ಕಾಜು ಕಟ್ಲಿ ಸ್ವೀಟ್ ಸಸ್ಯಾಹಾರಿನಾ, ಮಾಂಸಾಹಾರಿನಾ; ವಿವಾದಕ್ಕೆ ಕಾರಣವಾಗಿದೆ ಭಾರತೀಯ ಸಿಹಿತಿನಿಸು, ಕಾರಣ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಕಾಜು ಕಟ್ಲಿ ಸ್ವೀಟ್ ಸಸ್ಯಾಹಾರಿನಾ, ಮಾಂಸಾಹಾರಿನಾ; ವಿವಾದಕ್ಕೆ ಕಾರಣವಾಗಿದೆ ಭಾರತೀಯ ಸಿಹಿತಿನಿಸು, ಕಾರಣ ಹೀಗಿದೆ

ಕಾಜು ಕಟ್ಲಿ ಸ್ವೀಟ್ ಸಸ್ಯಾಹಾರಿನಾ, ಮಾಂಸಾಹಾರಿನಾ; ವಿವಾದಕ್ಕೆ ಕಾರಣವಾಗಿದೆ ಭಾರತೀಯ ಸಿಹಿತಿನಿಸು, ಕಾರಣ ಹೀಗಿದೆ

ಸಾಮಾನ್ಯವಾಗಿ ಸ್ವೀಟ್‌ಗಳೆಲ್ಲಾ ಸಸ್ಯಾಹಾರದ ಸಾಲಿಗೆ ಸೇರುತ್ತವೆ. ಆದರೆ ಇತ್ತೀಚೆಗೆ ನಮ್ಮೆಲ್ಲರ ಫೇವರಿಟ್ ಸ್ವೀಟ್‌ ಒಂದು ಸಸ್ಯಹಾರನಾ ಅಥವಾ ಮಾಂಸಾಹಾರನಾ ಎಂಬ ಚರ್ಚೆಗೆ ಸಿಲುಕಿದೆ. ಹೌದು ನಾವೀಗ ಹೇಳುತ್ತಿರುವುದು ಕಾಜು ಕಟ್ಲಿ ಸ್ವೀಟ್‌ ಬಗ್ಗೆ. ಹಾಗಾದರೆ ಈ ಸ್ವೀಟ್ ಮಾಂಸಾಹಾರಿನಾ? ಹೀಗೆ ಹೇಳಲು ಕಾರಣವೇನು ನೋಡಿ

ಕಾಜು ಕಟ್ಲಿ ಮಾಂಸಾಹಾರಿ ಎನ್ನಲು ಕಾರಣವೇನು
ಕಾಜು ಕಟ್ಲಿ ಮಾಂಸಾಹಾರಿ ಎನ್ನಲು ಕಾರಣವೇನು

ಕಾಜು ಕಟ್ಲಿ ಸ್ವೀಟ್ ಬಹುತೇಕ ಎಲ್ಲರಿಗೂ ಇಷ್ಟವಾಗುತ್ತದೆ. ಹೆಸರೇ ಹೇಳುವಂತೆ ಇದು ಗೋಡಂಬಿಯಿಂದ ತಯಾರಿಸುವ ಸಿಹಿತಿಂಡಿ. ಹಲವು ವರ್ಷಗಳ ಹಿಂದಿನಿಂದಲೂ ಇದನ್ನು ತಯಾರಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಭಾರತದಲ್ಲಿ ಸಖತ್ ಫೇಮಸ್ ಆಗಿರುವ ಈ ಸ್ವೀಟ್ ಈ ವಿವಾದಕ್ಕೆ ಸಿಲುಕಿದೆ. ಸಾಮಾನ್ಯವಾಗಿ ಶುಭ ಸಮಾರಂಭಗಳಲ್ಲಿ, ವಿಶೇಷ ದಿನಗಳಲ್ಲಿ ಕೊಡುವ ಕಾಜು ಕಟ್ಲಿಯನ್ನು ಇಲ್ಲಿಯವರೆಗೆ ಎಲ್ಲರೂ ಸಸ್ಯಾಹಾರಿ ಎಂದು ನಂಬಿದ್ದರು. ಈಗಲೂ ಕೂಡ ಈ ತಿನಿಸು ಮಾಂಸಾಹಾರಿ ಎಂದರೆ ಯಾರೂ ನಂಬಲು ಸಾಧ್ಯವಿಲ್ಲ. ಆದರೆ ಸ್ವತಃ ವೈದ್ಯರು ಕೂಡ ಇದನ್ನು ಮಾಂಸಾಹಾರಿ ಎಂದು ಕರೆಯುತ್ತಾರೆ.

ಕಾಜು ಕಟ್ಲಿ ಮೇಲೆ ಸಿಲ್ವರ್‌ ಪೇಪರ್ ಅಂಟಿಸಲಾಗುತ್ತದೆ. ಸಾಮಾನ್ಯವಾಗಿ ಈ ಸಿಲ್ವರ್ ಪೇಪರ್ ಅನ್ನು ಪ್ರಾಣಿ ಉತ್ಪನ್ನದಿಂದ ತಯಾರಿಸಲಾಗುತ್ತದೆ. ಆದರೆ FSSAI ಕಾಜು ಕಟ್ಲಿಗೆ ಪ್ರಾಣಿ ಉತ್ಪನ್ನದಿಂದ ತಯಾರಿಸುವ ಸಿಲ್ವರ್ ಪೇಪರ್ ಅಂಟಿಸುವುದನ್ನು ನಿಷೇಧಿಸಿತ್ತು. ಆ ನಂತರ ಸಸ್ಯಾಹಾರಿ ಸಿಲ್ವರ್ ಪೇಪರ್ ತಯಾರಿಸುವ ಕ್ರಮ ರೂಢಿಗೆ ಬಂತು.

ವಿವಾದ ಸೃಷ್ಟಿಯಾಗಲು ವೈರಲ್ ವಿಡಿಯೊ ಕಾರಣ 

ಕಾಜು ಕಟ್ಲಿ ಗೋಡಂಬಿ ಪೇಸ್ಟ್, ಸಕ್ಕರೆ ಮತ್ತು ತುಪ್ಪದಿಂದ ತಯಾರಿಸಿದ ಸಿಹಿತಿಂಡಿ, ಭಾರತೀಯ ಹಬ್ಬಗಳು ಮತ್ತು ಆಚರಣೆಗಳಲ್ಲಿ ಈ ಸಿಹಿ ತಿನಿಸು ಪ್ರಧಾನವಾಗಿದೆ. ಯುಎಸ್‌ ಬೋರ್ಡ್ ಪ್ರಮಾಣೀಕೃತ ಹೆಮಟಾಲಜಿಸ್ಟ್, ಆಂಕೊಲಾಜಿಸ್ಟ್ ಡಾ. ರವಿ ಕೆ. ಗುಪ್ತಾ ಅವರ ವೈರಲ್ ಆದ ವಿಡಿಯೊ ಪ್ರಕಾರ ಕಾಜು ಕಟ್ಲಿ ಮಾಂಸಾಹಾರಿ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಕಾಜು ಕಟ್ಲಿ ಮೇಲೆ ಅಂಟಿಸುವ ಸಿಲ್ವರ್ ಪೇಪರ್‌. ಇದು ಹಸು, ಎಮ್ಮೆಯಂತಹ ಪ್ರಾಣಿಯ ಕರುಳಿನಿಂದ ಮಾಡಲಾಗುತ್ತದೆ ಎಂದು ಅವರು ತಮ್ಮ ವಿಡಿಯೊದಲ್ಲಿ ಹೇಳಿದ್ದರು.

ಮೊದಲೇ ಹೇಳಿದಂತೆ 2016 ರಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನೈರ್ಮಲ್ಯವಲ್ಲದ ಪರಿಸ್ಥಿತಿಗಳಲ್ಲಿ ಪ್ರಾಣಿ ಮೂಲದ ವಸ್ತುಗಳಿಂದ ಬೆಳ್ಳಿಯ ಎಲೆಗಳನ್ನು ತಯಾರಿಸುವುದನ್ನು ನಿಷೇಧಿಸಿತು. ಸಿಹಿತಿಂಡಿಗಳ ಮೇಲೆ ಕಂಡುಬರುವ ಈ ಸಿಲ್ವರ್ ಪೇಪರ್‌ ಅನ್ನು ಪ್ರಾಣಿ ಮೂಲದ ಪದಾರ್ಥಗಳಿಂದ ಕೂಡ ತಯಾರಿಸಲಾಗುತ್ತದೆ. ಆದರೆ ದೆಹಲಿ ನ್ಯಾಯಾಲಯವು 2018ರಲ್ಲಿ ಈ ನಿಷೇಧವನ್ನು ತೆಗೆದುಹಾಕಿತು. ಸಿಲ್ವರ್ ಪೇಪರ್ ತಯಾರಕರು ಸುರಕ್ಷಿತ ಮತ್ತು ನೈರ್ಮಲ್ಯ ಎಂದು ಮನವಿ ಮಾಡಿದ ನಂತರ ನ್ಯಾಯಾಲಯವು ನಿಷೇಧವನ್ನು ಹಿಂತೆಗೆದುಕೊಂಡಿತು.

ಈ ಸಿಲ್ವರ್ ಪೇಪರ್‌ ಪ್ರಾಣಿಗಳಿಂದ ಬರುವ ಕೆಲವು ಪದಾರ್ಥಗಳಿಂದ ತಯಾರಿಸಲಾಗುತ್ತಿದೆ ಎಂಬ ಸುದ್ದಿ ಬಂದಾಗಿನಿಂದ ಇದನ್ನು ಸಂಪೂರ್ಣವಾಗಿ ಸಸ್ಯಾಹಾರಿ ಮಾಡಲು ಪ್ರಯತ್ನಗಳು ಪ್ರಾರಂಭವಾಗಿವೆ. ಅವರು ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ. ಈ ಸಿಲ್ವರ್ ಪೇಪರ್‌ ಅನ್ನು ಸಸ್ಯಾಹಾರಿ ರೀತಿಯಲ್ಲಿ ಮಾಡಲು ಪ್ರಾರಂಭಿಸಲಾಗಿದೆ. ಆದರೆ ಮಾಂಸ ಆಧಾರಿತ ಪದಾರ್ಥಗಳಿಂದ ತಯಾರಿಸಿದ ಸಿಲ್ವರ್ ಪೇಪರ್‌ ಬಳಕೆ ಇನ್ನೂ ಇವೆ. ಈ ಕಾಜು ಕಟ್ಲಿಯ ಮೇಲಿನ ಬೆಳ್ಳಿಯ ಹಾಳೆ ಯಾವುದರಿಂದ ಮಾಡಲ್ಪಟ್ಟಿದೆ ಎಂದು ಊಹಿಸುವುದು ಕಷ್ಟ. ಇದನ್ನು ಮಾಂಸಾಹಾರಿ ಪ್ರಾಣಿ ಮೂಲದ ಪದಾರ್ಥಗಳೊಂದಿಗೆ ಕೂಡ ತಯಾರಿಸಬಹುದು ಅಥವಾ ಬಹುಶಃ ಸಸ್ಯಾಹಾರಿ ರೀತಿಯಲ್ಲೂ ಮಾಡಲಾಗುತ್ತದೆ. ಪ್ರಾಣಿ ಮೂಲದ ಪದಾರ್ಥಗಳಿಂದ ತಯಾರಿಸಿದರೆ ಮಾಂಸಾಹಾರ ಸೇವನೆಗೆ ದಾರಿಯಾಗುತ್ತದೆ ಎಂಬುದು ಈ ವೈದ್ಯರ ವಾದ.

ಸ್ವೀಟ್ ಮೇಲಿನ ಮೇಲಿನ ಸಿಲ್ವರ್ ಪೇಪರ್‌ ಯಾವುದರಿಂದ ಮಾಡಲ್ಪಟ್ಟಿದೆ ಎಂದು ಸಿಹಿತಿನಿಸು ಮಾರಾಟ ಮಾಡುವವರನ್ನು ಕೇಳಿ. ಆದರೆ ಅವರು ಸರಿಯಾದ ಉತ್ತರ ನೀಡುತ್ತಾರೆ ಎಂಬ ವಿಶ್ವಾಸವಿಲ್ಲ. ಹಾಗಾಗಿ ಕಾಜು ಕಟ್ಲಿಯನ್ನು ಸಿಲ್ವರ್ ಪೇಪರ್‌ನೊಂದಿಗೆ ತಿನ್ನಬೇಕೇ ಅಥವಾ ಬೇಡವೇ ಎಂದು ನೀವು ನಿರ್ಧರಿಸಬೇಕು. ಮಾಂಸಾಹಾರಿಗಳು ಇದನ್ನು ಖುಷಿಯಿಂದ ತಿನ್ನಬಹುದು.

ಸಿಲ್ವರ್ ಫ್ಲೇಕ್ಸ್ ಅನ್ನು ಕಾಜು ಕಟ್ಲಿ ಸಿಹಿತಿಂಡಿಗಳ ಮೇಲೆ ಮಾತ್ರವಲ್ಲದೆ ಅನೇಕ ಇತರ ಸಿಹಿತಿಂಡಿಗಳ ಮೇಲೆ ಅನ್ವಯಿಸಲಾಗುತ್ತದೆ. ಹಾಗಾದರೆ ಅಂತಹ ಸಿಹಿತಿಂಡಿಗಳನ್ನು ತಿನ್ನಬೇಕೆ ಅಥವಾ ಬೇಡವೇ ಎಂದು ನೀವೇ ನಿರ್ಧರಿಸಿ.

(ಗಮನಿಸಿ: ಈ ಲೇಖನವು ವೈರಲ್ ವಿಡಿಯೊವೊಂದನ್ನು ಆಧರಿಸಿದ ಬರಹ. ಮಾಹಿತಿಯ ಉದ್ದೇಶದಿಂದ ಈ ಲೇಖನವನ್ನು ಪ್ರಕಟಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂರ್ಪಕಿಸಿ) 

 

Whats_app_banner