ಕನ್ನಡ ಸುದ್ದಿ  /  Lifestyle  /  France Balenciaga Introduced New Towel Skirt At 76,000 Rupees For Spring 2024 Collection Indians Trolled New Fashion Rsm

ಫ್ಯಾಷನ್‌ಪ್ರಿಯರೇ ನಿಮಗಾಗಿ ಫ್ರಾನ್ಸ್‌ ಕಂಪನಿ ಪರಿಚಯಿಸಿದೆ ಟವೆಲ್‌ ಸ್ಕರ್ಟ್‌; ಬೆಲೆ ಕೇಳಿ ಬಿದ್ದೂ ಬಿದ್ದು ನಕ್ಕ ಭಾರತೀಯರು

Towel Skirt: ಸೊಂಟದ ಭಾಗದಿಂದ ಮೊಣಕಾಲಿನವರೆಗೂ ಧರಿಸಬಹುದಾದ ಈ ಟವೆಲ್‌ ಬೂದು ಬಣ್ಣದಲ್ಲಿ ದೊರೆಯುತ್ತದೆ. ಇದು ಕಾಟನ್‌ ಆಗಿದ್ದು 2 ಬಟನ್‌ಗಳನ್ನು ಹೊಂದಿದೆ. ಪುರುಷರು ಮಾತ್ರವಲ್ಲ ಮಹಿಳೆಯರು/ಯುವತಿಯರು ಕೂಡಾ ಈ ಟವೆಲ್‌ ಸ್ಕರ್ಟ್‌ ಧರಿಸಬಹುದು.

ಫ್ರಾನ್ಸ್‌ ಕಂಪನಿ ಪರಿಚಯಿಸಿರುವ ಟವೆಲ್‌ ಸ್ಕರ್ಟ್‌
ಫ್ರಾನ್ಸ್‌ ಕಂಪನಿ ಪರಿಚಯಿಸಿರುವ ಟವೆಲ್‌ ಸ್ಕರ್ಟ್‌ (PC: Balenciaga)

Towel Skirt:ಇದು ಫ್ಯಾಷನ್‌ ಯುಗ, ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರಿಗೆ ಅವರ ವಯಸ್ಸಿಗೆ ಅನುಗುಣವಾಗಿ ಫ್ಯಾಷನ್‌ ಟ್ರೆಂಡ್‌ ಸೃಷ್ಟಿಯಾಗುತ್ತಿದೆ. ಫ್ಯಾಷನ್‌ ಕಂಪನಿಗಳು ಕೂಡಾ ಗ್ರಾಹಕರನ್ನು ಸೆಳೆಯಲು ಕೂಡಾ ವಿಭಿನ್ನ ರೀತಿಯ ಫ್ಯಾಷನ್‌ ಆಕ್ಸೆಸರಿಗಳನ್ನು ಪರಿಚಯಿಸಲು ಸದಾ ಮುಂದಿರುತ್ತದೆ. ಇದೇ ನಿಟ್ಟಿನಲ್ಲಿ ಈಗ ಫ್ರಾನ್ಸ್‌ ಮೂಲದ ಫ್ಯಾಷನ್‌ ಕಂಪನಿಯೊಂದು ಟವೆಲ್‌ ಸ್ಕರ್ಟನ್ನು ಪರಿಚಯಿಸಿದೆ.

ಟವೆಲ್‌ ಸ್ಕರ್ಟ್‌ ಬೆಲೆ 76,000 ರೂಪಾಯಿ

ನಾವೆಲ್ಲರೂ ಟವೆಲನ್ನು ಸ್ನಾನಕ್ಕೆ ಬಳಸುತ್ತೇವೆ. ಪುರುಷರು ಕೆಲವೊಮ್ಮೆ ಪಂಚೆಯಂತೆ ಟವೆಲ್‌ ಸುತ್ತಿಕೊಳ್ಳುತ್ತಾರೆ. ಆದರೆ ಇದೀಗ ಇದೇ ಫ್ಯಾಷನ್‌ ಆಗಿದೆ. ಫ್ರಾನ್ಸ್‌ ಮೂಲದ ಬಾಲೆನ್ಸಿಯಾಗ ಎಂಬ ಕಂಪನಿ ಟವೆಲ್‌ ಸ್ಕರ್ಟನ್ನು ಪರಿಚಯಿಸಿದೆ ಅಂದ ಹಾಗೆ ಇದರ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 76,990 ರೂಪಾಯಿ. ಈ ಬೆಲೆಯಲ್ಲಿ ನಾವು ಟವೆಲ್‌ ಫ್ಯಾಕ್ಟರಿಯನ್ನೇ ಶುರು ಮಾಡಬಹುದು ಅಂತೀರಾ? ಸದ್ಯಕ್ಕೆ ಈ ಟವೆಲ್‌ ಸ್ಕರ್ಟ್‌ ಫೋಟೋಗಳು, ಇದನ್ನು ಧರಿಸಿರುವ ಮಾಡೆಲ್‌ಗಳ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಜನರು ಇದನ್ನು ನೋಡಿ 'ಕ್ರೇಜಿ' ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

ಪ್ಯಾಂಟ್‌ ಮೇಲ್ಭಾಗ ಧರಿಸುವ ಟವೆಲ್‌ ಸ್ಕರ್ಟ್‌

ಈ ಟವೆಲ್‌ ಸ್ಕರ್ಟನ್ನು ನೀವು ಒಳ ಉಡುಪಿನ ಮೇಲ್ಬಾಗ ಧರಿಸುವಂತಿಲ್ಲ. ಸೂಪರ್‌ ಮ್ಯಾನ್‌ ರೀತಿ ಪ್ಯಾಂಟ್‌ ಮೇಲೆ ಧರಿಸಬೇಕು. ಇದೇ ಈ ಟವೆಲ್‌ನ ಸ್ಪೆಷಾಲಿಟಿ. ಸೊಂಟದ ಭಾಗದಿಂದ ಮೊಣಕಾಲಿನವರೆಗೂ ಧರಿಸಬಹುದಾದ ಈ ಟವೆಲ್‌, ಬೂದು ಬಣ್ಣದಲ್ಲಿ ದೊರೆಯುತ್ತದೆ. ಇದು ಕಾಟನ್‌ ಆಗಿದ್ದು 2 ಬಟನ್‌ಗಳನ್ನು ಹೊಂದಿದೆ. ಪುರುಷರು ಮಾತ್ರವಲ್ಲ ಮಹಿಳೆಯರು/ಯುವತಿಯರು ಕೂಡಾ ಈ ಟವೆಲ್‌ ಸ್ಕರ್ಟ್‌ ಧರಿಸಬಹುದು. ಎಂಬ್ರಾಯಿಡರಿ ಟವೆಲ್‌ ಸ್ಕರ್ಟ್‌, ಇಟಲಿಯಲ್ಲಿ ತಯಾರಾಗುತ್ತಿದ್ದು ಅದೂ ಕೂಡಾ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ.

ಟ್ರೋಲ್‌ ಆಯ್ತು ಹೊಸ ಫ್ಯಾಷನ್

ಸದ್ಯಕ್ಕೆ ಈ ಟವೆಲ್ ಸ್ಕರ್ಟ್ ಇಂಟರ್‌ನೆಟ್‌ನಲ್ಲಿ ಬಹಳ ಗಮನ ಸೆಳೆಯುತ್ತಿದೆ. ಆದರೆ ನೆಟಿಜನ್ಸ್‌ ಇದೂ ಒಂದು ಫ್ಯಾಷನಾ? ಎಂದು ಟೀಕಿಸುತ್ತಿದ್ದಾರೆ. ಕೆಲವರು ಅಪಹಾಸ್ಯ ಮಾಡುತ್ತಿದ್ದಾರೆ, ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಅಷ್ಟು ಬೆಲೆ ತೆತ್ತು ಖರೀದಿಸಬೇಕಾ? ನಮ್ಮಲ್ಲಿ 100 ರೂಪಾಯಿ ಕೊಟ್ಟರೆ ಇಂತಹ ಟವೆಲ್‌ಗಳು ಬೇಕಾದಷ್ಟು ದೊರೆಯುತ್ತವೆ ಎಂದು ಕಾಮೆಂಟ್‌ ಮಾಡ್ತಿದ್ದಾರೆ. ಸ್ವೀಡಿಷ್‌ ಡೆಕೊರ್‌ ಕಂಪನಿಯೊಂದು ಈ ಟವೆಲ್‌ ಸ್ಕರ್ಟ್‌ ಕಲ್ಪನೆಯನ್ನು ಟ್ರೋಲ್‌ ಮಾಡಿದೆ. ಮಾಡೆಲ್‌ ಒಬ್ಬರು ಬಿಳಿ ಬಣ್ಣದ ಟವೆಲ್‌ ಸುತ್ತಿಕೊಂಡಿರುವ ಫೋಟೋವೊಂದನ್ನು ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, ಇದನ್ನು 16 ಯೂರೋಸ್‌ಗೆ (1,700 ರೂ.) ತಯಾರಿಸಿದ್ದೇವೆ ಎಂದು ಬರೆದುಕೊಂಡಿದೆ. ''ಹೊಸ VINARN ಟವೆಲ್‌ ಸ್ಕರ್ಟನ್ನು ಪರಿಚಯಿಸುತ್ತಿದ್ದೇವೆ. 2024 ಸ್ಪ್ರಿಂಗ್‌ ಫ್ಯಾಷನ್‌ಗೆ ಅವಶ್ಯಕತೆಯಿರುವ ಪ್ರಾಡೆಕ್ಟ್‌'' ಎಂದು ಕ್ಯಾಪ್ಷನ್‌ ಬರೆದಿದೆ.

ಬಿದ್ದೂ ಬಿದ್ದು ನಕ್ಕ ಭಾರತೀಯರು

ಈ ಟವೆಲ್‌ ಸ್ಕರ್ಟ್‌ ಸುದ್ದಿ ಕೇಳಿ ಭಾರತೀಯರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ. ಇಂದು ನೀವು ಯಾವ ಔಟ್‌ಫಿಟ್‌ ಧರಿಸಬೇಕು ಎಂದು ಇನ್ನೂ ಡಿಸೈಡ್‌ ಮಾಡಿಲ್ಲ ಎಂದಾಂದ್ರೆ ಬಾಲೆನ್ಸಿಯಾಗ ಕಂಪನಿ ಪರಿಚಯಿಸಿರುವ ಹೊಸ ಟವೆಲ್‌ ಸ್ಕರ್ಟನ್ನು ಟ್ರೈ ಮಾಡಿ ಎಂದು ಯೂಸರ್‌ವೊಬ್ಬರು ಕಾಮೆಂಟ್‌ ಮಾಡಿದ್ದಾರೆ. ನನ್ನ ಅಮ್ಮ ನನಗೆ ಪ್ರತಿದಿನ ಫ್ಯಾಷನ್‌ ಡಿಸೈನಿಂಗ್‌ ಮಾಡುತ್ತಾರೆ, ಅವರನ್ನು ನಿಮ್ಮ ಕಂಪನಿಯ ಹೆಡ್‌ ಆಗಿ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ತಮಾಷೆ ಮಾಡುತ್ತಿದ್ದಾರೆ. ಭಾರತೀಯ ಅಪ್ಪಂದಿರು ಪ್ರತಿದಿನ ಈ ಫ್ಯಾಷನ್‌ ಫಾಲೋ ಮಾಡ್ತಾರೆ ಅಂತ ಆ ಫ್ಯಾಷನ್‌ ಕಂಪನಿಗೆ ಗೊತ್ತಿಲ್ಲ ಎನಿಸುತ್ತದೆ ಎಂದು ಮತ್ತೊಬ್ಬರು ಯೂಸರ್‌ ಕಾಮೆಂಟ್‌ ಮಾಡಿದ್ದಾರೆ.