ಮನೆಯಲ್ಲೂ ಮಾಡಿ ಢಾಬಾ ಸ್ಟೈಲ್‌ ಆಲೂ ಗೋಬಿ; ಈ ರೀತಿ ಮಾಡಿದ್ರೆ ಎಲ್ಲರೂ ಇಷ್ಟಪಟ್ಟು ತಿಂತಾರೆ, ಇದು ಅನ್ನಕ್ಕೂ ಚಪಾತಿಗೂ ಹೊಂದುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲೂ ಮಾಡಿ ಢಾಬಾ ಸ್ಟೈಲ್‌ ಆಲೂ ಗೋಬಿ; ಈ ರೀತಿ ಮಾಡಿದ್ರೆ ಎಲ್ಲರೂ ಇಷ್ಟಪಟ್ಟು ತಿಂತಾರೆ, ಇದು ಅನ್ನಕ್ಕೂ ಚಪಾತಿಗೂ ಹೊಂದುತ್ತೆ

ಮನೆಯಲ್ಲೂ ಮಾಡಿ ಢಾಬಾ ಸ್ಟೈಲ್‌ ಆಲೂ ಗೋಬಿ; ಈ ರೀತಿ ಮಾಡಿದ್ರೆ ಎಲ್ಲರೂ ಇಷ್ಟಪಟ್ಟು ತಿಂತಾರೆ, ಇದು ಅನ್ನಕ್ಕೂ ಚಪಾತಿಗೂ ಹೊಂದುತ್ತೆ

ಢಾಬಾ ಶೈಲಿಯ ಆಹಾರದ ರುಚಿಗಳನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತೆ. ಅದರಲ್ಲೂ ಢಾಬಾದಲ್ಲಿ ಮಾಡುವ ಕೆಲವು ತರಕಾರಿ ಖಾದ್ಯಗಳು ಸಖತ್ ಆಗಿರುತ್ತವೆ. ನೀವು ಢಾಬಾಗಳಲ್ಲಿ ಆಲೂ ಗೋಬಿ ತಿಂದಿದ್ದು ಅದೇ ರುಚಿಯನ್ನು ಮನೆಯಲ್ಲೂ ತಿನ್ನಲು ಬಯಸಿದರೆ ಈ ರೆಸಿಪಿ ಒಮ್ಮೆ ಮಾಡಿ ನೋಡಿ.

ಢಾಬಾ ಸ್ಟೈಲ್ ಆಲೂ ಗೋಬಿ ರೆಸಿಪಿ
ಢಾಬಾ ಸ್ಟೈಲ್ ಆಲೂ ಗೋಬಿ ರೆಸಿಪಿ

ಢಾಬಾಗಳಲ್ಲಿನ ಆಹಾರದ ರುಚಿ ಸಖತ್ ಆಗಿರುತ್ತೆ. ಇದು ಸಾಮಾನ್ಯವಾಗಿ ಮನೆಯ ಆಹಾರದಂತೆ ಇದ್ದರೂ ತಯಾರಿಸುವ ವಿಧಾನ ಮಾತ್ರ ಭಿನ್ನ. ಆ ಕಾರಣಕ್ಕೆ ಇದರ ರುಚಿಯೂ ಸೂಪರ್ ಆಗಿರುತ್ತೆ. ಆ ಕಾರಣಕ್ಕೆ ಹಲವರಿಗೆ ಢಾಬಾದ ರುಚಿ ಇಷ್ಟವಾಗುತ್ತದೆ. ಢಾಬಾದಲ್ಲಿ ವೆಜ್ ಹಾಗೂ ನಾನ್ ವೆಜ್ ಎರಡೂ ಚೆನ್ನಾಗಿರುತ್ತದೆ.

ನೀವು ಢಾಬಾದಲ್ಲಿ ಆಲೂ ಗೋಬಿ ತಿಂದಿರಬಹುದು. ಢಾಬಾ ಶೈಲಿಯಲ್ಲಿನ ಆಲೂ ಗೋಬಿಯನ್ನು ಮನೆಯಲ್ಲೂ ತಿನ್ನಬೇಕು ಅಂದ್ರೆ ಈ ವಿಧಾನ ಅನುಸರಿಸಿ ಮಾಡಬೇಕು. ಈ ರೀತಿ ಮಾಡುವುದರಿಂದ ಢಾಬಾ ಶೈಲಿಯಲ್ಲೇ ಆಲೂ ಗೋಬಿಯನ್ನು ಮನೆಯಲ್ಲೂ ಮಾಡಬಹುದು. ಆಲೂಗೆಡ್ಡೆ, ಎಲೆಕೋಸು ಬಳಸಿ ಮಾಡುವ ಈ ರೆಸಿಪಿ ಚಪಾತಿ, ರೋಟಿ, ಅನ್ನದ ಜೊತೆ ಸಖತ್ ಕಾಂಬಿನೇಷನ್ ಆಗಿರುತ್ತೆ.

ಢಾಬಾ ಸ್ಟೈಲ್ ಆಲೂ ಗೋಬಿ

ಬೇಕಾಗುವ ಸಾಮಗ್ರಿಗಳು: ಆಲೂಗೆಡ್ಡೆ – 4, ಹೂಕೋಸು – 1 ಮಧ್ಯಮ ಗಾತ್ರದ್ದು, ಈರುಳ್ಳಿ – 2 ಮಧ್ಯಮ ಗಾತ್ರದ್ದು, ಟೊಮೆಟೊ – 2, ಜೀರಿಗೆ – ಅರ್ಧ ಚಮಚ, ದಾಲ್ಚಿನ್ನಿ ಎಲೆ – 1, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಖಾರದಪುಡಿ – 1 ಚಮಚ, ಕೊತ್ತಂಬರಿ ಪುಡಿ – 1ಚಮಚ, ಅರಿಸಿನ ಪುಡಿ – ಅರ್ಧ ಚಮಚ, ಗರಂ ಮಸಾಲಾ ಪುಡಿ – 1 ಟೀ ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು – 1 ಹಿಡಿ, ಹಸಿಮೆಣಸು – 3ರಿಂದ 4, ಸಾಸಿವೆ ಎಣ್ಣೆ – 1 ಟೀ ಚಮಚ,

ಢಾಬಾ ಸ್ಟೈಲ್‌ ಆಲೂ ಗೋಬಿ ಮಾಡುವ ವಿಧಾನ

ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆಯಿರಿ. ಪ್ರತಿ ಆಲೂಗೆಡ್ಡೆಯನ್ನು 4 ಹೋಳುಗಳಾಗಿ ಮಾಡಿ. ಈಗ ಎಲೆಕೋಸನ್ನು ಚೆನ್ನಾಗಿ ತೊಳೆದು ದೊಡ್ಡ ತುಂಡುಗಳಾಗಿ ಕತ್ತರಿಸಿ. ಇದರೊಂದಿಗೆ, ಈರುಳ್ಳಿ ಮತ್ತು ಟೊಮೆಟೊವನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಹಸಿ ಮೆಣಸಿನಕಾಯಿಯನ್ನು ಎರಡು ಭಾಗಗಳಾಗಿ ಕತ್ತರಿಸಿಕೊಳ್ಳಿ. ಕೊತ್ತಂಬರಿ ಸೊಪ್ಪನ್ನು ಸಹ ನುಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ.

ಬಾಣಲಿಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಹೂಕೋಸು ಫ್ರೈ ಮಾಡಿಕೊಳ್ಳಿ. ಇದನ್ನು ಪ್ಲೇನಲ್ಲಿ ತೆಗೆದು ಇರಿಸಿ. ಈಗ ಮತ್ತೆ ಎಣ್ಣೆ ಬಿಸಿ ಮಾಡಿ ಅದಕ್ಕೆ ದಾಲ್ಚಿನ್ನಿ ಎಲೆ, ಜೀರಿಗೆ ಸೇರಿಸಿ. ಇದನ್ನು ಫ್ರೈ ಮಾಡಿ ಅದಕ್ಕೆ ಆಲೂಗೆಡ್ಡೆ ಸೇರಿಸಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಮಾಡಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಪುನಃ ಸ್ವಲ್ಪ ಹೊತ್ತು ಬೇಯಿಸಿ. ಇದಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಫ್ರೈ ಮಾಡಿ. ಮತ್ತೆ ಪಾತ್ರೆಗೆ ಮುಚ್ಚಳ ಮುಚ್ಚಿ 2 ನಿಮಿಷ ಕಾಯಿಸಿ. ಈಗ ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಆಲೂಗೆಡ್ಡೆಯೊಂದಿಗೆ ಮಸಾಲೆಗಳು ಚೆನ್ನಾಗಿ ಬೆಂದ ನಂತರ ಫ್ರೈ ಮಾಡಿಟ್ಟುಕೊಂಡ ಗೋಬಿ ಹಾಗೂ ಗರಂ ಮಸಾಲೆ ಸೇರಿಸಿ. ಇದಕ್ಕೆ ಹಸಿಮೆಣಸು ಸೇರಿಸಿ ಮಿಶ್ರಣ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ. ಈಗ ನಿಮ್ಮ ಮುಂದೆ ರುಚಿಯಾದ ಆಲೂ ಗೋಬಿ ತಿನ್ನಲು ಸಿದ್ಧ.

Whats_app_banner