ಕನ್ನಡ ಸುದ್ದಿ  /  Lifestyle  /  Gadgets News Samsung Galaxy Book4 Series Revealed Price And Features Details Here Rmy

Samsung Galaxy Book4: ಮಾರುಕಟ್ಟೆಗೆ ಬರಲು ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ರೆಡಿ; ಹೀಗಿದೆ ಬೆಲೆ, ವೈಶಿಷ್ಟ್ಯಗಳು

Samsung Galaxy Book4: ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ಸಿರೀಸ್ ಅನ್ನು ಅಭಿವೃದ್ಧಿ ಪಡಿಸಿರುವ ಟೆಕ್ ದಿಗ್ಗಜ ಸಂಸ್ಥೆ ಸ್ಯಾಮ್‌ಸಂಗ್ ಮಾರುಕಟ್ಟೆಗೆ ಬಿಡಗಡೆ ಮಾಡಲು ಸಿದ್ಧವಾಗಿದೆ. ಗ್ಯಾಲಕ್ಸಿ ಬುಕ್4 ಬೆಲೆ, ವೈಶಿಷ್ಟ್ಯಗಳನ್ನ ತಿಳಿಯಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ರಿವೀಲ್ ಮಾಡಲಾಗಿದ್ದು, ಇದರ ಬೆಲೆ, ವೈಶಿಷ್ಟ್ಯಗಳನ್ನು ಒಮ್ಮೆ ಕಣ್ಣಾಡಿಸಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ರಿವೀಲ್ ಮಾಡಲಾಗಿದ್ದು, ಇದರ ಬೆಲೆ, ವೈಶಿಷ್ಟ್ಯಗಳನ್ನು ಒಮ್ಮೆ ಕಣ್ಣಾಡಿಸಿ.

ಬೆಂಗಳೂರು: ಭಾರತೀಯ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರಿಸಲು ಯೋಜಿಸುತ್ತಿರುವ ಪ್ರಸಿದ್ಧ ಸ್ಯಾಮ್‌ಸಂಗ್ ಕಂಪನಿಯು ಮತ್ತೊಂದು ಹೊಸ ಗ್ಯಾಜೆಟ್ ಅನ್ನು ಬಹಿರಂಗಪಡಿಸಿದೆ. ಅದರ ಹೆಸರು ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 (Samsung Galaxy Book4). 39.62 ಸೆಮೀ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯೊಂದಿಗೆ ಬರುತ್ತಿರುವ ಗ್ಯಾಲಕ್ಸಿ ಬುಕ್4 ಕೇವಲ 1.55 ಕೆಜಿ ತೂಕವನ್ನು ಹೊಂದಿದ್ದು, ಲೋಹದಿಂದ ಕೂಡಿದ ವಿನ್ಯಾಸ ಕಣ್ಮನ ಸಳೆಯುವಂತಿದೆ. ಇದು ಗ್ರೇ ಮತ್ತು ಸಿಲ್ವರ್‌ನಂತಹ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ನಿರೀಕ್ಷೆಗಳನ್ನು ಮೂಡಿಸುತ್ತಿರುವ ಗ್ಯಾಲಕ್ಸಿ ಬುಕ್ 4 ವೈಶಿಷ್ಟ್ಯಗಳು ಮತ್ತು ಬೆಲೆಯಂತಹ ವಿವರಗಳನ್ನು ತಿಳಿಯೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ನ ವಿಶೇಷ ಗುಣವೆಂದರೆ ಅದರ AI ಚಾಲಿತ ಫೋಟೋ ರೀಮಾಸ್ಟರ್ ಟೂಲ್. ಬೆಳಕು ಮತ್ತು ನೆರಳನ್ನು ಸರಿಹೊಂದಿಸುವ ಮೂಲಕ ಹಳೆಯ ಅಥವಾ ಕಡಿಮೆ-ಗುಣಮಟ್ಟದ ಚಿತ್ರಗಳ ಗುಣಮಟ್ಟವನ್ನು ಹೆಚ್ಚಿಸಲು ಇದನ್ನು ಬಳಸಬಹುದು. ಹೆಚ್ಚುವರಿಯಾಗಿ, ಬಳಕೆದಾರರು ಗ್ಯಾಲಕ್ಸಿ ವಿಡಿಯೊ ಎಡಿಟರ್ (Galaxy Video Editor) ಮೂಲಕ ತಮ್ಮ ಸೃಜನಶೀಲತೆಯನ್ನು ಅನ್ವೇಷಿಸಬಹುದು. ಈ ಅತ್ಯಾಧುನಿಕ ಗ್ಯಾಡ್ಜೆಟ್ ಒನ್ ಯುಐ ಬುಕ್ ವೆರ್.6 (One UI Book Ver.6) ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಡಾಲ್ಬಿ ಅಟ್ಮಾಸ್-ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಆರ್‌ಜೆ45 ಲ್ಯಾನ್ (RJ45 LAN) ಪೋರ್ಟ್, ಮಲ್ಟಿಮೀಡಿಯಾ ಬಹು ಬಳಕೆಯ ಅನುಭವನ್ನು ನೀಡುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ಪ್ರೊಸೆಸರ್ ನೋಡುವುದಾದರೆ ಇತ್ತೀಚಿನ ಇಂಟೆಲ್ ಕೋರ್ 5/7 ಪ್ರೊಸೆಸರ್, ಇಂಟಿಗ್ರೇಟೆಡ್ ಇಂಟೆಲ್ ಗ್ರಾಫಿಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಟ್ರೀಮಿಂಗ್, ಬಹುಕಾರ್ಯಕ್ಕೆ ಮೃದುವಾದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. 1 ಟಿಬಿ ವಿಸ್ತರಿಸಬಹುದಾದ ಎಸ್‌ಎಸ್‌ಡಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ಹೆಚ್ಚಿನ ಸಂಗ್ರಹಣೆ ಸಮಸ್ಯೆಗಳಿರುವುದಿಲ್ಲ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ಬೆಲೆ ಎಷ್ಟು?

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ಪ್ರೊ 360 ಆರಂಭಿಕ ಬೆಲೆ 1,63,990 ರೂಪಾಯಿ ಇದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ಪ್ರೊ ಆರಂಭಿಕ ಬೆಲೆ 1,31,990 ರೂಪಾಯಿ ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 360 ಆರಂಭಿಕ ಬೆಲೆ 1,14,990 ರೂಪಾಯಿ ಇದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ಗೆ ಆಫರ್‌ಗಳು ಇದೆಯಾ?

ಸ್ಯಾಮ್‌ಸಂಗ್ ಕಂಪನಿಯು ತನ್ನ ಗ್ರಾಹಕರಿಗೆ ಈ ಗ್ಯಾಡ್ಜೆಟ್‌ಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. 5000 ರೂಪಾಯಿ ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ 4000 ರೂಪಾಯಿ ವರೆಗಿನ ಅಪ್‌ಗ್ರೇಡ್ ಬೋನಸ್‌ಗಳನ್ನು ನೀಡುತ್ತಿದೆ. 24 ತಿಂಗಳವರೆಗೆ ಹೊಂದಿಕೊಳ್ಳುವ ಯಾವುದೇ ವೆಚ್ಚದ ಇಎಂಐ ಆಯ್ಕೆಗಳು. ಹೆಚ್ಚುವರಿಯಾಗಿ ಶೇಕಡಾ 10 ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಗ್ಯಾಲಕ್ಸಿ ಸ್ಯಾಮ್‌ಸಂಗ್ ಡಾಟ್ ಕಾಮ್(Galaxy Book4 Samsung.com) ನಲ್ಲಿ ಖರೀದಿಗೆ ಲಭ್ಯ ಇರಲಿದೆ. ಪ್ರಮುಖ ಆನ್‌ಲೈನ್ ಸ್ಟೋರ್‌ಗಳು ಮತ್ತು ಆಯ್ದ ಚಿಲ್ಲರೆ ಔಟ್‌ಲೆಟ್‌ಗಳಲ್ಲೂ ಹೊಸ ಗ್ಯಾಡ್ಜೆಟ್‌ಗಳು ಖರೀದಿಗೆ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ಭಾರತದ ಮಾರುಕಟ್ಟೆ ಬಗ್ಗೆ ಹೇಳುವುದಾದರೆ ಗುಣಮಟ್ಟ, ನಾವೀನ್ಯತೆಗಾಗಿ ಇಲ್ಲಿ ಸ್ಯಾಮ್‌ಸಂಗ್ ಜನಪ್ರಿಯವಾಗಿದೆ. ಗ್ಯಾಲಕ್ಸಿ ಬುಕ್4 ನಯವಾದ ಮತ್ತು ಬಹುಮುಖ ಸಾಧನದಲ್ಲಿ ವರ್ಧಿತ ಸಂಪರ್ಕ ಮತ್ತು ಉತ್ಪಾದಕತೆಯನ್ನು ಬಯಸುವ ಗ್ರಾಹಕರಿಗೆ ಆಕರ್ಷಕ ಆಯ್ಕೆಯನ್ನು ನೀಡುತ್ತದೆ.

ಎನ್‌ಹ್ಯಾನ್ಸ್ಡ್ ಕನೆಕ್ಟಿವಿಟಿ, ಪ್ರಾಡಕ್ಟಿವಿಟಿಗಾಗಿ ಗ್ಯಾಲಕ್ಸಿ ಬುಕ್4 ತುಂಬಾ ಉಪಕಾರಿಯಾಗಿದೆ. ಇದಕ್ಕಾಗಿ ಆಸಕ್ತರು ಈ ಗ್ಯಾಡ್ಜೆಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಟೆಕ್ ತಜ್ಞರು ಹೇಳುತ್ತಿದ್ದಾರೆ. ಆತ್ಯಾಧುನಿಕ ತಂತ್ರಜ್ಞಾನ ಆಧಾರಿತ ಹಾಗೂ ವಿಡಿಯೊ ಎಡಿಟಿಂಗ್ ಸೇರಿ ಮತ್ತಷ್ಟು ವಿಶೇಷ ಸೌಲಭ್ಯಗಳಿಗಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ಬಳಬಹುದು.