ಐಫೋನ್ 16 ಪ್ರೊ ಮ್ಯಾಕ್ಸ್‌ಗೆ ಸ್ಪರ್ಧೆ ಒಡ್ಡಬಲ್ಲ 4 ಆಂಡ್ರಾಯ್ಡ್ ಫೋನ್‌ಗಳಿವು; ಐಫೋನ್‌ಗೆ ಪರ್ಯಾಯ ಆಯ್ಕೆ
ಪ್ರತಿಷ್ಠಿತ ಐಫೋನ್ 16 ಪ್ರೊ ಮ್ಯಾಕ್ಸ್‌ಗೆ ಪರ್ಯಾಯವಾಗಿ ಖರೀದಿಸಬಹುದಾದ ಫೋನ್‌ಗಳ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಇವು ಐಫೋನ್‌ಗಿಂತ ಉತ್ತಮ ಆಯ್ಕೆ ಎಂದು ಹೇಳುವುದು ಕಷ್ಟ. ಆದರೆ, 16 ಪ್ರೊ ಮ್ಯಾಕ್ಸ್‌ಗೆ ಪ್ರಬಲ ಸ್ಪರ್ಧೆ ಒಡ್ಡಬಲ್ಲವು.
ಐಫೋನ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. A18 ಪ್ರೊ ಚಿಪ್‌ಸೆಟ್‌ನಿಂದ ನಡೆಸಲ್ಪಡುವ ಆಪಲ್‌ನ ಐಫೋನ್ 16 ಪ್ರೊ ಮ್ಯಾಕ್ಸ್, ಸದ್ಯ ಹೆಚ್ಚು ಬೇಡಿಕೆಯ ಹಾಗೂ ಹೆಚ್ಚು ಜನರು ಖರೀದಿಸಲು ಬಯಸುವ ಫೋನ್. ಇದರ ಬೆಲೆ ಕೂಡಾ ದುಬಾರಿ. ಇದರ ಗುಣಮಟ್ಟದಿಂದಾಗಿ ಹೆಚ್ಚು ಗ್ರಾಹಕರು ಪ್ರೊ ಮ್ಯಾಕ್ಸ್ ಖರೀದಿಸಲು ಮುಂದಾಗುತ್ತಾರೆ. 2025ರಲ್ಲಿ ಐಫೋನ್‌ನ ಲೇಟೆಸ್ಟ್ ಫೋನ್‌ಗೆ ಸ್ಪರ್ಧೆ ಒಡ್ಡುವ ಹಲವು ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆ ಸ್ಪರ್ಧಾತ್ಮಕವಾಗಿದ್ದು, ಐಫೋನ್ 16 ಪ್ರೊ ಮ್ಯಾಕ್ಸ್‌ಗೆ ಸವಾಲು ಹಾಕಬಲ್ಲ ಕೆಲವು ಪ್ರಮುಖ ಫೋನ್‌ಗಳ ವಿವರ ಇಲ್ಲಿದೆ.
ಐಫೋನ್ 16 ಪ್ರೊ ಮ್ಯಾಕ್ಸ್‌ಗೆ ಪರ್ಯಾಯವಾಗಿ ಖರೀದಿಸಬಹುದಾದ ಫೋನ್‌ಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಅಲ್ಟ್ರಾ
ಗ್ಯಾಲಕ್ಸಿ ಎಸ್ 25 ಅಲ್ಟ್ರಾ 200MP ಪ್ರಾಥಮಿಕ ಸಂವೇದಕ ಮತ್ತು 5x ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ. ಇದು 120 Hz ರಿಫ್ರೆಶ್ ದರದೊಂದಿಗೆ 6.9 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಿಂದ ನಡೆಸಲ್ಪಡುತ್ತದೆ. ಎಸ್ ಪೆನ್ ಮತ್ತು ಸ್ಯಾಮ್‌ಸಂಗ್‌ನ AI-ಚಾಲಿತ ಸಾಫ್ಟ್‌ವೇರ್ ಸೇರ್ಪಡೆಯು ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು 45W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ ಕೂಡಾ ಇದೆ.
ಗೂಗಲ್ ಪಿಕ್ಸೆಲ್ 9 ಪ್ರೊ ಎಕ್ಸ್‌ಎಲ್
ಮಾರುಕಟ್ಟೆಯಲ್ಲಿರುವ ಮತ್ತೊಂದು ಪ್ರೀಮಿಯಂ ಫೋನ್ ಪಿಕ್ಸೆಲ್ 9 ಪ್ರೊ ಎಕ್ಸ್‌ಎಲ್. ಇದು 120Hz ರಿಫ್ರೆಶ್ ದರದೊಂದಿಗೆ 6.8 ಇಂಚಿನ LTPO OLED ಡಿಸ್‌ಪ್ಲೇ ಹೊಂದಿದೆ. ಗೂಗಲ್‌ನ ಟೆನ್ಸರ್ G4 ಚಿಪ್‌ಸೆಟ್‌ನಿಂದ ನಡೆಸಲ್ಪಡುತ್ತದೆ. ಇದರ ಕ್ಯಾಮೆರಾ ಸೆಟಪ್ ಗಮನಾರ್ಹ. ಪ್ರಭಾವಶಾಲಿ ಹೈ-ರೆಸಲ್ಯೂಶನ್ ಫ್ರಂಟ್ ಶೂಟರ್ ಜೊತೆಗೆ ಟ್ರಿಪಲ್ 50 MP ಹಿಂಬದಿಯ ಕ್ಯಾಮೆರಾ ಶ್ರೇಣಿಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಸ್ಪರ್ಧಾತ್ಮಕ ಬೆಲೆ ಹೊಂದಿದೆ.
ವಿವೋ X200 ಪ್ರೊ
ಆಂಡ್ರಾಯ್ಡ್‌ನಲ್ಲಿ ಉತ್ತಮ ಫೋನ್ ನಿರೀಕ್ಷಿಸುವವರಿಗೆ ವಿವೋ X200 ಪ್ರೊ ಮತ್ತೊಂದು ಉತ್ತಮ ಆಯ್ಕೆಯಾಗಿದೆ. ಇದು 6.78-ಇಂಚಿನ AMOLED 120Hz ಡಿಸ್ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್‌ನಿಂದ ನಡೆಸಲ್ಪಡುತ್ತದೆ. 16GB RAM ಇದರ ಆಕರ್ಷಣೆ. 200MP ಝೈಸ್ ಕ್ಯಾಮೆರಾ ಸಿಸ್ಟಮ್ ಫೋನ್‌ನ ಪ್ರಧಾನ ಅಂಶ. ಇದು ಪ್ರೊ-ಗ್ರೇಡ್ ಫೋಟೋಗ್ರಫಿಯನ್ನು ನೀಡುತ್ತದೆ. ಆಂಡ್ರಾಯ್ಡ್ 15-ಆಧಾರಿತ ಫನ್‌ಟಚ್ ಓಎಸ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿದಲ್ಲಿ ಈ ಫೋನ್ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಒಪ್ಪೋ ಫೈಂಡ್ X8 ಪ್ರೊ
ಐಫೋನ್‌ಗೆ ಒಪ್ಪೋ ಫೈಂಡ್ X8 ಪ್ರೊ ಕೂಡಾ ಸ್ಪರ್ಧೆ ಒಡ್ಡಬಲ್ಲ ಫೋನ್. ಇದು 120 Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ AMOLED LTPO ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್‌ನಿಂದ ನಡೆಸಲ್ಪಡುತ್ತದೆ. ಬಹುಮುಖ ಕ್ಯಾಮೆರಾ ಸೆಟಪ್‌ನೊಂದಿಗೆ, ಉತ್ತಮ ಛಾಯಾಗ್ರಹಣ ಕಾರ್ಯಕ್ಷಮತೆಯನ್ನು ನೀಡುವ ಗುರಿ ಹೊಂದಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಸಬಹುದು.