ತೂಕ ಇಳಿಕೆಯಿಂದ ಚರ್ಮದ ಹೊಳಪಿನವರೆಗೆ: ಅನಾನಸ್ ಸೂಪ್ ಕುಡಿಯುವುದರ ಪ್ರಯೋಜನ ಹಲವು, ಇಲ್ಲಿದೆ ರೆಸಿಪಿ
ಅನಾನಸು ಹಣ್ಣು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದರಿಂದ ರುಚಿಕರ ಸೂಪ್ ತಯಾರಿಸಬಹುದು. ಬಹಳ ರುಚಿಕರವಾಗಿರುವ ಈ ಸೂಪ್ ತಯಾರಿಸುವುದು ತುಂಬಾನೇ ಸರಳ. ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ತೂಕ ಇಳಿಕೆಯಿಂದ ಚರ್ಮದ ಹೊಳಪು ಹೆಚ್ಚಿಸುವಲ್ಲಿ ಪರಿಣಾಮಕಾರಿ. ಇದನ್ನು ತಯಾರಿಸುವುದು ಹೇಗೆ, ಇಲ್ಲಿದೆ ರೆಸಿಪಿ.

ಕ್ಯಾರೆಟ್, ಟೊಮೆಟೊ, ಅಣಬೆ ಸೇರಿದಂತೆ ಇತರ ತರಕಾರಿಗಳಿಂದ ತಯಾರಿಸಿದ ಸೂಪ್ ಅನ್ನು ನೀವು ಸವಿದಿರಬಹುದು. ಆದರೆ ಎಂದಾದರೂ ಹಣ್ಣಿನಿಂದ ತಯಾರಿಸಿದ ಸೂಪ್ ಕುಡಿದಿದ್ದೀರಾ? ಅದರಲ್ಲೂ ಅನಾನಸ್ ಹಣ್ಣಿನ ಸೂಪ್ ಕುಡಿದಿದ್ದೀರಾ. ಇಲ್ಲವಾದಲ್ಲಿ ಒಮ್ಮೆ ತಯಾರಿಸಿ ನೋಡಿ. ತುಂಬಾ ರುಚಿಕರವಾಗಿರುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ. ಅನಾನಸ್ ಸೂಪ್‍ನಲ್ಲಿರುವ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಫೈಬರ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಚರ್ಮವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಅನಾನಸ್ ಸೂಪ್ ತಯಾ
ಅನಾನಸ್ ಸೂಪ್ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಕತ್ತರಿಸಿದ ಅನಾನಸ್- 1 ಕಪ್, ಶುಂಠಿ- 1 ಸಣ್ಣ ತುಂಡು, ಈರುಳ್ಳಿ- 1, ಕ್ಯಾರೆಟ್- 1, ನೀರು- 2 ಕಪ್, ಬೆಣ್ಣೆ- 1 ಟೀ ಚಮಚ, ಕಾಳು ಮೆಣಸಿನ ಪುಡಿ- ½ ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು.
ತಯಾರಿಸುವ ವಿಧಾನ: ಅನಾನಸ್ ಸೂಪ್ ತಯಾರಿಸಲು, ಮೊದಲು ಬಾಣಲೆಯಲ್ಲಿ ಬೆಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಈರುಳ್ಳಿ ಹಾಕಿ, ಶುಂಠಿ ಮತ್ತು ಕ್ಯಾರೆಟ್ ಸೇರಿಸಿ ಲಘುವಾಗಿ ಹುರಿಯಿರಿ. ಇದರ ನಂತರ, ಸಣ್ಣಗೆ ಕತ್ತರಿಸಿದ ಅನಾನಸ್ ಅನ್ನು ಬಾಣಲೆಗೆ ಸೇರಿಸಿ 2 ರಿಂದ 3 ನಿಮಿಷಗಳ ಕಾಲ ಬೇಯಿಸಿ. ಈಗ ಬಾಣಲೆಗೆ ಸ್ವಲ್ಪ ನೀರು ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ, ಗ್ಯಾಸ್ ಆಫ್ ಮಾಡಿ.
ಈ ಮಿಶ್ರಣವನ್ನು ತಣ್ಣಗಾಗಲು ಇರಿಸಿ. ಮಿಶ್ರಣವು ತಣ್ಣಗಾದ ನಂತರ, ಅದನ್ನು ಮಿಕ್ಸರ್‌ಗೆ ಸೇರಿಸಿ ರುಬ್ಬಿಕೊಳ್ಳಿ. ಈಗ ರುಬ್ಬಿದ ಮಿಶ್ರಣವನ್ನು ಸೋಸಿಕೊಳ್ಳಿ. ಅದನ್ನು ಮತ್ತೆ ಬಾಣಲೆಯಲ್ಲಿ ಹಾಕಿ ಬೇಯಿಸಿ. ಬಾಣಲೆಗೆ ಕಾಳುಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ. ಸೂಪ್ ಮಿಶ್ರಣವನ್ನು ಇನ್ನೂ 2 ನಿಮಿಷಗಳ ಕಾಲ ಬೇಯಿಸಿ ಗ್ಯಾಸ್ ಆಫ್ ಮಾಡಿ. ಈ ವೇಳೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ. ಇಷ್ಟಾದರೆ ರುಚಿಕರ ಮತ್ತು ಆರೋಗ್ಯಕರ ಅನಾನಸ್ ಸೂಪ್ ಸಿದ್ಧ. ಬಿಸಿಯಾಗಿ ತಿನ್ನಿ ತುಂಬಾ ಟೇಸ್ಟಿಯಾಗಿರುತ್ತದೆ.
ಅನಾನಸ್ ಸೂಪ್ ಕುಡಿಯುವುದರ ಪ್ರಯೋಜನಗಳು
- ಅನಾನಸ್‍ನಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಶೀತ ಮತ್ತು ಕೆಮ್ಮನ್ನು ನಿವಾರಿಸಲು ಪರಿಣಾಮಕಾರಿಯಾಗಿದೆ.
- ಅನಾನಸ್ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಹಾನಿಯಿಂದ ರಕ್ಷಿಸುತ್ತವೆ ಮತ್ತು ಅದರ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳುತ್ತವೆ.
- ಅನಾನಸ್ ಸೂಪ್ ಕಡಿಮೆ ಕ್ಯಾಲೊರಿ ಮತ್ತು ನಾರಿನಂಶ ಅಧಿಕವಾಗಿದೆ. ಇದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
