ಕನ್ನಡ ಸುದ್ದಿ  /  Lifestyle  /  Gadgets News Big Discount On Samsung Galaxy S24 5g Smartphone Amazon Sale Rmy

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌24 5ಜಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಡಿಸ್ಕೌಂಟ್ -Samsung Galaxy S24 5G

Samsung Galaxy S24 5G: ಅಮೆಜಾನ್‌ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌24 5ಜಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ರಿಯಾಯಿತಿ ನೀಡಲಾಗಿದೆ. ಪ್ರಸ್ತುತ ಈ ಫೋನ್ ಎಷ್ಟು ರೂಪಾಯಿಗೆ ಸಿಗುತ್ತೆ ನೋಡಿ.

ಅಮೆಜಾನ್‌ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌25 5ಜಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಡಿಸ್ಕೌಂಟ್ ನೀಡಲಾಗಿದೆ.
ಅಮೆಜಾನ್‌ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌25 5ಜಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಡಿಸ್ಕೌಂಟ್ ನೀಡಲಾಗಿದೆ.

ಬೆಂಗಳೂರು: ಅತ್ಯಂತ ಜನಪ್ರಿಯ ಹಾಗೂ ದೈತ್ಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಕಡಿಮೆಗೆ ಬೆಲೆಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌24 5ಜಿ (Samsung Galaxy S24 5G) ಸ್ಮಾರ್ಟ್‌ಫೋನ್ ಸಿಗುತ್ತಿದೆ. ಕಡಿಮೆ ಬೆಲೆಯಲ್ಲಿ ಸ್ಯಾಮ್ಸಂಗ್‌ನ ಪ್ರೀಮಿಯಂ ಫೋನ್ ಖರೀದಿಸಲು ಆಸಕ್ತಿ ಹೊಂದಿದವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಡಿಸ್ಕೌಂಟ್‌ಗಳ ಜೊತೆಗೆ ಬ್ಯಾಂಕ್ ಆಫರ್‌ಗಳು, ಎಕ್ಸ್‌ಚೇಂಜ್ ಸೌಲಭ್ಯವೂ ಇದೆ. ಸ್ಯಾಮ್ಸಂಗ್‌ನ ಪ್ರಮುಖ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಸ್‌24 5ಜಿ ಈಗ ಅಮೆಜಾನ್‌ನಲ್ಲಿ ರಿಯಾಯಿತಿ ಬೆಲೆಗೆ ಸಿಗುತ್ತಿದೆ. ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಗಮನ ಸೆಳೆಯುವಂತಹ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಈ ಗ್ಯಾಡ್ಜೆಟ್ ಕಡಿಮೆ ಬೆಲೆಗೆ ಸಿಗುವ ಮೂಲ ಸ್ಯಾಮ್ಸಂಗ್ ಮೊಬೈಲ್ ಪ್ರಿಯರನ್ನು ಸೆಳೆಯುತ್ತಿದೆ.

ಅಮೆಜಾನ್‌ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌24 5ಜಿ ಫೋನ್ ಮೇಲೆ ಬರೋಬ್ಬರಿ ಶೇಕಡಾ 33 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಪ್ರೀಮಿಯಂ ಸ್ಮಾರ್ಟ್‌ಪೋನ್‌ ಮೂಲ ಬೆಲೆ 99,990 ರೂಪಾಯಿ ಇದೆ. ಆದರೆ ಈಗ ಡಿಸ್ಕೌಂಟ್ ಬಳಿಕ ಕೇವಲ 66,780 ರೂಪಾಯಿಗೆ ಲಭ್ಯವಿದೆ. ಈ ಆಕರ್ಷಕ ಕೊಡುಗೆಯೊಂದಿಗೆ ನೀವು ಈ ಫೋನ್ ಖರೀದಿಸಬಹುದು.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌24 5ಜಿ ಈಗಾಗಲೇ ಡಿಸ್ಕೌಂಟ್‌ನಲ್ಲಿ ಸಿಗುತ್ತಿದ್ದರೂ ಇದರ ಜೊತೆಗೆ ಇನ್ನೂ ಹೆಚ್ಚುವಾರಿ ಆಫರ್‌ಗಳು ಹಾಗೂ ಡಿಸ್ಕೌಂಟ್‌ಗಳ ಲಾಭವನ್ನು ಪಡೆಯಬಹುದು. ಈ ಸ್ಮಾರ್ಟ್‌ಫೋನ್ ಅನ್ನು ನೋ ಕಾಸ್ಟ್ ಇಎಂಐ ಆಯ್ಕೆ ಮೂಲಕವೂ ದುಬಾರಿ ಬೆಲೆಯ ಫೋನ್ ಖರೀದಿಸಬಹುದು. ಅಮೆಜಾನ್ ಪೈ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು ಐಎಂಐ ಬಡ್ಡಿಯಲ್ಲಿ 3 ಸಾವಿರ ರೂಪಾಯಿ ವರೆಗೆ ಉಳಿತಾಯ ಮಾಡಬಹುದು. ಆಯ್ದ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಹೆಚ್ಚುವರಿ ಡಿಸ್ಕೌಂಟ್‌ಗಳನ್ನು ನೀಡುವ ವಿವಿಧ ಬ್ಯಾಂಕ್ ಕೊಡುಗೆಗಳು ಸಹ ಲಭ್ಯ ಇವೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌24 5ಜಿನಲ್ಲಿವೆ ಹಲವು ವೈಶಿಷ್ಟ್ಯಗಳು

ಇದನ್ನೂ ಓದಿ: ಅತಿ ಶೀಘ್ರದಲ್ಲೇ ಬಜೆಟ್ ಸ್ನೇಹಿ ಲಾವಾ ಬ್ಲೇಜ್ ಕರ್ವ್ ಸ್ಮಾರ್ಟ್‌ಪೋನ್ ಬಿಡುಗಡೆ; ಏನೆಲ್ಲಾ ವೈಶಿಷ್ಟ್ಯ ಇರಲಿದೆ

ಈ ಸ್ಮಾರ್ಟ್‌ಫೋನ್‌ನಲ್ಲಿ ಹಲವು ಅಡ್ವಾನ್ಸ್ಡ್‌ ವೈಶಿಷ್ಟ್ಯಗಳಿವೆ. ಇದರಲ್ಲಿ ಹಲವು ಸೆಗ್ಮೆಂಟ್ ಫೀಚರ್ಸ್‌ಗಳಿವೆ, ದೊಡ್ಡ ಡಿಸ್‌ಪ್ಲೇ, ದೀರ್ಘ ಬ್ಯಾಟರಿ ಬಾಳಿಕೆ, ಪ್ರೊಸೆಸಿಂಗ್ ಪವರ್‌ನಂತಹ ವೈಶಿಷ್ಟ್ಯಗಳಿವೆ.

ಹೆಚ್ಚಿನ ರೆಸಲ್ಯೂಶನ್ ಲೆನ್ಸ್ ಸೇರಿದಂತೆ ಶಕ್ತತಿಯುವ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಅಲ್ಲದೆ, ಸರ್ಕಲ್ ಟು ಸರ್ಚ್ ಮತ್ತು ತ್ವರಿತ ಭಾಷಾ ಅನುವಾದದಂಹ ಹೊಸ ಸೌಲಭ್ಯಗಳು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌24 5ಜಿನಲ್ಲಿವೆ.