ಕನ್ನಡ ಸುದ್ದಿ  /  Lifestyle  /  Fruits And Immunity: Need To Increase Immunity In The Body? Eat These Fruits

fruits and immunity: ದೇಹದಲ್ಲಿ ರೋಗನಿರೋಧಕಶಕ್ತಿ ಹೆಚ್ಚಬೇಕೇ? ಈ ಹಣ್ಣುಗಳನ್ನು ತಿನ್ನಿ

fruits and immunity: ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಹಲವು ಮಾರ್ಗಗಳನ್ನು ಅನುಸರಿಸುತ್ತೇವೆ. ಆದರೆ ಹಣ್ಣುಗಳನ್ನು ತಿನ್ನುವ ಮೂಲಕ ಸುಲಭವಾಗಿ ರೋಗನಿರೋಧಕಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು, ಜೊತೆಗೆ ಕಾಯಿಲೆಗಳನ್ನೂ ದೂರ ಮಾಡಬಹುದು.

ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳು
ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳು

ಇತ್ತೀಚೆಗೆ ಹೆಚ್ಚಿರುವ ಕಾಯಿಲೆಗಳು ಹಾಗೂ ದೈಹಿಕ, ಮಾನಸಿಕ ಸಮಸ್ಯೆಗಳ ಕಾರಣದಿಂದ ನಾವೆಲ್ಲರೂ ಆರೋಗ್ಯಕರ ಜೀವನಶೈಲಿಯ ಮೇಲೆ ಗಮನ ಹರಿಸುತ್ತಿದ್ದೇವೆ. ಅದರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ನಮ್ಮ ಆಹಾರಕ್ರಮದಲ್ಲಿ ಹಣ್ಣುಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯ. ಇದರಲ್ಲಿ ವಿಟಮಿನ್‌ ಹಾಗೂ ಮಿನರಲ್ಸ್‌ ಅಂಶ ಸಮೃದ್ಧವಾಗಿರುವ ಕಾರಣ ಇವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹಾಗಾದರೆ ರೋಗನಿರೋಧಕ ಶಕ್ತಿ ಟಾಪ್‌ 10 ಹಣ್ಣುಗಳು ಯಾವುವು, ಅವುಗಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತವೆ ನೋಡೋಣ.

ಅನಾನಸ್‌ (ಪೈನಾಪಲ್‌)

ಅನಾನಸ್‌ ಹಣ್ಣಿನಲ್ಲಿ ಬ್ರೋಮೆಲಿನ್ ಎನ್ನುವ ಕಿಣ್ವಗಳಿವೆ. ಇದು ಉತ್ಕರ್ಷಣ ವಿರೋಧಿ ಗುಣಗಳನ್ನು ಹೊಂದಿದೆ. ಇದು ದೇಹದಲ್ಲಿನ ಸೋಂಕುಗಳನ್ನು ನಿಗ್ರಹಿಸುವ ಗುಣಲಕ್ಷಣಗಳನ್ನು ಹೊಂದಿದೆ.

ಬ್ಲೂಬೆರಿ

ಬ್ಲೂಬೆರಿ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್‌ ಅಂಶ ಅಧಿಕವಾಗಿದೆ. ಇದು ಫ್ರಿ ರಾಡಿಕಲ್ಸ್‌ಗಳಿಂದ ಉಂಟಾಗುವ ಆಕ್ಸಿಡೇಟಿವ್‌ ಒತ್ತಡವನ್ನು ನಿಯಂತ್ರಿಸುತ್ತದೆ. ಈ ಆಕ್ಸಿಡೇಟಿವ್‌ ಒತ್ತಡದ ಕಾರಣದಿಂದ ದೇಹದಲ್ಲಿ ರೋಗ ನಿರೋಧಕಶಕ್ತಿಯ ಕುಂಠಿತವಾಗುತ್ತದೆ.

ಪಪ್ಪಾಯ

ಪಪ್ಪಾಯ ಹಣ್ಣಿನಲ್ಲಿ ವಿಟಮಿನ್‌ ಎ, ಸಿ ಹಾಗೂ ಇ ಅಂಶಗಳು ಸಮೃದ್ಧವಾಗಿವೆ. ಇದು ದೇಹದಲ್ಲಿ ಪ್ರತಿಕಾಯಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ರೋಗವನ್ನು ಉಂಟುಮಾಡುವ ರೋಗಕಾರಕಗಳ ವಿರುದ್ಧ ಹೋರಾಟ ನಡೆಸಿ ದೇಹವನ್ನು ರಕ್ಷಿಸುತ್ತದೆ.

ಸಿಟ್ರಸ್‌ ಹಣ್ಣುಗಳು

ಮೊಸಂಬಿ, ನಿಂಬೆ, ದ್ರಾಕ್ಷಿ, ಕಿತ್ತಳೆಯಂತಹ ಸಿಟ್ರಸ್‌ ಹಣ್ಣುಗಳಲ್ಲಿ ವಿಟಮಿನ್‌ ಸಿ ಅಂಶ ಸಮೃದ್ಧವಾಗಿರುತ್ತದೆ. ಇದು ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ.

ಕಿವಿ ಫ್ರೂಟ್‌

ಕಿತ್ತಳೆಗಿಂತ ಕಿವಿ ಫ್ರೂಟ್‌ನಲ್ಲಿ ಸಿಟ್ರಸ್‌ ಅಂಶ ಎರಡು ಪಟ್ಟು ಅಧಿಕವಾಗಿರುತ್ತದೆ. ಇದು ವಿಟಮಿನ್‌ ಕೆ ಮತ್ತು ಇ ಸಮೃದ್ಧವಾಗಿರುತ್ತದೆ. ಈ ಎರಡೂ ಅಂಶಗಳು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ತುಂಬಾನೇ ಸಹಕಾರಿ.

ಮಾವಿನಹಣ್ಣು

ಬೇಸಿಗೆ ಆರಂಭವಾಯಿತೆಂದರೆ ಮಾವಿನಹಣ್ಣಿನ ಸೀಸನ್‌ ಕೂಡ ಆರಂಭವಾದಂತೆ. ಮಾವಿನಹಣ್ಣುಗಳು ಕ್ಯಾರೊಟಿನಾಯ್ಡ್‌ಗಳ ಅದ್ಭುತ ಮೂಲವಾಗಿದ್ದು ಅದು ರೋಗನಿರೋಧಕ ಕೋಶಗಳನ್ನು ಬಲಪಡಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಸೀಬೆಹಣ್ಣು

ಪೇರಲೆಹಣ್ಣು ಅಂತಲೂ ಕರೆಯುವ ಸೀಬೆಹಣ್ಣಿನಲ್ಲಿ ವಿಟಮಿನ್‌ ಸಿ ಅಂಶ ಅಧಿಕವಾಗಿದೆ. ಫ್ರಿ ರಾಡಿಕಲ್ಸ್‌ಗಳಿಂದ ಜೀವಕೋಶಗಳನ್ನು ರಕ್ಷಿಸುವ ಫ್ಲೇವನಾಯ್ಡ್‌ ಅಂಶ ಇದರಲ್ಲಿ ಹೆಚ್ಚಿದೆ.

ಕಲ್ಲಂಗಡಿ

ಕಲ್ಲಂಗಡಿಯಲ್ಲಿ ಗ್ಲುಟಾಥಿಯೋನ್‌ ಅಂಶವಿರುತ್ತದೆ. ಇದು ಆಂಟಿಆಕ್ಸಿಡೆಂಟ್‌ ಆಗಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಅಲ್ಲದೇ ದೇಹದಲ್ಲಿ ಸೋಂಕಿನ ತೊಂದರೆಯನ್ನೂ ಕಡಿಮೆ ಮಾಡುತ್ತದೆ.

ದಾಳಿಂಬೆ

ದಾಳಿಂಬೆ ಹಣ್ಣಿನಲ್ಲಿ ಪಾಲಿಫೆನಾಲ್‌ ಅಂಶ ಅಧಿಕವಾಗಿದೆ. ಇದು ಉತ್ಕರ್ಷಣ ವಿರೋಧಿ ಗುಣವನ್ನೂ ಹೊಂದಿದ್ದು, ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಸೇಬುಹಣ್ಣು

ಸೇಬುಹಣ್ಣಿನಲ್ಲಿ ಪೆಕ್ಟಿನ್‌ ಎನ್ನುವ ನಾರಿನಂಶ ಸಮೃದ್ಧವಾಗಿದೆ. ಇದು ಕರುಳಿನ ಬ್ಯಾಕ್ಟೀರಿಯಾಗಳ ನಿವಾರಣೆಗೆ ಸಹಕಾರಿ, ಇದರೊಂದಿಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ವಿಭಾಗ