ರೆಡ್‌ಮಿ ನೋಟ್ 12 4ಜಿ ಬೆಲೆಯಲ್ಲಿ ಭಾರಿ ಕಡಿತ; ಅತ್ಯುತ್ತಮ ವೈಶಿಷ್ಟ್ಯದ ಸ್ಮಾರ್ಟ್‌ಫೋನ್‌ಗೆ ಕಡಿಮೆ ದರ -Redmi Note 12 4G
ಕನ್ನಡ ಸುದ್ದಿ  /  ಜೀವನಶೈಲಿ  /  ರೆಡ್‌ಮಿ ನೋಟ್ 12 4ಜಿ ಬೆಲೆಯಲ್ಲಿ ಭಾರಿ ಕಡಿತ; ಅತ್ಯುತ್ತಮ ವೈಶಿಷ್ಟ್ಯದ ಸ್ಮಾರ್ಟ್‌ಫೋನ್‌ಗೆ ಕಡಿಮೆ ದರ -Redmi Note 12 4g

ರೆಡ್‌ಮಿ ನೋಟ್ 12 4ಜಿ ಬೆಲೆಯಲ್ಲಿ ಭಾರಿ ಕಡಿತ; ಅತ್ಯುತ್ತಮ ವೈಶಿಷ್ಟ್ಯದ ಸ್ಮಾರ್ಟ್‌ಫೋನ್‌ಗೆ ಕಡಿಮೆ ದರ -Redmi Note 12 4G

Redmi Note 12 4G: ರೆಡ್‌ಮಿ ನೋಟ್ ಸರಣಿಯ ಫೋನ್‌ಗಳ ಬೆಲೆಯಲ್ಲಿ ಭಾರಿ ಕಡಿತ ಮಾಡಲಾಗಿದೆ. ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಸೆಗ್ಮೆಂಟ್‌ನಲ್ಲಿ ಪೈಪೋಟಿ ಮತ್ತಷ್ಟು ಹೆಚ್ಚಾಗುತ್ತಿದೆ.

ರೆಡ್‌ಮಿ ನೋಟ್ 12 4ಜಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಕಡಿತ ಮಾಡಲಾಗಿದೆ.
ರೆಡ್‌ಮಿ ನೋಟ್ 12 4ಜಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಕಡಿತ ಮಾಡಲಾಗಿದೆ.

ಶಿಯೋಮಿ ತನ್ನ ರೆಡ್‌ಮಿ ನೋಟ್ 12 4ಜಿ ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆಯಲನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈ ಸರಣಿಯ ಫೋನ್‌ಗಳು ಭಾರತದಲ್ಲಿ 10,400 ರೂಪಾಯಿಯಿಂದ ಪ್ರಾರಂಭವಾಗುತ್ತದೆ. 2024ರ ಮಾರ್ಚ್‌ನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿತ್ತು. ಫೋನ್ ಮೇಲೆ 3 ತಿಂಗಳ ಅವಧಿಯಲ್ಲಿ ಎರಡು ಬಾರಿ ಬೆಲೆ ಕಡಿಮೆ ಮಾಡಲಾಗಿದೆ. ಪರಿಣಾಮವಾಗಿ ಈ ಬಜೆಟ್ ಸ್ನೇಹಿ ರೆಡ್‌ಮಿ ನೋಟ್ 12 4ಜಿ ಫೋನ್ 10 ಸಾವಿರ ರೂಪಾಯಿಗೆ ಲಭ್ಯವಿರುವ ಇತರೆ ಕಂಪನಿಗಳ ಫೋನ್‌ಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ಬಿಡುಗಡೆಯ ಸಮಯದಲ್ಲಿ ರೆಡ್‌ಮಿ ನೋಟ್ 12 4ಜಿ 6GB RAM/64GB ಸ್ಟೋರೇಜ್ ವೇರಿಯಂಟ್ ಬೆಲೆ 14,999 ರೂಪಾಯಿ ಮತ್ತು 6GB RAM/128GB ಸ್ಟೋರೇಜ್ ರೂಪಾಂತರದ ಬೆಲೆ 16,999 ರೂಪಾಯಿ ಆಗಿತ್ತು. ನಂತರ ಕಂಪನಿ ಈ ಎರಡು ಫೋನ್‌ಗಳ ಬೆಲೆಯಲ್ಲಿ ಕಳೆದ ಜನವರಿಯಲ್ಲಿ 2 ಸಾವಿರ ರೂಪಾಯಿ ಕಡಿತ ಮಾಡಲಾಗಿತ್ತು.

ರೆಡ್‌ಮಿ ನೋಟ್ 12 4ಜಿ ವೇರಿಯಂಟ್‌ಗಳ ಬೆಲೆ ಕಡಿತದ ವಿವರ

ಇತ್ತೀಚಿನ ರಿಯಾಯಿಗಳನ್ನು ನೋಡುವುದಾರೆ ರೆಡ್‌ಮಿ ನೋಟ್ 12 4ಜಿ 6GB RAM/124GB ಸ್ಟೋರೇಜ್ ವೇರಿಯಂಟ್ ಬೆಲೆ 12,999 ರೂಪಾಯಿ ಹಾಗೂ 6GB RAM/64GB ಸ್ಟೋರೇಜ್ ವೇರಿಯಂಟ್ ಬೆಲೆ 10,999 ರೂಪಾಯಿಗೆ ಇಳಿಸಲಾಗಿದೆ. ನೀವು ಫ್ಲಿಪ್‌ಕಾರ್ಟ್‌ನಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಸ್ಮಾರ್ಟ್‌ಫೋನ್ ಖರೀದಿಸಿದರೆ ನೀವು ಪ್ರಸ್ತುತ ಬೆಲೆಯಲ್ಲಿ ಮತ್ತೆ ಶೇಕಡಾ 10 ರಷ್ಟು ಡಿಸ್ಕೌಂಟ್ ಪಡೆಯಬಹುದು. ಅದರೆ ಮತ್ತೆ 1,500 ರೂಪಾಯಿ ಕಡಿಮೆಯಾಗಲಿದೆ. ಈ ಆಫರ್ ಸೇರಿದಂತೆ ರೆಡ್‌ಮಿ ನೋಟ್ 12 4ಜಿ 6GB RAM/124GB ಬೆಲೆ 11,597 ಹಾಗೂ 6GB RAM/64GB ಸ್ಟೋರೇಜ್ ವೇರಿಯಂಟ್ 9,597 ರೂಪಾಯಿಗೆ ಲಭ್ಯವಾಗುತ್ತದೆ. 49 ರೂಪಾಯಿ ಪ್ಯಾಕಿಂಗ್ ಶುಲ್ಕ ಸೇರಿ ಈ ಮೊತ್ತಕ್ಕೆ ಸ್ಮಾರ್ಟ್‌ಫೋನ್ ಖರೀದಿಸಬಹುದು.

ರೆಡ್‌ಮಿ ನೋಟ್ 12 4ಜಿ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್‌ ಹೆಚ್‌ಡಿ+ ಸೂಪರ್ ಅಲ್ಮೋಡ್ ಡಿಸ್‌ಪ್ಲೇ ಹೊಂದಿದೆ. 1080x2400 ಪಿಕ್ಸೆಲ್ ರೆಸಲ್ಯೂಶನ್, 120 Hz ರಿಫ್ರೆಶ್ ರೇಟ್, ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ 685 ಪ್ರೊಸೆಸರ್ ಅಡ್ರಿನೊ 610 ಜಿಪಿಯು ಆಪರೇಟಿಂಗ್ ಸಿಸ್ಟಮ್‌ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

ಆಪ್ಟಿಕ್ಸ್ ವಿಷಯಕ್ಕೆ ಬರುವುದಾದರೆ ಮಿಡ್‌ರೇಂಜ್ ಸ್ಮಾರ್ಟ್‌ಫೋನ್‌ನಲ್ಲಿ 50 ಎಂಪಿ ಪ್ರೈಮರಿ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೊ ಕಾಲ್‌ಗಳಿಗಾಗಿ ಈ ಫೋನ್‌ನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ವೈಶಿಷ್ಟ್ಯವನ್ನು ಹೊಂದಿದೆ.

ಪ್ರೊರ್ಟ್ರೇಟ್, ನೈಟ್‌ಮೋಡ್, ಪ್ರೊಮೋಡ್, ಡಾಕ್ಯುಮೆಂಟ್ ಮೋಡ್, ಶಾರ್ಟ್‌ ವಿಡಿಯೊ, ಪನೋರಮಾ, ಕಸ್ಟಮ್ ವಾಟರ್‌ಮಾರ್ಕ್, ಮೂವೀ ಫ್ರೇಮ್, ಟಿಲ್ಟ್‌ಶಿಫ್ಟ್, ವಾಟ್ಸ್ ಶಟರ್, ಟೈಮ್ಡ್ ಬರ್ಸ್ಟ್, ಬ್ಯೂಟಿಫೈ ಮತ್ತು ಇನ್ನೂ ಹಲವು ಕ್ಯಾಮೆರಾ ಅಪ್ಲಿಕೇಶನ್‌ನಲ್ಲಿ ಕಾಣಬಹುದು. ಬಜೆಟ್ ಸ್ನೇಹಿ ರೆಡ್‌ಮಿ ನೋಟ್ 12 4ಜಿ ಸ್ಮಾರ್ಟ್‌ಫೋನ್ 5,000 mAh ಬ್ಯಾಟರಿ ಪ್ಯಾಕ್ ಇದ್ದು, ಈ ಗ್ಯಾಜೆಟ್‌ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಇದೀಗ ಬೆಲೆಯಲ್ಲಿ ಸಾಕಷ್ಟು ಕಡಿತ ಮಾಡಿರುವುದರಿಂದ ಮತ್ತಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿವೆ.

Whats_app_banner