Mango Masala Rice: ಸಖತ್ ಟೇಸ್ಟಿ, ಡಿಫ್ರೆಂಟ್ ರುಚಿಯ ಮ್ಯಾಂಗೋ ಮಸಾಲ ರೈಸ್ ಅನ್ನು ನೀವೂ ಮನೆಯಲ್ಲಿ ಮಾಡಿ; ಇಲ್ಲಿದೆ ರೆಸಿಪಿ
ಮಾವಿನಕಾಯಿ ಸೀಸನ್‌ನಲ್ಲಿ ಮಾವಿನಕಾಯಿಯಿಂದ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡಿ ತಿನ್ನಬೇಕು ಅನ್ನಿಸುವುದು ಸಹಜ. ನೀವು ಮಾವಿನಕಾಯಿ ಪ್ರಿಯರಾದ್ರೆ ಈ ಮಾವಿನ ಸೀಸನ್‌ನಲ್ಲಿ ಮ್ಯಾಂಗೋ ಮಸಾಲಾ ರೈಸ್ ಅನ್ನು ತಪ್ಪದೇ ಟ್ರೈ ಮಾಡಬೇಕು. ಇದನ್ನು ತಯಾರಿಸೋದು ಹೇಗೆ, ಏನೆಲ್ಲಾ ಬೇಕು ನೋಡಿ.

ಮಾವಿನಕಾಯಿ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ. ಈಗಂತೂ ಮಾವಿನ ಸೀಸನ್. ಬಗೆ ಬಗೆಯ ಮಾವು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾಲ. ಈ ಸಮಯದಲ್ಲಿ ಎಷ್ಟು ಮಾವಿನಕಾಯಿ, ಮಾವಿನಹಣ್ಣು ತಿಂದ್ರೂ ಸಾಲುವುದಿಲ್ಲ. ಹಾಗಂತ ಎಷ್ಟು ತಿನ್ನೋದು ಅಲ್ವಾ, ಅದರ ಬದಲಿಗೆ ರುಚಿ ರುಚಿಯಾದ ರೆಸಿಪಿಗಳನ್ನು ಮಾಡಿ ತಿನ್ನಬಹುದು. ಮಾವಿನಹಣ್ಣಿನ ರೆಸಿಪಿಗಳು ಒಂದಕ್ಕಿಂತ ಒಂದು ರುಚಿಯಾಗಿರುವುದು ಸುಳ್ಳಲ್ಲ.
ಮಾವಿನಕಾಯಿಯಿಂದ ತಯಾರಿಸುವ ಖಾದ್ಯಗಳಲ್ಲಿ ಮಾವಿನಕಾಯಿ ಚಿತ್ರಾನ್ನಕ್ಕೆ ಫಸ್ಟ್ ಪ್ಲೇಸ್. ಹಾಗಂತ ಯಾವಾಗಲೂ ಮಾವಿನಕಾಯಿ ಚಿತ್ರನ್ನಾ ತಿಂದ್ರೆ ಖಂಡಿತ ನಾಲಿಗೆಗೆ ಬೋರಾಗುತ್ತೆ. ಇದನ್ನ ಒಮ್ಮೆ ಅಥವಾ ಎರಡು ಬಾರಿ ತಿಂದ್ರೆ ಮನೆಯವರು ಇಷ್ಟಪಡ್ತಾರೆ, ಆದರೆ ಪದೇ ಪದೇ ಮಾಡಿಕೊಟ್ರೆ ಬೇರೆ ಏನಾದ್ರೂ ಮಾಡಬಾರದಾ? ಅಂತ ಪ್ರಶ್ನೆ ಮಾಡೋದು ಸಹಜ. ಹಾಗಿದ್ರೆ ನೀವು ಡಿಫ್ರೆಂಟ್ ಆಗಿ ಮ್ಯಾಂಗೋ ಮಸಾಲ ರೈಸ್ ಟ್ರೈ ಮಾಡಬಹುದು. ಹುಳಿ, ಖಾರ, ಉಪ್ಪು ಸೇರಿ ನಾಲಿಗೆಗೆ ಇದೊಂಥರ ಸಖತ್ ಟೇಸ್ಟಿ ಅನ್ನಿಸೋದ್ರಲ್ಲಿ ಎರಡು ಮಾತಿಲ್ಲ. ಹಾಗಾದರೆ ಈ ಮ್ಯಾಂಗೋ ಮಸಾಲ ರೈಸ್ ತಯಾರಿಸುವುದು ಹೇಗೆ, ಇದಕ್ಕೆ ಏನೆಲ್ಲಾ ಸಾಮಗ್ರಿಗಳು ಬೇಕು ನೋಡಿ.
ಮ್ಯಾಂಗೋ ಮಸಾಲ ರೈಸ್
ಮ್ಯಾಂಗೋ ಮಸಾಲ ರೈಸ್‌ಗೆ ಬೇಕಾಗುವ ಸಾಮಗ್ರಿಗಳು: ಸಾಸಿವೆ - ಅರ್ಧ ಚಮಚ, ಜೀರಿಗೆ - ಅರ್ಧ ಚಮಚ, ಮೆಂತೆಕಾಳು - 4 ರಿಂದ 5, ಧನಿಯಾ ಕಾಳು - 1 ಚಮಚ, ಒಣಮೆಣಸು - 8 ರಿಂದ 10, ತೆಂಗಿನತುರಿ - ಕಾಲು ಕಪ್, ಎಣ್ಣೆ - 3 ಚಮಚ, ಕಡಲೆಬೇಳೆ, ಕರಿಬೇವು, ಮಾವಿನ ತುರಿ - ನಾಲ್ಕೈದು ಚಮಚ, ಅನ್ನ - ಮೊದಲೇ ತಯಾರಿಸಿಟ್ಟುಕೊಂಡಿರಿ
ತಯಾರಿಸುವ ವಿಧಾನ: ಪ್ಯಾನ್‌ವೊಂದಕ್ಕೆ ಎಣ್ಣೆ ಹಾಕದೇ ಸ್ವಲ್ಪ ಜೀರಿಗೆ, ಮೆಂತೆ, ಧನಿಯಾ ಹಾಗೂ ಒಣಮೆಣಸು ಸೇರಿಸಿ ಹುರಿದುಕೊಳ್ಳಿ. ಹುರಿದುಕೊಂಡ ಸಾಮಗ್ರಿಗಳನ್ನು ಮಿಕ್ಸಿ ಜಾರಿಗೆ ಹಾಕಿ. ಇದರ ಜೊತೆ ತೆಂಗಿನತುರಿ ಸೇರಿಸಿ ನೀರು ಹಾಕದೇ ರುಬ್ಬಿಕೊಳ್ಳಿ. ಈಗ ಇನ್ನೊಂದು ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಕಡಲೆಬೇಳೆ ಹಾಕಿ ಹುರಿದುಕೊಳ್ಳಿ. ನಂತರ ಕರಿಬೇವು ಸೇರಿಸಿ ಎಲ್ಲವನ್ನೂ ಫ್ರೈ ಮಾಡಿ. ಇದಕ್ಕೆ ಮೊದಲೇ ಮಾಡಿಟ್ಟುಕೊಂಡ ಮಿಶ್ರಣ ಸೇರಿಸಿ. ಎಲ್ಲವನ್ನೂ ಮಿಕ್ಸ್ ಮಾಡಿಕೊಂಡ ನಂತರ ತುರಿದಿಟ್ಟುಕೊಂಡ ಮಾವಿನತುರಿ ಸೇರಿಸಿ ಕಲೆಸಿ. ನಂತರ ಅನ್ನ ಹಾಕಿ ಚೆನ್ನಾಗಿ ಕಲೆಸಿದರೆ ರುಚಿಯಾದ ಮಾವಿನಕಾಯಿ ಮಸಾಲಾ ರೈಸ್ ತಿನ್ನಲು ಸಿದ್ಧ.
ಒಂದೇ ರೀತಿ ರೈಸ್ ಐಟಂ ತಿಂದು ತಿಂದು ನಾಲಿಗೆ ಜಡ್ಡು ಕಟ್ಟಿದ್ರೆ ಈ ರೀತಿ ಮಾವಿನಕಾಯಿ ಮಸಾಲಾ ರೈಸ್ ಮಾಡಿ ತಿಂದ್ರೆ ನಿಮಗೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸೋದು ಖಂಡಿತ. ಇನ್ಯಾಕೆ ತಡ ಮಾವಿನ ಸೀಸನ್ ಮುಗಿಯೋದ್ರಲ್ಲಿ ಈ ವಿಶೇಷ ರೆಸಿಪಿಯನ್ನು ನಿಮ್ಮ ಮನೆಯಲ್ಲೂ ಮಾಡಿ.

ವಿಭಾಗ