ಕನ್ನಡ ಸುದ್ದಿ  /  ಜೀವನಶೈಲಿ  /  Apple Benfits: ಸೇಬು ಹಣ್ಣಿನ ಈ 5 ಗುಣಗಳ ಬಗ್ಗೆ ಕೇಳಿದರೆ ನೀವೆಂದಿಗೂ ಸೇಬು ಸೇವಿಸದೆ ಇರಲಾರಿರಿ

Apple Benfits: ಸೇಬು ಹಣ್ಣಿನ ಈ 5 ಗುಣಗಳ ಬಗ್ಗೆ ಕೇಳಿದರೆ ನೀವೆಂದಿಗೂ ಸೇಬು ಸೇವಿಸದೆ ಇರಲಾರಿರಿ

ಸೇಬು ಹಣ್ಣು ಸಾಮಾನ್ಯವಾಗಿ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿಯೂ ದೊರೆಯುವ ಒಂದು ಜನಪ್ರಿಯ ಹಣ್ಣು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಸೇಬು ಹಣ್ಣುಗಳು ಹೃದಯದ ಆರೋಗ್ಯವನ್ನು ಕಾಪಾಡುವುದರಿಂದ ಹಿಡಿದು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳನ್ನು ಒದ್ದೋಡಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಸೇಬು ಹಣ್ಣಿನ ಆರೋಗ್ಯ ಪ್ರಯೋಜನಗಳು
ಸೇಬು ಹಣ್ಣಿನ ಆರೋಗ್ಯ ಪ್ರಯೋಜನಗಳು

ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎಂಬ ಗಾದೆ ಮಾತನ್ನು ನೀವು ಕೇಳಿರಬಹುದು. ಜಾಗತಿಕವಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ ಹಾಗೂ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಸೇಬನ್ನು ಬಹುತೇಕರು ಇಷ್ಟಪಡುತ್ತಾರೆ. ಸೇಬು ಮಹತ್ವದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸೇಬು ಹಣ್ಣನ್ನು ಸೇವನೆ ಮಾಡಬಹುದಾಗಿದೆ. ಹಾಗಾದರೆ ಯಾವೆಲ್ಲ ಕಾರಣಕ್ಕೆ ನೀವು ನಿಮ್ಮ ಆಹಾರ ಕ್ರಮದಲ್ಲಿ ಸೇಬು ಹಣ್ಣನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಟ್ರೆಂಡಿಂಗ್​ ಸುದ್ದಿ

ಅಗತ್ಯ ಪೋಷಕಾಂಶಗಳು ಹಾಗೂ ಆ್ಯಂಟಿಆಕ್ಸಿಡಂಟ್ ಗುಣಗಳು

ಸೇಬುಗಳಲ್ಲಿ ವಿಟಮಿನ್ ಸಿ, ಪೊಟ್ಯಾಷಿಯಂ ಹಾಗೂ ವಿಟಮಿನ್ ಎ ಮತ್ತು ಬಿ ಜೀವಸತ್ವಗಳನ್ನು ಹೊಂದಿದೆ. ವಿಟಮಿನ್ ಸಿ ಆ್ಯಂಟಿಆಕ್ಸಿಡಂಟ್ ಗುಣಗಳನ್ನು ಹೊಂದಿದ್ದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಪೊಟ್ಯಾಷಿಯಂ ಗುಣಗಳು ಆರೋಗ್ಯಕರ ರಕ್ತದೊತ್ತಡ ಹಾಗೂ ಸ್ನಾಯುವಿನ ಆರೋಗ್ಯವನ್ನು ಸುಧಾರಿಸುತ್ತದೆ. ಕ್ಯಾನ್ಸರ್ನಂತಹ ಕಾಯಿಲೆಯು ಬಾಧಿಸದಂತೆ ತಡೆಯುವಲ್ಲಿ ಸೇಬು ಮಹತ್ವದ ಪಾತ್ರ ವಹಿಸುತ್ತದೆ.

ಫೈಬರ್‌ನ ಸಮೃದ್ಧ ಮೂಲ 

 ಸೇಬುಗಳು ಉತ್ತಮ ನಾರಿನಂಶವನ್ನು ಹೊಂದಿರುತ್ತದೆ. ಪೆಕ್ಟಿನ್ನಂತಹ ಕರಗುವ ಫೈಬರ್ಗಳು ದೇಹಕ್ಕೆ ಸಾಕಷ್ಟು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಸಾಮಾನ್ಯ ಗಾತ್ರದ ಸೇಬು 4 ಗ್ರಾಂ ಫೈಬರ್ ಅಂಶವನ್ನು ಹೊಂದಿರುತ್ತದೆ. ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡುವ ಮೂಲಕ ಸೇಬು ಮಲಬದ್ಧತೆ ಸಮಸ್ಯೆಯನ್ನು ಪರಿಹರಿಸುತ್ತವೆ. ಅಲ್ಲದೇ ರಕ್ತವು ಸಕ್ಕರೆ ಪ್ರಮಾಣವನ್ನು ಹೀರಿಕೊಳ್ಳುವುದನ್ನು ಕಡಿಮೆಗೊಳಿಸುತ್ತವೆ. ಈ ಮೂಲಕ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವೆ. ಮಧುಮೇಹ ನಿಯಂತ್ರಣ ಕಡಿಮೆ ಮಾಡುವಲ್ಲಿ ಸೇಬು ಪ್ರಮುಖ ಪಾತ್ರ ವಹಿಸುತ್ತದೆ.

ಹೃದಯದ ಆರೋಗ್ಯ 

 ನಿಯಮಿತವಾದ ಸೇಬು ಸೇವನೆಯಿಂದ ಹೃದಯರಕ್ತನಾಳದ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಸೇಬಿನಲ್ಲಿ ಇರುವ ಕರಗುವ ಫೈಬರ್ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೇಬು ಹಣ್ಣುಗಳು ಪಾಲಿಫಿನಾಲ್ನಿಂದ ಸಮೃದ್ಧವಾಗಿವೆ. ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ ಕೂಡ ಸೇಬಿನಲ್ಲಿ ಇರುತ್ತದೆ. ರಕ್ತನಾಳದ ಕಾರ್ಯಗಳನ್ನು ಇದು ಸುಧಾರಿಸುತ್ತದೆ. ಒಟ್ಟಾರೆ ಹೃದಯದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸೇಬು ಉತ್ತಮ ಕೊಡುಗೆ ನೀಡುತ್ತದೆ.

ತೂಕ ನಿರ್ವಹಣೆ 

 ಸೇಬುಗಳಲ್ಲಿ ಫೈಬರ್ ಹಾಗೂ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಈ ಹಣ್ಣುಗಳು ತೂಕ ನಿರ್ವಹಣೆಗೆ ಉತ್ತಮ ಕೊಡುಗೆ ನೀಡುತ್ತವೆ. ಇದನ್ನು ತಿಂದಾಗ ನಿಮಗೆ ಹೊಟ್ಟೆ ತುಂಬಿದಂತಹ ಭಾವನೆ ಉಂಟಾಗುತ್ತದೆ. ಇದರಿಂದ ನೀವು ಮತ್ತೆ ಏನನ್ನೂ ಸೇವಿಸಲು ಹೋಗಲಾರಿರಿ. ಇದರಿಂದ ನಿಮ್ಮ ಒಟ್ಟಾರೆ ಕ್ಯಾಲೊರಿ ಸೇವನೆ ಕಡಿಮೆಯಾಗುತ್ತದೆ. ಸೇಬಿನಲ್ಲಿ ಇರುವ ನಾರಿನಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಊಟಕ್ಕೆ ಮುಂಚೆ ಸೇಬು ಹಣ್ಣನ್ನು ಸೇವಿಸುವವರು ಕಡಿಮೆ ಕ್ಯಾಲೋರಿ ತಿನ್ನುತ್ತಾರೆ ಎಂದು ಸಾಕಷ್ಟು ಅಧ್ಯಯನಗಳು ಹೇಳಿವೆ.

ಕರುಳಿನ ಆರೋಗ್ಯ ಸುಧಾರಣೆ 

ಸೇಬಿನಲ್ಲಿ ಇರುವ ಫೈಬರ್ ಪ್ರಿಬಯಾಟಿಕ್ ಆಗಿ ಕೂಡ ಕಾರ್ಯ ನಿರ್ವಹಿಸುತ್ತದೆ. ಕರುಳಿನಲ್ಲಿ ಉಪಯೋಗಕಾರಿಯಾಗಿರುವ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಜೀರ್ಣಕ್ತಿಯೆ ಹಾಗೂ ಪ್ರತಿರಕ್ಷಣಾ ಕಾರ್ಯ ಸೇರಿದಂತೆ ಪ್ರತಿಯೊಂದನ್ನು ಸುಧಾರಿಸುವ ಕಾರ್ಯ ಮಾಡುತ್ತದೆ. ಕರುಳಿನ ಒಳಪದರಗಳನ್ನು ಪೋಷಿಸುವ ಕಾರ್ಯವನ್ನೂ ಸಹ ಮಾಡುತ್ತದೆ.

ಲೇಖನ: ರಶ್ಮಿ