ಭಾನುವಾರ ಏನ್ ಸ್ಪೆಷಲ್ ಮಾಡೋದು ಅನ್ನೋರಿಗಾಗಿ ಇಲ್ಲಿದೆ ಚಿಲ್ಲಿ ಗಾರ್ಲಿಕ್ ಪನೀರ್ ರೆಸಿಪಿ, ಇದರ ರುಚಿ ಅಂತು ಸಖತ್ ಡಿಫ್ರೆಂಟ್
ಭಾನುವಾರ ಏನಾದ್ರೂ ಸ್ಪೆಷಲ್ ಮಾಡ್ಬೇಕು ಅನ್ನೋ ಯೋಚನೆ ನಿಮಗೂ ಇದ್ರೆ ಚಿಲ್ಲಿ ಗಾರ್ಲಿಕ್ ಪನೀರ್ ರೆಸಿಪಿ ಟ್ರೈ ಮಾಡಿ. ಇದು ಸಖತ್ ಟೇಸ್ಟಿ ಆಗಿ, ಡಿಫ್ರೆಂಟ್ ಆಗಿರುತ್ತೆ. ಸಸ್ಯಹಾರಿಗಳಿಗೂ ಇಷ್ಟವಾಗುವ ಈ ರೆಸಿಪಿ ಆರೋಗ್ಯಕ್ಕೂ ಉತ್ತಮ. ಇದನ್ನ ಮಾಡೋದು ಹೇಗೆ ನೋಡಿ.

ಭಾನುವಾರ ಹೊರಗಡೆ ಮಳೆ, ಮೋಡ ಕವಿದ ವಾತಾವರಣ ಮನೆಯಲ್ಲೇ ಕೂತು ಬೇಸರವಾದಾಗ ಏನಾದ್ರೂ ಸ್ಪೆಷಲ್ ಆಗಿ ತಿನ್ನಬೇಕು ಅಂತ ಅನ್ನಿಸೋದು ಸಹಜ. ಆದರೆ ಏನ್ ತಿನ್ನೋದು ಅಂತ ನೀವು ಯೋಚನೆ ಮಾಡಬಹುದು. ಹಾಗಾದ್ರೆ ನಿಮಗಾಗಿ ಇಲ್ಲಿದೆ ಒಂದು ವಿಶೇಷ ರೆಸಿಪಿ. ಈ ರೆಸಿಪಿ ಮಾಂಸಾಹಾರಿಗಳಿಗೂ ಸಸ್ಯಹಾರಿಗಳಿಗೂ ಇಷ್ಟವಾಗೋದು ಖಂಡಿತ. ಅಂಥದ್ದೇನಪ್ಪ ರೆಸಿಪಿ ಅಂತೀರಾ, ಅದುವೇ ಚಿಲ್ಲಿ ಗಾರ್ಲಿಕ್ ಪನೀರ್. ಈ ರೆಸಿಪಿ ರುಚಿಯಂತೂ ತುಂಬಾನೇ ಡಿಫ್ರೆಂಟ್ ಆಗಿರುತ್ತೆ.
ಪನೀರ್‌ನಿಂದ ಮಾಡಿದ ಪಾಕವಿಧಾನಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಲಿನಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಪನೀರ್ ಹೊಂದಿರುತ್ತದೆ. ಹಾಗಾಗಿ ವಾರದಲ್ಲಿ ಎರಡರಿಂದ ಮೂರು ಬಾರಿ ಪನೀರ್ ರೆಸಿಪಿಗಳನ್ನು ತಿನ್ನುವುದು ಬಹಳ ಮುಖ್ಯ. ಸಸ್ಯಾಹಾರಿಗಳು ಪನೀರ್ ತಿನ್ನುವುದರಿಂದ ಸಾಕಷ್ಟು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಪಡೆಯಬಹುದು. ಚಿಲ್ಲಿ ಗಾರ್ಲಿಕ್ ಪನೀರ್ ಅನ್ನು ಮನೆಯಲ್ಲೇ ತಯಾರಿಸಿ ತಿನ್ನುವ ಮೂಲಕ ಭಾನುವಾರವನ್ನು ವಿಶೇಷವನ್ನಾಗಿಸಬಹುದು. ಈ ರೆಸಿಪಿ ನಿಮ್ಮ ಮನೆಯವರಿಗೆಲ್ಲರಿಗೂ ಇಷ್ಟವಾಗುವುದು ಖಂಡಿತ.
ಚಿಲ್ಲಿ ಗಾರ್ಲಿಕ್ ಪನೀರ್ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಪನೀರ್ - 200 ಗ್ರಾಂ, ಮೆಣಸಿನಕಾಯಿ - ಎರಡು, ಬೆಳ್ಳುಳ್ಳಿ ಪೇಸ್ಟ್ - ಎರಡು ಚಮಚ, ಕೊತ್ತಂಬರಿ ಪುಡಿ - ಒಂದು ಚಮಚ, ಕಸೂರಿ ಮೇತಿ - ಒಂದು ಚಮಚ, ಬೆಳ್ಳುಳ್ಳಿ ಎಸಳು - ಎಂಟು, ಮೊಸರು - ಅರ್ಧ ಕಪ್, ಗರಂ ಮಸಾಲಾ - ಅರ್ಧ ಚಮಚ, ಖಾರದಪುಡಿ - ಒಂದು ಚಮಚ, ಉಪ್ಪು - ರುಚಿಗೆ, ನಿಂಬೆ ರಸ - ಎರಡು ಚಮಚ
ಚಿಲ್ಲಿ ಗಾರ್ಲಿಕ್ ಪನೀರ್ ತಯಾರಿಸುವ ವಿಧಾನ
ಒಂದು ಬೌಲ್‌ನಲ್ಲಿ ಮೊಸರು, ನಿಂಬೆ ರಸ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲಾ, ಕೊತ್ತಂಬರಿ ಪುಡಿ, ಕಸೂರಿ ಮೇತಿ, ಖಾರದಪುಡಿ ಮತ್ತು ರುಚಿಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇದೇ ಬೌಲ್‌ಗೆ ಪನೀರ್ ತುಂಡುಗಳನ್ನು ಸೇರಿಸಿ ಅದರೊಂದಿಗೆ ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ. ಇದನ್ನ ಅರ್ಧ ಗಂಟೆಯವರೆಗೆ ಪಕ್ಕಕ್ಕೆ ಇರಿಸಿ. ಈಗ ಬಾಣಲಿಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಮಿಶ್ರಣ ಮಾಡಿ. ಇದನ್ನು ಕಡಿಮೆ ಉರಿಯಲ್ಲಿ ಬೇಯಿಸಿ. ಮೊದಲೇ ಮ್ಯಾರಿನೇಟ್ ಮಾಡಿದ ಪನೀರ್ ತುಂಡುಗಳನ್ನು ಬಾಣಲೆಯಲ್ಲಿ ಒಂದೊಂದಾಗಿ ಫ್ರೈ ಮಾಡಿ. ಎಲ್ಲವನ್ನೂ ಬಾಣಲೆಗೆ ಹಾಕಿದ ನಂತರ ಅದರ ಮೇಲೆ ಮುಚ್ಚಳವನ್ನು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ. ಪನೀರ್ ತುಂಡುಗಳು ಚೆನ್ನಾಗಿ ಬೇಯುವವರೆಗೆ ನೋಡಿಕೊಳ್ಳಿ. ನಂತರ ಮುಚ್ಚಳ ತೆಗೆದು ಈ ಪನೀರ್ ಅನ್ನು ಫ್ರೈ ಮಾಡಿ. ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿದರೆ ಟೇಸ್ಟಿ ಚಿಲ್ಲಿ ಗಾರ್ಲಿಕ್ ಪನೀರ್ ರೆಸಿಪಿ ರೆಡಿ. ಇದು ಮಧ್ಯಾಹ್ನದ ಊಟ ಸಂಜೆ ಸ್ನ್ಯಾಕ್ಸ್‌ಗೆ ಹೇಳಿ ಮಾಡಿಸಿದ ತಿನಿಸು. ಸ್ಪಲ್ಪ ಖಾರದ ಕಡಿಮೆ ಹಾಕಿದ್ರೆ ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ.
ನೀವು ಬಯಸಿದರೆ ಈ ಪಾಕವಿಧಾನದಲ್ಲಿ ಸ್ವಲ್ಪ ಹೆಚ್ಚು ಮಸಾಲೆಗಳನ್ನು ಸೇರಿಸಬಹುದು. ಪುದೀನ ಚಟ್ನಿಯೊಂದಿಗೆ ಬಡಿಸಿದಾಗ ಈ ಪನೀರ್ ತುಂಡುಗಳು ರುಚಿಯಾಗಿರುತ್ತವೆ. ಖಾರ ಮಾಡಿ ಈರುಳ್ಳಿ ಚೂರುಗಳನ್ನು ಉದುರಿಸಿ ತಿಂದರೆ ರುಚಿ ಗರಿಗೆದರುತ್ತದೆ. ಮಕ್ಕಳಿಗೆ ಸಂಜೆಯ ತಿಂಡಿಯಾಗಿ ರೂಪದಲ್ಲೂ ನೀಡಬಹುದು. ಪನೀರ್ ಆರೋಗ್ಯಕ್ಕೆ ಉತ್ತಮವಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾಗಿ ಈ ತಿಂಡಿ ರೆಸಿಪಿಯನ್ನು ಮಕ್ಕಳಿಗೆ ವಾರಕ್ಕೆ ಒಂದು ಅಥವಾ ಎರಡು ಬಾರಿ ತಿನ್ನಿಸಬಹುದು.

ವಿಭಾಗ