iPhone 16 Launch Date: ಐಫೋನ್ ಪ್ರಿಯರಿಗೆ ಗುಡ್‌ ನ್ಯೂಸ್‌, ಮುಂದಿನ ತಿಂಗಳ ಎರಡನೇ ವಾರದಲ್ಲೇ iPhone 16 ಬಿಡುಗಡೆ-good news for iphone lovers iphone 16 will be launched on september 9 smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Iphone 16 Launch Date: ಐಫೋನ್ ಪ್ರಿಯರಿಗೆ ಗುಡ್‌ ನ್ಯೂಸ್‌, ಮುಂದಿನ ತಿಂಗಳ ಎರಡನೇ ವಾರದಲ್ಲೇ Iphone 16 ಬಿಡುಗಡೆ

iPhone 16 Launch Date: ಐಫೋನ್ ಪ್ರಿಯರಿಗೆ ಗುಡ್‌ ನ್ಯೂಸ್‌, ಮುಂದಿನ ತಿಂಗಳ ಎರಡನೇ ವಾರದಲ್ಲೇ iPhone 16 ಬಿಡುಗಡೆ

iPhone 16 Launch Date: ಆಪಲ್ ಪ್ರಿಯರಿಗೊಂದು ಖುಷಿಯ ಸುದ್ದಿ ಸಪ್ಟೆಂಬರ್‌ ತಿಂಗಳಿನಲ್ಲೇ ಬಿಡುಗಡೆಯಾಗಲಿದೆ ಐಫೋನ್‌ 16. ನೀವು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಬಯಸಿದರೆ ಇದನ್ನು ಸಂಪೂರ್ಣವಾಗಿ ಓದಿ.

iPhone 16
iPhone 16 (iPhone 16)

ಆಪಲ್ ಪ್ರಿಯರಿಗೊಂದು ಖುಷಿಯ ಸುದ್ದಿ! ಐಫೋನ್ 16 ಸಿರೀಸ್‌ ಬಿಡುಗಡೆಗಾಗಿ ಕಾಯುತ್ತಿರುವವರಿಗೆ ಕ್ರೇಜಿ ಅಪ್‌ಡೇಟ್ ಇಲ್ಲಿದೆ . ಐಫೋನ್ 16 ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ. ಆಪಲ್ ಈ ಕುರಿತು ನಿಖರ ಮಾಹಿತಿಯನ್ನು ಶೇರ್ ಮಾಡಿಕೊಂಡಿದೆ. ನಾನು ಲೇಟೆಸ್ಟ್‌ ಮಾಡೆಲ್ ಖರೀದಿ ಮಾಡಬೇಕು ಎಂದು ನೀವು ಕಾಯುತ್ತಿದ್ದರೆ ನಿಮ್ಮ ಹಣ ಕೂಡಿಡಲು ಇದು ಒಳ್ಳೆ ಸಮಯ. ಇನ್ನು ಕೇವಲ ಮೂರು ವಾರಗಳಲ್ಲಿ ಇದು ಜನರ ಕೈ ಸೇರಲಿದೆ.

"ಇಟ್ಸ್ ಗ್ಲೋಟೈಮ್"

ಕಂಪನಿಯು "ಇಟ್ಸ್ ಗ್ಲೋಟೈಮ್" ಎಂಬ ಘೋಷಣೆ ಮಾಡಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಮಾಧ್ಯಮವನ್ನು ಆಹ್ವಾನಿಸುವ ಮೂಲಕ ಆಪಲ್ ಅಧಿಕೃತವಾಗಿ ನೂತನ ಸೀರೀಸ್‌ ಬಿಡುಗಡೆಯನ್ನು ಘೋಷಿಸಿದೆ. ಈವೆಂಟ್ ಅನ್ನು ಅಮೆರಿಕದ ಆಪಲ್ ಪಾರ್ಕ್‌ನಿಂದ ಬೆಳಿಗ್ಗೆ 10 ಗಂಟೆಗೆ ಪ್ರಸಾರ ಮಾಡಲಾಗುತ್ತದೆ. ಅಂದರೆ, ಭಾರತದಲ್ಲಿ ಈ ಈವೆಂಟ್ 2024ರ ಸೆಪ್ಟೆಂಬರ್ 9ರಂದು ರಾತ್ರಿ 10:30ಕ್ಕೆ (ಭಾರತೀಯ ಕಾಲಮಾನ) ನೇರಪ್ರಸಾರವಾಗಲಿದೆ. ಈವೆಂಟ್ ಅನ್ನು ಯೂಟ್ಯೂಬ್ ಮತ್ತು ಆಪಲ್ ಈವೆಂಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಐಫೋನ್‌ಗಳು, ಏರ್‌ಪಾಡ್‌ಗಳು, ವಾಚ್‌ಗಳು ಎಲ್ಲವೂ ಲಭ್ಯವಿದೆ. ಈ ಸೆಪ್ಟೆಂಬರ್ ಈವೆಂಟ್‌ನಲ್ಲಿ ಇದೆಲ್ಲವೂ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಆದರೆ ಹೊಸ ಮ್ಯಾಕ್‌ಬುಕ್ಅನ್ನು ಒಂದು ತಿಂಗಳ ನಂತರ ಅಕ್ಟೋಬರ್‌ನಲ್ಲಿ ವಿಶೇಷ ಕಾರ್ಯಕ್ರಮವನ್ನು ಮಾಡಿ ನಂತರ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಐಫೋನ್ 16 ಅನ್ನು ಸೆಪ್ಟೆಂಬರ್ 9 ರಂದು ಬಿಡುಗಡೆ ಮಾಡಲಾಗಿದ್ದರೂ, ಮಾರಾಟವು ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಕಂಪನಿ ಇನ್ನೂ ಅಧಿಕೃತ ಘೋಷಣೆ ಮಾಡಬೇಕಿದೆ. ಐಫೋನ್ 16 ಸರಣಿಯ ಬೆಲೆ ಹೆಚ್ಚಾಗದಿರಬಹುದು ಎಂದು ವರದಿಯಾಗಿದೆ. ಇದಲ್ಲದೆ, ಭಾರತದಲ್ಲಿ ಬೆಲೆಗಳು ಕಡಿಮೆಯಾಗಬಹುದು ಎಂಬ ಊಹಾಪೋಹಗಳಿವೆ. ಇದು ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂಬುದನ್ನು ಕಾದು ನೋಡೋಣ.

ಬೆಲೆ ಕಡಿಮೆ

ಈ ವರ್ಷ ಭಾರತದಲ್ಲಿ ಐಫೋನ್ 16 ಬೆಲೆ ಕುಸಿತಕ್ಕೆ ಹಲವಾರು ಕಾರಣಗಳಿವೆ. ಕೇಂದ್ರ ಬಜೆಟ್ ಕೂಡ ಒಂದು ಕಾರಣವಾಗಿರಬಹುದು. ಮೊದಲನೆಯದಾಗಿ, ಫಾಕ್ಸ್‌ಕಾನ್ ತನ್ನ ಉತ್ಪಾದನಾ ಸೌಲಭ್ಯವನ್ನು ದೇಶದಲ್ಲಿ ವಿಸ್ತರಿಸುವುದರಿಂದ iPhone 16 Pro ಮತ್ತು iPhone 16 Pro Max ಅನ್ನು ಭಾರತದಲ್ಲಿ ಕಡಿಮೆ ಬೆಲೆಗೆ ದೊರೆಯಬಹುದು ಎಂದು ಹೇಳಲಾಗಿದೆ. ಐಫೋನ್ 16 ಪ್ರೊ ಮಾದರಿಗಳ ಉತ್ಪಾದನೆಯು ಭಾರತದಲ್ಲಿ ಸ್ಥಳೀಯವಾಗಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಕಂಪನಿಯು ಭಾರತಕ್ಕೆ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ವ್ಯಯಿಸಲಾದ ದೊಡ್ಡ ಮೊತ್ತದ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.

ಮುಂಬರುವ ಐಫೋನ್ 16 ಪ್ರೊ ಮಾದರಿಗಳು ಕಳೆದ ವರ್ಷದ ಐಫೋನ್ 15 ಪ್ರೊ ಮಾದರಿಗಳಿಗಿಂತ ಕಡಿಮೆ ಬೆಲೆಗೆ ಇರುವುದಕ್ಕೆ ಇದು ದೊಡ್ಡ ಕಾರಣವಾಗಿರಬಹುದು.

iPhone 16 ನ ವೈಶಿಷ್ಟ್ಯಗಳೇ?

ಐಫೋನ್ 16 ನ ವೈಶಿಷ್ಟ್ಯಗಳ ಬಗ್ಗೆ ಕೆಲವು ಸಮಯದಿಂದ ವದಂತಿಗಳು ಕೇಳಿಬರುತ್ತಿವೆ. ಐಫೋನ್ 16 48 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ, 12 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು ವೀಡಿಯೊ ಬೆಂಬಲವನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ. ಉತ್ತಮ ಕಾರ್ಯಕ್ಷಮತೆ ಮತ್ತು AI ವೈಶಿಷ್ಟ್ಯಗಳಿಗಾಗಿ, iPhone 16 ಹೊಸ A18 Pro ಚಿಪ್‌ಸೆಟ್‌ನೊಂದಿಗೆ ಬರುವ ನಿರೀಕ್ಷೆಯಿದೆ.