ಮಾರುಕಟ್ಟೆಗೆ ಬಂದೇ ಬಿಡ್ತು ಆಸಸ್ ರಾಗ್ 8 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್; ಬೆಲೆ, ವೈಶಿಷ್ಟ್ಯಗಳು ಹೀಗಿವೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮಾರುಕಟ್ಟೆಗೆ ಬಂದೇ ಬಿಡ್ತು ಆಸಸ್ ರಾಗ್ 8 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್; ಬೆಲೆ, ವೈಶಿಷ್ಟ್ಯಗಳು ಹೀಗಿವೆ

ಮಾರುಕಟ್ಟೆಗೆ ಬಂದೇ ಬಿಡ್ತು ಆಸಸ್ ರಾಗ್ 8 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್; ಬೆಲೆ, ವೈಶಿಷ್ಟ್ಯಗಳು ಹೀಗಿವೆ

ನಿರೀಕ್ಷೆಯಂತೆ ಆಸಸ್ ರಾಗ್ 8 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಬೆಲೆಯ ವಿಚಾರದಲ್ಲಿ ಈ ಫೋನ್ ಐಫೋನ್‌ಗಳನ್ನೇ ಮೀರಿಸುತ್ತಿದೆ.

ಆಸಸ್ ರಾಗ್ 8 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ
ಆಸಸ್ ರಾಗ್ 8 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ

ಬೆಂಗಳೂರು: ಕಂಪ್ಯೂಟರ್, ಲ್ಯಾಪ್‌ಟಾಪ್ ಸೇರಿದಂತೆ ವಿವಿಧ ಅತ್ಯಾಧುನಿಕ ಉಪಕರಣಗಳ ಉತ್ಪಾದನಾ ಸಂಸ್ಥೆ ಆಸಸ್ ನಿರೀಕ್ಷೆಯಿಂದೆ ಮತ್ತೊಂದು ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಗೇಮಿಂಗ್ ಪ್ರಿಯರನ್ನು ಸೆಳೆಯುವ ಉದ್ದೇಶಿದಿಂದ ಆಸಸ್ ರಾಗ್ 8 ಪ್ರೊ (Asus rogue phone 8 pro) ಹೊಸ ಫೋನ್ ಬಿಡುಗಡೆ ಮಾಡಲಾಗಿದೆ. ಈ ಶಕ್ತಿಶಾಲಿ ಗೇಮಿಂಗ್ ಸ್ಮಾರ್ಟ್‌ಫೋನ್ ಫೋನಿನ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯೋಣ.

ಆಸಸ್ ರಾಗ್ ಫೋನ್ 8 ಪ್ರೊ ವೈಶಿಷ್ಟ್ಯಗಳೇನು?

ಆಸಸ್ ರಾಗ್ ಫೋನ್ 8 ಪ್ರೊ IP68 ರೇಟೆಡ್ ಧೂಳು-ನೀರಿನ ಪ್ರತಿರೋಧ ಹಾಗೂ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಇದು 6.78-ಇಂಚಿನ ಪೂರ್ಣ HD+ LTPO AMOLED ಡಿಸ್ಪ್ಲೇ ಜೊತೆಗೆ 165Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತಿದೆ. ಇದು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಪಡೆದಿದೆ.

ಆಸಸ್ ರಾಗ್ ಫೋನ್ 8 ಪ್ರೊ ಗೇಮಿಂಗ್ ಗ್ಯಾಜೆಟ್ 50MP ಪ್ರಾಥಮಿಕ, 13MP ಅಲ್ಟ್ರಾ-ವೈಡ್ ಮತ್ತು 32MP ಟೆಲಿಫೋಟೋ ಲೆನ್ಸ್‌ನೊಂದಿಗೆ ರೇರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 32MP ಮುಂಭಾಗದ ಕ್ಯಾಮೆರಾ ಇದರಲ್ಲಿದೆ.

ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ ROD UI ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 5000 mAh ಬ್ಯಾಟರಿ, 65 ವ್ಯಾಟ್ ವೈರ್ಡ್, 15 ವ್ಯಾಟ್ Qi-ವೈರ್‌ಲೆಸ್ ಚಾರ್ಜಿಂಗ್ ಇದೆ.

ಆಸಸ್ ರಾಗ್ ಫೋನ್ 8 ಪ್ರೊ ಬೆಲೆ ಎಷ್ಟು?

ಆಸಸ್ ರಾಗ್ ಫೋನ್ 8 ಪ್ರೊ 16GB RAM ಮತ್ತು 512GB ಸ್ಟೋರೇಜ್ ಸಾಮರ್ತಥ್ಯದ ಫೋನ್ ಬೆಲೆ 94,999 ರೂಪಾಯಿ ಇದೆ. ಅದೇ ರೀತಿಯಾಗಿ 24GB RAM ಮತ್ತು 1TB ಸ್ಟೋರೇಜ್ ಇರುವ ಫೋನ್‌ ಬೆಲೆ 1,19,999 ರೂಪಾಯಿ ಇದೆ. ಗೇಮಿಂಗ್ ಸ್ಮಾರ್ಟ್‌ಫೋನ್ ROG ಏರೋಆಕ್ಟಿವ್ ಕೂಲರ್ X ವೈಶಿಷ್ಟ್ಯದೊಂದಿಗೆ ಬರುತ್ತದೆ. ಇದಕ್ಕೆ 5,999 ರೂಪಾಯಿ ನೀಡಿ ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ.

ಆಸಸ್ ರಾಗ್ ಫೋನ್ 8 ಪ್ರೊ ಅನ್ನು ಆಸಸ್ ಕಂಪನಿಯ ಅಧಿಕೃತ ವೆಬ್‌ಸೈಟ್ ವಿಜಯ್ ಸೇಲ್ಸ್ ಮೂಲಕ ಮಾರಾಟ ಮಾಡುತ್ತಿದೆ. ಮಾರಾಟ ಈಗಾಗಲೇ ಆರಂಭವಾಗಿದೆ. ರಾಗ್ ಫೋನ್ ಸರಣಿಯಲ್ಲಿ ಲೇಟೆಸ್ಟ್ ಮಾಡೆಲ್ ಆಸಸ್ ರಾಗ್ ಫೋನ್ 8 ಪ್ರೊ. ಹಿಂದಿನ ಮಾಡೆಲ್‌ಗಳಿಗೆ ಹೆೋಲಿಸಿದರೆ ಇದು ಹೆಚ್ಚು ಉಪಯುಕ್ತ ವೈಶಿಷ್ಟ್ಯಗಳನ್ನು ಹೊಂದಿದೆ. ಕ್ಯಾಮೆರಾ ಸೆಟಪ್ ತುಂಬಾ ಪ್ರಾಕ್ಟಿಕಲ್ ಆಗಿದೆ. ಡಿಸ್‌ಪ್ಲೇ ಸುಧಾರಿಸಿದೆ. ಇದರಲ್ಲಿ ವೈರ್‌ಲೆಸ್ ಚಾರ್ಜಿಂಗ್ ಇರುವುದು ಮತ್ತೊಂದು ಪಾಸಿಟೀವ್ ಅಂಶವಾಗಿದೆ. ಬೆಲೆ ಜಾಸ್ತಿಯಾದರೂ ಪರ್ವಾಗಿಲ್ಲ ಹೆಚ್ಚು ಕಾರ್ಯಕ್ಷಮತೆ ಹಾಗೂ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಖರೀದಿಸಬೇಕೆಂದು ಬಯಸುವವರಿಗೆ ಆಸಸ್ ರಾಗ್ ಫೋನ್ 8 ಪ್ರೊ ಹೇಳಿ ಮಾಡಿಸಿದಂತಿದೆ.

Whats_app_banner