Friday Motivation: ಬದುಕಿ, ಬದುಕಲು ಬಿಡಿ ನೀವೇ ಟ್ರೆಂಡ್‌ ಸೆಟರ್‌ ಆಗಿ; ನಿಮ್ಮ ನಡತೆ ನೂರು ಜನಕ್ಕೆ ಮಾದರಿ ಆಗಲಿ; ವಿಡಿಯೋ-friday motivation inspirational story for 29th march 2024 friday be a trend setter always be kind rsm ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Friday Motivation: ಬದುಕಿ, ಬದುಕಲು ಬಿಡಿ ನೀವೇ ಟ್ರೆಂಡ್‌ ಸೆಟರ್‌ ಆಗಿ; ನಿಮ್ಮ ನಡತೆ ನೂರು ಜನಕ್ಕೆ ಮಾದರಿ ಆಗಲಿ; ವಿಡಿಯೋ

Friday Motivation: ಬದುಕಿ, ಬದುಕಲು ಬಿಡಿ ನೀವೇ ಟ್ರೆಂಡ್‌ ಸೆಟರ್‌ ಆಗಿ; ನಿಮ್ಮ ನಡತೆ ನೂರು ಜನಕ್ಕೆ ಮಾದರಿ ಆಗಲಿ; ವಿಡಿಯೋ

Friday Motivation: ನಾವು ನಡೆದುಕೊಳ್ಳುವ ರೀತಿ ಮತ್ತೊಬ್ಬರಿಗೆ ಸ್ಫೂರ್ತಿ ಆಗಬೇಕೆ ಹೊರತು ಸಮಸ್ಯೆ ಆಗಬಾರದು. ನಮ್ಮ ವರ್ತನೆ ಮತ್ತೊಬ್ಬರಿಗೆ ತೊಂದರೆ ಆಗುವಂತೆ ಇರಬಾರದು. ನೀವು ಮತ್ತೊಬ್ಬರಿಗೆ ಸಹಾಯ ಮಾಡಿದರೆ, ದಯೆ ತೋರಿದರೆ ನಿಮ್ಮನ್ನು ನೋಡಿ ನಿಮ್ಮ ಜೊತೆಯಲ್ಲಿರುವವರು ಕೂಡಾ ಕಲಿಯುತ್ತಾರೆ.

ಶುಕ್ರವಾರದ ಸ್ಫೂರ್ತಿಮಾತು
ಶುಕ್ರವಾರದ ಸ್ಫೂರ್ತಿಮಾತು (PC: @itsme_urstruly)

ಶುಕ್ರವಾರದ ಸ್ಫೂರ್ತಿಮಾತು: ಜೀವನದಲ್ಲಿ ಎಲ್ಲರಿಗೂ ಏನಾದರೂ ಒಂದು ಕೊರತೆ ಇದ್ದೇ ಇರುತ್ತದೆ. ಉಳ್ಳವರು, ಇಲ್ಲದಿರುವವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ಎಲ್ಲರಿಗೂ ಬರುವುದಿಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಮತ್ತೊಬ್ಬರಿಗೆ ಸ್ಫೂರ್ತಿ ಆಗಬೇಕು.

ನೀವು ಮಾಡುವ ಕೆಲಸಗಳಿಂದ ಸ್ಫೂರ್ತಿ ಪಡೆದು ನಿಮ್ಮ ಜೊತೆಯಲ್ಲಿರುವವರು ಕೂಡಾ ಅದೇ ಗುಣ ಬೆಳೆಸಿಕೊಂಡರೆ ನೀವು ಎಷ್ಟು ಗ್ರೇಟ್‌ ಅಲ್ಲವೇ. ಬಹಳಷ್ಟು ಮಂದಿ ಪ್ರತಿದಿನ ತಾವು ದುಡಿದ ಇಂತಿಷ್ಟು ಹಣವನ್ನು ಜನಸೇವೆಗಾಗಿ ಮೀಸಲಿಡುತ್ತಾರೆ. ಆದರೆ ಇನ್ನೂ ಕೆಲವರು ತಾವಾಯಿತು, ತಮ್ಮ ಕೆಲಸವಾಯ್ತು, ತಮ್ಮ ಸಂತೋಷಗಳಾಯ್ತು ಎಂದು ಸುಮ್ಮನಿರುತ್ತಾರೆ. ಯಾರಿಗೂ ಸ್ವಾರ್ಥ ಇರಬಾರದು, ನಿಸ್ವಾರ್ಥ ಬದುಕು ನಿಮ್ಮ ಜೀವನವನ್ನು ಸುಂದರಗೊಳಿಸುತ್ತದೆ. ಸಹಾಯ ಎಂದರೆ ಅದು ಹಣದ ಸಹಾಯ ಆಗಿರಬೇಕು ಎಂದೇನಿಲ್ಲ, ನೀವು ಅವರಿಗೆ ಪ್ರತಿದಿನ ಊಟ ಕೊಡಬೇಕು ಎಂದಲ್ಲ. ನಿಮಗೆ ಯಾವ ರೀತಿ ಸಹಾಯ ಮಾಡಲು ಸಾಧ್ಯವೋ ಆ ರೀತಿ ಮಾಡಿ.

ನಿಮ್ಮ ವರ್ತನೆ ಇತರರಿಗೆ ಮಾದರಿ ಆಗಲಿ

ಭಾರ ಹೊರಲು ಕಷ್ಟಪಡುತ್ತಿರುವವರಿಗೆ ನೀವೂ ಹೆಗಲು ಕೊಡಿ, ರಸ್ತೆ ದಾಟಲು ಕಷ್ಟ ಪಡುತ್ತಿರುವ ವೃದ್ಧರ, ಮಕ್ಕಳ ಕೈ ಹಿಡಿದು ರಸ್ತೆ ದಾಟಿಸಿ. ಬಸ್‌ನಲ್ಲಿ ಕೂರಲು ಸೀಟು ಇಲ್ಲದೆ ಕಷ್ಟ ಪಡುತ್ತಿರುವ ವೃದ್ಧರಿಗೆ, ಗರ್ಭಿಣಿಯರಿಗೆ ಎದ್ದುನಿಂತು ಸೀಟು ಕೊಡಿ. ಅಂಗಡಿಗೆ ಹೋಗಿ ರೇಷನ್‌ ತರಲು ಆಗದವರಿಗೆ ನೀವೇ ಹೋಗಿ ತಂದುಕೊಡಿ. ಹೀಗೆ ಸಹಾಯ ಮಾಡಲು ನಾನಾ ದಾರಿಗಳಿವೆ. ನಿಮ್ಮನ್ನು ನೋಡಿ ಮತ್ತೊಬ್ಬರು ಕೂಡಾ ಕಲಿಯಬಹುದು. ಅವರನ್ನು ನೋಡಿ ಇನ್ನೂ ಇಬ್ಬರೂ ಕಲಿಯಬಹುದು. ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ಬಳ್ಳ ಎಂಬ ಮಾತಿನಂತೆ, ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆಯಂತೆ ನೀವು ಮಾಡುವ ಕೆಲಸ ನೂರು ಜನರಿಗೆ ಸ್ಫೂರ್ತಿ ಆಗಬಹುದು. ನಿಮ್ಮನ್ನು ನೋಡಿ ಇಡೀ ಸಮಾಜವೇ ಬದಲಾಗಬಹುದು.

ಈ ವಿಡಿಯೋವನ್ನು ಗಮನಿಸಿ. Itsme ಎಂಬ ಎಕ್ಸ್‌ ಯೂಸರ್‌ ಈ ವಿಡಿಯೋವನ್ನು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಸೂಕರ್‌ ಪಂದ್ಯದ ಹೈಲೈಟ್ಸ್.‌ ಈ ವಿಡಿಯೋದಲ್ಲಿರುವವರು ರೆಡ್‌ ಬುಲ್‌ ಆಟಗಾರರು. ಮೈದಾನದಲ್ಲಿ ಆಟಗಾರರ ಪರಿಚಯ ಮಾಡಿಕೊಡುವಾಗ ಅವರ ಮುಂದೆ ಮಕ್ಕಳು ಕೂಡಾ ಚಿಯರ್‌ ಅಪ್‌ ಮಾಡಲು ನಿಂತಿದ್ದಾರೆ. ಆ ಸಮಯದಲ್ಲಿ ಮಳೆ ಬರುತ್ತಿದ್ದರೂ ಯಾರೂ ಅಲ್ಲಿಂದ ಕದಲದೆ ನಿಂತಿದ್ದಾರೆ. ಮಗು ನೆನೆಯುತ್ತಿದ್ದನ್ನು ನೋಡಿದ ಒಬ್ಬ ಆಟಗಾರ ತಮ್ಮ ಜಾಕೆಟ್‌ ತೆಗೆದು ಆ ಮಗುವಿಗೆ ಹೊದಿಸುತ್ತಾರೆ. ಆತನನ್ನು ನೋಡಿದ ಪಕ್ಕದಲ್ಲಿರುವ ಆಟಗಾರ ತಾನೂ ಕೂಡಾ ಜಾಕೆಟ್‌ ತೆಗೆದು ತನ್ನ ಜೊತೆ ಇದ್ದ ಮಗುವಿಗೆ ಹೊದಿಸುತ್ತಾರೆ. ಹೀಗೇ ಒಬ್ಬರನ್ನೊಬ್ಬರು ನೋಡಿ, ತಂಡದಲ್ಲಿದ್ದ ಎಲ್ಲರೂ ತಮ್ಮ ತಮ್ಮ ಜಾಕೆಟ್‌ ಬಿಚ್ಚಿ ಮಕ್ಕಳಿಗೆ ಕೊಡುತ್ತಾರೆ.

ಆಟಗಾರರ ಗುಣಕ್ಕೆ ಪ್ರಶಂಸೆ

ಇದಕ್ಕೆ ಹೇಳುವುದು ನಿಮ್ಮನ್ನು ನೋಡಿ ಇತರರೂ ಕಲಿಯುತ್ತಾರೆ. ನೀವು ಸಮಾಜಕ್ಕೆ ಒಳ್ಳೆಯದು ಕೊಟ್ಟರೆ ಒಳ್ಳೆಯದಾಗುತ್ತದೆ, ಕೆಡುಕು ಮಾಡಿದರೆ ಕೆಡುಕಾಗುತ್ತದೆ. ಆದರೆ ಕೆಡುಕು ಮಾಡುವುದೇಕೆ? ನಮ್ಮ ಕೈಲಾದ ಸಹಾಯ ಮಾಡೋಣ. ಇತರರಿಗೆ ಮಾದರಿ ಆಗೋಣ. ಈ ವಿಡಿಯೋ ಈಗ ವೈರಲ್‌ ಆಗುತ್ತಿದ್ದು ಆಟಗಾರರಿಗೆ ಎಲ್ಲರೂ ಚಪ್ಪಾಳೆ ತಟ್ಟುತ್ತಿದ್ದಾರೆ ಅದರಲ್ಲೂ ಮೊದಲು ಜಾಕೆಟ್‌ ತೆಗೆದು ಮಗುವಿಗೆ ನೀಡಿದ ಆಟಗಾರನ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಬದುಕಿ ಬದುಕಲು ಬಿಡಿ.

mysore-dasara_Entry_Point