ಚಪಾತಿ, ರೋಟಿ ಜೊತೆ ನೆಂಜಿಕೊಳ್ಳಲು ಸಖತ್ ಆಗಿರುತ್ತೆ ಗೋಡಂಬಿ ಪನೀರ್ ಮಸಾಲಾ ಕರಿ, ಸಿಂಪಲ್ ರೆಸಿಪಿ ಇದು
ಚಪಾತಿ, ರೋಟಿ ಜೊತೆ ನೆಂಜಿಕೊಳ್ಳಲು ಡಿಫ್ರೆಂಟ್ ರುಚಿಯ ಕರಿ ಮಾಡಬೇಕು ಅಂತಿದ್ರೆ ಗೋಡಂಬಿ ಪನೀರ್ ಮಸಾಲ ಕರಿ ಟ್ರೈ ಮಾಡಿ. ಇದು ಅನ್ನದ ಜೊತೆ ತಿನ್ನಲು ಸೂಪರ್ ಆಗಿರುತ್ತೆ. ಇದನ್ನು ಮಾಡೋದು ಕೂಡ ಸುಲಭ, ರೆಸಿಪಿ ಇಲ್ಲಿದೆ ನೋಡಿ.

ಪನೀರ್ ಖಾದ್ಯಗಳ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತೆ. ಈ ಖಾದ್ಯಗಳು ಒಂದಕ್ಕಿಂತ ಒಂದು ಸಖತ್ ಟೇಸ್ಟ್ ಹೊಂದಿರುತ್ತವೆ. ಪನೀರ್‌ನಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಮಟರ್ ಪನೀರ್, ಶಾಹಿ ಪನೀರ್, ಕಡೈ ಪನೀರ್ ಹೀಗೆ ವಿವಿಧ ಬಗೆಯ ಪನೀರ್ ತಿನಿಸುಗಳನ್ನು ನೀವು ತಿಂದಿರಬಹುದು. ಆದರೆ ನಿಮ್ಮ ಗೋಡಂಬಿ ಪನೀರ್ ಮಸಾಲ ಕರಿ ಟ್ರೈ ಮಾಡಿ.
ಅನ್ನ, ಚಪಾತಿ, ರೋಟಿ ಈ ಎಲ್ಲದರ ಜೊತೆ ತಿನ್ನಲು ಸಖತ್ ಆಗಿರುತ್ತೆ ಗೋಡಂಬಿ ಪನೀರ್ ಮಸಾಲ. ಮನೆಗೆ ಅತಿಥಿಗಳು ಬಂದಾಗ ಈ ಕರಿ ಮಾಡಿದ್ರೆ ನಿಮ್ಮ ಪಾಕ ಪ್ರಾವಿಣ್ಯಕ್ಕೆ ಅವರು ಫಿದಾ ಆಗ್ತಾರೆ. ಸೆಲೆಬ್ರಿಟಿ ಶೆಫ್ ಪಂಕಜ್ ಭಡೋರಿಯಾ ಗೋಡಂಬಿ ಪನೀರ್ ಮಸಾಲ ಕರಿ ಮಾಡೋದು ಹೇಗೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ.
ಗೋಡಂಬಿ ಪನೀರ್ ಮಸಾಲ ಕರಿಗೆ ಬೇಕಾಗುವ ಪದಾರ್ಥಗಳು
ಪನ್ನೀರ್ - 400 ಗ್ರಾಂ, ಗೋಡಂಬಿ - 20, ದೊಡ್ಡ ಈರುಳ್ಳಿ - ಎರಡು, ದೊಡ್ಡ ಟೊಮೆಟೊ - 4, ಶುಂಠಿ - ಒಂದು ದೊಡ್ಡ ತುಂಡು, ಬೆಳ್ಳುಳ್ಳಿ ಎಸಳು - ಹತ್ತು ಎಸಳು, ಹಸಿ ಮೆಣಸಿನಕಾಯಿ - ನಾಲ್ಕು, ದಾಲ್ಚಿನ್ನಿ - ಒಂದು ಸಣ್ಣ ತುಂಡು, ಜಾಪತ್ರೆ - ಎರಡು, ಕ್ರೀಮ್ - ಅರ್ಧ ಕಪ್, ಕಸೂರಿ ಮೇಥಿ - ಎರಡು ಚಮಚ, ಕಾಳುಮೆಣಸಿನ ಪುಡಿ - ಅರ್ಧ ಟೀ ಚಮಚ, ಗರಂ ಮಸಾಲ ಪುಡಿ - ಅರ್ಧ ಟೀ ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ - ಎರಡು ಚಮಚ, ಕೊತ್ತಂಬರಿ ಪುಡಿ - ಎರಡು ಚಮಚ
ಗೋಡಂಬಿ ಪನೀರ್ ಮಸಾಲ ಕರಿ ತಯಾರಿಸುವ ವಿಧಾನ
ಗೋಡಂಬಿಯನ್ನು ಮೊದಲು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಮಿಕ್ಸಿ ಜಾರ್‌ಗೆ ಹಾಕಿ, ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಅಲ್ಲದೆ, ಟೊಮೆಟೊ ತುಂಡುಗಳನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ, ಪ್ಯೂರಿ ಮಾಡಿ, ಪಕ್ಕಕ್ಕೆ ಇರಿಸಿ. ಏಲಕ್ಕಿ ಮತ್ತು ದಾಲ್ಚಿನ್ನಿಯನ್ನು ಮಿಕ್ಸರ್‌ನಲ್ಲಿ ಹಾಕಿ ಪುಡಿ ಮಾಡಿ. ಈಗ ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಹಾಕಿ ಬಿಸಿ ಮಾಡಿ. ಈಗ ಪನೀರ್ ತುಂಡುಗಳನ್ನು ಎಣ್ಣೆಯಲ್ಲಿ ಹಾಕಿ ಹುರಿಯಿರಿ. ಅವು ತಿಳಿ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಹುರಿದುಕೊಳ್ಳಿ. ಹುರಿದ ಪನೀರ್ ತುಂಡುಗಳನ್ನು ತೆಗೆದು ಪಕ್ಕಕ್ಕೆ ಇರಿಸಿ. ಈಗ ಅದೇ ಎಣ್ಣೆಯಲ್ಲಿ ನೆನೆಸಿದ ಗೋಡಂಬಿಯನ್ನು ಸೇರಿಸಿ, ಹುರಿದು ಪಕ್ಕಕ್ಕೆ ಇರಿಸಿ. ಅದೇ ಬಾಣಲೆಗೆ ಇನ್ನೂ ಎರಡು ಚಮಚ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ. ಈರುಳ್ಳಿ ಪೇಸ್ಟ್ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ರುಬ್ಬಿದ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಹುರಿಯಿರಿ.
ಇದಕ್ಕೆ ಏಲಕ್ಕಿ ಮತ್ತು ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಟೊಮೆಟೊ ಪ್ಯೂರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಣ್ಣೆ ಮೇಲಕ್ಕೆ ತೇಲುವಂತೆ ಬೇಯಿಸಿ. ನಂತರ ಗೋಡಂಬಿ ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪನೀರ್ ತುಂಡುಗಳು, ಕ್ರೀಮ್ ಮತ್ತು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ 4 ರಿಂದ 5 ನಿಮಿಷ ಬೇಯಿಸಿ. ಗರಂ ಮಸಾಲ ಮತ್ತು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕಸೂರಿ ಮೇಥಿ ಸೇರಿಸಿ, ಮೇಲೆ ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿ. ಅಷ್ಟೇ, ರುಚಿಕರವಾದ ಗೋಡಂಬಿ ಪನೀರ್ ಮಸಾಲಾ ಕರಿ ಸಿದ್ಧ. ಗೋಡಂಬಿ ಪನೀರ್ ಮಸಾಲ ಕರಿ ಅನ್ನ ಮತ್ತು ಚಪಾತಿ ಜೊತೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಈ ಕರಿಯಲ್ಲಿ ಸ್ವಲ್ಪ ತಿಂದರೂ ಹೊಟ್ಟೆ ತುಂಬಿದಂತೆ ಅನಿಸುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ಚಪಾತಿಯೊಂದಿಗೆ ತಿನ್ನುವುದು ಒಳ್ಳೆಯದು.
ವಿಭಾಗ