ಕನ್ನಡ ಸುದ್ದಿ  /  Photo Gallery  /  Foods To Eat In Winter To Care Your Skin

Winter foods for skin: ಚಳಿಗಾಲದ ನಿರ್ಜೀವ ಚರ್ಮದ ಆರೈಕೆಗೆ ಕ್ರೀಮ್‌ ಹಚ್ಚುವುದು ಮಾತ್ರವಲ್ಲದೆ ಈ 8 ಆಹಾರಗಳನ್ನು ತಪ್ಪದೆ ಸೇವಿಸಿ

  • ಪ್ರತಿಯೊಂದು ಋತುವಿನಲ್ಲೂ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾಗೇ ತ್ವಚೆ ನಿರ್ಜೀವವಾಗುತ್ತದೆ. ಆಯಾ ಕಾಲಕ್ಕೆ ತಕ್ಕಂತೆ ತ್ವಚೆಗೆ ಸೂಕ್ತ ಆರೈಕೆ ಮಾಡಬೇಕು.

ಪ್ರತಿಯೊಂದು ಋತುವಿನಲ್ಲೂ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾಗೇ ತ್ವಚೆ ನಿರ್ಜೀವವಾಗುತ್ತದೆ. ಆಯಾ ಕಾಲಕ್ಕೆ ತಕ್ಕಂತೆ ತ್ವಚೆಗೆ ಸೂಕ್ತ ಆರೈಕೆ ಮಾಡಬೇಕು.
icon

(1 / 9)

ಪ್ರತಿಯೊಂದು ಋತುವಿನಲ್ಲೂ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾಗೇ ತ್ವಚೆ ನಿರ್ಜೀವವಾಗುತ್ತದೆ. ಆಯಾ ಕಾಲಕ್ಕೆ ತಕ್ಕಂತೆ ತ್ವಚೆಗೆ ಸೂಕ್ತ ಆರೈಕೆ ಮಾಡಬೇಕು.(Freepik)

ಮೊಸರಿನಲ್ಲಿ ಹೆಚ್ಚು ಪ್ರೋಟೀನ್ ಅಂಶವಿದೆ. ಇದನ್ನು ಸೇವಿಸಿದರೆ ಚರ್ಮಕ್ಕೆ ಬಹಳ ಒಳ್ಳೆಯದು. ಇದು ಚರ್ಮದ ಮೇಲೆ ಸುಕ್ಕುಗಳನ್ನು ಉಂಟುಮಾಡಲು ಬಿಡುವುದಿಲ್ಲ. ಚಳಿಗಾಲದಲ್ಲಿ ರಾತ್ರಿ ವೇಳೆ ನಿಮಗೆ ಮೊಸರು ಸೇವಿಸುವುದು ಸಮಸ್ಯೆ ಎನಿಸಿದರೆ ಪ್ರತಿದಿನ ಮಧ್ಯಾಹ್ನ ಮೊಸರು ಸೇವಿಸಿ. ಇದರಿಂದ ನಿಮ್ಮ ಚರ್ಮ ಬಹಳ ಸುಂದರವಾಗಿರುತ್ತದೆ.  
icon

(2 / 9)

ಮೊಸರಿನಲ್ಲಿ ಹೆಚ್ಚು ಪ್ರೋಟೀನ್ ಅಂಶವಿದೆ. ಇದನ್ನು ಸೇವಿಸಿದರೆ ಚರ್ಮಕ್ಕೆ ಬಹಳ ಒಳ್ಳೆಯದು. ಇದು ಚರ್ಮದ ಮೇಲೆ ಸುಕ್ಕುಗಳನ್ನು ಉಂಟುಮಾಡಲು ಬಿಡುವುದಿಲ್ಲ. ಚಳಿಗಾಲದಲ್ಲಿ ರಾತ್ರಿ ವೇಳೆ ನಿಮಗೆ ಮೊಸರು ಸೇವಿಸುವುದು ಸಮಸ್ಯೆ ಎನಿಸಿದರೆ ಪ್ರತಿದಿನ ಮಧ್ಯಾಹ್ನ ಮೊಸರು ಸೇವಿಸಿ. ಇದರಿಂದ ನಿಮ್ಮ ಚರ್ಮ ಬಹಳ ಸುಂದರವಾಗಿರುತ್ತದೆ.  (Freepik)

ಚಳಿಗಾಲದಲ್ಲಿ ಆಹಾರ ತಯಾರಿಸಲು ಇತರ ಎಣ್ಣಗಳಿಗಿಂತ ಆಲಿವ್ ಎಣ್ಣೆ ಬಹಲ ಒಳ್ಳೆಯದು. ಆಲಿವ್‌ ಆಯಿಲ್‌ನಲ್ಲಿ ಉತ್ಕರ್ಷಣ ನಿರೋಧಕ ಅಂಶ ಹೆಚ್ಚಾಗಿದೆ. ಇದು ಮುಖದ ಮೇಲೆ ಅಕಾಲಿಕ ವಯಸ್ಸನ್ನು ತಡೆಯುತ್ತದೆ.
icon

(3 / 9)

ಚಳಿಗಾಲದಲ್ಲಿ ಆಹಾರ ತಯಾರಿಸಲು ಇತರ ಎಣ್ಣಗಳಿಗಿಂತ ಆಲಿವ್ ಎಣ್ಣೆ ಬಹಲ ಒಳ್ಳೆಯದು. ಆಲಿವ್‌ ಆಯಿಲ್‌ನಲ್ಲಿ ಉತ್ಕರ್ಷಣ ನಿರೋಧಕ ಅಂಶ ಹೆಚ್ಚಾಗಿದೆ. ಇದು ಮುಖದ ಮೇಲೆ ಅಕಾಲಿಕ ವಯಸ್ಸನ್ನು ತಡೆಯುತ್ತದೆ.(Freepik)

ವಾಲ್‌ನಟ್ಸ್‌ ಚರ್ಮಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಅದರಲ್ಲೂ ಚಳಿಗಾಲದಲ್ಲಿ ವಾಲ್‌ನಟ್ಸ್‌ ಹೆಚ್ಚಾಗಿ ಸೇವಿಸಿದರೆ ಬಹಳ ಒಳ್ಳೆಯದು. ಇದು ಚರ್ಮಕ್ಕೆ ವರದಾನವಾಗಿದೆ. ವಾಸ್ತವವಾಗಿ, ಒಮೆಗಾ 3 ಕೊರತೆಯಿಂದಾಗಿ, ಚರ್ಮವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ನೀವು ಪ್ರತಿದಿನ ಒಂದೊಂದು ವಾಲ್‌ನಟ್ಸ್‌ ಸೇವಿಸಿದರೆ ನಿಮ್ಮ ತ್ವಚೆ ಕೂಡಾ ಮೆರುಗಿನಿಂದ ಕೂಡಿರುತ್ತದೆ.
icon

(4 / 9)

ವಾಲ್‌ನಟ್ಸ್‌ ಚರ್ಮಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಅದರಲ್ಲೂ ಚಳಿಗಾಲದಲ್ಲಿ ವಾಲ್‌ನಟ್ಸ್‌ ಹೆಚ್ಚಾಗಿ ಸೇವಿಸಿದರೆ ಬಹಳ ಒಳ್ಳೆಯದು. ಇದು ಚರ್ಮಕ್ಕೆ ವರದಾನವಾಗಿದೆ. ವಾಸ್ತವವಾಗಿ, ಒಮೆಗಾ 3 ಕೊರತೆಯಿಂದಾಗಿ, ಚರ್ಮವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ನೀವು ಪ್ರತಿದಿನ ಒಂದೊಂದು ವಾಲ್‌ನಟ್ಸ್‌ ಸೇವಿಸಿದರೆ ನಿಮ್ಮ ತ್ವಚೆ ಕೂಡಾ ಮೆರುಗಿನಿಂದ ಕೂಡಿರುತ್ತದೆ.(Freepik)

ಚಳಿಗಾಲದಲ್ಲಿ ನಿಮ್ಮ ಚರ್ಮಕ್ಕೆ ಹೆಚ್ಚಿನ ಕಾಂತಿ ನೀಡಲು ಡಾರ್ಕ್ ಚಾಕೊಲೇಟ್‌ ಸೇವಿಸಿ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹಾಗೆಂದ ಮಾತ್ರಕ್ಕೆ ಹೆಚ್ಚು ಹೆಚ್ಚು ಡಾರ್ಕ್‌ ಚಾಕೊಲೇಟ್‌ ತಿನ್ನಬೇಡಿ. ವಾರಕ್ಕೆ ಎರಡು ಅಥವಾ ಮೂರು ದಿನಗಳಲ್ಲಿ ಒಂದೊಂದು ತುಂಡು ಡಾರ್ಕ್‌ ಚಾಕೊಲೇಟ್‌ ತಿಂದರೆ ಸಾಕು. 
icon

(5 / 9)

ಚಳಿಗಾಲದಲ್ಲಿ ನಿಮ್ಮ ಚರ್ಮಕ್ಕೆ ಹೆಚ್ಚಿನ ಕಾಂತಿ ನೀಡಲು ಡಾರ್ಕ್ ಚಾಕೊಲೇಟ್‌ ಸೇವಿಸಿ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹಾಗೆಂದ ಮಾತ್ರಕ್ಕೆ ಹೆಚ್ಚು ಹೆಚ್ಚು ಡಾರ್ಕ್‌ ಚಾಕೊಲೇಟ್‌ ತಿನ್ನಬೇಡಿ. ವಾರಕ್ಕೆ ಎರಡು ಅಥವಾ ಮೂರು ದಿನಗಳಲ್ಲಿ ಒಂದೊಂದು ತುಂಡು ಡಾರ್ಕ್‌ ಚಾಕೊಲೇಟ್‌ ತಿಂದರೆ ಸಾಕು. (Freepik)

ಪ್ರತಿಯೊಬ್ಬರ ಚರ್ಮಕ್ಕೂ ವಿಟಮಿನ್‌ ಸಿ ಬಹಳ ಅಗತ್ಯವಾಗಿದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಫೈಬರ್ ಅಂಶ ಹೆಚ್ಚಾಗಿದೆ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ನೀವು ಫೇಸ್‌ ಪ್ಯಾಕ್‌ ಆಗಿ ಬಳಸಬಹುದು. ಹಾಗೇ ಚಳಿಗಾದಲ್ಲಿ ಕಿತ್ತಳೆ ಹಣ್ಣು ಸೇವಿಸಿದರೆ ನಿಮ್ಮ ಚರ್ಮಕ್ಕೆ ಹೆಚ್ಚಿನ ಕ್ರೀಮ್‌ ಆಗಲೀ ಮಾಯಿಶ್ಚರೈಸರ್‌ ಆಗಲೀ ಅಗತ್ಯವಿಲ್ಲ.
icon

(6 / 9)

ಪ್ರತಿಯೊಬ್ಬರ ಚರ್ಮಕ್ಕೂ ವಿಟಮಿನ್‌ ಸಿ ಬಹಳ ಅಗತ್ಯವಾಗಿದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಫೈಬರ್ ಅಂಶ ಹೆಚ್ಚಾಗಿದೆ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ನೀವು ಫೇಸ್‌ ಪ್ಯಾಕ್‌ ಆಗಿ ಬಳಸಬಹುದು. ಹಾಗೇ ಚಳಿಗಾದಲ್ಲಿ ಕಿತ್ತಳೆ ಹಣ್ಣು ಸೇವಿಸಿದರೆ ನಿಮ್ಮ ಚರ್ಮಕ್ಕೆ ಹೆಚ್ಚಿನ ಕ್ರೀಮ್‌ ಆಗಲೀ ಮಾಯಿಶ್ಚರೈಸರ್‌ ಆಗಲೀ ಅಗತ್ಯವಿಲ್ಲ.(Freepik)

ಮೊಟ್ಟೆಗಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದು ಹಾನಿಗೊಳಗಾದ ಚರ್ಮದ ಅಂಗಾಂಶವನ್ನು ಸರಿಪಡಿಸುತ್ತದೆ ಮತ್ತು ಮುಖದ ಚರ್ಮವನ್ನು ಬಿಗಿಗೊಳಿಸುತ್ತದೆ. ಆದ್ದರಿಂದ ಇತರ ಋತುಗಳಿಗಿಂತ ನೀವು ಚಳಿಗಾಲದಲ್ಲಿ ಮೊಟ್ಟೆಯನ್ನು ಸೇವಿಸಿದರೆ ನಿಮ್ಮ ಚರ್ಮಕ್ಕೆ ಕಳೆ ಇರುತ್ತದೆ. 
icon

(7 / 9)

ಮೊಟ್ಟೆಗಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದು ಹಾನಿಗೊಳಗಾದ ಚರ್ಮದ ಅಂಗಾಂಶವನ್ನು ಸರಿಪಡಿಸುತ್ತದೆ ಮತ್ತು ಮುಖದ ಚರ್ಮವನ್ನು ಬಿಗಿಗೊಳಿಸುತ್ತದೆ. ಆದ್ದರಿಂದ ಇತರ ಋತುಗಳಿಗಿಂತ ನೀವು ಚಳಿಗಾಲದಲ್ಲಿ ಮೊಟ್ಟೆಯನ್ನು ಸೇವಿಸಿದರೆ ನಿಮ್ಮ ಚರ್ಮಕ್ಕೆ ಕಳೆ ಇರುತ್ತದೆ. (Freepik)

ಈ ಸೀಸನ್‌ನಲ್ಲಿ ಚರ್ಮಕ್ಕೆ ವಿಟಮಿನ್‌ ಎ ಕೂಡಾ ಬಹಳ ಅಗತ್ಯವಾಗಿದೆ. ಇದು ಸಿಹಿ ಗೆಣಸಿನಲ್ಲಿ ಹೆಚ್ಚಾಗಿ ದೊರೆಯತ್ತದೆ. ಆದ್ದರಿಂದ ಚಳಿಗಾದಲ್ಲಿ ಸಿಹಿಗೆಣಸು ಸೇವಿಸುವುದರಿಂದ ನಿಮ್ಮ ಚರ್ಮ ಒಡೆಯುವುದನ್ನು ತಪ್ಪಿಸುತ್ತದೆ. ಚರ್ಮಕ್ಕೆ ನೈಸರ್ಗಿಕವಾಗಿ ತೇವಾಂಶ ನೀಡುತ್ತದೆ. ಹಾಗೇ ಚರ್ಮವನ್ನು ಮೃದುಗೊಳಿಸುತ್ತದೆ.  
icon

(8 / 9)

ಈ ಸೀಸನ್‌ನಲ್ಲಿ ಚರ್ಮಕ್ಕೆ ವಿಟಮಿನ್‌ ಎ ಕೂಡಾ ಬಹಳ ಅಗತ್ಯವಾಗಿದೆ. ಇದು ಸಿಹಿ ಗೆಣಸಿನಲ್ಲಿ ಹೆಚ್ಚಾಗಿ ದೊರೆಯತ್ತದೆ. ಆದ್ದರಿಂದ ಚಳಿಗಾದಲ್ಲಿ ಸಿಹಿಗೆಣಸು ಸೇವಿಸುವುದರಿಂದ ನಿಮ್ಮ ಚರ್ಮ ಒಡೆಯುವುದನ್ನು ತಪ್ಪಿಸುತ್ತದೆ. ಚರ್ಮಕ್ಕೆ ನೈಸರ್ಗಿಕವಾಗಿ ತೇವಾಂಶ ನೀಡುತ್ತದೆ. ಹಾಗೇ ಚರ್ಮವನ್ನು ಮೃದುಗೊಳಿಸುತ್ತದೆ.  

ನಮ್ಮ ಚರ್ಮ ಸುಂದರವಾಗಿರಬೇಕೆಂದರೆ ನಮ್ಮ ರಕ್ತ ಕೂಡಾ ಚೆನ್ನಾಗಿರಬೇಕು. ಬೀಟ್‌ರೂಟ್‌ನಲ್ಲಿ ಬ್ಲೆಡ್‌ ಪ್ಯೂರಿಫೈ ಮಾಡುವ ಗುಣ ಇದೆ. ಬೀಟ್‌ರೂಟ್‌, ಕೊತ್ತಂಬರಿ ಸೊಪ್ಪು, ಆಮ್ಲಾ ಸೇರಿಸಿ ತಯಾರಿಸಿದ ಜ್ಯೂಸ್‌ ಸೇವಿಸಿದರೆ ನಿಮ್ಮ ಚರ್ಮಕ್ಕೆ ಬಹಳ ಒಳ್ಳೆಯದು. ಚಳಿಗಾದಲ್ಲಿ ಈ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಿ ನಿಮ್ಮ ಚರ್ಮದ ಅಂದವನ್ನು ಕಾಪಾಡಿಕೊಳ್ಳಿ.   
icon

(9 / 9)

ನಮ್ಮ ಚರ್ಮ ಸುಂದರವಾಗಿರಬೇಕೆಂದರೆ ನಮ್ಮ ರಕ್ತ ಕೂಡಾ ಚೆನ್ನಾಗಿರಬೇಕು. ಬೀಟ್‌ರೂಟ್‌ನಲ್ಲಿ ಬ್ಲೆಡ್‌ ಪ್ಯೂರಿಫೈ ಮಾಡುವ ಗುಣ ಇದೆ. ಬೀಟ್‌ರೂಟ್‌, ಕೊತ್ತಂಬರಿ ಸೊಪ್ಪು, ಆಮ್ಲಾ ಸೇರಿಸಿ ತಯಾರಿಸಿದ ಜ್ಯೂಸ್‌ ಸೇವಿಸಿದರೆ ನಿಮ್ಮ ಚರ್ಮಕ್ಕೆ ಬಹಳ ಒಳ್ಳೆಯದು. ಚಳಿಗಾದಲ್ಲಿ ಈ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಿ ನಿಮ್ಮ ಚರ್ಮದ ಅಂದವನ್ನು ಕಾಪಾಡಿಕೊಳ್ಳಿ.   


IPL_Entry_Point

ಇತರ ಗ್ಯಾಲರಿಗಳು