ಕನ್ನಡ ಸುದ್ದಿ  /  Lifestyle  /  Food Weight Loss Tips What Is Best Time To Eat Breakfast And How It Helps For Weight Loss How To Lose Weight Arc

Weight Loss Tips: ಬ್ರೇಕ್‌ಫಾಸ್ಟ್‌ ತಿನ್ನೋಕೆ ಬೆಸ್ಟ್‌ ಟೈಮ್‌ ಯಾವ್ದು? ಈ ಟೈಮ್‌ಗೆ ತಿಂಡಿ ತಿಂದ್ರೆ ತೂಕ ಇಳಿಯೋದು ಗ್ಯಾರೆಂಟಿ

ತೂಕ ಇಳಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಒಂದು ಚಾಲೆಂಜ್‌ ಆಗಿದೆ. ಅದಕ್ಕೆ ಬೆಳಗಿನ ಉಪಹಾರ, ಊಟ ಬಿಡುವವರಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಬ್ರೇಕ್‌ಫಾಸ್ಟ್‌ ತಿನ್ನುವುದರಿಂದಲೂ ತೂಕ ಇಳಿಕೆಯಾಗುತ್ತದೆ ಎಂಬುದು ನಿಮಗೆ ಗೊತ್ತಾ? ಬೆಳಿಗ್ಗೆ ಯಾವ ಟೈಮ್‌ನಲ್ಲಿ ಬ್ರೇಕ್‌ಫಾಸ್ಟ್‌ ಮಾಡಿದ್ರೆ ತೂಕ ನಿಯಂತ್ರಣದಲ್ಲಿರುತ್ತೆ ನೋಡಿ.

 ಬ್ರೇಕ್‌ಫಾಸ್ಟ್‌ ತಿನ್ನೋಕೆ ಬೆಸ್ಟ್‌ ಟೈಮ್‌ ಯಾವ್ದು?
ಬ್ರೇಕ್‌ಫಾಸ್ಟ್‌ ತಿನ್ನೋಕೆ ಬೆಸ್ಟ್‌ ಟೈಮ್‌ ಯಾವ್ದು?

ತೂಕ ಇಳಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಒಂದು ಚಾಲೆಂಜ್‌ ಆಗಿದೆ. ಅದಕ್ಕೆ ಬೆಳಗಿನ ಉಪಹಾರ, ಊಟ ಬಿಡುವವರಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಬ್ರೇಕ್‌ಫಾಸ್ಟ್‌ ತಿನ್ನುವುದರಿಂದಲೂ ತೂಕ ಇಳಿಕೆಯಾಗುತ್ತದೆ ಎಂಬುದು ನಿಮಗೆ ಗೊತ್ತಾ? ಬೆಳಿಗ್ಗೆ ಯಾವ ಟೈಮ್‌ನಲ್ಲಿ ಬ್ರೇಕ್‌ಫಾಸ್ಟ್‌ ಮಾಡಿದ್ರೆ ತೂಕ ನಿಯಂತ್ರಣದಲ್ಲಿರುತ್ತೆ ನೋಡಿ.

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಬೇಕೆಂಬುದರ ಬಗ್ಗೆ ಬಹಳಷ್ಟು ಜನರು ಒಲವು ತೋರಿಸುತ್ತಾರೆ. ಅದಕ್ಕಾಗಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟಗಳಲ್ಲಿ ಏನು ತಿನ್ನಬೇಕು, ಏನನ್ನು ತಿನ್ನಬಾರದು ಇವೆಲ್ಲವುಗಳ ಬಗ್ಗೆ ಕಾಳಜಿವಹಿಸುತ್ತಾರೆ. ಅದರಲ್ಲೂ ತೂಕ ಇಳಿಸಿಕೊಳ್ಳುವವರಂತೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೂ ಕೆಲವೊಮ್ಮೆ ತೂಕ ಇಳಿಕೆ ಅಷ್ಟು ಸುಲಭಕ್ಕೆ ಆಗುವುದಿಲ್ಲ. ನ್ಯಾಷನಲ್‌ ಲೈಬ್ರರಿ ಆಫ್‌ ಮೆಡಿಸಿನ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನದಲ್ಲಿ ಬೆಳಗಿನ ಉಪಹಾರ ಸೇವಿಸುವ ಸಮಯವೂ ಸಹ ತೂಕ ಇಳಿಕೆಗೆ ಬಹಳ ಪ್ರಮುಖವಾಗಿರುತ್ತದೆ ಎಂದು ಹೇಳುತ್ತದೆ. ನಮ್ಮಲ್ಲಿ ಒಂದು ತಪ್ಪು ತಿಳುವಳಿಕೆಯಿದೆ, ಅದೇನೆಂದರೆ ಬೆಳಗಿನ ಉಪಹಾರವನ್ನು ಬಿಟ್ಟು, ನೇರವಾಗಿ ಮಧ್ಯಾಹ್ನದ ಊಟವೇ ಮಾಡಿದರಾಯಿತು. ಬೆಳಗಿನ ಉಪಹಾರದಷ್ಟು ಆಹಾರ ಕಡಿಮೆ ಸೇವಿಸಿದಂತಾಗುತ್ತದೆ ಅಂದುಕೊಳ್ಳುತ್ತಾರೆ.

ಆದರೆ, ಅದು ಆಹಾರ ಸೇವನೆಯನ್ನು ಕಡಿಮೆ ಮಾಡಿದಂತಾಗುವುದಿಲ್ಲ ಬದಲಿಗೆ ಅದು ಅನಾರೋಗ್ಯಕರ ಆಹಾರ ಸೇವನೆಗಳಲ್ಲಿ ಒಂದಾಗುತ್ತದೆ. ಇದು ಒಂದು ಕಳಪೆ ಆಹಾರ ಪದ್ಧತಿಯೂ ಹೌದು. ಇದರಿಂದ ದೈಹಿಕ ಚಟುವಟಿಕೆಗಳ ಮಟ್ಟ ಕುಸಿಯುತ್ತದೆ. ಬಿಎಮ್‌ಐ (Body Mass Index) ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್‌, ಎಲ್‌ಡಿಎಲ್‌, ಸೊಂಟದ ಸುತ್ತಳತೆ ಹೆಚ್ಚಾಗುವಂತಹ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚುತ್ತದೆ. ಜೊತೆಗೆ ಚಯಾಪಚಯ ಕ್ರಿಯೆಯಲ್ಲಿ ಅಪಾಯ ಹೆಚ್ಚಾಗುತ್ತದೆ. ಇವೆಲ್ಲವೂ ಟೈಪ್‌ 2 ಮಧುಮೇಹದ ಅಪಾಯಕ್ಕೆ ಕಾರಣವಾಗಿದೆ. ಬೆಳಗಿನ ಉಪಹಾರ ಅತಿ ಮುಖ್ಯವಾದದ್ದು ಎಂಬುದಂತೂ ಸತ್ಯ. ಆದರೆ ಉಪಹಾರವನ್ನು ಯಾವಾಗ ಸೇವಿಸಬೇಕು ಎಂಬುದು ನಮ್ಮಲ್ಲಿ ಬಹಳಷ್ಟು ಜನರಿಗೆ ಗೊಂದಲದ ವಿಷಯ. ಬೆಳಗಿನ ಉಪಹಾರವೂ ತೂಕ ಇಳಿಕೆಗೆ ಬಹಳ ಪ್ರಮುಖವಾಗಿದೆ.

ಬೆಳಗಿನ ಉಪಹಾರ ಸೇವಿಸಲು ರೈಟ್‌ ಟೈಮ್‌ ಯಾವುದು?

ನೀವು ರಾತ್ರಿ 8 ಗಂಟೆಗೆ ಊಟ ಮಾಡಿದ್ದರೆ, ಬೆಳಗ್ಗೆ 8 ಗಂಟೆಗೆ ಉಪಹಾರ ಸೇವಿಸಲು ರೈಟ್‌ ಟೈಮ್‌ ಆಗಿರುತ್ತದೆ. ಸುಮಾರು 10 ರಿಂದ 12 ಗಂಟೆಗಳ ರಾತ್ರಿಯ ಉಪವಾಸವನ್ನು ಮುರಿಯಲು ಆ ಸಮಯ ಸೂಕ್ತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಷ್ಟು ಸುದೀರ್ಘ ಉಪವಾಸದ ನಂತರ ದೇಹಕ್ಕೆ ಶಕ್ತಿಯ ಅವಶ್ಯಕತೆಯಿರುತ್ತದೆ. ಹಾಗಾಗಿ ಬೆಳಗಿನ ಉ‍ಪಹಾರವು ದಿನದ ಅತ್ಯಂತ ನಿರ್ಣಾಯಕ ಆಹಾರ ಸೇವನೆಗಳಲ್ಲಿ ಒಂದಾಗಿದೆ. ಬೆಳಿಗ್ಗೆ 7 ರಿಂದ 9 ರ ಒಳಗೆ ಅಥವಾ ಬೆಳಿಗ್ಗೆ ಎದ್ದು ಎರಡು ಗಂಟೆಗಳ ಒಳಗೆ ಉಪಹಾರವನ್ನು ಸೇವಿಸುವ ಗುರಿ ಹಾಕಿಕೊಂಡರೆ ಆಗ ಅದು ಆರೋಗ್ಯಕರ ರೀತಿಯಲ್ಲಿ ದಿನವನ್ನು ಪ್ರಾರಂಭಿಸಿದಂತಾಗುತ್ತದೆ. ಬೆಳಗಿನ ಉಪಹಾರ ಎಂದರೆ ನೀವು ನಿಮ್ಮ ದೇಹಕ್ಕೆ ಒದಗಿಸುವ ಇಂಧನ. ಬೆಳಗಿನ ಉಪಹಾರ ಸರಿಯಾದ ಸಮಯದಲ್ಲಿ ಮಾಡಿದರೆ ಆಗ ಚಯಾಪಚಯ ಕ್ರಿಯೆಯೂ ಉತ್ತಮವಾಗಿರುತ್ತದೆ. ಶಕ್ತಿ ಬಿಡುಗಡೆಯಾಗುವುದರಿಂದ ದಿನಪೂರ್ತಿ ಚಟುವಟಿಕೆಯಿಂದಿರಲು ಸಹಾಯವಾಗುತ್ತದೆ.

ಬೆಳಗಿನ ಉಪಹಾರದಲ್ಲಿ ಏನಿರಬೇಕು?

ಬೆಳಗಿನ ಉಪಾಹರವು ಸಮತೋಲಿತ ಮತ್ತು ಆರೋಗ್ಯಕರ ಆಹಾರವಾಗಿರುವುದು ಅತಿ ಅವಶ್ಯಕವಾಗಿದೆ. ಬೆಳಗಿನ ತಿಂಡಿ ತಿನ್ನಲು ಸಮಯದ ಅಭಾವವಿದ್ದರೆ ಹಣ್ಣು, ಬೀಜಗಳು, ಒಂದು ಕಪ್‌ ಹಾಲು ಆರಿಸಿಕೊಳ್ಳಬಹುದು. ಇವುಗಳೂ ಸಹ ದೇಹದ ಶಕ್ತಿ ಒದಗಿಸುವ ಆಹಾರವಾಗಬಲ್ಲದು. ತೂಕ ನಷ್ಟಕ್ಕೂ ಹೊಂದಿಕೆಯಾಗುವಂತಹ ಅಹಾರಗಳೆಂದರೆ ಅದು ಪ್ರೊಟೀನ್‌ಯುಕ್ತ ಆಹಾರಗಳು. ಅವು ದೇಹದಲ್ಲಿ ಕೊಬ್ಬಿನ ಶೇಖರಣೆಯ ಅಪಾಯವನ್ನು ಕಡಿಮೆ ಮಾಡುತ್ತವೆ. ಇದರ ಜೊತೆಗೆ ಕಾರ್ಬೋಹೈಡ್ರೇಟ್‌ ಮತ್ತು ನಾರಿನಾಂಶ ಹೊಂದಿರುವ ಆಹಾರಗಳೂ ಅಗತ್ಯವಾಗಿದೆ. ದೈನಂದಿನ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ಮತ್ತು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸಲು ಅವು ಅತ್ಯಗತ್ಯವಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)