Tecno Spark 20: ಬಜೆಟ್ ಫ್ರೆಂಡ್ಲಿ ಟೆಕ್ನೋ ಸ್ಪಾರ್ಕ್ 20 ಮಾರಾಟ ಆರಂಭ; ಫೋನ್ ಬೆಲೆ, ವೈಶಿಷ್ಟ್ಯಗಳು ತಿಳಿಯಿರಿ
Tecno Spark 20 Price: ಬಜೆಟ್ ಸ್ನೇಹಿ ಟೆಕ್ನೋ ಸ್ಪಾರ್ಕ್ 20 ಮೊಬೈಲ್ ಫೋನ್ ಮಾರಾಟ ಶುರುವಾಗಿದೆ. ಈ ಹೊಸ ಮೊಬೈಲ್ ಬೆಲೆ ಮತ್ತು ವೈಶಿಷ್ಟ್ಯಗಳ ವಿವರ ಇಲ್ಲಿದೆ.
ನಿತ್ಯ ಒಂದಲ್ಲಾ ಒಂದು ಹೊಸ ಫೋನ್ ಮಾರುಕಟ್ಟೆಗೆ ಬರುತ್ತಲೇ ಇರುತ್ತದೆ. ಕಳೆದ ವಾರ ಟೆಕ್ನೋ ಕಂಪನಿಯು ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಹೆಸರು ಟೆಕ್ನೋ ಸ್ಪಾರ್ಕ್ 20 (Tecno Spark 20). ಈ ಹೊಸ್ ಫೋನ್‌ನ ಅಧಿಕೃತ ಮಾರಾಟ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಟೆಕ್ನೋ ಸ್ಪಾರ್ಕ್ 20 ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು ಮತ್ತು ಬೆಲೆಯಂತಹ ವಿವರಗಳನ್ನು ಇಲ್ಲಿ ತಿಳಿಯೋಣ
ಟೆಕ್ನೋ ಸ್ಪಾರ್ಕ್ 20 ವೈಶಿಷ್ಟ್ಯಗಳು (Tecno Spark 20 Features)
ಟೆಕ್ನೋ ಸ್ಪಾರ್ಕ್ 20 ಸ್ಮಾರ್ಟ್‌ಫೋನ್ ಪಂಚ್ ಹೋಲ್ ಕಟೌಟ್ ಹೊಂದಿದೆ. 90Hz ರಿಫ್ರೆಸ್ ರೇಟ್‌ನೊಂದಿಗೆ 6.56-ಇಂಚಿನ HD+ ಡಿಸ್ಲೇ ಹೊಂದಿದೆ. ಇದು ಹಿಲಿಯಾ G85 ಪ್ರೊಸೆಸರ್‌ನೊಂದಿಗೆ ಬಂದಿದೆ. 8GB RAM - 128GB/256GB ಸ್ಟೋರೇಜ್ ಆಯ್ಕೆಗಳು ಲಭ್ಯ ಇವೆ. 5000 mAh ಬ್ಯಾಟರಿ ಜೊತೆಗೆ 18W ಜಾರ್ಜಿಂಗ್ ಈ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್‌ಗಿದೆ. ಟೆಕ್ನೋ ಸ್ಪಾರ್ಕ್ 20 ಆಂಡ್ರಾಯ್ಡ್ 13 ಆಧಾರಿತ ಎಚ್‌ಐಒಎಸ್ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸೈಡ್ ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಡಿಟಿಎಸ್ ಎನೇಬಲ್ಡ್ ಡ್ಯುಯಲ್ ಸ್ಪೀಕರ್‌ಗಳು, 2.5ಎಂಎಂ ಆಡಿಯೋ ಜ್ಯಾಕ್ ಮತ್ತು ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್‌ನಂತಹ ಸಂಪರ್ಕ ವೈಶಿಷ್ಟ್ಯಗಳನ್ನು ಹೊಂದಿದೆ.
ಟೆಕ್ನೋ ಸ್ಪಾರ್ಟ್ 20 ಫೋನ್‌ನಲ್ಲಿ ಹೊಸದು ಮತ್ತೇನಿದೆ?
ಭಾರತದಲ್ಲಿ ಬಿಡುಗಡೆಯಾಗಿರುವ ಟೆಕ್ನೋ ಸ್ಪಾರ್ಟ್ 20 ಹೊಸ ಸ್ಮಾರ್ಟ್‌ಫೋನ್ 194 ಗ್ರಾಂತ ತೂಕ ಮತ್ತು 4.45 mm ದಪ್ಪವಿದೆ. ಈ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್‌ನಲ್ಲಿ 50 ಎಂಪಿ ಕ್ಯಾಮರಾ ಇದ್ದು, ಎಐ ಲೆನ್ಸ್ ಮತ್ತು ಡ್ಯುಯಲ್ ಎಲ್‌ಇಡಿ ಫ್ಲ್ಯಾಷ್ ಹೊಂದಿದ್ದು, ಸೆಲ್ಫ್‌್, ವಿಡಿಯೊ ಕರೆಗಳಿಗಾಗಿ 32ಎಂಬಿ ಫ್ರೆಂಟ್ ಕ್ಯಾಮರಾ ಬರಲಿದೆ. ಈ ಎಲ್ಲಾ ವೈಶಿಷ್ಟ್ಯಗಳನ್ನು ನೋಡಿದಾಗಲೇ ಇದೊಂದು ಇದೊಂದು ಬಜೆಟ್ ಫ್ರೆಂಡ್ಲಿ ಸ್ಮಾರ್ಟ್‌ಫೋನ್ ಅನ್ನೋದು ಅರ್ಥವಾಗುತ್ತದೆ.
ಟೆಕ್ನೋ ಸ್ಪಾರ್ಟ್ 20 ಫೋನ್ ಬೆಲೆ ಭಾರತದಲ್ಲಿ ಎಷ್ಟಿದೆ?
ಟೆಕ್ನೋ ಸ್ಪಾರ್ಕ್ 20 ಯಲ್ಲಿ ಎರಡು ವೇರಿಯಂಟ್‌ಗಳಿವೆ. 8GB RAM-128GB ಸ್ಟೋರೇಜ್ ವೇರಿಯಂಚ್ ಫೋನ್ 10,499 ರೂಪಾಯಿಯಿಂದ ಆರಂಭವಾಗುತ್ತದೆ. 8GB RAM-256GB ಸ್ಟೋರೇಜ್ ವೇರಿಯಂಟ್ ಫೋನ್ ಬೆಲೆ 11,499 ರೂಪಾಯಿ ಇದೆ. ಈ ಗ್ಯಾಜೆಟ್ ಗ್ರಾವಿಟಿ ಬ್ಲಾಕ್, ಸೈಬರ್ ವೈಟ್, ನಿಯಾನ್ ಶೈನ್, ಬ್ಲೂ ಮ್ಯಾಜಿಕ್ ಸ್ಕಿನ್‌ನಂತಹ ಬಣ್ಣಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ವಾಕ್ ಮಾಡ್ತಾ ಮೊಬೈಲ್ ನೋಡೋರು ಬಲು ಡೇಂಜರ್
ಉತ್ತಮ ಬಜೆಟ್ ಸ್ನೇಹಿ ಸ್ಮಾರ್ಟ್‌ಪೋನ್ ಖರೀದಿಸಲು ಬಯಸುವವರುಈ ಟೆಕ್ನೋ ಸ್ಪಾರ್ಕ್ 20 ಅನ್ನು ಅಮೆಜಾನ್‌ನಲ್ಲಿ ಬುಕ್ ಮಾಡಬಹದು. ಅಥವಾ ಕಂಪನಿಯ ರಿಟೇಲ್ ಔಟ್‌ಲೇಟ್‌ಗಳಿಗೂ ಹೋಗಿ ಫೋನ್ ಖರೀದಿಸಬಹುದು. ಈ ಎರಡೂ ಸ್ಮಾರ್ಟ್‌ಫೋನ್‌ಗಳಿಗೆ 1000 ರೂಪಾಯಿ ವರೆಗೆ ಸೀಮಿತ ಬ್ಯಾಂಕ್ ರಿಯಾಯಿತಿಗಳು ಸಹ ಲಭ್ಯವಿದೆ. ನೀವೇನಾದರೂ ಈ ಫೋನ್ ಖರೀದಿಸುವ ಆಸಕ್ತಿ ಹೊಂದಿದ್ದರೆ ಕಂಪನಿಯ ರಿಟೇಲ್ ಔಟ್‌ಲೇಟ್‌ಗಳಿಗೆ ಭೇಟಿ ನೀಡಿ. ಫೋನ್ ಖರೀದಿಸುವ ಮುನ್ನ ಅದರ ಬಗ್ಗೆ ಸರಿಯಾದ ಮಾಹಿತಿ ಪಡೆದು ಖರೀದಿಸಿದರೆ ಉ (This copy first appeared in Hindustan Times Kannada website. To read more like this please logon to kannada.hindustantime.com).