ಭಾನುವಾರದ ನಾನ್ ವೆಜ್ ಊಟಕ್ಕೊಂದು ಸಿಂಪಲ್ ಚಿಕನ್ ಗ್ರೇವಿ ರೆಸಿಪಿ; ರುಬ್ಬುವ ಕೆಲಸವೇ ಇಲ್ಲ, ಮಾಡಿ ನೋಡಿ
ಮಾಂಸಾಹಾರಿಗಳಿಗೆ ಪ್ರತಿ ಭಾನುವಾರವೂ ಹಬ್ಬವೇ. ಏಕೆಂದರೆ ಆ ದಿನ ಬಹುತೇಕ ಎಲ್ಲಾ ನಾನ್ ವೆಜಿಟೆರಿಯನ್‌ಗಳ ಮನೆಯಲ್ಲಿ ಮಟನ್, ಚಿಕನ್ ಅಥವಾ ಫಿಶ್ ಸೇರಿದಂತೆ ಏನಾದರೊಂದು ರೆಸಿಪಿ ತಯಾರಿಸಲಾಗುತ್ತದೆ. ಈ ಬಾರಿ ಸಿಂಪಲ್ ಆಗಿ , ಕಡಿಮೆ ಸಮಯದಲ್ಲಿ ರುಚಿಯಾದ ಚಿಕನ್ ರೆಸಿಪಿ ತಯಾರಿಸಿ ನೋಡಿ. ಚಿಕನ್ ಗ್ರೇವಿ ರೆಸಿಪಿ ಇಲ್ಲಿದೆ.
ಸಾಮಾನ್ಯವಾಗಿ ಯುಗಾದಿ ಆದ ಮರುದಿನಕ್ಕೆ ಹೊಸ ತೊಡಕು ಆಚರಣೆ ಮಾಡುತ್ತಾರೆ. ಆದರೆ ಈಗ ಯಾವುದಾದರೂ ಪ್ರಮುಖ ಹಬ್ಬಗಳಿದ್ದರೂ ಆ ದಿನ ಸಿಹಿ ತಯಾರಿಸಿದ ನಂತರ ಖಾರ ಊಟ ಮಾಡಿ ನೆಂಟರಿಷ್ಟರನ್ನು ಆಚರಿಸುವುದು ಟ್ರೆಂಡ್ ಆಗಿದೆ. ಇಂದು ದೇಶಾದ್ಯಂತ ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಅಚರಿಸಲಾಗುತ್ತಿದೆ. ಜೊತೆಗೆ ಭಾನುವಾರದ ಭರ್ಜರಿ ಬಾಡೂಟಕ್ಕೆ ನಾನ್ ವೆಜಿಟೆರಿಯನ್‌ಗಳು ಕಾಯುತ್ತಿದ್ದಾರೆ.
ಭಾನುವಾರ , ಮಾಂಸಾಹಾರಿಗಳ ಮನೆಯಲ್ಲಿ ಸಿಂಪಲ್ ಆಗಿಯಾದರೂ ಒಂದು ನಾನ್ ವೆಜ್ ರೆಸಿಪಿ ಇರಲೇಬೇಕು. ಅದು ಮಟನ್, ಆಗಿರಲಿ ಚಿಕನ್ ಅಥವಾ ಮೊಟ್ಟೆ ಏನಾದರೂ ಆಗಿರಲಿ. ಬ್ಯಾಚುಲರ್‌ಗಳು, ಈಗಷ್ಟೇ ಅಡುಗೆ ಕಲಿಯುತ್ತಿರುವವರಿಗಾಗಿ ಇಲ್ಲೊಂದು ಸಿಂಪಲ್ ಚಿಕನ್ ರೆಸಿಪಿ ಇದೆ. ಈ ರೆಸಿಪಿ ಮಾಡಲು ರುಬ್ಬುವ ಕೆಲವೇ ಇರುವುದಿಲ್ಲ. ಮಿಸ್ ಮಾಡದೆ ಟ್ರೈ ಮಾಡಿ.
ಚಿಕನ್ ಗ್ರೇವಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಚಿಕನ್ - 1 ಕಿಲೋ
- ಈರುಳ್ಳಿ - 4
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 3 ಟೇಬಲ್ ಸ್ಪೂನ್
- ಹಸಿ ಮೆಣಸಿನಕಾಯಿ - 3
- ಟೊಮೆಟೊ - 2
- ಅರಿಶಿನ - 1/2 ಟೀ ಸ್ಪೂನ್
- ಅಚ್ಚ ಖಾರದ ಪುಡಿ - 1 ಟೀ ಸ್ಪೂನ್
- ಚಿಕನ್ ಮಸಾಲಾ ಪುಡಿ - 2 ಟೇಬಲ್ ಸ್ಪೂನ್
- ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
- ಉಪ್ಪು - ರುಚಿಗೆ ತಕ್ಕಷ್ಟು
ಇದನ್ನೂ ಓದಿ: ಬೆಳ್ಳುಳ್ಳಿ ಕಬಾಬ್ ಅಲ್ಲ ಇದು ಬೆಳ್ಳುಳ್ಳಿ ಚಿಕನ್; ಗಾರ್ಲಿಕ್ ಚಿಕನ್ ತಯಾರಿಸುವ ವಿಧಾನ ಹೀಗಿದೆ
ಚಿಕನ್ ಗ್ರೇವಿ ತಯಾರಿಸುವ ವಿಧಾನ
- ಮೊದಲು 4-5 ಬಾರಿ ಚಿಕನ್ ತೊಳೆದು ನೀರು ಸೋರಲು ಬಿಡಿ
- ಈರುಳ್ಳಿ, ಟೊಮೆಟೊ ಸಣ್ಣದಾಗಿ ಕತ್ತರಿಸಿಕೊಳ್ಳಿ ಹಸಿಮೆಣಸಿನಕಾಯನ್ನು ಮಧ್ಯಕ್ಕೆ ಸೀಳಿ
- ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವರೆಗೂ ಹುರಿಯಿರಿ
- ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವರೆಗೂ ಹುರಿಯಿರಿ
- ಜೊತೆಗೆ ಅರಿಶಿನ, ಟೊಮೆಟೋ ಸೇರಿಸಿ 3 ನಿಮಿಷ ಹುರಿಯಿರಿ
- ಈಗ ಚಿಕನ್ ತುಂಡುಗಳನ್ನು ಸೇರಿಸಿ ಎಲ್ಲಾ ಮಿಶ್ರಣ ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ 3 ನಿಮಿಷ ಬಿಡಿ
- ಚಿಕನ್ ಮಸಾಲ ಪುಡಿ, ಅಚ್ಚ ಖಾರದ ಪುಡಿ, ಉಪ್ಪು ಸೇರಿಸಿ ತಿರುವಿ
- ಮುಚ್ಚಳ ಮುಚ್ಚಿ 5 ನಿಮಿಷ ಹೆಚ್ಚಿನ ಉರಿಯಲ್ಲಿ ಕುಕ್ ಮಾಡಿ
- ನಂತರ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ 15 ನಿಮಿಷ ಮಧ್ಯಮ ಉರಿಯಲ್ಲಿ ಕುಕ್ ಮಾಡಿ
ಅನ್ನ, ಚಪಾತಿ, ಮುದ್ದೆ ಅಥವಾ ರೊಟ್ಟಿ ಜೊತೆ ಈ ಚಿಕನ್ ಗ್ರೇವಿಯನ್ನು ಎಂಜಾಯ್ ಮಾಡಿ
ವಿಭಾಗ