'ದಶರಥ'ನ ಮುಂದೆ ಆಂಗ್ಲರು ಥರಥರ; ಸಂಗೂರ ಕರಿಯಪ್ಪ ಯರೆಶಿಮಿ- ವೀರಮ್ಮ ದಂಪತಿಯ ಸಾಹಸಗಾಥೆ ಇದು
ಭಾರತ ಸ್ವಾತಂತ್ರ್ಯ ಹೋರಾಟದ ಕಥೆಯೇ ರೋಚಕ ಎಂದಾದರೆ ಇನ್ನು ಆ ಹೋರಾಟ ಎಷ್ಟು ರೋಚಕವಾಗಿರಬಹುದು ನೀವೇ ಊಹಿಸಿ. ಒಂದು ಕೈ ಕಳೆದುಕೊಂಡು ಹೋರಾಡಿದ ಸಂಗೂರು ಕರಿಯಪ್ಪ ಅವರ ಸ್ವಾತಂತ್ರ್ಯ ಹೋರಾಟದ ಪರಿ ಇಲ್ಲಿದೆ ಗಮನಿಸಿ.
ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರು ಹಲವರು ಆದರೆ ಹೆಸರು ಮಾತ್ರ ಕೆಲವರದ್ದು ಪ್ರಚಲಿತ. ಇನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗದೇ ಮಡಿದ ವೀರರು ಅದೆಷ್ಟು ಜನರಿದ್ದಾರೋ ಯಾರು ಬಲ್ಲರು? ಅಂತವರಲ್ಲಿ ತಮ್ಮ ತಾಲೂಕು, ಜಿಲ್ಲೆಗಳಲ್ಲಿ ಯಾರು ಈ ರೀತಿ ಹೋರಾಟದಲ್ಲಿ ಪಾಲ್ಗೊಂಡು ಮಡಿದು ಅಥವಾ ಗೆದ್ದಿದ್ದಾರೋ ಅಂತವರನ್ನು ಗೌರವಿಸುವವರು ಕೆಲವರಿದ್ದಾರೆ. ಅಂತವರಿಂದ ಇನ್ನೊಂದಷ್ಟು ಜನರ ಹೆಸರು ನಮಗೆ ಇಂದಿಗೂ ಸಿಗುತ್ತಿದೆ. ಅದೇ ರೀತಿ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ತೊಡಗಿಸಿಕೊಂಡ ಹಾವೇರಿಯ ಸಂಗೂರು ಗ್ರಾಮದ, ಕರಿಯಪ್ಪ ಯರೆಶಿಮಿಯವರು ಅವರ ಬಗ್ಗೆ ಮತ್ತವರ ತ್ಯಾಗದ ಬಗ್ಗೆ ಇಲ್ಲಿದೆ ಮಾಹಿತಿ.
ಭಾರತ ಸ್ವಾತಂತ್ರ್ಯ ಹೋರಾಟದ ಕತೆ
ಗಂಡು ಹೆಣ್ಣು ಭೇದವಿಲ್ಲದೆ ಅಬಾಲವೃದ್ಧರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಬಡವ, ಶ್ರೀಮಂತ ಎಂದು ಎನಿಸದೇ ಪ್ರತಿಯೊಬ್ಬರು ಹೋರಾಡಿದ ಸಮಯ ಅದು. ಈ ರೀತಿ ರಾಷ್ಟ್ರ ಕಾರ್ಯಕ್ಕೆ ತಮ್ಮನ್ನು ಒಪ್ಪಿಕೊಂಡವರಲ್ಲಿ ಕರ್ನಾಟಕದ ಸಂಗೂರ ಕರಿಯಪ್ಪ ಯರೆಶಿಮಿಯವರು ಅಗ್ರಗಣ್ಯರು.
ಗಾಂಧೀಜಿ ಗರಡಿಗೆ ಒಳಗಾಗಿ ರಾಷ್ಟ್ರೀಯ ಹೋರಾಟಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಬಿಸಿರಕ್ತದ ಯುವಕರಲ್ಲಿ ಸಂಗೂರ ಕರಿಯಪ್ಪ ಒಬ್ಬರಾಗಿದ್ದಾರೆ. ಹಿಂದು ಮುಂದು ಯೋಚನೆ ಇಲ್ಲದೆ ಸ್ವಾತಂತ್ರ್ಯವೇ ಸರ್ವಸ್ವವೆಂದು ಬಗೆದು ಹೋರಾಡಿದವರಿವರು.
ಮಾಡು ಇಲ್ಲವೇ ಮಡಿ
ಸಂಗೂರು ಕರಿಯಪ್ಪ ಅವರನ್ನು ಪರೀಕ್ಷಿಸಲು ಗಾಂಧೀಜಿ ಇವರಿಗೆ ಅನೇಕ ಕೀಳು ಎಂದು ತಿರಸ್ಕಾರಮಾಡುವ ಕ್ಷುಲ್ಲಕ ಕೆಲಸವನ್ನು ಕೊಟ್ಟರು. ಅಸಹ್ಯಪಟ್ಟುಕೊಳ್ಳದೆ ಎಲ್ಲ ಕೆಲಸಗಳನ್ನು ನಿಷ್ಠೆಯಿಂದ ಮಾಡಿ, ಗಾಂಧೀಜಿ ಅವರ ಪ್ರೀತಿಗೆ ಪಾತ್ರರಾದರು. 1942 ನೇ ಆಗಸ್ಟ್ 8ರಂದು ನಡೆದ ಸ್ವಾತಂತ್ರ್ಯ ಆಂದೋಲನ ಬ್ರಿಟಿಷರನ್ನು ಭಾರತದಿಂದ ಓಡಿಸುವ ಕೊನೆಯ ಹೋರಾಟವಾಗಿತ್ತು.' ಮಾಡು ಇಲ್ಲವೇ ಮಡಿ' ಎನ್ನುವ ಗಾಂಧೀಜಿ ಅವರ ಕರೆಯನ್ನು ಅವರು ಅಕ್ಷರಶಃ ಪಾಲಿಸಿದರು. ಅವರ ಪತ್ನಿ ವೀರಮ್ಮ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರು. ಇವರು ಗಾಂದೀಜಿ ಅವರ ಸಾಕು ಮಗಳಾಗಿದ್ದರು ಎನ್ನಲಾಗಿದೆ.
'ದಶರಥ' - ಆಗ್ಲರಿಗೆ ಸಿಂಹ ಸ್ವಪ್ನ
ದಶರಥ ಎಂಬ ಗುಪ್ತ ಹೆಸರಿನಿಂದ ಇವರು ಪತ್ರಿಕೆಗಳಲ್ಲಿ ಬ್ರಿಟೀಷರ ವಿರುದ್ಧ ಬರಹಗಳನ್ನು ಬರೆಯುತ್ತಾ ಇದ್ದರು. ಆ ಸಂದರ್ಭದಲ್ಲಿ ಕೋಪಗೊಂಡ ಆಂಗ್ಲರು ಇವರನ್ನು ಹುಡುಕಲು ಆರಂಭಿಸಿದರು. ಇವರು ಎಷ್ಟೋ ದಿನಗಳ ಕಾಲ ಅಡಗಿಕೊಂಡೇ ಜೀವನ ಮಾಡಿದ್ದರು. ತದ ನಂತರದಲ್ಲಿ ಇವರನ್ನು ಹಿಡಿದುಕೊಟ್ಟರೆ 500 ರೂ ಬಹುಮಾನ ಕೊಡಲಾಗುವುದು ಎಂದು ಘೋಷಣೆ ಮಾಡಿ ಬಿತ್ತಿ ಪತ್ರ ಅಂಟಿಸಿದ್ದರು.
40 ಎಕರೆ ಜಮೀನು ದಾನ
ಇವರಿಗೆ ಸರ್ಕಾರ ಅನುದಾನದಲ್ಲಿ ನೀಡಿದ ಸುಮಾರು 40 ಎಕರೆ ಜಮೀನನ್ನು ಊರಿನ ಜನರ ದನಗಳನ್ನ ಮೇಯಿಸಲು ದಾನ ಮಾಡಿದವರು. ಹೋರಾಟದಲ್ಲಿ ಬಾಂಬ್ ಸ್ಪೋಟವಾದಾಗ ತಮ್ಮ ಒಂದು ಕೈ ಕಳೆದುಕೊಂಡರು. ಆದರೂ ಸ್ವಾಭಿಮಾನದಿಂದ ಬದುಕಿದವರು ಇವರು. ತಾವೇ ಜೋಳ ಕುಟ್ಟಿಕೊಂಡು ರೊಟ್ಟಿ ಮಾಡಿ ತಿನ್ನುತ್ತಿದ್ದರು. ತಮ್ಮ ಅಡುಗೆ ತಾವೆ ಮಾಡಿಕೊಳ್ಳುತ್ತಿದ್ದರು ಸ್ವಾತಂತ್ರಾ ನಂತರವು ಇವರು ತಮ್ಮ ಸಮಾಜಸೇವೆಯಲ್ಲಿ ನಿರತರಾಗಿ ,ಸ್ವಚ್ಚತೆ,ಅಸ್ಪೃಶ್ಯತೆ ಬಗ್ಗೆ ಜನರಿಗೆ ತಿಳುವಳಿಕೆ ನೀಡುತ್ತಕಳೆದಿದ್ದರು ಎಂದು ಹೇಳಲಾಗಿದೆ.
ಒಂದು ಕೈ ಕಳೆದುಕೊಂಡ ವೀರ
ಹೋರಾಟದ ಸಂದರ್ಭದಲ್ಲಿ ಇವರ ಅಂಗೈಯ್ಯಲ್ಲಿ ಬಾಂಬ್ ಸ್ಪೋಟವಾಗಿತ್ತು ಆಗ ಇವರು ತಮ್ಮ ಬಲಗೈ ಕಳೆದುಕೊಂಡರು. ತದ ನಂತರದಲ್ಲಿ ಉಪಚರಿಸಿಕೊಳ್ಳಲು ಯಾರದೋ ಮನೆ ಕದ ತಟ್ಟಿದ್ದರು. ಆದರೆ ವೈದ್ಯರೇ ಬೇಕು ಎನ್ನುವ ಸಂದರ್ಭ ಇತ್ತು. ಆಗ ಅವರ ಹೊಟ್ಟೆಗೆ ಒಣ ಹುಲ್ಲು ಸುತ್ತಿ ಬಟ್ಟೆ ಹಾಕಿ ಗರ್ಭಿಣಿಯಂತೆ ಮಾಡಿಕೊಂಡು ಅವರನ್ನು ಎತ್ತಿನ ಗಾಡಿಯಲ್ಲಿ ವೈದ್ಯರ ಬಳಿ ಕರೆದುಕೊಂಡು ಹೋಗಲಾಗುತ್ತು.
ಸಂಗೂರು ಕರಿಯಪ್ಪ ಅವರ ಬಗ್ಗೆ ಶಾಲೆ ಮಕ್ಕಳಿಗೊಂದು ಪಾಠ ಇಡಬೇಕು ಎಂದು ನಂತರದ ದಿನಗಳಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅವರ ಪುತ್ರಿ ಚಿಕ್ಕಮ್ಮ ಆಡೂರು ಮನವಿ ಸಲ್ಲಿಸಿದ್ದರು.
(ಮಾಹಿತಿ ಕೃಪೆ: ಸ್ವಾತಂತ್ರ ಹೋರಾಟಗಾರ ದಂಪತಿಗಳಾದ ಸಂಗೂರು ಕರಿಯಪ್ಪ ,ವೀರಮ್ಮ ಅಭಿಮಾನಿಗಳು ಫೇಸ್ಬುಕ್ ಗ್ರೂಪ್)
ವಿಭಾಗ