ನಥಿಂಗ್ ಫೋನ್ 2ಎ ಸ್ಪೆಷಲ್ ಎಡಿಷನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ; ಬೆಲೆ, ವೈಶಿಷ್ಟ್ಯ ತಿಳಿಯಿರಿ
Nothing Phone 2a Special Edition: ನಥಿಂಗ್ ಫೋನ್ 2ಎ ವಿಶೇಷ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಬೆಲೆ ಮತ್ತು ವೈಶಿಷ್ಟ್ಯಗಳನ್ನು ಇಲ್ಲಿ ತಿಳಿಯಿರಿ.
ನಥಿಂಗ್ ಫೋನ್ 2ಎ ಸ್ಮಾರ್ಟ್‌ಫೋನ್‌ನ (Nothing Phone 2a Special Edition) ವಿಶೇಷ ಆವೃತ್ತಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಮೂರು ಬಣ್ಣದ ಆಯ್ಕೆಗಳನ್ನು ಈ ಹೊಸ ಸ್ಮಾರ್ಟ್‌ಫೋನ್‌ಗೆ ನೀಡಲಾಗಿದೆ. ಕೆಂಪು, ಹಳದಿ ಮತ್ತು ನೀಲಿ ಬಣ್ಣಗಳಲ್ಲಿ ಬರಲಿವೆ. ಕಂಪನಿಯು ತನ್ನ ಹೊಸ ಬಣ್ಣದ ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದೆ. ಕೆಂಪು ಮತ್ತು ಹಳದಿ ಎಂಬ ಎರಡು ಹೊಸ ಬಣ್ಣಗಳು ಇರುತ್ತವೆ ಎಂಬ ಎಂದು ಹೇಳಲಾಗುತ್ತಿದೆ. ಆದರೆ, ನಥಿಂಗ್ ಫೋನ್ 2ಎ ಸ್ಪೆಷಲ್ ಎಡಿಷನ್ ಬಿಡುಗಡೆಯಾದ ನಂತರ, ಮೂರು ಹೊಸ ಬಣ್ಣದ ಆಯ್ಕೆಗಳು ಬರಲಿವೆ ಎಂಬುದು ಸ್ಪಷ್ಟವಾಯಿತು. ಬಣ್ಣವನ್ನು ಹೊರತುಪಡಿಸಿದರೆ ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಒಂದೇ ಆಗಿರುತ್ತವೆ ಎಂದು ಗಮನಿಸಬೇಕು.
ಫೋನ್ 2ಎ ವಿಶೇಷ ಆವೃತ್ತಿಯ ಸ್ಪಾರ್ಟ್‌ಫೋನ್‌ನಲ್ಲಿ ಏನೇನಿದೆ?
ನಥಿಂಗ್ ಫೋನ್ 2ಎ ವಿಶೇಷ ಆವೃತ್ತಿಯ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು ನೋಡುವುದಾದರೆ ಈಗಾಗಲೇ ಈ ಕಂಪನಿಯಿಂದ ಬಿಡುಗಡೆಯಾಗಿರುವ ಹಿಂದಿನ ಫೋನ್‌ಗಳ ಮಾದರಿಗಳನ್ನೇ ಹೋಲುತ್ತವೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊ ಪ್ರೊಸೆಸರ್, 12 ಜಿಬಿ ರ‍್ಯಾಮ್ ಅನ್ನು ಇದರಲ್ಲಿ ನೀಡಲಾಗಿದೆ. ಇದು 6.7-ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಅಲ್ಮೋಡ್ ಡಿಸ್‌ಪ್ಲೇ ಜೊತೆಗೆ 120 Hz ರಿಫ್ರೆಶ್ ದರವನ್ನು ಹೊಂದಿದೆ. 50-ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹಾಗೂ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ನಥಿಂಗ್ ಫೋನ್ 2A ಸ್ಪೆಷಲ್ ಎಡಿಷನ್ ಸ್ಮಾರ್ಟ್‌ಫೋನ್‌ನಲ್ಲಿ 5000 ಎಂಎಹೆಚ್ ಬ್ಯಾಟರಿ ಹಾಗೂ 45 ವ್ಯಾಟ್ ವೇಗದ ಚಾರ್ಜಿಂಗ್ ಸಪೋರ್ಟ್ ಅನ್ನು ಹೊಂದಿದೆ.
ನಥಿಂಗ್ ಫೋನ್ 2ಎ ವಿಶೇಷ ಆವೃತ್ತಿಯು ಕೇವಲ ಒಂದು ಶೇಖರಣಾ ರೂಪಾಂತರವನ್ನು ಹೊಂದಿದೆ. ಇದು 12 ಜಿಬಿ ರ‍್ಯಾಮ್- 256 ಜಿಬಿ ರ‍್ಯಾಮ್ ವರೆಗೆ ಸ್ಟೋರೇಜ್ ವೇರಿಯಂಟ್ ಆಗಿದೆ. ಭಾರತದಲ್ಲಿ ಇದರ ಬೆಲೆ 27,999 ರೂಪಾಯಿ ಇದೆ (Nothing Phone 2a Special Edition Price). ಫ್ಲಿಪ್‌ಕಾರ್ಟ್‌ನಲ್ಲಿ ಜೂನ್ 5 ರಿಂದ ಮಾರಾಟ ಪ್ರಾರಂಭವಾಗಲಿದೆ. ಸೀಮಿತ ಅವಧಿಯ ರಿಯಾಯಿತಿ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಸ್ಮಾರ್ಟ್‌ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ 1000 ರಿಯಾಯಿತಿ ಇದೆ. ಪರಿಣಾಮವಾಗಿ ನೀವು ಈ ಮೊಬೈಲ್ ಅನ್ನು 26,999 ಕ್ಕೆ ಖರೀದಿಸಬಹುದು. ಮೇಲಾಗಿ ಈ ಸ್ಮಾರ್ಟ್ ಫೋನ್ ಜೂನ್ 1 ರಿಂದ ಲಂಡನ್ ನ ನಥಿಂಗ್ ಸೊಹೊ ಸ್ಟೋರ್‌ನಲ್ಲಿ ಲಭ್ಯವಾಗಲಿದೆ.
ಭಾರತದ ಮಾರುಕಟ್ಟೆಯ ಮೇಲೆ ಕೇಂದ್ರೀಕೃತವಾಗಿರುವ ನಥಿಂಗ್ ತನ್ನ ಆವಿಷ್ಕಾರಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಕಾಲಕಾಲಕ್ಕೆ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಮತ್ತು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ನಥಿಂಗ್ ಫೋನ್ 2ಎ ಸ್ಪೆಷಲ್ ಎಡಿಷನ್ ಭಾರತೀಯ ಗ್ರಾಹಕರನ್ನು ಎಷ್ಟರಮಟ್ಟಿಗೆ ಆಕರ್ಷಿಸಲಿದೆ ಎಂಬುದನ್ನು ಕಾದು ನೋಡಬೇಕು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)