀರಿನಿಂದ ಆರೋಗ್ಯಕ್ಕುಂಟು ನೂರಾರು ಪ್ರಯೋಜನ, ಆದರೆ ಸೇವನೆಗೂ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯದಿರಿ

ನೈಸರ್ಗಿಕ ಪಾನೀಯ ಎಳನೀರು ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ದೇಹವನ್ನು ನಿರ್ಜಲೀಕರಣ ಸಮಸ್ಯೆಯಿಂದ ತಪ್ಪಿಸುತ್ತದೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಜೀರ್ಣಕ್ರಿಯೆಯನ್ನ ಹೆಚ್ಚಿಸುವುದು, ಎಲೆಕ್ಟ್ರೋಲೈಟ್‌ ಪ್ರಮಾಣವನ್ನು ಸಮತೋಲನಗೊಳಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಸುಧಾರಿಸುವುದು, ರಕ್ತದೊತ್ತಡವನ್ನು ನಿಯಂತ್ರಿಸುವುದು, ಕಿಡ್ನಿ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

Whats_app_banner