ವಿವೋ ವಿ50, ಒಪ್ಪೋ ರೆನೋ 13 ಮತ್ತು ಇನ್ನಷ್ಟು; 40000 ರೂ ಗಿಂತ ಕಡಿಮೆ ಬೆಲೆಗೆ ಸಿಗುವ ಉತ್ತಮ ಸ್ಮಾರ್ಟ್‌ಫೋನ್‌ಗಳಿವು
ವಿವಿಧ ವೈಶಿಷ್ಟ್ಯಗಳಿಂದ ತುಂಬಿರುವ ಮಧ್ಯಮ ಬೆಲೆಯ ಮೊಬೈಲ್ ಫೋನ್ ಖರೀದಿಸುವ ಯೋಜನೆ ನಿಮ್ಮದಾಗಿದ್ದರೆ, ಈ ಸುದ್ದಿ ನಿಮಗಾಗಿ. 40 ಸಾವಿರ ರೂ.ಗಿಂತ ಕಡಿಮೆ ಬೆಲೆಯ 5 ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ.

ಒಂದು ನಿರ್ದಿಷ್ಠ ಬಜೆಟ್‌ನಲ್ಲಿ ಎಲ್ಲಾ ಫೀಚರ್‌ಗಳಿರುವ ಸ್ಮಾರ್ಟ್ ಫೋನ್ ಖರೀದಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮಧ್ಯಮ ಶ್ರೇಣಿಯಲ್ಲಿ ಫೋನ್ ಖರೀದಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಆಯ್ಕೆಗಳಿದ್ದರೂ, ಸೂಕ್ತ ಫೋನ್ ಆಯ್ಕೆ ಮಾಡುವ ಕೆಲಸ ಕಷ್ಟಕರ. ನೀವೇನಾದರು 40,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಹುಡುಕುತ್ತಿದ್ದರೆ, ನಾವು ನಿಮಗೆ ಅಗತ್ಯ ಸಲಹೆ ನೀಡುತ್ತೇವೆ. ಇದರಲ್ಲಿ ವಿವೋ ವಿ50, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ56 ನಂತಹ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಕಳೆದ ವರ್ಷದ ಕೆಲವು ಜನಪ್ರಿಯ ಮಾಡೆಲ್‌ಗಳಾದ ಗೂಗಲ್ ಪಿಕ್ಸೆಲ್ 8ಎ ಮತ್ತು ಶಿಯೋಮಿ 14 ಸಿವಿ ಕೂಡಾ ಇವೆ.
ಫೋನ್‌ನ ಕಾರ್ಯಕ್ಷಮತೆ, ಕ್ಯಾಮೆರಾ ಸೇರಿದಂತೆ ವಿವಿಧ ಅಗತ್ಯ ಫೀಚರ್‌ಗಳೊಂದಿಗೆ ಬಳಕೆದಾರರ ಅಗತ್ಯಗಳನ್ನು ಪೂರೈಸುವ 5 ವೈಶಿಷ್ಟ್ಯಗಳಿರುವ ಫೋನ್‌ಗಳ ಪಟ್ಟಿ ಇಲ್ಲಿದೆ.
40,000 ರೂ.ಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಫೋನ್‌ಗಳು
ವಿವೋ ವಿ50: ಫೆಬ್ರುವರಿಯಲ್ಲಿ ಬಿಡುಗಡೆಯಾದ ಫೋನ್, ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಹೆಚ್ಚು ಗಮನ ಸೆಳೆಯಿತು. ಡ್ಯುಯಲ್ 50 ಎಂಪಿ ಕ್ಯಾಮೆರಾ ಸೆಟಪ್ ಮತ್ತು ZEISS ಇಂಟಿಗ್ರೇಷನ್‌ನೊಂದಿಗೆ ಈ ಸ್ಮಾರ್ಟ್‌ಫೋನ್ ಛಾಯಾಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ. ಇದು ಸ್ನ್ಯಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನೊಂದಿಗೆ ಉತ್ತಮ ಕಾರ್ಯಕ್ಷಮತೆ ಒದಗಿಸುತ್ತದೆ. 6000 ಎಂಎಎಚ್ ಬ್ಯಾಟರಿ ಇದರಲ್ಲಿದೆ.
ಒಪ್ಪೋ ರೆನೋ 13: 40,000 ರೂ.ಗಿಂತ ಕಡಿಮೆ ಬೆಲೆಗೆ ಪರಿಗಣಿಸಬೇಕಾದ ಮತ್ತೊಂದು ಸ್ಮಾರ್ಟ್ ಫೋನ್ ಇದು. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 8350 ಚಿಪ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಸುಗಮ ದೈನಂದಿನ ಕಾರ್ಯಕ್ಷಮತೆಯನ್ನು ನೀಡುತ್ತದೆ. ಟ್ರಿಪಲ್ ಕ್ಯಾಮೆರಾ ಸೆಟಪ್‌ಗೆ ಹೆಸರುವಾಸಿಯಾಗಿದೆ. 50 ಎಂಪಿ ಮುಖ್ಯ ಕ್ಯಾಮೆರಾ, 8 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಎಂಪಿ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಬಳಕೆದಾರರು 5600 ಎಂಎಎಚ್ ಬ್ಯಾಟರಿಯೊಂದಿಗೆ ಶಾಶ್ವತ ಕಾರ್ಯಕ್ಷಮತೆಯನ್ನು ಆನಂದಿಸಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ56 5ಜಿ: ಇದು ಸ್ಯಾಮ್‌ಸಂಗ್ ಹೊಸದಾಗಿ ಬಿಡುಗಡೆ ಮಾಡಿದ ಗ್ಯಾಲಕ್ಸಿ ಎ ಸರಣಿ ಫೋನ್ ಆಗಿದ್ದು, ಸುಧಾರಿತ ಎಐ-ಚಾಲಿತ ವೈಶಿಷ್ಟ್ಯಗಳಿಂದಾಗಿ ಜನಪ್ರಿಯತೆ ಗಳಿಸುತ್ತಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ56 ಫೋನ್ 12ಜಿಬಿ RAM ಹೊಂದಿದೆ. ಶಕ್ತಿಯುತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಸುಗಮ ಕಾರ್ಯಕ್ಷಮತೆ ಮತ್ತು ಎಐ ಅನುಭವಗಳಿಗಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ56 5ಜಿ ಉತ್ತಮ ಆಯ್ಕೆಯಾಗಿದೆ.
ಶಿಯೋಮಿ 14 ಸಿವಿ: ಶಿಯೋಮಿ 14 ಸಿವಿ ಕಳೆದ ವರ್ಷ ಬಿಡುಗಡೆಯಾಯ್ತು. ಈ ಸ್ಮಾರ್ಟ್‌ಫೋನ್ ಕೈಗೆಟುಕುವ ಬೆಲೆಯಲ್ಲಿ ಫ್ಲ್ಯಾಗ್‌ಶಿಪ್ ತರಹದ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಫೋನ್ ದುಬಾರಿ ಬೆಲೆಗೆ ಬಿಡುಗಡೆಯಾಗಿದ್ದರೂ, ಸದ್ಯ ಅಮೆಜಾನ್‌ನಲ್ಲಿ 40,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಇದು ಸ್ನ್ಯಾಪ್‌ಡ್ರಾಗನ್ 8 ಎಸ್ ಜೆನ್ 3 ಎಸ್ಒಸಿಯಿಂದ ನಿಯಂತ್ರಿಸಲ್ಪಡುತ್ತದೆ. 50 ಎಂಪಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಗೂಗಲ್ ಪಿಕ್ಸೆಲ್ 8ಎ: ಗೂಗಲ್ ಪಿಕ್ಸೆಲ್ 8ಎ, ಅಮೆಜಾನ್‌ನಲ್ಲಿ ರಿಯಾಯಿತಿ ಬೆಲೆಗೆ ಲಭ್ಯವಿದೆ. ಫ್ಲ್ಯಾಗ್‌ಶಿಪ್ ತರಹದ ಕ್ಯಾಮೆರಾ ಅನುಭವ ಮತ್ತು ಶಕ್ತಿಯುತ ಕಾರ್ಯಕ್ಷಮತೆಗಾಗಿ, ಗೂಗಲ್ ಪಿಕ್ಸೆಲ್ 8ಎ ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಫೋನ್ ಗೂಗಲ್ ಟೆನ್ಸರ್ ಜಿ3 ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ. 8ಜಿಬಿ RAM ಇದ್ದು, 64 ಎಂಪಿ ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ.