Girl Baby Names: ನಿಮ್ಮ ಮನೆಯ ಮುದ್ದಾದ ಹೆಣ್ಣುಮಗುವಿಗೆ ಲಕ್ಷ್ಮಿಯ ಈ ಹೆಸರುಗಳನ್ನು ಇರಿಸಿ
Goddess Lakshmi names for baby girl: ಮನೆಯಲ್ಲಿ ಹೆಣ್ಣು ಮಗು ಜನಿಸಿತು ಎಂದರೆ ಮನೆಗೆ ಮಹಾಲಕ್ಷ್ಮಿಯೇ ಬಂದಂತೆ ಎಂದು ಹೇಳುತ್ತೇವೆ. ಅಂತಹ ಪುಟ್ಟ ಮುದ್ದಾದ ಹೆಣ್ಣು ಮಗುವಿಗೆ ಲಕ್ಷ್ಮಿಯ ಹೆಸರುಗಳನ್ನು ಇರಿಸುವ ಯೋಚನೆಯಲ್ಲಿದ್ದೀರಾ? ಇಲ್ಲಿ ನೀಡಿರುವ ಪಟ್ಟಿಯಲ್ಲಿ ಲಕ್ಷ್ಮಿಯ ಆಕರ್ಷಕ ಹೆಸರುಗಳಿವೆ.

ಹೆಣ್ಣುಮಕ್ಕಳನ್ನು ಮನೆಯ ಮಹಾಲಕ್ಷ್ಮಿ, ಭಾಗ್ಯಲಕ್ಷ್ಮಿ ಎಂದು ಕರೆಯುವುದು ರೂಢಿ. ಮನೆಯಲ್ಲಿ ಹೆಣ್ಣು ಮಗು ಜನಿಸಿದೆ ಎಂದರೆ ಸಂಭ್ರಮ ಇರುತ್ತದೆ. ಹೆಣ್ಣು ಮಗುವೆಂದು ತಾತ್ಸಾರ ಪಡುವ ದಿನಗಳು ಈಗಿಲ್ಲ. ಮನೆ ಮಗಳು, ಗಂಡುಮಕ್ಕಳಂತೆಯೇ ಸರಿಸಮಾನವಾಗಿ ಇಂದು ಸಮಾಜದಲ್ಲಿ ಬದುಕಿ ತೋರಿಸುತ್ತಾಳೆ. ಎಲ್ಲಾ ರಂಗದಲ್ಲೂ ಹೆಣ್ಣು ತಾನು ಸ್ವಾಭಿಮಾನಿ ಎಂದು ರೂಪಿಸಿದ್ದಾಳೆ. ಹೀಗಾಗಿ ಹೆಣ್ಣು ಮಗು ಎಂದರೆ ಹೆಮ್ಮೆ ಎನ್ನುವಷ್ಟು ಸಮಾಜ ಬದಲಾಗಿದೆ.
ಹೆಣ್ಣು ಮಗು ಹುಟ್ಟಿದೆ ಎಂದರೆ ಮನೆಯಲ್ಲಿ, ನೆಂಟರಿಷ್ಟರಲ್ಲಿ ಸಂಭ್ರಮ ಹೇಗಿರುತ್ತದೆಯೋ, ಅದೇ ರೀತಿಯಲ್ಲಿ ಮಗುವಿಗೆ ಹೆಸರು ಏನು ಇಡುವುದು ಎಂಬ ಗದ್ದಲವೂ, ಗೌಜಿಯೂ ಆರಂಭವಾಗಿರುತ್ತದೆ. ಮಕ್ಕಳಿಗೆ ಜಾತಕದ ಪ್ರಕಾರ, ಹುಟ್ಟಿದ ಸಮಯ, ಮುಹೂರ್ತದ ಅನುಸಾರ ಹೆಸರು ಇರಿಸುವ ಪದ್ಧತಿ ಒಂದೆಡೆಯಾದರೆ, ಅಪ್ಪ-ಅಮ್ಮನ ಹೆಸರಿನ ಅಕ್ಷರ ಸೇರಿಸಿ ಹೆಸರು ಇರಿಸುವುದು ಮತ್ತೊಂದೆಡೆ ಇರುತ್ತದೆ. ಅದರ ಜತೆಗೇ, ವಂಶದ ಹಿರಿಯರ, ದೇವರ ಹೆಸರನ್ನು ಜತೆ ಸೇರಿಸಿ ಕೂಡ ಮಗುವಿಗೆ ಹೆಸರು ಇರಿಸುತ್ತಾರೆ.
ನಿಮ್ಮನೆ ಮಹಾಲಕ್ಷ್ಮಿಗೆ ಲಕ್ಷ್ಮಿಯ ಹೆಸರು ಇಡಿ
ಲಕ್ಷ್ಮಿ ಎಂದರೆ ಮನೆಗೆ ಸೌಭಾಗ್ಯ ತರುತ್ತಾಳೆ ಎನ್ನುವ ನಂಬಿಕೆಯಿದೆ. ಹೀಗಾಗಿ ಹೆಣ್ಣು ಮಗುವಿಗೆ ಲಕ್ಷ್ಮಿಯ ಹೆಸರನ್ನು ಇರಿಸಲು ಜನರು ಬಯಸುತ್ತಾರೆ. ಇಲ್ಲಿ ಲಕ್ಷ್ಮಿ ದೇವತೆಯ ಕೆಲವೊಂದು ಹೆಸರುಗಳನ್ನು ನೀಡಲಾಗಿದೆ. ಅದರ ಅರ್ಥವೂ ಜತೆಗಿದೆ. ಮಗುವಿಗೆ ಹೆಸರು ಇಡುವಾಗ ಇವುಗಳನ್ನು ಪರಿಗಣಿಸಬಹುದು.
ನಂದಿಕಾ
ಲಕ್ಷ್ಮಿಯ ಇನ್ನೊಂದು ಹೆಸರು. ಅಂದರೆ ಸದಾ ಖುಷಿಯನ್ನು ತರುವ, ಉಲ್ಲಾಸದಿಂದಿರುವ ಮಹಿಳೆ ಎಂದರ್ಥ
ಶ್ರೀಜಾ
ಸಂಪತ್ತು, ಸೌಭಾಗ್ಯವನ್ನು ತರುವವಳು ಲಕ್ಷ್ಮಿ ಎನ್ನುವ ಅರ್ಥವನ್ನು ಹೊಂದಿದೆ
ವಾಗ್ಮಿ
ದೇವತೆ ಮತ್ತು ಜಗತ್ತನೇ ನಿಯಂತ್ರಿಸಬಲ್ಲವಳು ಎಂಬ ವಿಶೇಷತೆಯಿರುವ ಹೆಸರು ಇದು
ಕಾಮಾಕ್ಷಿ
ಸುಂದರಿ ಮತ್ತು ಆಕರ್ಷಕ ಕಣ್ಣುಗಳನ್ನು ಹೊಂದಿರುವವಳು, ಲಕ್ಷ್ಮಿ ಎಂಬ ಅರ್ಥ
ಲಖಿ
ಲಕ್ಷ್ಮಿ ದೇವತೆಯನ್ನು ಲಖಿ ಎಂಬ ಹೆಸರಿನಲ್ಲು ಕರೆಯುತ್ತಾರೆ
ಮಾನುಷಿ
ಸುಂದರಿ ಮತ್ತು ಕರುಣಾಮಯಿ ಎಂಬ ಅರ್ಥ ಹೊಂದಿದ್ದು, ತಾಯಿ ಲಕ್ಷ್ಮಿಯ ಮತ್ತೊಂದು ಹೆಸರಾಗಿದೆ
ಶ್ರೀ
ಮಹಾ ಲಕ್ಷ್ಮಿಯ ಮತ್ತೊಂದು ಹೆಸರು ಶ್ರೀ. ದೇವತೆ ಲಕ್ಷ್ಮಿಯ ಹೆಸರು ಹಾಗೂ ಸಂಪತ್ತಿನ ಒಡತಿ ಎಂಬರ್ಥ ಹೊಂದಿದೆ
ಸಾನ್ವಿ
ಲಕ್ಷ್ಮಿ ತಾವರೆಯ ಮೇಲೆ ನೆಲೆಸಿರುತ್ತಾಳೆ. ಹೀಗಾಗಿ ಅವಳನ್ನು ಸಾನ್ವಿ ಎಂಬ ಹೆಸರಿನಿಂದ ಕರೆಯುತ್ತಾರೆ.
ಶ್ರೇಯಾ
ಹೆಣ್ಣುಮಗುವಿಗೆ ಇರಿಸಬಹುದಾದ ಲಕ್ಷ್ಮಿಯ ಮತ್ತೊಂದು ಹೆಸರು ಎಂದರೆ ಅದು ಶ್ರೇಯಾ. ಸಂಪತ್ತು, ಸೌಭಾಗ್ಯವನ್ನು ತರುತ್ತಾಳೆ ಎನ್ನುವ ಅರ್ಥ ಹೊಂದಿದೆ.

ವಿಭಾಗ