ಕನ್ನಡ ಸುದ್ದಿ  /  Lifestyle  /  Foods Which Helps Children For Good Memory Power

Memory Power of Children: ನಿಮ್ಮ ಮಗುವಿಗೂ ಜ್ಞಾಪಕಶಕ್ತಿ ಕೊರತೆ ಇದ್ಯಾ...ಅವರ ನೆನಪಿನ ಶಕ್ತಿ ಹೆಚ್ಚಿಸುವ ಸೂಪರ್‌ ಫುಡ್‌ಗಳು ಇವು

ಕೆಲವು ಮಕ್ಕಳಿಗೆ ನೆನಪಿನ ಶಕ್ತಿ ಬಹಳ ಕಡಿಮೆ ಇರುತ್ತದೆ. ಏನು ಹೇಳಿದರೂ ಅದನ್ನು ಸುಲಭವಾಗಿ ಮರೆಯುತ್ತಾರೆ. ಯಾವ ವಿಚಾರದ ಬಗ್ಗೆಯೂ, ಅದರಲ್ಲೂ ಓದಿನ ಮೇಲೆ ಸರಿಯಾಗಿ ಗಮನ ಕೇಂದ್ರೀಕರಿಸಲು ಆಗುವುದಿಲ್ಲ. ಬದಲಾಗುತ್ತಿರುವ ಜೀವನಶೈಲಿಯಿಂದ ಯುವಕರು ಮತ್ತು ಮಕ್ಕಳಲ್ಲಿ ಮರೆವಿನ ಸಮಸ್ಯೆ ಹೆಚ್ಚಾಗುತ್ತಿದೆ.

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳು
ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರಗಳು (PC:‍ Freepik)

ಪ್ರತಿಯೊಬ್ಬರಿಗೂ ಜ್ಞಾಪಕ ಶಕ್ತಿ ಎನ್ನುವುದು ಬಹಳ ಅಗತ್ಯ. ಕೆಲವರಿಗೆ ನೆನಪಿನ ಶಕ್ತಿ ಕಡಿಮೆ ಇದ್ದರೆ, ಕೆಲವರಿಗೆ ಹೆಚ್ಚಿರುತ್ತದೆ. ವಯಸ್ಸು ಹೆಚ್ಚುತ್ತಿದ್ದಂತೆ ಮೆದುಳಿನ ಕಾರ್ಯವೂ ನಿಧಾನಗೊಳ್ಳುತ್ತದೆ. ಚಿಕ್ಕ ಚಿಕ್ಕ ವಿಷಯಗಳೂ ಮರೆತು ಹೋಗುತ್ತವೆ. ಈ ಸಮಸ್ಯೆ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ. ಆದರೆ ಈಗಿನ ಕಾಲದಲ್ಲಿ ಇದು ಮಕ್ಕಳಿಗೂ ಕಾಡುತ್ತಿದೆ.

ಕೆಲವು ಮಕ್ಕಳಿಗೆ ನೆನಪಿನ ಶಕ್ತಿ ಬಹಳ ಕಡಿಮೆ ಇರುತ್ತದೆ. ಏನು ಹೇಳಿದರೂ ಅದನ್ನು ಸುಲಭವಾಗಿ ಮರೆಯುತ್ತಾರೆ. ಯಾವ ವಿಚಾರದ ಬಗ್ಗೆಯೂ, ಅದರಲ್ಲೂ ಓದಿನ ಮೇಲೆ ಸರಿಯಾಗಿ ಗಮನ ಕೇಂದ್ರೀಕರಿಸಲು ಆಗುವುದಿಲ್ಲ. ಬದಲಾಗುತ್ತಿರುವ ಜೀವನಶೈಲಿಯಿಂದ ಯುವಕರು ಮತ್ತು ಮಕ್ಕಳಲ್ಲಿ ಮರೆವಿನ ಸಮಸ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಜ್ಞಾಪಕಶಕ್ತಿ ಮತ್ತು ಏಕಾಗ್ರತೆ ಕಡಿಮೆಯಾಗುತ್ತಿದೆ. ಈ ಸಮಸ್ಯೆ ಆದರೆ ಪೋಷಕರು ಮಕ್ಕಳನ್ನು ವೈದ್ಯರ ಬಳಿ ಕರೆದೊಯ್ಯಬೇಕು. ಹಾಗೇ ಕೆಲವು ಆಹಾರ ಪದ್ಧತಿಗಳನ್ನು ಬದಲಾಯಿಸಿಕೊಳ್ಳಬೇಕು. ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕೆಲವೊಂದು ಆಹಾರಗಳು ಬಹಳ ಸಹಾಯ ಮಾಡುತ್ತವೆ. ಆ ಆಹಾರಗಳು ಯಾವುವು ನೋಡೋಣ.

ವಾಲ್‌ನಟ್ಸ್

ವಾಲ್‌ನಟ್ಸ್‌ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇವು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಇದರಲ್ಲಿರುವ ಆಲ್ಫಾ ಲಿನೋಲೆನಿಕ್ ಆಮ್ಲವು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ವಿಟಮಿನ್‌ ಸಿ ಅಂಶವಿರುವ ಹಣ್ಣುಗಳು

ವಿಟಮಿನ್‌ ಸಿ ಅಂಶ ಹೇರಳವಾಗಿರುವ ಮೂಸಂಬಿ, ಕಿತ್ತಳೆ ಹಣ್ಣು, ಸೀಬೆ ಹಣ್ಣು, ನೆಲ್ಲಿಕಾಯಿಯನ್ನು ಕೂಡಾ ಮಕ್ಕಳಿಗೆ ನೀಡಿದರೆ ನೆನಪಿನ ಶಕ್ತಿ ಹೆಚ್ಚುತ್ತದೆ. ಮಕ್ಕಳು ಇದನ್ನು ಹಾಗೇ ತಿನ್ನಲು ಇಷ್ಟಪಡದಿದ್ದರೆ ಜ್ಯೂಸ್‌ ತಯಾರಿಸಿ ಕೂಡಾ ನೀಡಬಹುದು.

ಹಸಿರು ತರಕಾರಿಗಳು

ಹಸಿರು ತರಕಾರಿಗಳು ಹಾಗೂ ಸೊಪ್ಪುಗಳಲ್ಲಿ ವಿಟಮಿನ್ ಜೊತೆಗೆ ವಿವಿಧ ಪೋಷಕಾಂಶಗಳು ಇರುತ್ತವೆ. ಇದು ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಮಕ್ಕಳಿಗೆ ಪ್ರತಿದಿನದ ಊಟದಲ್ಲಿ ಹಸಿರು ತರಕಾರಿಗಳನ್ನು ನೀಡುತ್ತಾ ಬಂದರೆ ಖಂಡಿತ ಅವರ ನೆನಪಿನ ಶಕ್ತಿ ಸುಧಾರಿಸುತ್ತದೆ.

ಹಾಲು, ಮೊಸರು

ಹಾಲು, ಮೊಸರು, ಚೀಸ್ ಮತ್ತು ಇತರ ಡೈರಿ ಉತ್ಪನ್ನಗಳಲ್ಲಿ ಪ್ರೋಟೀನ್ ಮತ್ತು ಬಿ ಜೀವಸತ್ವ ಸಮೃದ್ಧವಾಗಿವೆ. ಇವುಗಳನ್ನು ಸೇವಿಸಿದರೆ ಮೆದುಳಿನ ಅಂಗಾಂಶ ಮತ್ತು ಕಿಣ್ವಗಳ ಬೆಳವಣಿಗೆಗೆ ಒಳ್ಳೆಯದು. ಹಾಲಿನಲ್ಲಿ ಸಮೃದ್ಧವಾಗಿರುವ ಕ್ಯಾಲ್ಸಿಯಂ, ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.

ಮೀನು

ಎಣ್ಣೆಯುಕ್ತ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಅಧಿಕವಾಗಿವೆ. ಇದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಒಮೆಗಾ -3 ಕೊಬ್ಬಿನಾಮ್ಲಗಳು ಜೀವಕೋಶದ ರಚನೆಗೆ ಅವಶ್ಯಕವಾಗಿದೆ. ಸಾಲ್ಮನ್, ಮ್ಯಾಕೆರೆಲ್, ಸಾರ್ಡೀನ್ ಮತ್ತು ಹೆರಿಂಗ್ ಮುಂತಾದ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಅಧಿಕವಾಗಿವೆ. ವಾರಕ್ಕೊಮ್ಮೆಯಾದರೂ ಇವುಗಳನ್ನು ಮಕ್ಕಳಿಗೆ ತಿನ್ನಿಸುವುದರಿಂದ ಅವರ ನೆನಪಿನ ಶಕ್ತಿ ಹೆಚ್ಚುತ್ತದೆ. ಅದರಲ್ಲೂ ಮಕ್ಕಳಿಗೆ ಮೀನಿನ ತಲೆ ತಿನ್ನಿಸಿದರೆ ಒಳ್ಳೆಯದು.

ಬೆಂಡೆಕಾಯಿ

ಬೆಂಡೆಕಾಯಿ ಮಕ್ಕಳಿಗೆ ಮಾತ್ರವಲ್ಲ ಹಿರಿಯರ ಆರೋಗ್ಯಕ್ಕೆ ಕೂಡಾ ಬಹಳ ಒಳ್ಳೆಯದು. ವಾರಕ್ಕೆ ಒಮ್ಮೆಯಾದರೂ ಮಕ್ಕಳಿಗೆ ಬೆಂಡೆಕಾಯಿಂದ ಮಾಡಿದ ಆಹಾರ ಪದಾರ್ಥಗಳನ್ನು ನೀಡಿ.