ಗಣಪನಿಗೆ ಪ್ರಿಯವಾಗುವ ಬಗೆ ಬಗೆ ಮೋದಕಗಳು; ಗಣೇಶ ಚತುರ್ಥಿಯಂದು ಈ ಸಿಹಿಭಕ್ಷ್ಯಗಳನ್ನ ಮನೆಯಲ್ಲೇ ತಯಾರಿಸಿ ನೈವೇದ್ಯ ಮಾಡಿ-ganesh chaturthi 2024 modaka recipes variety of modaka recipes for gowri ganesh festival karjikayi chocolate modaka rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗಣಪನಿಗೆ ಪ್ರಿಯವಾಗುವ ಬಗೆ ಬಗೆ ಮೋದಕಗಳು; ಗಣೇಶ ಚತುರ್ಥಿಯಂದು ಈ ಸಿಹಿಭಕ್ಷ್ಯಗಳನ್ನ ಮನೆಯಲ್ಲೇ ತಯಾರಿಸಿ ನೈವೇದ್ಯ ಮಾಡಿ

ಗಣಪನಿಗೆ ಪ್ರಿಯವಾಗುವ ಬಗೆ ಬಗೆ ಮೋದಕಗಳು; ಗಣೇಶ ಚತುರ್ಥಿಯಂದು ಈ ಸಿಹಿಭಕ್ಷ್ಯಗಳನ್ನ ಮನೆಯಲ್ಲೇ ತಯಾರಿಸಿ ನೈವೇದ್ಯ ಮಾಡಿ

ಗೌರಿ–ಗಣೇಶ ಹಬ್ಬ ಹತ್ತಿರದಲ್ಲೇ ಇದೆ. ಗಣೇಶನ ಹಬ್ಬ ಎಂದಾಕ್ಷಣ ನೆನಪಿಗೆ ಬರೋದು ಮೋದಕ. ಡೊಳ್ಳು ಹೊಟ್ಟೆ ಗಣಪ ಮೋದಕ ಪ್ರಿಯ. ಪ್ರತಿ ಬಾರಿ ಗಣೇಶ ಚತುರ್ಥಿಗೆ ಹಲವರು ಮನೆಯಲ್ಲೇ ಮೋದಕ ತಯಾರಿಸುತ್ತಾರೆ. ಈ ಬಾರಿ ಒಂದಲ್ಲ ಹಲವು ಬಗೆಯ ಮೋದಕ ಮಾಡಿ ಗಣಪನಿಗೆ ನೈವೇದ್ಯ ಮಾಡಿ. ಇಲ್ಲಿದೆ ವಿವಿಧ ಬಗೆಯ ಮೋದಕ ರೆಸಿಪಿಗಳು.

ಗಣಪನಿಗೆ ಪ್ರಿಯವಾಗುವ ಬಗೆ ಬಗೆ ಮೋದಕಗಳು
ಗಣಪನಿಗೆ ಪ್ರಿಯವಾಗುವ ಬಗೆ ಬಗೆ ಮೋದಕಗಳು (PC: Canva)

ಗಣೇಶ ಚತುರ್ಥಿ ಭಾರತದಾದ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬ. ಈ ದಿನವನ್ನು ಗಣಪತಿ ಹುಟ್ಟಿದ ದಿನ ಎಂದು ಪುರಾಣಗಳು ಹೇಳುತ್ತವೆ. ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಗಣೇಶನ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಗಣಪತಿ ಭೋಜನಪ್ರಿಯರ, ಗಣೇಶ ಚತುರ್ಥಿಗೆ ಲಡ್ಡು, ಮೋದಕ ತಯಾರಿಸಿ ನೈವೇದ್ಯಕ್ಕೆ ಇಡುವುದು ವಾಡಿಕೆ. ಪ್ರತಿ ಬಾರಿ ಗಣಪತಿ ಹುಟ್ಟುಹಬ್ಬಕ್ಕೆ ಒಂದೇ ಬಗೆಯ ಮೋದಕ ಮಾಡಿ ನೈವೇದ್ಯ ಮಾಡುತ್ತಿದ್ದರೆ ಈ ಬಾರಿ ವಿವಿಧ ರೀತಿಯ ಮೋದಕ ತಯಾರಿಸಿ. ಆ ಮೂಲಕ ಡೊಳ್ಳು ಹೊಟ್ಟೆ ಗಣಪನ ಕೃಪೆಗೆ ಪಾತ್ರರಾಗಿ.

ಈ ವರ್ಷ ಸೆಪ್ಟೆಂಬರ್ 7ರಂದು ಗಣೇಶ ಚತುರ್ಥಿ ಇದೆ. ಈಗಾಗಲೇ ಮಾರುಕಟ್ಟೆಗಳಲ್ಲಿ ವಿವಿಧ ರೀತಿಯ ಗಣೇಶನ ಮೂರ್ತಿಗಳು ರಾರಾಜಿಸುತ್ತಿವೆ. ನಾಡಿನೆಲ್ಲೆಡೆ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಚಾಕೊಲೇಟ್‌ ಮೋದಕದಿಂದ ರೋಸ್‌ ಕೊಕೊನಟ್ ಮೋದಕದವರೆಗೆ ಗಣಪತಿ ಬಪ್ಪನಿಗೆ ಮಾತ್ರವಲ್ಲ ಮಕ್ಕಳಿಗೂ ಇಷ್ಟವಾಗುವಂತೆ ಮೋದಕ ತಯಾರಿಸಿ. ಯಾವೆಲ್ಲಾ ರೀತಿಯ ಮೋದಕಗಳನ್ನು ಮಾಡಬಹುದು ನೋಡಿ

ಮೋದಕ

ಇದು ಗಣೇಶನ ನೈವೇದ್ಯಕ್ಕೆ ಇರಲೇಬೇಕು. ಮೈದಾಹಿಟ್ಟು, ರವೆ, ಬೆಲ್ಲ, ತೆಂಗಿನತುರಿ, ಹರುಗಡಲೆ, ಶೇಂಗಾ ಎಲ್ಲವನ್ನೂ ಹಾಕಿ ತಯಾರಿಸುವ ಸಿಹಿ ಖಾದ್ಯ ಮೋದಕ, ಇದು ಗಣಪನಿಗೆ ಅಚ್ಚುಮೆಚ್ಚು. ಬಹುತೇಕರು ಗಣೇಶ ಚತುರ್ಥಿ ಸಂದರ್ಭ ಮನೆಯಲ್ಲೇ ಮೋದಕ ತಯಾರಿಸುತ್ತಾರೆ.

ಕರ್ಜಿಕಾಯಿ

ಇದನ್ನು ಮೋದಕದ ಇನ್ನೊಂದು ರೂಪ ಅಂತಲೇ ಹೇಳಬಹುದು. ಕರ್ನಾಟಕದಲ್ಲಿ ಕರ್ಜಿಕಾಯಿ ಫೇಮಸ್‌. ಇದನ್ನು ಕೂಡ ಮೈದಾಹಿಟ್ಟು ಅಥವಾ ಗೋಧಿಹಿಟ್ಟಿನಿಂದ ತಯಾರಿಸಲಾಗುತ್ತದೆ. ಅದಕ್ಕೂ ಬೆಲ್ಲ, ತೆಂಗಿನತುರಿ, ಹುರಿಗಡಲೆ ಮುಂತಾದವನ್ನು ಬಳಸುತ್ತಾರೆ. ಕರ್ಜಿಕಾಯಿಯನ್ನು ನೋಡಲು ಒಂದೇ ರೀತಿ ಇದ್ದರೂ ಇದರ ಒಳಗಿನ ಸ್ಟಫಿಂಗ್‌ಗೆ ನೀವು ವಿವಿಧ ರೀತಿ ಮಾಡಬಹುದು.

ಚಾಕೊಲೇಟ್ ಮೋದಕ

ಇತ್ತೀಚಿನ ದಿನಗಳಲ್ಲಿ ಬಗೆ ಬಗೆಯ ಮೋದಕಗಳನ್ನು ತಯಾರಿಸಲಾಗುತ್ತಿದೆ. ನೀವು ಮನೆಯಲ್ಲಿ ಚಾಕೊಲೇಟ್ ಮೋದಕ ಮಾಡಿ ಗಣಪತಿಗೆ ನೈವೇದ್ಯ ಮಾಡಬಹುದು. ನಂತರ ಇದನ್ನ ಮನೆಯಲ್ಲಿ ಮಕ್ಕಳು ಇಷ್ಟುಪಟ್ಟು ತಿನ್ನುತ್ತಾರೆ. ಅಕ್ಕಿಹಿಟ್ಟು, ಚಾಕೊಲೇಟ್ ಪುಡಿ, ಬೆಣ್ಣೆ ಮುಂತಾದ ವಸ್ತುಗಳನ್ನು ಹಾಕಿ ತಯಾರಿಸುವ ಮೋದಕ ಇದಾಗಿದೆ.

ಪಾನ್ ಮೋದಕ

ಪಾನ್‌ನಿಂದ ಬಗೆ ಬಗೆಯ ಸ್ವೀಟ್ಸ್‌ಗಳು ಮಾತ್ರವಲ್ಲ, ಮೋದಕ ಕೂಡ ಮಾಡಬಹುದು. ಪಾನ್‌ ಎಲೆ, ಕಂಡ್ಸೆನ್ಡ್ ಮಿಲ್ಕ್‌, ಒಣಕೊಬ್ಬರಿ ತುರಿ, ಹಾಲಿನಪುಡಿ ಮುಂತಾದ ಸಾಮಗ್ರಿಗಳಿಂದ ಇದನ್ನು ತಯಾರಿಸಲಾಗುತ್ತದೆ. ಇದರ ರುಚಿ ಕೂಡ ಡಿಫ್ರೆಂಟ್ ಆಗಿರುತ್ತದೆ.

ಕೊಕೊನಟ್ ರೋಸ್ ಮೋದಕ

ರೋಸ್ ಸಿರಪ್ ಬೆರೆಸಿ ತೆಂಗಿನತುರಿ, ಮೈದಾಹಿಟ್ಟಿನ ಮಿಶ್ರಣದೊಂದಿಗೆ ಗುಲಾಬಿ ಬಣ್ಣದ ಮೋದಕ ತಯಾರಿಸಬಹುದು. ಇದು ನೋಡಲು ಕೂಡ ಸಖತ್ ಇರುತ್ತದೆ. ಟೇಸ್ಟ್ ಕೂಡ ಚೆನ್ನಾಗಿರುತ್ತದೆ.

ಒಣಹಣ್ಣುಗಳ ಮೋದಕ

ದ್ರಾಕ್ಷಿ, ಗೋಡಂಬಿ, ಬಾದಾಮಿ, ಮೈದಾಹಿಟ್ಟು, ಬೆಲ್ಲ ಈ ಎಲ್ಲಾ ಸಾಮಗ್ರಿ ಬಳಸಿ ಒಣಹಣ್ಣುಗಳ ಮೋದಕವನ್ನು ತಯಾರಿಸಬಹುದು. ಇದು ಆರೋಗ್ಯಕ್ಕೂ ಕೂಡ ಉತ್ತಮವಾಗಿರುವ ತಿಂಡಿ. ಇದನ್ನು ಗಣೇಶನಿಗೆ ನೈವೇದ್ಯ ಮಾಡಿ ಮನೆಯವರೆಲ್ಲಾ ತಿನ್ನಬಹುದು.

ಗಣಪತಿ ಹಬ್ಬಕ್ಕೆ ಒಂದೇ ರೀತಿಯ ಮೋದಕ ಮಾಡುವ ಬದಲು ವಿವಿಧ ಮೋದಕ ಮಾಡುವ ಬದಲು ಹೀಗೆ ಬಗೆ ಬಗೆಯ ಮೋದಕವನ್ನ ಮನೆಯಲ್ಲೇ ತಯಾರಿಸಿ ಗಣೇಶನಿಗೆ ನೈವೇದ್ಯ ಮಾಡಬಹುದು. ಈ ಮೇಲಿನ ಮೋದಕಗಳ ತಯಾರಿಸುವ ಪರಿಪೂರ್ಣ ವಿಧಾನವನ್ನು ನೀವು ಯುಟ್ಯೂಬ್ ಅಥವಾ ಗೂಗಲ್‌ನಲ್ಲಿ ಹುಡುಕಬಹುದು. ಆದರೆ ಕಡಿಮೆ ಸಾಮಗ್ರಿ ಬಳಸಿ ಬಹಳ ಬೇಗ ತಯಾರಿಸಬಹುದಾದ ಈ ಮೋದಕವನ್ನು ವಿಘ್ನ ನಿವಾರಕ ಗಣಪತಿ ಮಾತ್ರವಲ್ಲ ನಿಮ್ಮ ಮನೆಯವರೂ ಮೆಚ್ಚುತ್ತಾರೆ.