ಕನ್ನಡ ಸುದ್ದಿ  /  Lifestyle  /  Gadget News Iphone 15 Price Reduced In Amazon Exchange Bank Discount Also Available Rmy

iPhone 15 price: ಐಫೋನ್ 15 ಮೇಲೆ ಭಾರಿ ಡಿಸ್ಕೌಂಟ್; ಎಕ್ಸ್‌ಚೇಂಜ್, ಬ್ಯಾಂಕ್ ರಿಯಾಯಿತಿ ಸೇರಿ ಇಷ್ಟೊಂದು ಆಫರ್ಸ್

iPhone 15 price: ಐಪೋನ್ 15 ಖರೀದಿಸುವ ಪ್ಲಾನ್ ಮಾಡಿದ್ದರೆ ನಿಮಾಗಿ ಈ ಮಾಹಿತಿ. ಅಮೆಜಾನ್‌ನಲ್ಲಿ ಐಫೋನ್ 15 ಬೆಲೆಯಲ್ಲಿ ಭಾರಿ ರಿಯಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಅದರ ವಿವರ ಇಲ್ಲಿದೆ.

ಐಫೋನ್ 15 ಮೇಲೆ ಅಮೆಜಾನ್‌ ಭಾರಿ ಡಿಸ್ಕೌಂಟ್ ಘೋಷಣೆ ಮಾಡಿದೆ, ಅದರ ವಿವರಗಳು ಇಲ್ಲಿವೆ.
ಐಫೋನ್ 15 ಮೇಲೆ ಅಮೆಜಾನ್‌ ಭಾರಿ ಡಿಸ್ಕೌಂಟ್ ಘೋಷಣೆ ಮಾಡಿದೆ, ಅದರ ವಿವರಗಳು ಇಲ್ಲಿವೆ.

ಜಗತ್ತಿನ ದೈತ್ಯ ಇ-ಕಾರ್ಮಸ್ ಕಂಪನಿ ಅಮೆಜಾನ್ ಐಫೋನ್ ಪ್ರಿಯಕರಿಗೆ ಗುಡ್ ನ್ಯೂಸ್ ನೀಡಿದ್ದು, ಆ್ಯಪಲ್‌ನ ಟಾಪ್ ಫೋನ್ ಐಪೋನ್ 15 ಬೆಲೆಯಲ್ಲಿ ಭಾರಿ ರಿಯಾಯಾತಿಗಳನ್ನು ಘೋಷಣೆ ಮಾಡಿದೆ. ಇದಷ್ಟೇ ಬ್ಯಾಂಕ್ ಆಫರ್‌ಗಳು ಸಿಗುತ್ತಿವೆ. ಎಲ್ಲಾ ಡಿಸ್ಕೌಂಟ್‌ಗಳ ಬಳಿಕ ಐಫೋನ್ 15 ಎಷ್ಟು ರೂಪಾಯಿ ಲಭ್ಯವಿದೆ ಅನ್ನೋದನ್ನ ತಿಳಿಯೋಣ.

ಅಮೆಜಾನ್‌ನಲ್ಲಿ ಐಫೋನ್ 15 128 GB ವೇರಿಯಂಟ್ ಬೆಲೆ ಡಿಸ್ಕೌಂಟ್ ಘೋಷಣೆಗೂ ಮುನ್ನ 79,900 ರೂಪಾಯಿ ಇದೆ. ಅಮೆಜಾನ್ ಈ ಬೆಲೆಯಲ್ಲಿ ಶೇಕಡಾ 11 ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಿದೆ. ಅಮೆಜಾನ್‌ನಲ್ಲಿ ಪ್ರಸ್ತುತ ಡಿಸ್ಕೌಂಟ್ ಬಳಿಕ 70,999 ರೂಪಾಯಿಗೆ ಖರೀದಿಸಬಹುದು. ಅಂದರೆ ನಿಮಗೆ ಇ-ಕಾಮರ್ಸ್ ಸಂಸ್ಥೆಯಿಂದಲೇ 8,901 ರೂಪಾಯಿ ರಿಯಾಯಿತಿ ಸಿಗುತ್ತದೆ. ಇಷ್ಟಕ್ಕೇ ಖುಷಿ ಪಡಬೇಡಿ ಇನ್ನೂ ಇದು. ಅಮೆಜಾನ್ ರಿಯಾಯಿತಿ ಜೊತೆಗೆ ಐಫೋನ್ 15 ಮೇಲೆ ಎಕ್ಸ್‌ಚೇಂಜ್ ಆಫರ್‌ಗಳು ಮತ್ತು ಬ್ಯಾಂಕ್‌ ಕೊಡುಗೆಗಳೂ ಸಹ ಇವೆ.

ಅಮೆಜಾನ್ ಎಕ್ಸ್‌ಚೇಂಜ್ ಆಫರ್ ಅಡಿಯಲ್ಲಿ ಹೊಸ ಐಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಯಾವುದೇ ಹಳೆ ಫೋನ್ ನೀಡಿದರೆ ಅದರ ಕಾರ್ಯಕ್ಷಮತೆಗೆ ಅನುಗುಣವಾಗಿ ಗರಿಷ್ಠ 17,300 ರೂಪಾಯಿ ವರೆಗೆ ವಿನಿಮಯ ಕೊಡುಗೆ ಇದೆ. ನಿಮ್ಮ ಪಿನ್ ಕೋಡ್ ಬಳಸಿ ವಿನಿಮಯ ಆಫರ್‌ಗಳನ್ನು ಪಡೆಯಬಹುದು. ಇದನ್ನೆಲ್ಲಾ ಪರಿಶೀಲಿಸಬೇಕೆಂದು ಅಮೆಜಾನ್ ವೆಬ್‌ಸೈಟ್‌ಗೆ ಭೇಟಿ ನೀಡಿ. ಎಕ್ಸ್‌ಚೇಂಜ್ ಆಫರ್ ಸಿಕ್ಕರೆ ಐಫೋನ್ 15 ಮತ್ತಷ್ಟು ಕಡಿಮೆ ಬೆಲೆಗೆ ಸಿಗುತ್ತದೆ.

ಎಕ್ಸ್‌ಚೇಂಜ್ ಆಫರ್ ಜೊತೆಗೆ ಹಲವು ಬ್ಯಾಂಕ್‌ ಆಫರ್‌ಗಳನ್ನು ನೋಡುವುದಾದರೆ ಹೆಚ್‌ಎಸ್‌ಬಿಸಿ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೇಲೆ 150 ರೂಪಾಯಿ ರಿಯಾಯಿತಿ ಲಭ್ಯವಿದೆ. ಇವುಗಳ ಜೊತೆಗೆ ಬ್ಯಾಂಕ್ ಕೊಡುಗೆಗಳೂ ಇವೆ. ಯಾವುದೇ ವೆಚ್ಚದ ಇಎಂಐ ಆಯ್ಕೆಗಳು ಸಹ ಲಭ್ಯವಿದೆ. ಈ ಎಲ್ಲಾ ಡಿಸ್ಕೌಂಟ್, ಆಫರ್‌ಗಳ ಮೂಲಕ ನಿಮ್ಮ ನೆಚ್ಚಿನ ಐಫೋನ್ 15 ಖರೀದಿಸಿ.

ಐಫೋನ್ 15 ಪ್ಲಸ್ ಮೇಲೆ ಭಾರಿ ರಿಯಾಯಿತಿ ನೀಡುತ್ತಿರುವ ಅಮೆಜಾನ್

ಕೆಲ ದಿನಗಳ ಹಿಂದಷ್ಟೇ ಐಫೋನ್ 15 ಪ್ಲಸ್ ಮೇಲೆ ಭಾರಿ ರಿಯಾಯಿತಿಗಳನ್ನು ಅಮೆಜಾನ್ ಘೋಷಣೆ ಮಾಡಿತ್ತು. ಐಫೋನ್ 15 ಪ್ಲಸ್ 128 GB ಸ್ಮಾರ್ಟ್‌ಫೋನ್ ವೇರಿಯಂಟ್ ಮೂಲ ಬೆಲೆ 89,900 ರೂಪಾಯಿ ಆಗಿದೆ. ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಅವನ್ನು ಅಮೆಜಾನ್‌ನಲ್ಲಿ ಭಾರಿ ಡಿಸ್ಕೌಂಟ್‌ನೊಂದಿಗೆ ಖರೀದಿ ಮಾಡಬಹುದು.

ಐಫೋನ್ 15 ಪ್ಲಸ್ ಕಪ್ಪು, ನೀಲಿ, ಹಸಿರು, ಗುಲಾಬಿ ಹಾಗೂ ಹಳದಿ ಸೇರಿ 5 ಬಣ್ಣಗಳಲ್ಲಿ ಲಭ್ಯವಿದೆ. ಅಮೆಜಾನ್ ಪ್ರಸ್ತುತ ಐಫೋನ್ 15 ಪ್ಲಸ್ ಮೇಲೆ ಶೇಕಡಾ 10 ರಷ್ಟು ಡಿಸ್ಕೌಂಟ್ ನೀಡುತ್ತಿದೆ. ಈ ರಿಯಾಯಿತಿಯೊಂದಿಗೆ ಐಫೋನ್ 15 ಪ್ಲಸ್ ಫೋನ್ ಬೆಲೆ 80,990 ರೂಪಾಯಿ ಇದೆ. ಅಂದರೆ ಸುಮಾರು 8,910 ರೂಪಾಯಿಗೆ ಲಭ್ಯವಿದೆ. ಹೆಚ್ಚುವರಿಯಾಗಿ ಖರೀದಿದಾರರು ಇತರ ಬ್ಯಾಂಕ್ ಕೊಡುಗೆಗಳು ಮತ್ತು ಎಕ್ಸ್‌ಚೇಂಜ್ ಆಫರ್‌ಗಳೊಂದಿಗೆ ಪಡೆಯಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com )