Nothing Phone 2a: ಮಾರ್ಚ್ 5ಕ್ಕೆ ನಥಿಂಗ್ ಫೋನ್ 2ಎ ಬಿಡುಗಡೆ; ಸ್ಮಾರ್ಟ್‌ಫೋನ್ ಬೆಲೆ, ಫೀಚರ್ಸ್ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Nothing Phone 2a: ಮಾರ್ಚ್ 5ಕ್ಕೆ ನಥಿಂಗ್ ಫೋನ್ 2ಎ ಬಿಡುಗಡೆ; ಸ್ಮಾರ್ಟ್‌ಫೋನ್ ಬೆಲೆ, ಫೀಚರ್ಸ್ ವಿವರ ಇಲ್ಲಿದೆ

Nothing Phone 2a: ಮಾರ್ಚ್ 5ಕ್ಕೆ ನಥಿಂಗ್ ಫೋನ್ 2ಎ ಬಿಡುಗಡೆ; ಸ್ಮಾರ್ಟ್‌ಫೋನ್ ಬೆಲೆ, ಫೀಚರ್ಸ್ ವಿವರ ಇಲ್ಲಿದೆ

Nothing Phone 2a: ಕಾರ್ಲ್ ಪೀ ಮುಂದಾಳತ್ವದ ನಥಿಂಗ್ ತನ್ನ ಮಿಡ್ ರೇಂಜ್‌ನ ನಂಥಿಂಗ್ ಫೋನ್ 2ಎ ಬಿಡುಗಡೆ ಮಾಡೋಕೆ ಸಿದ್ಧವಾಗಿದೆ. ಮಾರ್ಚ್ 5ಕ್ಕೆ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುತ್ತಿದೆ.

ನಥಿಂಗ್ ಫೋನ್ 2ಎ ಮಾರ್ಚ್ 5ಕ್ಕೆ ಬಿಡುಗಡೆಯಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳನ್ನು ತಿಳಿಯಿರಿ.
ನಥಿಂಗ್ ಫೋನ್ 2ಎ ಮಾರ್ಚ್ 5ಕ್ಕೆ ಬಿಡುಗಡೆಯಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳನ್ನು ತಿಳಿಯಿರಿ.

ಬಹು ನಿರೀಕ್ಷಿತ ಹಾಗೂ ಭಾರಿ ಹೈಪ್ ಕ್ರಿಯೇಟ್ ಮಾಡಿರುವ ಕಾರ್ಲ್ ಪೀ ನೇತೃತ್ವದ ಟೆಕ್ ಕಂಪನಿ ನಥಿಂಗ್ ಮಿಡ್ ರೇಂಜ್‌ನ ನಥಿಂಗ್ ಫೋನ್ 2ಎ ಸ್ಮಾರ್ಟ್‌ಫೋನ್ ಅನ್ನು ಮಾರ್ಚ್ 5ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆಗಳನ್ನ ಮಾಡಿಕೊಂಡಿದೆ. ಹೊಸ ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್‌ಫೋನ್‌ ಕಂಪನಿಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆಯೇ ರಿಯಲ್‌ಮಿ ಮತ್ತು ಶಿಯೋಮಿಯಂತಹ ಮೊಬೈಲ್ ಕಂಪನಿಗಳಿಗೆ ಕಠಿಣ ಸ್ಪರ್ಧೆ ನೀಡೋಕೆ ನಥಿಂಗ್ ಈ ಫೋನ್ ಅನ್ನು ಮಾರುಕಟ್ಟೆಗೆ ತರುತ್ತಿದೆ. ಕೈಗೆಟುಕುವ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನಥಿಂಗ್ ಪ್ರಯತ್ನಿಸುತ್ತಿದೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಪ್ರಕಟವಾಗಿರುವ ನಥಿಂಗ್ ಫೋನ್ 2ಎ ನೋಡಿದರೆ ವಿನ್ಯಾಸ ತುಂಬಾ ವಿಭಿನ್ನವಾಗಿದೆ. ಈ ಸ್ಮಾರ್ಟ್‌ಫೋನ್‌ ಐಕಾನಿಕ್ ಗ್ಲಿಫ್ ಇಂಟರ್‌ಫೇಸ್ ಹೊಂದಿದೆ. ಈ ಗ್ಲಿಫ್ ಇಂಟರ್‌ಫೇಸ್ ನಥಿಂಗ್ ಫೋನ್‌ಗಳಲ್ಲಿ ಉತ್ತಮ ಮತ್ತು ಅನನ್ಯ ಅನುಭವವನ್ನು ನೀಡುತ್ತದೆ. ನಾವು ನಿರ್ದಿಷ್ಟ ಕರೆ ಮಾಡುವವರಿಗೆ ಗ್ಲಿಫ್ ಮಾದರಿಗಳನ್ನು ನಿಯೋಜಿಸಿಕೊಳ್ಳಬಹುದು.

ಸ್ಮಾರ್ಟ್‌ಅಫೋನ್ 2 ಕ್ಲಾಸಿಕ್ ಬಣ್ಣಗಳಲ್ಲಿ ಲಭ್ಯವಿದೆ. ಒಂದು ಕಪ್ಪು ಮತ್ತೊಂದು ಬಳಿ ಬಣ್ಣದಿಂದೂ ಕೂಡಿವೆ. ನಥಿಂಗ್ ಸಿಗ್ನೇಚರ್ ಲುಕ್‌ಗೆ ಅಂಟಿಕೊಂಡಿರುವ ನಥಿಂಗ್ ಫೋನ್ 2ಎ ಪಾರದರ್ಶನ ವಿನ್ಯಾಸದ ಫ್ಲಾಟ್ ಡಿಸ್‌ಪ್ಲೇ ಮತ್ತು ಫ್ಲಾಟ್ ಎಡ್ಜ್‌ಗಳನ್ನ ಹೊಂದಿದೆ. ಮ್ಯಾಟ್ ಫಿನಿಶ್‌ನೊಂದಿಗೆ ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಫೋನ್‌ನಲ್ಲಿರುವ ವೈಶಿಷ್ಟ್ಯಗಳ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿಯನ್ನ ಬಹಿರಂಗಪಡಿಸಿಲ್ಲ. ಆದರೂ ಈಗಾಗಲೇ ಪ್ರಕಟವಾಗಿರುವ ವರದಿಗಳ ಪ್ರಕಾರ, ನಥಿಂಗ್ ಕಂಪನಿಯ ಸಿಇಒ ಕಾರ್ಲ್‌ ಪೀ ಅವರು ಈ ಫೋನ್ ಮೀಡಿಯಾಟೆಕ್ ಡೈಮೆನ್ಷನ್ 7200 ಪ್ರೊ ಚಿಪ್‌ಸೆಟ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. 12 ಜಿಬಿ RAM ಅನ್ನು ಹೊಂದಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ನಥಿಂಗ್ ಫೋನ್ 2ಎ ವೈಶಿಷ್ಟ್ಯಗಳು ಹಾಗೂ ಬೆಲೆ

ವಿವಿಧ ವರದಿಗಳ ಪ್ರಕಾರ, ನಥಿಂಗ್‌ ಕಂಪನಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್‌ಫೋನ್‌ಗೆ ಹಿಂಭಾಗದಲ್ಲಿ ಡ್ಯುಯಲ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ಜೊತೆಗೆ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಸೆಲ್ಫಿ ಮತ್ತು ವಿಡಿಯೊ ಕರೆ ಸಂಬಂಧಿತ ಅಗತ್ಯಗಳಿಗಾಗಿ ಅಳವಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ 6.7 ಇಂಚಿನ ಡಿಸ್‌ಪ್ಲೇ, 120 Hz ರಿಫ್ರೆಸ್‌ ರೇಟ್ ಹಾಗೂ 5,000 mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಆಂಡ್ರಾಯ್ಡ್ 14 ಆಧಾರಿತ ನಥಿಂಗ್ ಒಎಸ್ 2.5 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಅದ್ಬುತವಾದ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಅನುಭವವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಮಾರ್ಚ್ 5ಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿರುವ ನಥಿಂಗ್ ಫೋನ್ 2ಎ ಬೆಲೆಯನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ನಡುವೆ ನಥಿಂಗ್ ಫೋನ್ 2ಎ ಬೆಲೆ ಫೋನ್ 1 ಗಿಂತ ಕಡಿಮೆ ಇರಲಿದೆ ಎಂಬುದನ್ನು ಕಂಪನಿಯೇ ಹೇಳಿಕೊಂಡಿದೆ. ಹೀಗಾಗಿ ಈ ಹೊಸ ಫೋನ್ 30 ಸಾವಿರ ರೂಪಾಯಿಯೊಳಗೆ ಇರಬಹುದು ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸುತ್ತಿವೆ. ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಮಯದಲ್ಲಿ ಈ ಫೋನಿನಲ್ಲಿರುವ ಹೊಸ ತಂತ್ರಜ್ಞಾನ ಹಾಗೂ ಬೆಲೆ ಸ್ಪಷ್ಟವಾಗಲಿದೆ.

Whats_app_banner