Chicken Chops: ಚಿಕನ್‌ ಚಾಪ್ಸ್‌ ಫೋಟೋ ನೋಡಿದ ಕೂಡ್ಲೇ ಬಾಯಿ ಚಪ್ಪರಿಸುತ್ತಾ ಕೂರ್ಬೇಡಿ; ಈಸಿ ರೆಸಿಪಿ, ಮಾಡ್ಕೊಂಡು ತಿನ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  Chicken Chops: ಚಿಕನ್‌ ಚಾಪ್ಸ್‌ ಫೋಟೋ ನೋಡಿದ ಕೂಡ್ಲೇ ಬಾಯಿ ಚಪ್ಪರಿಸುತ್ತಾ ಕೂರ್ಬೇಡಿ; ಈಸಿ ರೆಸಿಪಿ, ಮಾಡ್ಕೊಂಡು ತಿನ್ನಿ

Chicken Chops: ಚಿಕನ್‌ ಚಾಪ್ಸ್‌ ಫೋಟೋ ನೋಡಿದ ಕೂಡ್ಲೇ ಬಾಯಿ ಚಪ್ಪರಿಸುತ್ತಾ ಕೂರ್ಬೇಡಿ; ಈಸಿ ರೆಸಿಪಿ, ಮಾಡ್ಕೊಂಡು ತಿನ್ನಿ

Chicken Chops Recipe: ನಾನ್‌ವೆಜ್‌ಪ್ರಿಯರಿಗೆ ಇಂಥದ್ದೇ ದಿನ ಮಟನ್‌, ಚಿಕನ್‌ ತಿನ್ನಬೇಕು ಎಂಬ ನಿಯಮವಿಲ್ಲ. ನಾಲಗೆ ಕೇಳಿದಾಗ ಕೆಲವರು ರೆಸ್ಟೋರೆಂಟ್‌ ಹಾದಿ ಹಿಡಿದರೆ ಕೆಲವರು ಮನೆಯಲ್ಲೇ ಮಾಡಿ ತಿನ್ನುತ್ತಾರೆ.

ಚಿಕನ್‌ ಚಾಪ್ಸ್‌ ರೆಸಿಪಿ
ಚಿಕನ್‌ ಚಾಪ್ಸ್‌ ರೆಸಿಪಿ

Chicken Chops Recipe: ಕೆಲವರು ಸೋಮವಾರ, ಗುರುವಾರ, ಶನಿವಾರ ಸೇರಿದಂತೆ ಕೆಲವೊಂದು ದಿನಗಳು, ಮಾಸಗಳು ತಿನ್ನದಿದ್ದರೂ ಉಳಿದ ದಿನ ತಮಗಿಷ್ಟವಾದ ನಾನ್‌ವೆಜ್‌ ಐಟಮ್‌ಗಳನ್ನು ತಯಾರಿಸಿ ಸವಿಯುತ್ತಾರೆ.

ಚಿಕನ್‌ ಐಟಮ್‌ಗಳಲ್ಲಿ ಬಹುತೇಕ ಎಲ್ಲರೂ ಇಷ್ಟಪಟ್ಟು ತಿನ್ನುವ ಡಿಶ್‌ ಚಾಪ್ಸ್‌. ಅನ್ನ, ರೊಟ್ಟಿ, ಪೂರಿ, ಚಪಾತಿ ಎಲ್ಲದರೊಂದಿಗೆ ಕೂಡಾ ನೀವು ಚಿಕನ್‌ ಚಾಪ್ಸ್‌ ತಿನ್ನಬಹುದು. ಪುದೀನಾ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ಚಾಪ್ಸ್‌ ಯಾವಾಗಲೂ ಹಸಿರಾಗಿ ಕಾಣುತ್ತದೆ. ನಿಮಗೆ ಹಸಿಮೆಣಸಿನಕಾಯಿ ಇಷ್ವವಿರದಿದ್ದರೆ ಒಣಮೆಣಸಿನಕಾಯಿ ಬಳಸಿ ಕೂಡಾ ಚಿಕನ್‌ ಚಾಪ್ಸ್‌ ತಯಾರಿಸಬಹುದು. ಚಿಕನ್‌ ಚಾಪ್ಸ್‌ ರೆಸಿಪಿ ಇಲ್ಲಿದೆ.

ಚಿಕನ್‌ ಚಾಪ್ಸ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಚಿಕನ್‌ - 1 ಕಿಲೋ
  • ಈರುಳ್ಳಿ - 3
  • ಬೆಳ್ಳುಳ್ಳಿ - 2
  • ಚೆಕ್ಕೆ - 2 ಇಂಚು
  • ಲವಂಗ - 5
  • ಶುಂಠಿ - 1 ಇಂಚು
  • ಕೊತ್ತಂಬರಿ ಸೊಪ್ಪು - 1 ಕಟ್ಟು
  • ಪುದೀನಾ - 1/2 ಕಟ್ಟು
  • ಕರಿಮೆಣಸು - 1 ಟೇಬಲ್‌ ಸ್ಪೂನ್‌
  • ಹಸಿಮೆಣಸಿನಕಾಯಿ - 6
  • ಒಣಕೊಬ್ಬರಿ - 1 ಕಪ್‌
  • ಎಣ್ಣೆ - ಅವಶ್ಯಕತೆಗೆ ತಕ್ಕಷ್ಟು

ಚಿಕನ್‌ ಚಾಪ್ಸ್‌ ತಯಾರಿಸುವ ವಿಧಾನ

  1. ಅಂಗಡಿಯಿಂದ ತಂದ ಚಿಕನನ್ನು ಶುದ್ಧ ನೀರಿನಲ್ಲಿ 4-5 ಬಾರಿ ತೊಳೆದು ನೀರು ಸೋರಿಸಿ.

2. ಸಮಯವಿದ್ದರೆ ಚಿಕನ್‌ಗೆ ಅರಿಶಿನ, ಸ್ವಲ್ಪ ಉಪ್ಪು, ಸೇರಿಸಿ 1-2 ಗಂಟೆ ಮ್ಯಾರಿನೇಡ್‌ ಮಾಡಿ (ಟೈಮ್‌ ಇಲ್ಲದಿದ್ರೆ ಮ್ಯಾರಿನೇಡ್‌ ಮಾಡದೆ ತಯಾರಿಸಬಹುದು)

3. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಸೇರಿಸಿ ಮೆತ್ತಗಾಗುವವರೆಗೂ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ

4. ನಂತರ ಚೆಕ್ಕೆ, ಲವಂಗ, ಹಸಿಮೆಣಸಿನಕಾಯಿ ಸೇರಿಸಿ ಮತ್ತೆ 2 ನಿಮಿಷ ರೋಸ್ಟ್‌ ಮಾಡಿ

5. ಕೊನೆಯಲ್ಲಿ ಶುಂಠಿ, ಕೊಬ್ಬರಿ ತುರಿ ಸೇರಿಸಿ ಸ್ಟೌವ್‌ ಆಫ್‌ ಮಾಡಿ ಕೊತ್ತಂಬರಿ ಸೊಪ್ಪು, ಪುದೀನಾ, ಕರಿಮೆಣಸು ಸೇರಿಸಿ ಒಮ್ಮೆ ಮಿಕ್ಸ್‌ ಮಾಡಿ

6. ಈ ಎಲ್ಲಾ ಮಿಶ್ರಣ ತಣ್ಣಗಾದ ನಂತರ ಸ್ವಲ್ಪ ನೀರು ಸೇರಿಸಿ ನುಣ್ಣಗೆ ಗ್ರೈಂಡ್‌ ಮಾಡಿಕೊಳ್ಳಿ

7. ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಚಿಕನ್‌ ಸೇರಿಸಿ ಹೆಚ್ಚು ಉರಿಯಲ್ಲಿ 5-10 ನಿಮಿಷ ಹುರಿಯಿರಿ

8. ನಂತರ ಗ್ರೈಂಡ್‌ ಮಾಡಿಕೊಂಡ ಮಿಶ್ರಣ ಸೇರಿಸಿ , ಉಪ್ಪು ನೀರು ಅಡ್ಜೆಸ್ಟ್‌ ಮಾಡಿ ಚಿಕನ್‌ ಬೇಯುವವರೆಗೂ ಕುಕ್‌ ಮಾಡಿ

9. ಎಣ್ಣೆ ಬಿಟ್ಟುಕೊಂಡ ನಂತರ ಸ್ಟೌ ಆಫ್‌ ಮಾಡಿ, ಬಿಸಿ ಬಿಸಿ, ರುಚಿಯಾದ ಚಿಕನ್‌ ಚಾಪ್ಸನ್ನು ಅನ್ನ , ಮುದ್ದೆ ಅಥವಾ ಚಪಾತಿಯೊಂದಿಗೆ ನಿಮ್ಮವರಿಗೆ ಸರ್ವ್‌ ಮಾಡಿ, ನೀವೂ ತಿನ್ನಿ.

Whats_app_banner