Vitamins for old Age People: ವಯಸ್ಸಾಯ್ತು ಅನ್ನೋ ಚಿಂತೆ ಬಿಡಿ..ಸದಾ ಯಂಗ್,ಎನರ್ಜಿಟಿಕ್ ಇರಲು ಈ ಆಹಾರಗಳನ್ನು ಸೇವಿಸಿ ಸಾಕು
ಕ್ಯಾಲ್ಸಿಯಂ ಹೀರಿಕೊಳ್ಳಲು ನಮ್ಮ ದೇಹಕ್ಕೆ ವಿಟಮಿನ್ ಡಿ ಅಗತ್ಯವಿದೆ. ಆಸ್ಟಿಯೊಪೊರೋಸಿಸ್ ತಡೆಗಟ್ಟಲು ಕ್ಯಾಲ್ಸಿಯಂ ಅತ್ಯಗತ್ಯ. ವಿಟಮಿನ್ ಡಿ ಸಾಮಾನ್ಯ ಸ್ನಾಯುಗಳು, ನರಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪ್ರತಿವರ್ಷ ನಮ್ಮ ಹುಟ್ಟುಹಬ್ಬದಂದು ಸ್ನೇಹಿತರು, ಪ್ರೀತಿಪಾತ್ರರು ನಮಗೆ ಗಿಫ್ಟ್ ಕೊಟ್ಟು ಶುಭ ಕೋರಿದಾಗ ಆಗುವ ಸಂತೋಷ ಅಷ್ಟಿಷ್ಟಲ್ಲ. ಒಂದೆಡೆ ಬರ್ತ್‌ಡೇ ಖುಷಿ ಆದರೆ, ದಿನೇ ದಿನೆ ವಯಸ್ಸು ಜಾಸ್ತಿ ಆಗ್ತಿದೆ ಅನ್ನೋ ಚಿಂತೆ ಮತ್ತೊದೆಡೆ. ಅಷ್ಟಕ್ಕೆ ಏಕೆ ಚಿಂತೆ ಮಾಡಬೇಕು? ನಿಮ್ಮ ಲೈಫ್ ಸ್ಟೈಲ್ ಬದಲಿಸುವುದರಿಂದ ಸದಾ ನೀವು ಯಂಗ್ ಹಾಗೂ ಎನರ್ಜಿಟಿಕ್ ಆಗಿರಬಹುದು.
ವಯಸ್ಸಿಗೆ ಅನುಗುಣವಾಗಿ ನಾವು ಆಹಾರ ಸೇವಿಸಬೇಕು ಹಾಗೂ ವ್ಯಾಯಾಮಗಳನ್ನು ಮಾಡಬೇಕು. ಬಾಲ್ಯ, ಯೌವನ, ಮಧ್ಯವಯಸ್ಸು, ವೃದ್ಧಾಪ್ಯ ಹೀಗೆ ನಮ್ಮ ಜೀವನದ ಹಂತಗಳನ್ನು ಅವಲಂಬಿಸಿ ನಾವು ಮಾಡುವ ಚಟುವಟಿಕೆಗಳ ಆಧಾರದ ಮೇಲೆ ಆ ಸಮಯದಲ್ಲಿ ದೇಹಕ್ಕೆ ಸೂಕ್ತವಾದ ಜೀವಸತ್ವಗಳು ಮತ್ತು ಖನಿಜ ಲವಣಗಳು ಬೇಕಾಗುತ್ತವೆ. ಆದರೆ ವಯಸ್ಸು ಹೆಚ್ಚಾದಂತೆ ಕೆಲವು ವಿಟಮಿನ್‌ಗಳ ಅವಶ್ಯಕತೆ ಬಹಳ ಹೆಚ್ಚಿರುತ್ತದೆ.
ವಿಟಮಿನ್ ಬಿ6
ವಯಸ್ಸಾದಂತೆ ನಮ್ಮ ಜ್ಞಾಪಕಶಕ್ತಿ ಕ್ಷೀಣಿಸುತ್ತದೆ. ಒತ್ತಡ ಮತ್ತು ಅನಾರೋಗ್ಯಕರ ಜೀವನಶೈಲಿಯಂತಹ ಅನೇಕ ಅಂಶಗಳಿಂದ ನಾವು ಜ್ಞಾಪಕಶಕ್ತಿ ಕಳೆದುಕೊಳ್ಳುತ್ತೇವೆ. ಆದರೆ ನೀವು ವಿಟಮಿನ್ ಬಿ 6 ಸೇವಿಸುವುದರಿಂದ ಈ ಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಇದು ದ್ವಿದಳ ಧಾನ್ಯಗಳು, ಯಕೃತ್ತು ಮತ್ತು ಮೀನುಗಳಲ್ಲಿ ಕಂಡುಬರುತ್ತದೆ.
ವಿಟಮಿನ್ ಬಿ 12
ವಿಟಮಿನ್ ಬಿ 12, ರಕ್ತ ಮತ್ತು ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ವಿಟಮಿನ್ ಬಿ 12 ಮಾಂಸ, ಮೀನು, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳಲ್ಲಿ ಕಂಡುಬರುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 30 ಪ್ರತಿಶತದಷ್ಟು ಜನರು ಅಟ್ರೋಫಿಕ್ ಜಠರದುರಿತವನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿ, ದೇಹವು ಆಹಾರದಿಂದ ವಿಟಮಿನ್ ಬಿ 12 ಅನ್ನು ಹೀರಿಕೊಳ್ಳುವುದಿಲ್ಲ.
ವಿಟಮಿನ್ ಡಿ
ಕ್ಯಾಲ್ಸಿಯಂ ಹೀರಿಕೊಳ್ಳಲು ನಮ್ಮ ದೇಹಕ್ಕೆ ವಿಟಮಿನ್ ಡಿ ಅಗತ್ಯವಿದೆ. ಆಸ್ಟಿಯೊಪೊರೋಸಿಸ್ ತಡೆಗಟ್ಟಲು ಕ್ಯಾಲ್ಸಿಯಂ ಅತ್ಯಗತ್ಯ. ವಿಟಮಿನ್ ಡಿ ಸಾಮಾನ್ಯ ಸ್ನಾಯುಗಳು, ನರಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಪಡೆದರೂ, ವಯಸ್ಸಾದಂತೆ, ನಿಮ್ಮ ದೇಹವು ಸೂರ್ಯನ ಬೆಳಕನ್ನು ವಿಟಮಿನ್ ಡಿ ಆಗಿ ಪರಿವರ್ತಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಮತ್ತೊಂದೆಡೆ, ಈ ವಿಟಮಿನ್ ಡಿ ಆಹಾರದ ಮೂಲಕ ವ್ಯಾಪಕವಾಗಿ ಲಭ್ಯವಿಲ್ಲ. ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್‌ಗಳು ಈ ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿರುವ ಆಹಾರಗಳಾಗಿವೆ. ಹಾಗಾಗಿ ಆಗಾಗ್ಗೆ ಈ ಆಹಾರಗಳನ್ನು ಸೇವಿಸಿ.
ಕ್ಯಾಲ್ಸಿಯಂ
ವಯಸ್ಸಾದಂತೆ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದು ನಿಮ್ಮ ಮೂಳೆಗಳು ದುರ್ಬಲಗೊಳ್ಳಲು ಕಾರಣವಾಗುತ್ತದೆ. ಆಸ್ಟಿಯೊಪೊರೋಸಿಸ್ ಕೂಡಾ ಮೂಳೆಗೆ ಸಂಬಂಧಿಸಿದಂತೆ ಒಂದು ಸಮಸ್ಯೆಯಾಗಿದೆ. ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ. ನೀವು ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವಿಸಿದಾಗ ನಿಮ್ಮ ಸ್ನಾಯುಗಳು, ಜೀವಕೋಶಗಳು, ನರಗಳು ಮತ್ತು ರಕ್ತನಾಳಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ. 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಹೆಚ್ಚು ಕ್ಯಾಲ್ಸಿಯಂ ಸೇವಿಸಬೇಕು. ಹಾಲು ಮತ್ತು ಮೊಸರು ಮುಂತಾದ ಆಹಾರಗಳಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ.
ಒಮೆಗಾ-3
ಒಮೆಗಾ -3 ಕೊಬ್ಬಿನಾಮ್ಲವಾಗಿದೆ. ಇದು ನಿಮ್ಮ ಕಣ್ಣು ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಇದು ಆಲ್ಜೈಮರ್, ಸಂಧಿವಾತ ಮತ್ತು ಕುರುಡುತನದಂತಹ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪ್ರತಿವಿಷವಾಗಿದೆ. ಮೀನು, ವಾಲ್‌ನಟ್ಸ್, ಕ್ಯಾನೋಲ ಎಣ್ಣೆ ಮತ್ತು ಅಗಸೆಬೀಜಗಳಲ್ಲಿ ಒಮೆಗಾ -3 ಅಂಶಗಳಿವೆ.
ಪೊಟ್ಯಾಸಿಯಮ್
ನಿಮ್ಮ ದೇಹವು ನಿರ್ವಹಿಸುವ ಪ್ರತಿಯೊಂದು ಕಾರ್ಯದಲ್ಲಿ ಪೊಟ್ಯಾಸಿಯಮ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಹೃದಯ, ಮೂತ್ರಪಿಂಡಗಳು, ಸ್ನಾಯುಗಳು ಮತ್ತು ನರಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಖಾತ್ರಿಗೊಳಿಸುತ್ತದೆ. ಇದು ಹೃದಯಾಘಾತ, ಅಧಿಕ ರಕ್ತದೊತ್ತಡ ಮತ್ತು ಆಸ್ಟಿಯೊಪೊರೋಸಿಸ್ ಅನ್ನು ಕೂಡಾ ತಡೆಯುತ್ತದೆ. ವಯಸ್ಸು ಹೆಚ್ಚಾದಂತೆ, ರೋಗಗಳಿಗೆ ತುತ್ತಾಗುವ ಅಪಾಯವು ಹೆಚ್ಚಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಪೊಟ್ಯಾಸಿಯಮ್ ಅಗತ್ಯವಿದೆ. ಒಣಗಿದ ಏಪ್ರಿಕಾಟ್, ಬಾಳೆಹಣ್ಣು, ಹಾಲು, ಲೆಟ್ಯೂಸ್ ಮತ್ತು ಮೊಸರಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿದೆ.
ಮೆಗ್ನೀಸಿಯಂ
ಮೆಗ್ನೀಸಿಯಮ್ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್. ಇದು ಮೂಳೆಗೆ ಬಲ ನೀಡಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಕೂಡಾ ಇದು ಒಳ್ಳೆಯದು. ಆದರೆ ವಿವಿಧ ಕಾಯಿಲೆಗಳಿಗೆ ಔಷಧಿಗಳ ದೀರ್ಘಾವಧಿಯ ಬಳಕೆಯು ಮೆಗ್ನೀಸಿಯಮ್ ಕೊರತೆಗೆ ಕಾರಣವಾಗಬಹುದು. ಡ್ರೈ ಫ್ರೂಟ್ಸ್, ಧಾನ್ಯಗಳು, ಸೋಯಾಬೀನ್, ಎಳ್ಳು, ಬಾಳೆಹಣ್ಣು, ಮೀನು, ಆವಕಾಡೊ ಹಾಗೂ ಇನ್ನಿತರ ಆಹಾರಗಳಲ್ಲಿ ಮೆಗ್ನೀಸಿಯಂ ಅಂಶ ಹೆಚ್ಚಾಗಿದೆ.
ಫೈಬರ್
ಯಾವುದೇ ವಯಸ್ಸಿನ ಜನರಿಗೆ ಫೈಬರ್ ಮುಖ್ಯವಾಗಿದೆ. ಆದರೆ ವಯಸ್ಸಾದಂತೆ ಫೈಬರ್ ಅಂಶ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಜೀರ್ಣಕ್ರಿಯೆಯನ್ನು ಸರಾಗವಾಗಿ ಮಾಡುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಮತ್ತು ಗ್ಲೂಕೋಸ್ ಹೆಚ್ಚಾಗುವುದನ್ನು ತಡೆಯುತ್ತದೆ.
ಆದ್ದರಿಂದ ಇಂತಹ ಆಹಾರಗಳನ್ನು ಹೆಚ್ಚು ಸೇವಿಸಿ ಆರೋಗ್ಯವಂತರಾಗಿ.
ವಿಭಾಗ