ಅನಗತ್ಯ ಗರ್ಭಧಾರಣೆಯಿಂದ ಹಿಡಿದು ಮುಟ್ಟಿನ ಸಮಸ್ಯೆಯವರೆಗೆ, ಮಹಿಳೆಯರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ-from unwanted pregnancies to menstrual problems here are answers to questions related to women smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅನಗತ್ಯ ಗರ್ಭಧಾರಣೆಯಿಂದ ಹಿಡಿದು ಮುಟ್ಟಿನ ಸಮಸ್ಯೆಯವರೆಗೆ, ಮಹಿಳೆಯರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ

ಅನಗತ್ಯ ಗರ್ಭಧಾರಣೆಯಿಂದ ಹಿಡಿದು ಮುಟ್ಟಿನ ಸಮಸ್ಯೆಯವರೆಗೆ, ಮಹಿಳೆಯರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ

ಮಹಿಳೆಯರಿಗೆ ಹಲವಾರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಇರುತ್ತವೆ. ಇದರಿಂದ ಪಾರಾಗಲು ಏನು ಮಾಡಬೇಕು ಎಂದು ಯಾವಾಗಲೂ ಇನ್ನೊಬ್ಬ ಮಹಿಳೆಯನ್ನು ಅವರು ಪ್ರಶ್ನಿಸುತ್ತಾರೆ. ಈ ಬಾರಿ ಸ್ತ್ರೀರೋಗ ತಜ್ಞೆ ಡಾ. ಅರ್ಚನಾ ಧವನ್ ಬಜಾಜ್ ನಿಮ್ಮ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ
ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ

ಪ್ರಶ್ನೆ: ನಾಲ್ಕು ತಿಂಗಳು ತುಂಬಿದ ಗರ್ಭಿಣಿಯೊಬ್ಬರು ಪ್ರಶ್ನೆ ಎತ್ತಿದ್ದಾರೆ. ನಾನು ಹೊಟ್ಟೆ ಹಾಗೂ ಎದೆ ಭಾಗದಲ್ಲಿ ಉರಿಯನ್ನು ಅನುಭವಿಸುತ್ತಾ ಇದ್ದೇನೆ. ಇದರಿಂದ ನನಗೆ ತುಂಬಾ ಸಮಸ್ಯೆ ಹಾಗೂ ಅದರೊಟ್ಟಿಗೆ ಆತಂಕ ಆಗುತ್ತಾ ಇದೆ. ನಾನು ಏನು ಮಾಡಬೇಕು? ಇದಕ್ಕೆ ಪರಿಹಾರ ಏನು ಎಂದು ಕೇಳಿದ್ದಾರೆ.

– ಕವಿತಾ ಶ್ರೀವಾಸ್ತವ್‌

ಉತ್ತರ ಹೀಗಿದೆ:

ಇದು ಎಲ್ಲರಿಗೂ ಸಾಮಾನ್ಯ ಸಮಸ್ಯೆಯಾಗಿದೆ. ದೇಹದಲ್ಲಿನ ಹಾರ್ಮೋನುಗಳ ಬದಲಾವಣೆ ಮತ್ತು ಗರ್ಭಾಶಯದ ಹೆಚ್ಚುತ್ತಿರುವ ಗಾತ್ರದಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ. ಗರ್ಭಾವಸ್ಥೆಯಲ್ಲಿ ಆಮ್ಲೀಯತೆ ಅಂದರೆ ಅಸಿಡಿಟಿ ಸಮಸ್ಯೆಯನ್ನು ನಿಯಂತ್ರಿಸಲು, ಇದಕ್ಕೆ ಕಾರಣವಾಗುವ ಕೆಲ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ. ಕೆಲವು ಜನರು ನಿರ್ದಿಷ್ಟ ಹುಳಿ ಅಥವಾ ಮಸಾಲೆ ಇತ್ಯಾದಿಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದರಿಂದಾಗಿ ಈ ರೀತಿ ಆಗುತ್ತದೆ.

ಇದನ್ನು ತಪ್ಪಿಸಲು, ಡಯಾಜಿನ್, ಮ್ಯೂಕೈನೆ ಜೆಲ್ ನಂತಹ ಔಷಧಿಗಳನ್ನು ಸಹ ಗರ್ಭಾವಸ್ಥೆಯಲ್ಲಿ ಸೇವಿಸಬಹುದು. ಹೆಚ್ಚಿನ ಸಮಸ್ಯೆ ಇದ್ದರೆ, ನೀವು ವೈದ್ಯರ ಸಲಹೆಯ ಪ್ರಕಾರ ಔಷಧಿಗಳನ್ನು ತೆಗೆದುಕೊಳ್ಳಬೇಕು. ಆದರೆ, ಕಡಿಮೆ ಪ್ರಮಾಣದ ಆಹಾರವನ್ನು ಸೇವಿಸುವುದು, ಹೆಚ್ಚಿನ ಪ್ರಮಾಣದ ಲಸ್ಸಿ, ಮಜ್ಜಿಗೆ ಮತ್ತು ತಣ್ಣನೆಯ ಹಾಲು ಇತ್ಯಾದಿಗಳನ್ನು ಸೇವಿಸುವುದು, ಬೇಗನೆ ಊಟ ಮಾಡುವುದು ಮತ್ತು ಊಟದ ನಂತರ ನಡೆಯುವುದು ಗರ್ಭಾವಸ್ಥೆಯಲ್ಲಿ ಈ ಸಮಸ್ಯೆಯನ್ನು ತಡೆಯಲು ಸಹಾಯವಾಗುವ ಅಂಶವಾಗಿದೆ.

ಗರ್ಭನಿರೋಧಕವಾಗಿ ಏನು ಬಳಸಬಹದು?

• ನನಗೆ 45 ವರ್ಷ ವಯಸ್ಸು. ನಾನು ಅನೇಕ ವರ್ಷಗಳಿಂದ ಐಯುಡಿಯನ್ನು (ಯೋನಿಯ ಮೂಲಕ ಗರ್ಭದ ಒಳಗಡೆ ಸೇರಿಸಿಕೊಳ್ಳವ ಒಂದು ಸಾಧನ) ಗರ್ಭನಿರೋಧಕವಾಗಿ ಬಳಸುತ್ತಿದ್ದೇನೆ. ಸಮಸ್ಯೆಯೆಂದರೆ ನಾನು ಕೊನೆಯ ಬಾರಿಗೆ ಐಯುಡಿ ಹೊಂದಿದ್ದೆ ಎಂದು ನನಗೆ ನೆನಪಿಲ್ಲ. ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ನಾನೇನು ಮಾಡಬೇಕು?

- ಮೋಹಿನಿ ಠಾಕೂರ್

ಉತ್ತರ: ನೀವು ಐಯುಡಿ ಬಳಸುತ್ತಿದ್ದರೆ ಅದನ್ನು ಹಾಕಿಕೊಂಡು ಎಷ್ಟು ವರ್ಷಗಳಾಗಿದೆ ಎಂದು ಪರಿಶೀಲನೆ ಮಾಡಿಕೊಳ್ಳಲೇಬೇಕು. ನೀವು ಸಂಪೂರ್ಣವಾಗಿ ಮರೆತೇ ಹೋಗಿದ್ದೀರಿ ಎಂದಾದರೆ ಅದನ್ನು ನೀವು ಒಮ್ಮೆ ತೆಗೆಸಿ, ಬೇರೆಯದನ್ನು ಹಾಕಿಸಿಕೊಳ್ಳುವುದು ಉತ್ತಮ.

ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಐಯುಡಿಗಳಿಗೆ ಉತ್ತಮ ಆಯ್ಕೆ, ಇದರಿಂದ ನಿಮಗೆ ಏನೂ ತೊಂದರೆ ಆಗುವುದಿಲ್ಲ. 5 ವರ್ಷಗಳ ವರೆಗೆ ನೀವು ಇದನ್ನು ಯಾವುದೇ ತೊಂದರೆ ಇಲ್ಲದೇ ಬಳಕೆ ಮಾಡಬಹುದು. ನಂತರ ಇದನ್ನು ಬದಲಾಯಿಸಿದರೆ ಸಾಕು. ಅಂತಹ ಯಾವುದೇ ಸಾಧನವನ್ನು ಸೇರಿಸಿದ ದಿನಾಂಕವನ್ನು ಯಾವಾಗಲೂ ಎಲ್ಲಿಯಾದರೂ ಬರೆಯಿರಿ. ಐಯುಡಿ ಇದೆಯೇ ಎಂದು ಪರೀಕ್ಷಿಸಲು ವರ್ಷಕ್ಕೊಮ್ಮೆ ಅಲ್ಟ್ರಾಸೌಂಡ್ ಮಾಡಿ. ಇದೀಗ ಐಯುಡಿಗಳು ಮೂರು ವರ್ಷ, ಐದು ವರ್ಷ ಮತ್ತು ಏಳು ವರ್ಷಗಳ ಕಾಲಾವಧಿಗೆ ಲಭ್ಯವಿದೆ.

• ನಾನು ಯಾವಾಗಲೂ ಮುಟ್ಟಿನ ಸಮಯದಲ್ಲಿ ಪ್ಯಾಡ್‌ಗಳನ್ನು ಬಳಸುತ್ತಿದ್ದೇನೆ. ಆ ಕಳೆದ ಕೆಲವು ವರ್ಷಗಳಲ್ಲಿ, ಟ್ಯಾಂಪೂನ್ಗಳು ಮತ್ತು ಮುಟ್ಟಿನ ಕಪ್‌ಗಳ ಪ್ರವೃತ್ತಿ ಹೆಚ್ಚಾಗಿದೆ. ನಾನು ಪ್ಯಾಡ್‌ಗಳ ಬದಲು ಬೇರೆ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬೇಕು ಎಂದಾದರೆ ಯಾವುದು ಉತ್ತಮ?

- ಕಲ್ಪನಾ ವರ್ಮಾ

ಮುಟ್ಟಿನ ಸಮಯದಲ್ಲಿ ಪ್ಯಾಡ್ಗಳು, ಟ್ಯಾಂಪೂನ್ಗಳು ಮತ್ತು ಮುಟ್ಟಿನ ಕಪ್ಗಳಲ್ಲಿ ಯಾವುದಾದರೂ ಒಂದನ್ನು ಬಳಸುವುದು ಸೂಕ್ತವಾಗಿದೆ. ಅವುಗಳನ್ನು ಬಳಸುವಾಗ ನೀವು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಬೇಕು. ಮುಟ್ಟಿನ ಕಪ್ ಬಳಸುತ್ತಿದ್ದರೆ, ಅದನ್ನು ಪ್ರತಿದಿನ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿದ ನಂತರ ಮರುಬಳಕೆ ಮಾಡಬಹುದು. ಒಂದು ದಿನದಲ್ಲಿ ಎಷ್ಟು ಬಾರಿ ಟ್ಯಾಂಪೂನ್ ಅನ್ನು ಬದಲಾಯಿಸಬೇಕು ಎಂಬುದು ಸಂಪೂರ್ಣವಾಗಿ ಟ್ಯಾಂಪೂನ್ ಗಾತ್ರ ಮತ್ತು ಆ ಅವಧಿಯಲ್ಲಿನ ರಕ್ತಸ್ರಾವದ ಪ್ರಮಾಣವನ್ನು ಅವಲಂಬಿಸಿರುತ್ತದೆ. ಟ್ಯಾಂಪೂನ್ ಬಳಸಿದ ನಂತರ, ಅದನ್ನು ದೀರ್ಘಕಾಲದವರೆಗೆ ಒಳಗಡೆಯೇ ಇಡುವುದು ಸೂಕ್ತವಲ್ಲ.

ಇದರಲ್ಲಿ ಜ್ವರ, ಸೋಂಕು ಮತ್ತು ಕೆಲವು ಸಂದರ್ಭಗಳಲ್ಲಿ ಯುರಿನ್ ಇನ್ಫೆಕ್ಶನ್ ಈ ರೀತಿ ಸಮಸ್ಯೆ ಕಾಡುತ್ತದೆ. ಕೈಗಳ ಮತ್ತು ಯೋನಿಯ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಿ.