ಮಳೆಗಾಲಕ್ಕೆ ಹೇಳಿ ಮಾಡಿಸಿದ ಕುರುಕಲು ತಿಂಡಿ ಆಲೂ ಭುಜಿಯಾ; ಹಲವರಿಗೆ ಫೇವರಿಟ್‌ ಆಗಿರುವ ಈ ತಿಂಡಿಯನ್ನು ಮನೆಯಲ್ಲೇ ಮಾಡೋದು ಹೇಗೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಳೆಗಾಲಕ್ಕೆ ಹೇಳಿ ಮಾಡಿಸಿದ ಕುರುಕಲು ತಿಂಡಿ ಆಲೂ ಭುಜಿಯಾ; ಹಲವರಿಗೆ ಫೇವರಿಟ್‌ ಆಗಿರುವ ಈ ತಿಂಡಿಯನ್ನು ಮನೆಯಲ್ಲೇ ಮಾಡೋದು ಹೇಗೆ ನೋಡಿ

ಮಳೆಗಾಲಕ್ಕೆ ಹೇಳಿ ಮಾಡಿಸಿದ ಕುರುಕಲು ತಿಂಡಿ ಆಲೂ ಭುಜಿಯಾ; ಹಲವರಿಗೆ ಫೇವರಿಟ್‌ ಆಗಿರುವ ಈ ತಿಂಡಿಯನ್ನು ಮನೆಯಲ್ಲೇ ಮಾಡೋದು ಹೇಗೆ ನೋಡಿ

ಆಲೂ ಭುಜಿಯಾ ನಿಮಗೂ ಇಷ್ಟನಾ, ಮಳೆಗಾಲದಲ್ಲಿ ಏನಾದ್ರೂ ಕುರಕಲು ತಿಂಡಿ ತಿನ್ಬೇಕು ಅನ್ನಿಸಿದಾಗ ಈ ಭುಜಿಯಾ ನೆನಪಾಗುತ್ತಾ, ಇದನ್ನ ತರೋಕೆ ನೀವು ಅಂಗಡಿಗೆ ಹೋಗಬೇಕು ಅಂತೇನಿಲ್ಲ. ಮನೆಯಲ್ಲಿ ಸುಲಭವಾಗಿ ಆಲೂ ಭುಜಿಯಾ ಮಾಡಬಹುದು, ಆದರೆ ತಾಳ್ಮೆ ಬೇಕು ಅನ್ನೋದು ಮಾತ್ರ ಸತ್ಯ.

ಮಳೆಗಾಲಕ್ಕೆ ಹೇಳಿ ಮಾಡಿಸಿದ ಕುರಕಲು ತಿಂಡಿ ಆಲೂ ಭುಜಿಯಾ; ಹಲವರಿಗೆ ಫೇವರಿಟ್‌ ಆಗಿರುವ ಈ ತಿಂಡಿಯನ್ನು ಮನೆಯಲ್ಲೇ ಮಾಡೋದು ಹೇಗೆ ನೋಡಿ
ಮಳೆಗಾಲಕ್ಕೆ ಹೇಳಿ ಮಾಡಿಸಿದ ಕುರಕಲು ತಿಂಡಿ ಆಲೂ ಭುಜಿಯಾ; ಹಲವರಿಗೆ ಫೇವರಿಟ್‌ ಆಗಿರುವ ಈ ತಿಂಡಿಯನ್ನು ಮನೆಯಲ್ಲೇ ಮಾಡೋದು ಹೇಗೆ ನೋಡಿ

ಸ್ನ್ಯಾಕ್ಸ್‌ ಐಟಂಗಳಲ್ಲಿ ಹಲವು ವಿಧಗಳಿದ್ದರೂ ಆಲೂ ಭುಜಿಯಾ ಹಲವರಿಗೆ ಇಷ್ಟ. ಯಾಕೆಂದರೆ ಇದರ ರುಚಿ ಅದ್ಭುತ. ವಿಭಿನ್ನ ರುಚಿ ಹೊಂದಿರುವ ಆಲೂ ಭುಜಿಯಾ ಮಳೆಗಾಲಕ್ಕೆ ಹೇಳಿ ಮಾಡಿಸಿದ್ದು. ಇದನ್ನು ತಿನ್ನಬೇಕು ಅನ್ನಿಸಿದಾಗ ಪ್ಯಾಕೆಟ್‌ ತರಲು ಅಂಗಡಿಗೆ ಓಡಬೇಕು ಎಂದೇನಿಲ್ಲ. ಅಲ್ಲದೇ ಪ್ಯಾಕೆಟ್‌ಗಳಲ್ಲಿ ಸಿಗುವ ಆಲೂ ಭುಜಿಯಾದ ದರವೂ ಹೆಚ್ಚು.

ಈ ತಿಂಡಿಯನ್ನು ರುಚಿಯಾಗಿ ಮನೆಯಲ್ಲೇ ಮಾಡಬಹುದು. ಆದರೆ ಸ್ವಲ್ಪ ತಾಳ್ಮೆ ಬೇಕು. ಒಮ್ಮೆ ಮಾಡಿಟ್ಟುಕೊಂಡರೆ ಹಲವು ದಿನಗಳವರೆಗೆ ತಿನ್ನಬಹುದು. ಮಕ್ಕಳಿಗೂ ಇಷ್ಟವಾಗುವ ಈ ಆಲೂ ಭುಜಿಯಾ ಮನೆಯಲ್ಲಿ ಆರೋಗ್ಯಕರ ವಿಧಾನದಲ್ಲಿ ಮಾಡಬಹುದು. ಹಾಗಾದರೆ ಆಲೂ ಭುಜಿಯಾ ತಯಾರಿಸಲು ಏನೆಲ್ಲಾ ಬೇಕು, ಇದನ್ನು ಮಾಡೋದು ಹೇಗೆ ನೋಡಿ.

ಆಲೂ ಭುಜಿಯಾ

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ- 2, ಕಡಲೆಹಿಟ್ಟು - 1 ಕಪ್, ಉಪ್ಪು- ಸಾಕಷ್ಟು, ಖಾರದಪುಡಿ - 1 ಚಮಚ, ಆಮ್ಚೂರ್ ಪುಡಿ - 1 ಚಮಚ, ಗರಂ ಮಸಾಲಾ - ಅರ್ಧ ಚಮಚ, ಚಾಟ್ ಮಸಾಲಾ - ಅರ್ಧ ಚಮಚ, ಇಂಗು - ಕಾಲು ಚಮಚ, ಕರಿಯಲು - ಎಣ್ಣೆ

ಆಲೂ ಭುಜಿಯಾ ಮಾಡುವ ವಿಧಾನ

ಮೊದಲು ಆಲೂಗಡ್ಡೆಯನ್ನು 3 ಸೀಟಿ ಬರುವವರೆಗೆ ಬೇಯಿಸಿ. ಸಿಪ್ಪೆ ತೆಗೆದು, ಸ್ಮ್ಯಾಶ್‌ ಮಾಡಿಟ್ಟುಕೊಳ್ಳಿ. ಕುಕ್ಕರ್‌ನಲ್ಲಿ ಬೇಯಿಸದೇ ಇದ್ದರೆ ಮೊದಲೇ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ ನೀರಿನಲ್ಲಿ ಬೇಯಿಸಿ. ಬೇಯಿಸಿದ ಆಲೂಗಡ್ಡೆಯನ್ನು ಯಾವುದೇ ಉಂಡೆಗಳಿಲ್ಲದೆ ನಯವಾದ ಪೇಸ್ಟ್ ಆಗಿ ಸ್ಮ್ಯಾಶ್‌ ಮಾಡುವುದು ಮುಖ್ಯವಾಗುತ್ತದೆ. ಈಗ ಇನ್ನೊಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಕಡಲೆಹಿಟ್ಟನ್ನು ಹಾಕಿ. ಅದಕ್ಕೆ ಗರಂ ಮಸಾಲ, ಕಾಳುಮೆಣಸು, ಆಮ್ಚೂರ್‌ ಪುಡಿ, ಇಂಗು, ಚಾಟ್ ಮಸಾಲ ಮತ್ತು ಉಪ್ಪು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು ಬೆರೆಸುವಾಗ ಚಾಟ್ ಮಸಾಲವನ್ನು ಸೇರಿಸಬಹುದು ಅಥವಾ ಭುಜಿಯಾ ಮಾಡಿದ ನಂತರ ಅದನ್ನು ಸಿಂಪಡಿಸಬಹುದು. ಈಗ ಎಲ್ಲಾ ಮಸಾಲೆಗಳೊಂದಿಗೆ ಬೆರೆಸಿದ ಹಿಟ್ಟನ್ನು ಆಲೂಗಡ್ಡೆ ಸ್ಮ್ಯಾಶ್‌ನೊಂದಿಗೆ ಸೇರಿಸಿ, ಈ ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಮೊದಲು ಮಿಶ್ರಣ ಮಾಡುವಾಗ ಡ್ರೈ ಅನಿಸುತ್ತದೆ. ಸುಮ್ಮನೆ ನೀರು ಸೇರಿಸಬೇಡಿ. ನೀವು ಹಿಟ್ಟು ಸೇರಿಸುವುದನ್ನು ಮುಂದುವರಿಸಿದರೆ, ಅದು ಮೃದುವಾಗುತ್ತದೆ. ಒಂದರಿಂದ ಐದು ನಿಮಿಷಗಳ ಕಾಲ ಮಿಶ್ರಣ ಮಾಡಿದ ನಂತರ, ಅಗತ್ಯವಿದ್ದರೆ ಮಾತ್ರ ನೀರನ್ನು ಸೇರಿಸಿ. ಈಗ ಸೇವ್ ಪ್ರೆಸ್ಸಿಂಗ್ ಮೆಷಿನ್ ತೆಗೆದುಕೊಂಡು ಒಳಭಾಗಕ್ಕೆ ಎಣ್ಣೆ ಹಚ್ಚಿ ಹಿಟ್ಟನ್ನು ಹಾಕಿ. ಇದಕ್ಕಾಗಿ ತೆಳುವಾದ ಸರ್ವಿಂಗ್ ಪ್ರೆಸ್ ಮೋಲ್ಡ್ ಅನ್ನು ಬಳಸಬಹುದು ಅಥವಾ ನೀವು ಸ್ವಲ್ಪ ದಪ್ಪವಾದ ಸೇವಾ ಮೌಲ್ಡ್ ಅನ್ನು ಬಳಸಬಹುದು. ಈಗ ಒಂದು ಕಡಾಯಿಯನ್ನು ತೆಗೆದುಕೊಂಡು ಅದರಲ್ಲಿ ಎಣ್ಣೆಯನ್ನು ಹಾಕಿ. ಬಿಸಿ ಮಾಡಿದ ನಂತರ, ಮೋಲ್ಡ್‌ನಲ್ಲಿರುವ ಹಿಟ್ಟನ್ನು ಒತ್ತಿ. ಬಣ್ಣ ಬದಲಾಗುವವರೆಗೆ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಅಷ್ಟೇ ಹೊರತೆಗೆದರೆ ಆಲೂ ಭುಜಿಯಾ ರೆಡಿ.

ಕೆಲವೇ ಸಾಮಗ್ರಿ ಬಳಸಿ ಸುಲಭವಾಗಿ ಮಾಡಬಹುದಾದ ಈ ಆಲೂ ಭುಜಿಯಾ ನಿಮ್ಮ ಮನೆಯಲ್ಲಿ ಎಲ್ಲಿರಿಗೂ ಇಷ್ಟವಾಗೋದು ಖಂಡಿತ. ಇದನ್ನ ಒಮ್ಮೆ ಮಾಡಿಟ್ಟುಕೊಂಡರೆ ತುಂಬಾ ದಿನ ತಿನ್ನಬಹುದು, ಆದರೆ ಗಾಳಿಯಾಡದ ಡಬ್ಬದಲ್ಲಿ ಇಡುವುದು ಮುಖ್ಯವಾಗುತ್ತದೆ.

Whats_app_banner