ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಬರಲಿದೆ ಬಜೆಟ್ ಸ್ನೇಹಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್15 5ಜಿ -Samsung Galaxy F15 5G
Samsung Galaxy F15 Price: ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್15 5ಜಿ ಸ್ಮಾರ್ಟ್‌ಫೋನ್ ಅತಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ. ಹೊಸ ಫೋನಿನಲ್ಲಿ ಏನೆಲ್ಲಾ ಇರುತ್ತೆ ತಿಳಿಯಿರಿ.
Samsung Galaxy F15 Price in India: ಸ್ಯಾಮ್ಸಂಗ್ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಗ್ಯಾಜೆಟ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದರ ಹೆಸರು ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್15. ಇದು 5ಜಿ ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್‌ನ ಟೀಸರ್ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದೆ. ಈ ಮಾದರಿಯ ಫೋನ್ ಅನ್ನು ಸ್ಯಾಮ್ಸಂಗ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಅನ್ನೋದು ಟೀಸರ್‌ನಲ್ಲಿ ಹೇಳಿದೆ. ಈ ಹಿನ್ನಲೆಯಲ್ಲಿ ಈ ಮಾದರಿಯ ಸ್ಮಾರ್ಟ್‌ಫೋನ್‌ನಲ್ಲಿ ಇರುವ ವೈಶಿಷ್ಟ್ಯತೆಗಳು ಮತ್ತು ಬೆಲೆಯ ವಿವರಗಳು ಇಲ್ಲಿ ತಿಳಿಯೋಣ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್15 ವೈಶಿಷ್ಟ್ಯಗಳು
ಈ ಹೊಸ ಸ್ಮಾರ್ಟ್‌ಫೋನ್ ಕುರಿತು ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್15 5ಜಿ ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಶಿನ್ 6100+ ಪ್ರೊಸೆಸರ್ ಅನ್ನು ಹೊಂದಿರುತ್ತದೆ. ಇದರಲ್ಲಿ 4GB RAM ಇದೆ. ಆ್ಯಂಡ್ರಾಯ್ಡ್ 14 ಆಧಾರಿತ ಸ್ಯಾಮ್ಸಂಗ್ ಒನ್ ಯುಐ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಭಾರತದ ಮಾರುಕಟ್ಟೆಗೆ ಬರಲಿರುವ ಸ್ಯಾಮ್ಸಂಗ್ ಎಫ್15 5ಜಿ ವೈಶಿಷ್ಟ್ಯಗಳ ಪೈಕಿ ಈ ಗ್ಯಾಡ್ಜೆಟ್ 90Hz ರಿಫ್ರೆಶ್ ರೇಟ್, 6.5 ಇಂಚಿನ ಅಲ್ಮೋಡ್ ಡಿಸ್‌ಪ್ಲೇ ಹೊಂದಿದೆ. 13MP ಫ್ರಂಟ್ ಕ್ಯಾಮೆರಾ ಮತ್ತು 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಟೀಸರ್‌ನಲ್ಲಿ ಮುಕುಲ್ ಶರ್ಮಾ ಹೇಳುವಂತೆ, ಗ್ಯಾಲಕ್ಸಿ ಎಫ್15 ಟ್ರಿಪಲ್ ಕ್ಯಾಮೆರಾವನ್ನು ಸಹ ಹೊಂದಿರುತ್ತದೆ ಅನ್ನೋದು ಸ್ಪಷ್ಟವಾಗಿದೆ.
ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್15 5ಜಿಬೆಲೆ ಎಷ್ಟಿರಲಿದೆ?
ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್15 5ಜಿ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಎಂದು ಸ್ಪಷ್ಟವಾಗಿದೆ. ಈ ಫೋನಿನ ಬಗ್ಗೆ ಈಗಾಗಲೇ ಹೊರಬಿದ್ದಿರುವ ವೈಶಿಷ್ಟ್ಯಗಳು ನಿಜವೇ ಆಗಿದ್ದರೆ ಈ ಸ್ಮಾರ್ಟ್‌ಅಫೋನ್ ಫೋನಿನ ಬೆಲೆ 15 ಸಾವಿರ ರೂಪಾಯಿಗಿಂತ ಕಡಿಮೆಯೇ ಇರಲಿದೆ ಎಂದು ಮಾರುಕಟ್ಟೆ ಮೂಲಗಳು ಭಾವಿಸಿವೆ. ಆ ಮೂಲಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇತರೆ ಕಂಪನಿಗಳ ಕಡಿಮೆ ಬೆಲೆಯ ಫೋನ್‌ಗಳಿಗೆ ಇದು ಪೈಪೋಟಿ ನೀಡಲಿದೆ. ಊಹಾಪೋಹಗಳು ಅದೇನಿ ಇರಲಿದೆ ಸ್ಯಾಮ್ಸಂಗ್ ಎಫ್15 ವೈಶಿಷ್ಟ್ಯಗಳು ಹಾಗೂ ಬೆಲೆಯ ಬಗ್ಗೆ ಆ ಸಂಸ್ಥೆಯೇ ಅಧಿಕೃತ ಮಾಹಿತಿಯನ್ನು ನೀಡಬೇಕಿದೆ. (This copy first appeared in Hindustan Times Kannada website. To read more like this please logon to kannada.hindustantimes.com).