Friday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಈ ಮೂರು ಗುಣಗಳು ನಿಮ್ಮಲ್ಲಿದ್ದರೆ ಯಶಸ್ಸು ಹುಡುಕಿ ಬರುವುದು ಖಚಿತ-friday motivation inspiration for life if you have these three qualities success is sure to come success tips rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Friday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಈ ಮೂರು ಗುಣಗಳು ನಿಮ್ಮಲ್ಲಿದ್ದರೆ ಯಶಸ್ಸು ಹುಡುಕಿ ಬರುವುದು ಖಚಿತ

Friday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಈ ಮೂರು ಗುಣಗಳು ನಿಮ್ಮಲ್ಲಿದ್ದರೆ ಯಶಸ್ಸು ಹುಡುಕಿ ಬರುವುದು ಖಚಿತ

ಯಶಸ್ಸನ್ನ ಬಯಸದ ವ್ಯಕ್ತಿಗಳು ಈ ಜಗತ್ತಿನಲ್ಲಿ ಯಾರೂ ಇಲ್ಲ. ಇಲ್ಲಿ ಎಲ್ಲರಿಗೂ ಗೆಲುವು, ಯಶಸ್ಸು ಬೇಕು. ಹಾಗಂತ ಇದು ಸುಲಭವಾಗಿ ದಕ್ಕುವುದಿಲ್ಲ, ಅದಕ್ಕಾಗಿ ಸಾಕಷ್ಟು ಶ್ರಮ ಬೇಕು. ವ್ಯಕ್ತಿಯಲ್ಲಿ ಈ ಮೂರು ಗುಣಗಳಿದ್ದರೆ ಯಶಸ್ಸು ತಾನಾಗಿಯೇ ಹಿಂಬಾಲಿಸುತ್ತದೆ. ಅಂತಹ ಗುಣಗಳು ಯಾವುವು ನೋಡಿ.

 ಈ ಮೂರು ಗುಣಗಳು ನಿಮ್ಮಲ್ಲಿದ್ದರೆ ಯಶಸ್ಸು ಹುಡುಕಿ ಬರುವುದು ಖಚಿತ
ಈ ಮೂರು ಗುಣಗಳು ನಿಮ್ಮಲ್ಲಿದ್ದರೆ ಯಶಸ್ಸು ಹುಡುಕಿ ಬರುವುದು ಖಚಿತ

ಬದುಕಿನಲ್ಲಿ ನಾನು ಎಂದಿಗೂ ಸೋಲಬಾರದು, ಸದಾ ಗೆಲುವು ನನ್ನದಾಗಬೇಕು. ಗೆಲ್ಲುತ್ತಾ ಗೆಲ್ಲುತ್ತಾ ನಾನು ಯಶಸ್ಸಿನ ಶಿಖರವನ್ನ ಏರಬೇಕು ಎಂಬ ಆಸೆ ಎಲ್ಲರಲ್ಲೂ ಇರುವುದು ಸಹಜ. ಆದರೆ ಯಶಸ್ಸು ಖಂಡಿತ ಸುಲಭವಾಗಿ ಸಿಗುವುದಲ್ಲ. ಯಶಸ್ಸಿಗಾಗಿ ಸಾಕಷ್ಟು ಪರಿಶ್ರಮ ಬೇಕು. ಜೊತೆಗೆ ಈ ಮೂರು ಅಂಶಗಳು ಇದ್ದರೆ ಯಶಸ್ಸು ನಮ್ಮನ್ನು ಹಿಂಬಾಲಿಸುವುದರಲ್ಲಿ ಅನುಮಾನವಿಲ್ಲ.

ಯಾರಲ್ಲಿ ದೃಢಸಂಕಲ್ಪ, ಅಕ್ಷಯವಾದ ಆತ್ಮವಿಶ್ವಾಸ, ಆಸೆಯ ಛಲ ಇರುವುದೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಮನುಷ್ಯನಲ್ಲಿ ಸಾಧಿಸುವ ಛಲ ಮೂಡಿದಾಗ ಗೆಲುವು ತಾನಾಗಿಯೇ ಒಲಿದು ಬರುತ್ತದೆ. ತಾನು ಬಯಸಿದ್ದನ್ನು ಸಾಧಿಸಿಯೇ ತೀರುತ್ತೇನೆ ಎಂಬ ವಿಶ್ವಾಸ ಹೊಂದುವುದು ಮುಖ್ಯವಾಗುತ್ತದೆ. ಯಶಸ್ಸನ್ನು ಸಾಧಿಸುವ ಹಂಬಲ ವ್ಯಕ್ತಿ ಮನಸ್ಸಿನಲ್ಲಿ ಬೇರೂರಬೇಕು. ಆಗ ನಮಗೆ ಬೇಕಾಗಿದ್ದನ್ನು ಪಡೆಯುವುದು ಸುಲಭವಾಗುತ್ತದೆ.

ಹಲವರಿಗೆ ಬದುಕಿನಲ್ಲಿ ಗುರಿಯೇ ಇರುವುದಿಲ್ಲ. ಯಶಸ್ಸು ಎಂಬುದು ನಿಂತಿರುವುದು ನಿರ್ದಿಷ್ಟ ಗುರಿಯ ಮೇಲೆ. ಗುರಿಯೇ ಇಲ್ಲದೇ ಬದುಕಿನಲ್ಲಿ ಯಶಸ್ಸು ಗಳಿಸಬೇಕು ಎಂದರೆ ಅದು ಅಸಾಧ್ಯ. ಗುರಿ ಇದ್ದರೂ ಅದನ್ನು ಸಾಧಿಸಲು ಆಗದೇ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಅದಕ್ಕೆ ಕಾರಣ ಅವರಲ್ಲಿ ಸಾಧಿಸುವ ಹಂಬಲ ಇರುವುದಿಲ್ಲ. ಅಂತಹವರು ಯಶಸ್ಸಿನ ನಿಲ್ದಾಣ ತಲುಪುವುದು ತುಂಬಾ ಕಷ್ಟ.

ಕೆಲವರು ಬದುಕಿನಲ್ಲಿ ಗುರಿ ಇರಿಸಿಕೊಂಡು ಮುಂದೆ ಸಾಗಲು ಆರಂಭಿಸುತ್ತಾರೆ. ಆದರೆ ಮಧ್ಯದಲ್ಲಿ ಅಡೆತಡೆಗಳು ಎದುರಾದರೆ ಅಲ್ಲಿಗೆ ತಮ್ಮ ಗುರಿಯನ್ನು ಮೊಟಕುಗೊಳಿಸುತ್ತಾರೆ. ಕಷ್ಟಗಳಿಗೆ ಹೆದರುತ್ತಾರೆ. ಆದರೆ ಯಾವಾಗಲೂ ಒಂದು ವಿಚಾರ ತಿಳಿದಿರಬೇಕು. ಕಷ್ಟಗಳು ಎಂದಿಗೂ ನಮ್ಮ ಶತ್ರುಗಳು. ಅವು ನಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಬಹಿರಂಗ ಪಡಿಸುವ ನಿಜವಾದ ಮಿತ್ರರು.

ಪ್ರತಿ ಕಷ್ಟದಲ್ಲೂ ನಿಮ್ಮ ಶಕ್ತಿಯನ್ನು ಕಂಡುಕೊಳ್ಳಿ. ನಿಮ್ಮ ದೌರ್ಬಲ್ಯಗಳನ್ನು ಹೇಗೆ ಜಯಿಸಬೇಕು ಎಂಬುದನ್ನು ಸಹ ಕಲಿಯಿರಿ. ಎಲ್ಲವನ್ನೂ ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ. ಯಶಸ್ಸನ್ನು ಸಾಧಿಸಲು ಬಯಸುವವರು ಅತಿಯಾದ ಆಲೋಚನೆಗಳಿಂದ ದೂರವಿರಬೇಕು.

ಯಶಸ್ಸಿಗೆ ತಾಳ್ಮೆ ಬೇಕು

ಮಾಡಿದ ಪ್ರತಿಯೊಂದು ಕೆಲಸವೂ ಉತ್ತಮ ಫಲಿತಾಂಶವನ್ನೇ ನೀಡುವುದಿಲ್ಲ. ಕೆಲವು ಪ್ರಯತ್ನಗಳು ವಿಫಲವೂ ಆಗಬಹುದು. ಯಶಸ್ಸು ಇಂದಲ್ಲ ನಾಳೆ ಸಿಕ್ಕೇ ಸಿಗುತ್ತದೆ. ಅದಕ್ಕಾಗಿ ತಾಳ್ಮೆಯಿಂದ ಇರುವುದು ಮುಖ್ಯವಾಗುತ್ತದೆ. ತಾಳ್ಮೆಯ ಪ್ರತಿಫಲ ಎಷ್ಟು ಸಿಹಿಯೋ, ತಾಳ್ಮೆಯ ಆರಂಭ ಎಷ್ಟೇ ಕಹಿಯಾಗಿರಬಹುದು. ಪ್ರತಿಫಲದ ಸಿಹಿಯ ಮಾಧುರ್ಯ ಸವಿಯಲು ತಾಳ್ಮೆಯಿಂದ ದುಡಿಯಬೇಕು.

ಪರಿಸ್ಥಿತಿ ಎಂಥದ್ದೇ ಬರಲಿ, ನಿಮ್ಮ ಮಾತುಗಳು ಹಾಗೂ ಸ್ವಭಾವ ನಿಯಂತ್ರಣದಲ್ಲಿರಲಿ. ಸಂದರ್ಭಗಳು ಮನುಷ್ಯನ ನಿಯಂತ್ರಣವನ್ನೂ ಮೀರಿದ್ದು. ಆದರೆ ಮನುಷ್ಯನ ನಡವಳಿಕೆಯು ಖಂಡಿತವಾಗಿಯೂ ಅವನ ನಿಯಂತ್ರಣದಲ್ಲಿದೆ. ಆದ್ದರಿಂದ ನಿಮ್ಮ ನಡವಳಿಕೆಗೆ ನೀವು ಅಂತಿಮವಾಗಿ ಜವಾಬ್ದಾರರಾಗಿರುತ್ತೀರಿ.

ಗೆಲ್ಲಲು ಕಲಿಯಿರಿ

ಯಶಸ್ಸಿನ ಪಯಣ ಆರಂಭಿಸಿದ ನಿಮಗೆ ಮೊದಲ ಹಿನ್ನಡೆಯಾಯಿತು ಎಂದಾಗ ಹೆದರಿ ಓಡಬೇಡಿ. ನಿಮಗೆ ಎದುರಾದ ಸೋಲು ಕೆಲಸವನ್ನು ಹೆಚ್ಚು ಶ್ರದ್ಧೆಯಿಂದ ಮತ್ತು ಸತತವಾಗಿ ಮಾಡಲು ಪ್ರೇರೆಪಿಸುತ್ತದೆ. ಸೋತರೆ ಗೆಲ್ಲುವುದನ್ನು ಕಲಿಯಿರಿ. ನೀವು ಮೋಸ ಹೋದರೆ ಜಾಗರೂಕರಾಗಿರಲು ಕಲಿಯಿರಿ. ಸೋಲನ್ನು ನಿಭಾಯಿಸಲು ತಿಳಿದಿರುವ ವ್ಯಕ್ತಿಯು ಗೆಲ್ಲಲು ತಿಳಿದಿರುವ ವ್ಯಕ್ತಿಗಿಂತ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾನೆ.

ನಿಮಗಾಗಿ ಸಮಯ ಮೀಸಲಿಡಿ

ಪ್ರತಿದಿನ ನಿಮಗಾಗಿ ಸಮಯವನ್ನು ಮೀಸಲಿಡಿ. ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ನಿಮಗೆ ಬೇಕಾದುದನ್ನು ನೆನಪಿಡಿ. ನಿಮ್ಮ ಆರೋಗ್ಯವನ್ನು ಮೌಲ್ಯಮಾಪನ ಮಾಡಿ. ನೀವು ಏನನ್ನು ಯೋಚಿಸುತ್ತೀರೋ ಅದೇ ನೀವು ಆಗುತ್ತೀರಿ. ನೀವು ಬಲಶಾಲಿ ಎಂದು ಭಾವಿಸಿದರೆ, ನೀವು ಬಲಶಾಲಿಯಾಗುತ್ತೀರಿ. ನಾನು ದುರ್ಬಲ ಮತ್ತು ಏನೂ ಮಾಡಲು ಸಾಧ್ಯವಿಲ್ಲ ಎಂದು ನೀವು ಭಾವಿಸಿದರೆ ನೀವು ದುರ್ಬಲರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತೀರಿ. ಯಾರು ಬಲಶಾಲಿ ಮತ್ತು ಯಾರು ದುರ್ಬಲರು ಎಂಬುದನ್ನು ನೀವು ನಿರ್ಧರಿಸುತ್ತೀರಿ. ಜಗಳವಾಡಬೇಕೆಂದರೆ ತಾಳೆಗರಿಯೂ ಆಯುಧವಾಗುತ್ತದೆ. ಅದೇ ಬೇಡವೆಂದಾದರೆ ಕೊಡಲಿಯೂ ಉರುವಲಾಗಿ ಮಾರ್ಪಡುತ್ತದೆ. ಆದ್ದರಿಂದ ನೀವು ನಿಮ್ಮ ಇಚ್ಛಾಶಕ್ತಿಯನ್ನು ಬಲವಾಗಿ ಬದಲಾಯಿಸಿಕೊಳ್ಳಬೇಕು.