Honor Pad 9: ಅತಿ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಹಾನರ್ ಪ್ಯಾಡ್ 9; ಟ್ಯಾಬ್ಲೆಟ್‌ ಬೆಲೆ, ವೈಶಿಷ್ಟ್ಯ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Honor Pad 9: ಅತಿ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಹಾನರ್ ಪ್ಯಾಡ್ 9; ಟ್ಯಾಬ್ಲೆಟ್‌ ಬೆಲೆ, ವೈಶಿಷ್ಟ್ಯ ಹೀಗಿದೆ

Honor Pad 9: ಅತಿ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಹಾನರ್ ಪ್ಯಾಡ್ 9; ಟ್ಯಾಬ್ಲೆಟ್‌ ಬೆಲೆ, ವೈಶಿಷ್ಟ್ಯ ಹೀಗಿದೆ

Honor Pad 9 India launch: ಹಾನರ್ 9 ಟ್ಯಾಬ್ಲೆಟ್ ಅತಿ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ. ಈ ಮಾಡೆಲ್‌ನ ಬೆಲೆ, ವೈಶಿಷ್ಟ್ಯಗಳು ಸೇರಿದಂತೆ ಖರೀದಿಗೂ ಮುನ್ನ ತಿಳಿಯಬೇಕಾದ ಮಾಹಿತಿ ಇಲ್ಲಿದೆ.

ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹಾನರ್ ಪ್ಯಾಡ್ 9 ಬೆಲೆ, ವೈಶಿಷ್ಟ್ಯಗಳ ವಿವರ ಇಲ್ಲಿ ತಿಳಿಯಿರಿ
ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹಾನರ್ ಪ್ಯಾಡ್ 9 ಬೆಲೆ, ವೈಶಿಷ್ಟ್ಯಗಳ ವಿವರ ಇಲ್ಲಿ ತಿಳಿಯಿರಿ

Honor Pad 9 launch date India: ಪ್ಯಾಡ್ 9 ಗ್ಯಾಜೆಟ್ ಅನ್ನು ಕಳೆದು ವರ್ಷದ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಹಾನರ್ ಈ ಪ್ಯಾಡ್ 9 ಅವನ್ನು ಹೊರ ತಂದಿದೆ. ಇದೀಗ ಹಾನರ್ ಪ್ಯಾಡ್ 9 ಭಾರತದಲ್ಲಿ ಲಾಂಚ್ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಈ ಟ್ಯಾಬ್ಲೆಟ್ ಇತ್ತೀಚೆಗೆ ಬಿಐಎಸ್ ಪ್ರಮಾಣಪತ್ರವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಈ ಮಾಡೆಲ್‌ನಲ್ಲಿರುವ ವಿಶೇಷಗಳ ಬಗ್ಗೆ ವಿವರವಾಗಿ ತಿಳಿಯೋಣ.

ಸಾಮಾನ್ಯವಾಗಿ ಬಿಐಎಸ್ ಸರ್ಟಿಫಿಕೇಟ್ ಪಡೆದುಕೊಂಡಿದೆ ಎಂದರೆ ಸ್ವಲ್ಪ ಸಮಯದ ಬಳಿಕ ಈ ಗ್ಯಾಜೆಟ್ ಮಾರುಕಟ್ಟೆಗೆ ಬರುತ್ತದೆ. ಈ ಲೆಕ್ಕಾಚಾರದಲ್ಲಿ ಹಾನರ್ ಪ್ಯಾಡ್ 9 ಕೂಡ ಶೀಘ್ರವೇ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸೋದು ಖಚಿತವಾಗಿದೆ. ಬಿಐಎಸ್ ಸರ್ಟಿಫಿಕೇಟ್‌ನ ಮಾಡೆಲ್ ಸಂಖ್ಯೆ HE2-W09. ಸಿಂಗಾಪುರದಲ್ಲೂ ಇದೇ ಮಾದರಿಯ ಸಂಖ್ಯೆಯನ್ನು ಆ ಸಂಸ್ಥೆ ಪಡೆದುಕೊಂಡಿದೆ. ವಾಸ್ತವವಾಗಿ ಮಾಡೆಲ್ ಸಂಖ್ಯೆಯನ್ನು ಹೊರತುಪಡಿಸಿದರೆ ಹಾನರ್ ಪ್ಯಾಡ್ 9 ಕುರಿತ ಯಾವುದೇ ವಿವರಗಳು ಬಹಿರಂಗವಾಗಿಲ್ಲ. ಈ ಟ್ಯಾಬ್ಲೆಟ್ ಈಗಾಗಲೇ ಚೀನಾದಲ್ಲಿ ಲಾಂಚ್ ಆಗಿರುವುದರಿಂದ ಭಾರತದಲ್ಲಿ ಬಿಡುಗಡೆಯಾಗಲಿರು ಹಾನರ್ ಪ್ಯಾಡ್ 9 ವೈಶಿಷ್ಟ್ಯಗಳು ಬಹುತೇಕ ಒಂದೇ ಆಗಿರುವ ಸಾಧ್ಯತೆ ಇರುತ್ತದೆ.

ಹಾನರ್ ಪ್ಯಾಡ್ 9 ಟ್ಯಾಬ್ಲೆಟ್ 12.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಪೇಪರ್ ಮಾದರಿಯ ಡಿಸ್‌ಪ್ಲೇಗೆ ಮ್ಯಾಟ್ ಫಿನಿಶಿಂಗ್ ನೀಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು 2,560 x 1,600 ಫಿಕ್ಸೆಲ್‌ಗಳ ರೆಸಲ್ಯೂಷನ್ ಹೊಂದಿದೆ. ಎಲ್‌ಸಿಡಿ ಪ್ಯಾನೆಲ್ ಪಿಕ್ ಬ್ರೈಟ್‌ನೆಸ್ 550 ನಿಟ್ಸ್ ಇದೆ. ಸ್ಕ್ರೀನ್ ಟು ಬಾಡಿ ಅನುಪಾತವು 88 ಪ್ರತಿಶತವಿದೆ. ಈ ಸ್ಕ್ರೀನ್ ರಿಫ್ಲೆಕ್ಟ್ ಲೈಟ್ಅನ್ನು ಶೇಕಡಾ 98 ರಷ್ಟು ಎಲಿಮಿನೇಟ್ ಮಾಡುತ್ತದೆ ಎಂದು ಆ ಸಂಸ್ಥೆ ಹೇಳಿದೆ. ಈ ಟ್ಯಾಬ್ ಅನ್ನು ಸ್ಟೈಲಸ್ ಮತ್ತು ಕೀಬೋರ್‌ನೊಂದಿಗೂ ಆಪರೇಟ್ ಮಾಡಬಹುದು.

ಭಾರತದಲ್ಲಿ ಹಾನರ್ ಪ್ಯಾಡ್ 9 ಬೆಲೆ ಎಷ್ಟಿರುತ್ತೆ?

ಹಾನರ್ ಪ್ಯಾಡ್ 9 13ಎಂಪಿ ರೇರ್ ಮತ್ತು 8ಎಪಿ ಸೆಲ್ಫಿ ಕ್ಯಾಮೆರಾಗಳೊಂದಿಗೆ ಬರುತ್ತಿದೆ. ಆಡಿಯೋಗಾಗಿ ಇದರಲ್ಲಿ 8 ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಈ ಟ್ಯಾಬ್ಲೆಟ್ ಸ್ನ್ಯಾಪ್‌ಡ್ರ್ಯಾಗನ್ 6 ಜೆನ್ 1 ಪ್ರೊಸೆಸರ್ ಹೊಂದಿದ್ದು, 12GB RAM- 512GB ಸ್ಟೋರೇಜ್ ವೇರಿಯಂಟ್‌ಗಳನ್ನು ಹೊಂದಿದೆ. ಇದರಲ್ಲಿ 8,300 mAh ಬ್ಯಾಟರಿ ಮತ್ತು 35W ವೇಗದ ಚಾರ್ಜಿಂಗ್ ಸಪೋರ್ಟ್ ಇದೆ. ಆಂಡ್ರಾಯ್ಡ್ 13 ಆಧಾರಿತ MagicOS 7.2 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಅಕಾಶ ನೀಲಿ, ಬಿಳಿ ಹಾಗೂ ಬೂದು ಬಣ್ಣಗಳಲ್ಲಿ ಲಭ್ಯವಿದೆ. 8GB RAM- 256GB ಸ್ಚೋರೇಜ್ ಇರುವ ಪ್ಯಾಡ್ ಬೆಲೆ 20,500 ರೂಪಾಯಿ ಹಾಗೂ 12GB RAM- 512GB ಸ್ಟೋರೇಜ್ ಸಾಮರ್ಥ್ಯದ ಟ್ಯಾಬ್ಲೆಟ್ ಬೆಲೆ 23,500 ರೂಪಾಯಿ ಅಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ. ಹಾನರ್ ಪ್ಯಾಡ್ 9 ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿದ್ದು, ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಭಾರತದಲ್ಲೂ ಇದೇ ರೀತಿಯ ಮಾರುಕಟ್ಟೆ ಸಿಗಲಿದೆ ಎಂದು ಸಂಸ್ಥೆ ನಿರೀಕ್ಷೆ ಮಾಡುತ್ತಿದೆ. ಹಾನರ್ ಪ್ಯಾಡ್ 9 ಭಾರತದಲ್ಲಿ ಬಿಡುಗಡೆಯ ದಿನಾಂಕವನ್ನು ಕಂಪನಿ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner