ದ್ವಿದಳ ಧಾನ್ಯವಾಗಿದ್ದರೂ ಕೆಂಪು ತೊಗರಿಯನ್ನು ಕೆಲವರು ಮಾಂಸಾಹಾರಿ ಪಟ್ಟಿಗೆ ಸೇರಿಸಿದ್ದಾರೆ; ಇದಕ್ಕೇನು ಕಾರಣ, ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ದ್ವಿದಳ ಧಾನ್ಯವಾಗಿದ್ದರೂ ಕೆಂಪು ತೊಗರಿಯನ್ನು ಕೆಲವರು ಮಾಂಸಾಹಾರಿ ಪಟ್ಟಿಗೆ ಸೇರಿಸಿದ್ದಾರೆ; ಇದಕ್ಕೇನು ಕಾರಣ, ಇಲ್ಲಿದೆ ಮಾಹಿತಿ

ದ್ವಿದಳ ಧಾನ್ಯವಾಗಿದ್ದರೂ ಕೆಂಪು ತೊಗರಿಯನ್ನು ಕೆಲವರು ಮಾಂಸಾಹಾರಿ ಪಟ್ಟಿಗೆ ಸೇರಿಸಿದ್ದಾರೆ; ಇದಕ್ಕೇನು ಕಾರಣ, ಇಲ್ಲಿದೆ ಮಾಹಿತಿ

ಅನೇಕ ರೀತಿಯ ದ್ವಿದಳ ಧಾನ್ಯಗಳಿವೆ. ಅವುಗಳಲ್ಲಿ ಮಸೂರ್ ದಾಲ್ ಅಥವಾ ಕೆಂಪು ತೊಗರಿಬೇಳೆ ಕೂಡ ಒಂದು. ಇದು ಒಂದು ರೀತಿಯ ಬೇಳೆಕಾಳಾಗಿದ್ದು, ಇದು ನೋಡಲು ಕೆಂಪು ಬಣ್ಣವನ್ನು ಹೊಂದಿದೆ.ಆದರೆ, ಕೆಲವರು ಇದನ್ನು ಮಾಂಸಾಹಾರಿ ಪದಾರ್ಥ ಎಂದು ಪರಿಗಣಿಸುತ್ತಾರೆ. ಈ ಬಗ್ಗೆ ಇಲ್ಲಿದೆ ವಿವರ.

ದ್ವಿದಳ ಧಾನ್ಯವಾಗಿದ್ದರೂ ಕೆಂಪು ತೊಗರಿಯನ್ನು ಕೆಲವರು ಮಾಂಸಾಹಾರಿ ಪಟ್ಟಿಗೆ ಸೇರಿಸಿದ್ದಾರೆ
ದ್ವಿದಳ ಧಾನ್ಯವಾಗಿದ್ದರೂ ಕೆಂಪು ತೊಗರಿಯನ್ನು ಕೆಲವರು ಮಾಂಸಾಹಾರಿ ಪಟ್ಟಿಗೆ ಸೇರಿಸಿದ್ದಾರೆ (Spicebangla)

ಕೆಂಪು ಬಣ್ಣದ ಬೇಳೆ ಅಥವಾ ಕೆಂಪು ತೊಗರಿಬೇಳೆ ತಿನ್ನುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ. ತೊಗರಿಬೇಳೆ ಸಾಂಬಾರ್ ತಯಾರಿಸುವಂತೆಯೇ ಇದರ ಸಾಂಬಾರ್ ಅಥವಾ ಇತರೆ ತರಕಾರಿಗಳೊಂದಿಗೆ ಬೆರೆಸಿ ಸಾರು ತಯಾರಿಸಲಾಗುತ್ತದೆ. ಇದೊಂದು ದ್ವಿದಳ ಧಾನ್ಯವಾಗಿದ್ದು ಬಹುತೇಕ ಮಂದಿ ಎಲ್ಲರೂ ಸೇವಿಸುತ್ತಾರೆ. ಆದರೆ, ಬಂಗಾಳಿಗಳು ಮಸೂರ್ ದಾಲ್ ಅಥವಾ ಕೆಂಪು ತೊಗರಿಬೇಳೆಯನ್ನು ಮಾಂಸಾಹಾರವೆಂದು ಪರಿಗಣಿಸುತ್ತಾರೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ಸಸ್ಯಾಹಾರಿಗಳು ಇದನ್ನು ತಿನ್ನುವುದಿಲ್ಲ. ಕೆಂಪು ತೊಗರಿಬೇಳೆಯನ್ನು ಅಲ್ಲಿ ಮಾಂಸಾಹಾರಿ ಪಟ್ಟಿಗೆ ಸೇರಿಸಲಾಗಿದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಕೆಂಪು ತೊಗರಿಬೇಳೆಯನ್ನು ಮಾಂಸಾಹರವೆಂದು ಏಕೆ ಪರಿಗಣಿಸಲಾಗಿದೆ? ಇಲ್ಲಿದೆ ಇದರ ಹಿಂದಿನ ಕಥೆ

ಪಶ್ಚಿಮ ಬಂಗಾಳದಲ್ಲಿ ಕೆಂಪು ತೊಗರಿಬೇಳೆಯನ್ನು ಮಾಂಸಾಹಾರವೆಂದು ಪರಿಗಣಿಸಲು ಒಂದು ಕಥೆಯಿದೆ. ಸಹಸ್ರಬಾಹು ಅರ್ಜುನ ಎಂಬ ರಾಜನು ಜಮದಗ್ನಿ ಬಳಿ ಕಾಮಧೇನುವನ್ನು ಕದಿಯುತ್ತಾನೆ. ಅದನ್ನು ರಾಜನು ಬಲವಂತವಾಗಿ ಎಳೆದೊಯ್ಯುತ್ತಾನೆ. ಆಗ ಹಸುವಿಗೆ ಗಾಯವಾಗಿ ರಕ್ತಸ್ರಾವವಾಗುತ್ತದೆ. ರಕ್ತದ ಹನಿಗಳು ಬೀಳುವ ಸ್ಥಳದಿಂದ ಈ ಕೆಂಪು ತೊಗರಿಬೇಳೆ ಸಸ್ಯಗಳು ಹುಟ್ಟಿಕೊಂಡವು ಎಂದು ನಂಬಲಾಗಿದೆ.

ಇನ್ನು ಇತಿಹಾಸಕಾರರ ಪ್ರಕಾರ, ಕ್ರಿ.ಪೂ 2000 ದಲ್ಲಿ ಈಜಿಪ್ಟ್‌ನಲ್ಲಿ ಕೆಂಪು ತೊಗರಿ ಬೇಳೆಯನ್ನು ಮೊದಲು ಬೆಳೆಯಲಾಯಿತು ಎಂದು ಇತಿಹಾಸಕಾರರು ಹೇಳಿದ್ದಾರೆ. ಕೆಂಪು ಬೇಳೆಯನ್ನು ಮಸೂರ್ ದಾಲ್ ಎಂದು ಕರೆಯಲಾಗುತ್ತದೆ. ಮಸೂರ್ ಎಂಬ ಹೆಸರು ಈಜಿಪ್ಟಿನ ಪದವಾದ ಮಿಶ್ರಾದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಇದನ್ನು ಈಜಿಪ್ಟ್‌ನಲ್ಲಿ ವ್ಯಾಪಕವಾಗಿ ತಿನ್ನಲಾಗುತ್ತಿತ್ತು, ತದನಂತರ ಎಲ್ಲಾ ದೇಶಗಳನ್ನು ತಲುಪಿತು ಎಂದು ಹೇಳಲಾಗುತ್ತದೆ. ಮೊಘಲರು ಈ ಮಸೂರ್ ದಾಲ್ ಅಥವಾ ಕೆಂಪು ತೊಗರಿಬೇಳೆಯನ್ನು ಹೆಚ್ಚಾಗಿ ತಿನ್ನುತ್ತಿದ್ದರು. ಹೀಗಾಗಿ ಇದು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ ಎಂದು ಹೇಳಲಾಗಿದೆ.

ಇನ್ನು ಪಶ್ಚಿಮ ಬಂಗಾಳದಲ್ಲಿ ಮಸೂರ್ ದಾಲ್ ಅಥವಾ ಕೆಂಪು ತೊಗರಿಬೇಳೆ ತಿನ್ನದಿರಲು ಇತರ ಕಾರಣಗಳೂ ಇವೆ. ಈ ದ್ವಿದಳ ಧಾನ್ಯದಲ್ಲಿ ಪ್ರೋಟೀನ್ ಅಂಶ ಅಧಿಕವಾಗಿರುತ್ತದೆ. ಮಾಂಸಾಹಾರಿ ಆಹಾರದಲ್ಲೂ ಪ್ರೋಟೀನ್ ಅಂಶ ಹೆಚ್ಚಾಗಿರುವುದರಿಂದ ಇದನ್ನು ಮಾಂಸಾಹಾರವೆಂದು ಪರಿಗಣಿಸಿದ್ದಾರೆ.

ಅಷ್ಟೇ ಅಲ್ಲ, ಹಿಂದೆಲ್ಲಾ ವಿಧವೆಯರು ಕೂಡ ಸಸ್ಯಾಹಾರವನ್ನೇ ತಿನ್ನುತ್ತಿದ್ದರು. ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸಹ ತಿನ್ನುವುದಿಲ್ಲ. ಹಾಗೆಯೇ ಕೆಂಪು ತೊಗರಿಬೇಳೆಯನ್ನು ಕೂಡ ಅವರು ಸೇವಿಸುವುದಿಲ್ಲವಂತೆ. ಅವುಗಳಲ್ಲಿರುವ ಹೆಚ್ಚಿನ ಪ್ರೋಟೀನ್ ಅಂಶವು ಅವುಗಳಲ್ಲಿರುವ ಹಾರ್ಮೋನುಗಳನ್ನು ಉತ್ತೇಜಿಸುತ್ತದೆ. ಹೀಗಾಗಿ ಕೆಂಪು ತೊಗರಿಬೇಳೆಯನ್ನು ವಿಧವೆಯರು ತಿನ್ನದಂತೆ ತಡೆಹಿಡಿಯಲಾಯಿತು. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಸಸ್ಯಾಹಾರಿಗಳು, ಕೆಂಪು ತೊಗರಿಬೇಳೆಯನ್ನು ಮಾಂಸಾಹಾರವೆಂದು ಪರಿಗಣಿಸಿ ಅದನ್ನು ತಿನ್ನುವುದನ್ನು ನಿಷೇಧಿಸಲಾಗಿದೆ.

ಕೆಂಪು ತೊಗರಿಬೇಳೆಯಲ್ಲಿ ಪ್ರೋಟೀನ್ ಅಂಶ ಅಧಿಕವಾಗಿರುತ್ತದೆ. ನೀವು ಮಸೂರ್ ದಾಲ್ ಅಥವಾ ಕೆಂಪು ತೊಗರಿಬೇಳೆಯನ್ನು ತಿಂದರೆ, ಚಿಕನ್ ಮತ್ತು ಮೊಟ್ಟೆ ತಿನ್ನುವಷ್ಟೇ ಪ್ರೋಟೀನ್ ನಿಮ್ಮ ದೇಹಕ್ಕೆ ಸಿಗುತ್ತದೆ. ಅಂದಹಾಗೆ ವಿಜ್ಞಾನದ ಪ್ರಕಾರ, ಕೆಂಪು ತೊಗರಿಬೇಳೆ ಸಂಪೂರ್ಣವಾಗಿ ಸಸ್ಯಾಹಾರಿ. ಇದು ಸಸ್ಯ ಆಧಾರಿತ ಆಹಾರವಾಗಿದೆ.

Whats_app_banner