Friendship Day 2023: ನಾನು ನೀನು ದೋಸ್ತಿ, ಸ್ನೇಹವೇ ನಮ್ಮ ಆಸ್ತಿ; ಸ್ನೇಹಿತರ ದಿನ ಯಾವಾಗ? ಈ ದಿನದ ಆಚರಣೆ, ಮಹತ್ವ, ಥೀಮ್‌ ಕುರಿತ ಲೇಖನ-friendship day 2023 when is friendship day august 1st sunday history significance theme celebration story in kannada rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Friendship Day 2023: ನಾನು ನೀನು ದೋಸ್ತಿ, ಸ್ನೇಹವೇ ನಮ್ಮ ಆಸ್ತಿ; ಸ್ನೇಹಿತರ ದಿನ ಯಾವಾಗ? ಈ ದಿನದ ಆಚರಣೆ, ಮಹತ್ವ, ಥೀಮ್‌ ಕುರಿತ ಲೇಖನ

Friendship Day 2023: ನಾನು ನೀನು ದೋಸ್ತಿ, ಸ್ನೇಹವೇ ನಮ್ಮ ಆಸ್ತಿ; ಸ್ನೇಹಿತರ ದಿನ ಯಾವಾಗ? ಈ ದಿನದ ಆಚರಣೆ, ಮಹತ್ವ, ಥೀಮ್‌ ಕುರಿತ ಲೇಖನ

International Friendship Day: ಪ್ರತಿವರ್ಷ ಆಗಸ್ಟ್‌ ಮೊದಲ ಭಾನುವಾರ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಕೆಲವು ದೇಶಗಳಲ್ಲಿ ಜುಲೈ 30 ರಂದು ಈ ದಿನವನ್ನು ಆಚರಿಸುತ್ತಾರೆ. ಅಮೆರಿಕ, ಯುಎಇ, ಭಾರತ, ಬಾಂಗ್ಲಾ ಮುಂತಾದ ಕಡೆಗಳಲ್ಲಿ ಆಗಸ್ಟ್‌ ಮೊದಲ ಭಾನುವಾರ ಇಂಟರ್‌ನ್ಯಾಷನಲ್‌ ಫ್ರೆಂಡ್‌ಶಿಪ್‌ ಡೇ ಆಚರಿಸಲಾಗುತ್ತದೆ. ಸ್ನೇಹಿತರ ದಿನದ ಕುರಿತ ಲೇಖನ ಇಲ್ಲಿದೆ.

ಆಗಸ್ಟ್‌ 6 ರಂದು ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ,
ಆಗಸ್ಟ್‌ 6 ರಂದು ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ,

ಈ ಜಗತ್ತಿನಲ್ಲಿ ಶ್ರೇಷ್ಠ ಸಂಬಂಧವೊಂದು ಇಂದಿಗೂ ಅಸ್ತಿತ್ವದಲ್ಲಿದೆ ಎಂದರೆ ಅದು ಸ್ನೇಹ ಸಂಬಂಧ. ಸ್ನೇಹದಲ್ಲಿ ಸಾರ್ಥ ಇರೋಲ್ಲ, ನಾನು ನನ್ನದು ಎನ್ನುವ ಅಹಂಭಾವ ಇರೋದಿಲ್ಲ. ಸ್ನೇಹ ಎಂದರೆ ನಾವೆಲ್ಲರೂ, ನಮ್ಮದು ಎನ್ನುವ ಸುಂದರ ಭಾವ.

ಈ ಜಗತ್ತಿನಲ್ಲಿ ಕೃಷ್ಣ, ಕುಚೇಲ ಸೇರಿದಂತೆ ಹಲವು ಶ್ರೇಷ್ಠ ಸ್ನೇಹ ಸಂಬಂಧವನ್ನು ನೋಡಿದ್ದೇವೆ. ಇಂತಹ ಅದೆಷ್ಟೋ ಸುಮಧುರ ಸ್ನೇಹ ಬಾಂಧವ್ಯವು ನಮಗೆ ಬದುಕಿನ ಪಾಠವನ್ನೂ ಹೇಳಿಕೊಟ್ಟಿವೆ. ʼನಾನು ನೀನು ದೋಸ್ತಿ, ಸ್ನೇಹವೇ ನಮ್ಮ ಆಸ್ತಿʼ ಎಂಬ ನಿಸ್ವಾರ್ಥ ಸಂಬಂಧ ಸ್ನೇಹ.

ಅಂದ ಹಾಗೆ ಈ ಸುಂದರ ಸಂಬಂಧದ ಆಚರಣೆಗೂ ಇಂದು ದಿನವಿದೆ. ಪ್ರತಿವರ್ಷ ಜಗತ್ತಿನ ವಿವಿಧ ಭಾಗಗಳಲ್ಲಿ ಸ್ನೇಹಿತರ ದಿನವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ.

ಜುಲೈ 30 ರಂದು ಕೆಲವು ದೇಶಗಳಲ್ಲಿ ಅಂತರರಾಷ್ಟ್ರೀಯ ಸ್ನೇಹಿತರ ದಿನವನ್ನು ಆಚರಿಸಿದರೆ, ಇನ್ನೂ ಕೆಲವು ದೇಶಗಳಲ್ಲಿ ಆಗಸ್ಟ್‌ ತಿಂಗಳ ಮೊದಲ ಭಾನುವಾರವನ್ನು ಸ್ನೇಹಿತರ ದಿನ ಎಂದು ಆಚರಿಸುತ್ತಾರೆ. ಅಮೆರಿಕ, ಯುಎಇ, ಭಾರತ, ಬಾಂಗ್ಲಾ ಮುಂತಾದ ಕಡೆಗಳಲ್ಲಿ ಆಗಸ್ಟ್‌ ಮೊದಲ ವಾರ ಇಂಟರ್‌ನ್ಯಾಷನಲ್‌ ಫ್ರೆಂಡ್‌ಶಿಪ್‌ ಡೇ ಆಚರಿಸಲಾಗುತ್ತದೆ.

ಸ್ನೇಹ ಸೌಹಾರ್ದವನ್ನು ನೆನಪಿಸುವ ಈ ಸುಂದರ ದಿನದ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

ಸ್ನೇಹಿತರ ದಿನವನ್ನು ಹುಟ್ಟು ಹಾಕಿದವರು

20ನೇ ಶತಮಾನದ ಆರಂಭದಲ್ಲಿ ಹಾಲ್‌ಮಾರ್ಕ್‌ ಕಾರ್ಡ್‌ಗಳು ಮತ್ತು ಅದರ ಸೃಷ್ಟಿಕರ್ತ ಜಾಯ್ಸ್‌ ಹಾಲ್‌ ಸ್ನೇಹವನ್ನು ಸ್ಮರಿಸಲು ಒಂದು ದಿನ ಬೇಕು ಎಂಬ ಉದ್ದೇಶದಿಂದ ಈ ದಿನದ ಆಚರಣೆಯ ಪ್ರಸ್ತಾಪ ಮಾಡಿದರು. ಇದು ಅಂತರರಾಷ್ಟ್ರೀಯ ಸ್ನೇಹಿತರ ದಿನವಾಗಿ ಮುಂದುವರಿಯಿತು. ಇವರ ಈ ಸುಂದರ ಕಲ್ಪನೆಯು ಜಗತ್ತಿನಲ್ಲಿ ಸ್ನೇಹಿತರ ದಿನ ಎಂಬ ಸುಂದರ ದಿನವನ್ನು ಆಚರಿಸಲು ಸಾಕ್ಷಿಯಾಯಿತು.

ಇತಿಹಾಸ ಹೀಗೂ ಹೇಳುತ್ತದೆ

ಇನ್ನೊಂದು ಇತಿಹಾಸದ ಪ್ರಕಾರ ಫ್ರೆಂಡ್‌ಶಿಪ್‌ ಡೇ ಪರಿಕಲ್ಪನೆಯನ್ನು ಮೊದಲು 1958ರಲ್ಲಿ ಪರುಗ್ವೆಯಲ್ಲಿ ಪ್ರಸ್ತಾಪಿಸಲಾಯಿತು. ಅಂದಿನಿಂದ ಈ ದಿನವು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯಿತು ಮತ್ತು 1997ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದನ್ನು ಅಂಗೀಕರಿಸಲಾಯಿತು ಎನ್ನಲಾಗುತ್ತದೆ.

2011ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇಂಟರ್‌ನ್ಯಾಷನಲ್‌ ಡೇ ಆಫ್‌ ಫ್ರೆಂಡ್‌ಶಿಪ್‌ ಅನ್ನು ಘೋಷಿಸಿತ್ತು. ವಿಶ್ವಸಂಸ್ಥೆಯು ಜುಲೈ 30 ಅನ್ನು ಅಂತರರಾಷ್ಟ್ರೀಯ ಸ್ನೇಹಿತರ ದಿನ ಎಂದು ಅಧಿಕೃತವಾಗಿ ಘೋಷಿಸಿತು. ಅಂದಿನಿಂದ ಕೆಲವು ದೇಶಗಳಲ್ಲಿ ಜುಲೈ 30 ರಂದು ಸ್ನೇಹಿತರ ದಿನವನ್ನು ಆಚರಿಸುತ್ತವೆ.

1935ರಲ್ಲಿ, ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ ಆಗಸ್ಟ್ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹ ದಿನ ಎಂದು ಗೊತ್ತುಪಡಿಸಿತು, ಸ್ನೇಹ ಬಂಧದ ಮಹತ್ವವನ್ನು ಮತ್ತಷ್ಟು ಒತ್ತಿಹೇಳಿತು ಎಂದೂ ಹೇಳಲಾಗುತ್ತದೆ.

ಹೀಗೆ ಸ್ನೇಹಿತರ ದಿನಕ್ಕೆ ಒಂದೊಂದು ಇತಿಹಾಸವಿದೆ. ಅಲ್ಲದೇ ಅನೇಕ ದೇಶಗಳು ವಿಭಿನ್ನ ದಿನಾಂಕಗಳಲ್ಲಿ ಫ್ರೆಂಡ್‌ಶಿಪ್ ಡೇ ಅನ್ನು ಆಚರಿಸಲು ಪ್ರಾರಂಭಿಸಿದವು.

2023 ರ ಥೀಮ್‌

ʼಸ್ನೇಹದ ಮೂಲಕ ಮಾನವ ಚೈತನ್ಯವನ್ನು ಹಂಚಿಕೊಳ್ಳಿʼ ಎಂದು 2023ರ ಸ್ನೇಹಿತರ ದಿನದ ಥೀಮ್‌ ಆಗಿದೆ. ಇದು ವ್ಯಕ್ತಿಗಳ ನಡುವೆ ಅರ್ಥಪೂರ್ಣ ಸಂಪರ್ಕ ಮತ್ತು ಸೌಹಾರ್ದತೆ ಬೆಳಸುವ ಉದ್ದೇಶವನ್ನು ಹೊಂದಿದೆ.

ಆಚರಣೆ

ಅಂತರರಾಷ್ಟ್ರೀಯ ಸ್ನೇಹಿತರ ದಿನವು ಸ್ನೇಹಿತರ ಕಡೆಗೆ ಕೃತಜ್ಞತೆ ಹಾಗೂ ಪ್ರೀತಿಯನ್ನು ವ್ಯಕ್ತಪಡಿಸಲು ಪರಿಪೂರ್ಣ ಅವಕಾಶವನ್ನು ಒದಗಿಸುತ್ತದೆ. ಈ ದಿನದಂದು ಸ್ನೇಹಿತರೊಂದಿಗೆ ಕಾಲ ಕಳೆಯುವುದು, ಟ್ರಿಪ್‌ ಆಯೋಜಿಸುವುದು, ಉಡುಗೊರೆಗಳನ್ನು ನೀಡುವುದು, ಸಂದೇಶ ಕಳುಹಿಸುವುದು, ಹಾಡುಗಳನ್ನು ಡೆಟಿಕೇಟ್‌ ಮಾಡುವುದು, ವಾಟ್ಸ್‌ಆಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗಳಲ್ಲಿ ಸ್ಟೇಟಸ್‌ ಹಾಕಿಕೊಳ್ಳುವ ಮೂಲಕ ಪ್ರೀತಿ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಬಹುದು.

mysore-dasara_Entry_Point