ಶುಕ್ರವಾರದ ಸ್ಫೂರ್ತಿಮಾತು; ಕುಗ್ರಾಮದಲ್ಲಿ ಹುಟ್ಟಿ, ಬಡತನದಲ್ಲಿ ಬೆಳೆದು ನೂರಾರು ನಿರುದ್ಯೋಗಿಗಳಿಗೆ ಕೆಲಸ ಕೊಟ್ಟ ಯುವಕನ ಸಾಧನೆಯ ಕಥೆ
ಕನ್ನಡ ಸುದ್ದಿ  /  ಜೀವನಶೈಲಿ  /  ಶುಕ್ರವಾರದ ಸ್ಫೂರ್ತಿಮಾತು; ಕುಗ್ರಾಮದಲ್ಲಿ ಹುಟ್ಟಿ, ಬಡತನದಲ್ಲಿ ಬೆಳೆದು ನೂರಾರು ನಿರುದ್ಯೋಗಿಗಳಿಗೆ ಕೆಲಸ ಕೊಟ್ಟ ಯುವಕನ ಸಾಧನೆಯ ಕಥೆ

ಶುಕ್ರವಾರದ ಸ್ಫೂರ್ತಿಮಾತು; ಕುಗ್ರಾಮದಲ್ಲಿ ಹುಟ್ಟಿ, ಬಡತನದಲ್ಲಿ ಬೆಳೆದು ನೂರಾರು ನಿರುದ್ಯೋಗಿಗಳಿಗೆ ಕೆಲಸ ಕೊಟ್ಟ ಯುವಕನ ಸಾಧನೆಯ ಕಥೆ

Friday Motivation: ಸಮಸ್ಯೆ ಬಂದಾಗ ಹೆದರದೆ ಧೈರ್ಯವಾಗಿದ್ದರೆ ಅರ್ಧ ಸಮಸ್ಯೆ ಬಗೆಹರಿದಂತೆ. ಬಡತನದಲ್ಲಿ ಹುಟ್ಟಿ, ಸರ್ಕಾರಿ ಶಾಲೆಯಲ್ಲಿ ಓದಿ ತನ್ನಂತೆ ಕಷ್ಟಪಟ್ಟ ನೂರಾರು ಯುವಕರಿಗೆ ಕೆಲಸ ನೀಡಿದ ಶರತ್‌ ಬಾಬು ಅವರ ಕಥೆ ಎಲ್ಲರಿಗೂ ಸ್ಪೂರ್ತಿ ತರುವಂಥದ್ದು. ಶರತ್‌ ಬಾಬು ತಮಿಳುನಾಡಿನ ಚೆನ್ನೈಗೆ ಸೇರಿದ ಒಂದು ಕುಗ್ರಾಮದಲ್ಲಿ ಹುಟ್ಟಿ ಬೆಳೆದವರು.

ತಾಯಿ ದೀಪಾ ರಮಣಿ ಜೊತೆ ಶರತ್‌ ಬಾಬು
ತಾಯಿ ದೀಪಾ ರಮಣಿ ಜೊತೆ ಶರತ್‌ ಬಾಬು

ಜೀವನಕ್ಕೊಂದು ಸ್ಫೂರ್ತಿಮಾತು: ತಮಿಳುನಾಡಿನ ಚೆನ್ನೈನ ಹೊರವಲಯದಲ್ಲಿ ಮಡಿಪಕ್ಕಂ ಎಂಬ ಗ್ರಾಮವಿದೆ. ಆ ಗ್ರಾಮದಲ್ಲಿ ಶರತ್ ಬಾಬು ಏಳುಮಲೈ ಎಂಬುವವರ ಕುಟುಂಬ ವಾಸವಾಗಿದೆ. ಅವರ ತಂದೆ ಬಹಳ ದಿನಗಳ ಹಿಂದೆಯೇ ನಿಧನರಾಗಿದ್ದಾರೆ. ಶರತ್‌ ಬಾಬು ಅವರಿಗೆ ನಾಲ್ವರು ಅಕ್ಕ ತಂಗಿಯರೂ ಇದ್ದಾರೆ. ತಾಯಿ ದೀಪಾ ರಮಣಿ. ಪತಿ ನಿಧನರಾದ ನಂತರ ಶರತ್‌ ಬಾಬು ತಾಯಿ ದಿನಕ್ಕೆ 3-4 ಕಡೆ ಕೆಲಸ ಮಾಡಿ ಮಕ್ಕಳನ್ನು ಸಾಕತೊಡಗಿದರು.

ಒಬ್ಬಂಟಿ ಹೆಂಗಸು 5 ಮಕ್ಕಳನ್ನು ಸಾಕುವುದು ಸುಲಭದ ಮಾತಲ್ಲ. ಬೆಳಗ್ಗೆ ಇಡ್ಲಿ ಮಾಡಿ ಮಗನಿಗೆ ಮಾರಲು ಕೊಡುತ್ತಿದ್ದರು. ಶರತ್ ಬಾಬು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಓದಿನೊಂದಿಗೆ ಇಡ್ಲಿ ಮಾರುತ್ತಾ, ತಾಯಿಗೆ ಕೆಲಸ ಮಾಡುತ್ತಾ ಬೆಳೆದ ಶರತ್‌ ಬಾಬು, ತಾಯಿಯ ಕಷ್ಟವನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು ಹಾಗೆ ಸರ್ಕಾರಿ ಶಾಲೆ ಆದ್ದರಿಂದ ಮಧ್ಯಾಹ್ನ ಅಲ್ಲೇ ಊಟ ಮಾಡುತ್ತಿದ್ದರು. ತಾಯಿ ಕೂಡಾ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೂಡಾ ಮಾಡುತ್ತಿದ್ದರು.

ಶರತ್ ಬಾಬುಗೆ ಟ್ಯೂಷನ್‌ಗೆ ಹೋಗಲು ಹಣವಿರಲಿಲ್ಲ. ಆದರೂ ಚೆನ್ನಾಗಿ ಓದಬೇಕೆಂಬ ಗುರಿ ಹೊಂದಿದ್ದರು. ಆದಾಗ್ಯೂ, ಅವರು ಅಧ್ಯಯನವನ್ನು ತಮ್ಮ ಗುರಿಯನ್ನಾಗಿ ಮಾಡಿಕೊಂಡರು. ಸರ್ಕಾರಿ ಶಾಲೆಯಲ್ಲೇ ಓದಿ 10ನೇ ತರಗತಿ ಮುಗಿಸಿದರು. ಸ್ಕೂಲ್‌ನಲ್ಲಿ ಶಿಕ್ಷಕರು ಹೇಳಿದ ಪಾಠವನ್ನಷ್ಟೇ ಕೇಳುತ್ತಾ ಉತ್ತಮ ಅಂಕ ಗಳಿಸಿದರು. ನಂತರ ಇಂಟರ್‌ ಸೇರಿಕೊಂಡರು. ಅಲ್ಲೂ ಕೂಡಾ ಓದು ಬಿಟ್ಟರೆ ಅವರಿಗೆ ಬೇರೆ ಯಾವುದರಲ್ಲೂ ಗಮನ ಇರಲಿಲ್ಲ. ಮನೆಯಲ್ಲಿ ತಿನ್ನಲು ಊಟ ಸರಿಯಾಗಿ ಇಲ್ಲದಿದ್ದರೂ ಪುಸ್ತಕವನ್ನು ಓದಿ ಓದಿ ಹೊಟ್ಟೆ ತುಂಬಿಸಿಕೊಂಡರು. ಆದರೂ ಅವರ ಕಷ್ಟ ದೂರವಾಗಲಿಲ್ಲ. ನಂತರ ಬಿಟ್ಸ್‌ ಪಿಲಾನಿ (BITS Pilani)ಯಲ್ಲಿ ಸೀಟು ದೊರೆತು ಕೆಮಿಕಲ್‌ ಎಂಜಿನಿಯರಿಂಗ್‌ ಸೇರಿದರು. 3 ವರ್ಷ ಶಿಕ್ಷಣ ಮುಗಿದ ಕೂಡಲೇ ಒಂದು ಕಂಪನಿಯಲ್ಲಿ ಕೆಲಸ ದೊರೆಯಿತು.

ಕೆಲಸ ದೊರೆತರೂ ತೃಪ್ತಿ ಕಾಣದ ಶರತ್‌ ಬಾಬು

ಕೆಲಸ ದೊರೆತರೂ ಶರತ್‌ ಬಾಬು ಅವರಿಗೆ ಸಮಾಧಾನ ಎನಿಸಲಿಲ್ಲ. ಮತ್ತೆ ಓದು ಆರಂಭಿಸಿ ಎಂಬಿಎ ಮಾಡಿದರು. ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಮುಗಿಸಿದರು. ಎಂಬಿಎ ಮುಗಿಯುತ್ತಿದ್ದಂತೆ ಎಷ್ಟೋ ಕಂಪನಿಗಳಿಂದ ಕೆಲಸಕ್ಕೆ ಆಫರ್‌ ದೊರೆತವು. ಆದರೂ ಶರತ್‌ ಹೋಗಲಿಲ್ಲ. ದೊಡ್ಡ ಕೆಲಸಕ್ಕೆ ಹೋಗಿ ಸುಖವಾಗಿರುವ ಬದಲಿಗೆ ತನ್ನಂತ ಬಡ ಯುವಕರಿಗೆ ಸಹಾಯವಾಗಲೆಂದು 2000 ರೂ. ಬಂಡವಾಳದಲ್ಲಿ ಫುಡ್ ಕಿಂಗ್ ಎಂಬ ಕೇಟರಿಂಗ್ ಸೇವೆ ಆರಂಭಿಸಿದರು. ಸ್ಲಮ್‌ನಲ್ಲಿ ಆ ಸಣ್ಣ ಹೋಟೆಲ್ ಕಟ್ಟಿದರು. ತಮ್ಮಂತಹ ಬಡ ಯುವಕರಿಗೆ ಉದ್ಯೋಗ ನೀಡಿದರು. ಆರಂಭದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಬ್ಯಾಂಕ್ ಗಳಿಗೆ ಅಡುಗೆ ಮಾಡಿ ಸರಬರಾಜು ಮಾಡುತ್ತಿದ್ದರು. ಆ ಬಳಿಕ ಡೋರ್ ಸರ್ವಿಸ್‌ ಕೂಡಾ ಆರಂಭಿಸಿದರು.

ಚೆನ್ನೈನಿಂದ ಆರಂಭವಾದ ಫುಡ್ ಕಿಂಗ್ ಪ್ರಯಾಣ ಈಗ ಹೈದರಾಬಾದ್, ಜೈಪುರ, ಅಹಮದಾಬಾದ್‌ಗೂ ವಿಸ್ತರಿಸಿದೆ. ಶರತ್‌ ಬಾಬು ಈಗ 8 ಕೋಟಿ ರೂ ವಹಿವಾಟು ನಡೆಸುತ್ತಿದ್ದಾರೆ. 200ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ಆ 200 ಜನ ಕೂಡ ಅವರಂತೆ ಕಡು ಬಡತನದಲ್ಲಿ ಹುಟ್ಟಿದವರು. ಶರತ್ ಬಾಬು ಶ್ರೀಮಂತಿಕೆಯಿಂದ ಹುಟ್ಟಿಲ್ಲ. ಅವರು ಹುಟ್ಟಿ ಕೆಲವು ವರ್ಷಗಳ ನಂತರ ತಂದೆಯನ್ನು ಕಳೆದುಕೊಂಡರು. ಐದು ಮಕ್ಕಳನ್ನು ಪೋಷಿಸಲು ತಾಯಿಯ ಹೋರಾಟವನ್ನು ಅವರು ಹತ್ತಿರದಿಂದ ನೋಡಿದರು. ಒಂದು ಹೊತ್ತು ಊಟ ಮಾಡಿಕೊಂಡು ಕಷ್ಟಪಟ್ಟು ಓದಿ, ತಾಯಿಗೂ ಸಹಾಯ ಮಾಡಿಕೊಂಡು ಬೆಳೆದರು.

ಕಷ್ಟ ಬಂದಾಗ ಮೆಟ್ಟಿ ನಿಂತರೆ ಅರ್ಧ ಸಮಸ್ಯೆ ಬಗೆಹರಿದಂತೆ

ಶರತ್‌ ಬಾಬು ಸೇರಿದಂತೆ ಎಷ್ಟೋ ಜನರು ಇದೇ ರೀತಿ ಏನೂ ಇಲ್ಲದೆ ಹುಟ್ಟಿ ಬೆಳೆದವರು. ಆದರೆ ಅವರು ಎಂದಿಗೂ ಬೇಸರ ವ್ಯಕ್ತಪಡಿಸಿದವರಲ್ಲ. ಖಿನ್ನತೆಗೆ ಒಳಗಾಗಲಿಲ್ಲ. ಕಷ್ಟ-ಸಮಸ್ಯೆಗಳನ್ನು ಕಂಡು ಓಡಿ ಹೋಗಲಿಲ್ಲ. ಅವನು ಬಯಸಿದ್ದನ್ನು ಸಾಧಿಸಿ ಪಡೆದುಕೊಂಡರು. ನೀವು ಇಂದಿಗೂ ಚೆನ್ನೈ, ಹೈದರಾಬಾದ್ ಮತ್ತು ಇತರ ಮೆಟ್ರೋ ನಗರಗಳಿಗೆ ಹೋದರೆ ಫುಡ್‌ ಕಿಂಗ್‌ ಹೋಟೆಲ್‌ಗಳನ್ನು ಕಾಣಬಹುದು.ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಪ್ರತಿಯೊಬ್ಬ ಮನುಷ್ಯನಿಗೂ ಸಮಸ್ಯೆಗಳಿರುತ್ತವೆ. ನೂರಾರು ಕೋಟಿ ಆಸ್ತಿ ಇರುವ ಕುಟುಂಬದಲ್ಲಿ ಹುಟ್ಟಿದವರಿಗೂ ಒಂದಿಷ್ಟು ಸಮಸ್ಯೆ ಇರುತ್ತದೆ. ಎಲ್ಲರಿಗೂ ಅವರವರ ಸಮಸ್ಯೆ ದೊಡ್ಡದಾಗಿ ಕಾಣುತ್ತದೆ. ಆದರೆ ನಿಮ್ಮ ಮುಂದಿರುವ ಸಮಸ್ಯೆಯ ಕಷ್ಟವನ್ನು ಇರುವೆಗೆ ಹೋಲಿಸಿ. ಅದು ಚಿಕ್ಕದಾಗಿದೆ. ಆನೆಗೆ ಹೋಲಿಸಿದರೆ ಸಣ್ಣ ಸಮಸ್ಯೆಯೂ ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಕಷ್ಟ ಚಿಕ್ಕದಾಗಿರಲಿ, ದೊಡ್ಡದಾಗಲಿ ಮೆಟ್ಟಿ ನಿಂತರೆ ಮಾತ್ರ ಯಶಸ್ಸಿನ ಉತ್ತುಂಗಕ್ಕೇರಲು ಸಾಧ್ಯ. ಸಮಸ್ಯೆಗಳಿಗೆ ಹೆದರಿ ಓಡಿ ಹೋಗುವುದನ್ನು ನಿಲ್ಲಿಸಿ. ಅದರ ಬದಲಿಗೆ ಆ ಸಮಸ್ಯೆಗಳನ್ನು ಹೇಗೆ ನಿವಾರಿಸುವುದು ಎಂದು ಯೋಚಿಸಲು ಪ್ರಾರಂಭಿಸಿದರೆ ಅಲ್ಲಿಯೇ ನಿಮ್ಮ ಯಶಸ್ಸಿನ ಮೊದಲ ಅಡಿಪಾಯವಿದೆ.

Whats_app_banner