ವ್ಯಾಲೆಂಟೈನ್ಸ್ ಡೇಗೆ ವೈಜ್ಞಾನಿಕ ತಿರುವು ನೀಡಿದ ಗೂಗಲ್ ಡೂಡಲ್; ಲವ್ ಕೆಮಿಸ್ಟ್ರಿ ಆಟಕ್ಕೆ ಪ್ರೇಮಿಗಳಿಗೆ ವೇದಿಕೆ
ಕನ್ನಡ ಸುದ್ದಿ  /  ಜೀವನಶೈಲಿ  /  ವ್ಯಾಲೆಂಟೈನ್ಸ್ ಡೇಗೆ ವೈಜ್ಞಾನಿಕ ತಿರುವು ನೀಡಿದ ಗೂಗಲ್ ಡೂಡಲ್; ಲವ್ ಕೆಮಿಸ್ಟ್ರಿ ಆಟಕ್ಕೆ ಪ್ರೇಮಿಗಳಿಗೆ ವೇದಿಕೆ

ವ್ಯಾಲೆಂಟೈನ್ಸ್ ಡೇಗೆ ವೈಜ್ಞಾನಿಕ ತಿರುವು ನೀಡಿದ ಗೂಗಲ್ ಡೂಡಲ್; ಲವ್ ಕೆಮಿಸ್ಟ್ರಿ ಆಟಕ್ಕೆ ಪ್ರೇಮಿಗಳಿಗೆ ವೇದಿಕೆ

Valentine's Day Google Doodle Chemistry CuPd: ಪ್ರೇಮಿಗಳ ದಿನದಂದು ಮೋಜಿನ ಆಟವಾಡಲು ಗೂಗಲ್ ಡೂಡಲ್ ಅವಕಾಶ ಮಾಡಿಕೊಟ್ಟಿದೆ. ಗೂಗಲ್ ಡೂಡಲ್ ಕೆಮಿಸ್ಟ್ರಿ ಕ್ಯೂಪಿಡ್‌ ಮೂಲಕ ಲವ್ ಕೆಮಿಸ್ಟ್ರಿ ಪರೀಕ್ಷೆ ಮಾಡಬಹುದು. ಈ ಮೂಲಕ ವ್ಯಾಲೆಂಟೈನ್ಸ್ ಡೇಗೆ ಗೂಗಲ್ ವೈಜ್ಞಾನಿಕ ತಿರುವು ನೀಡಿದೆ.

ವ್ಯಾಲೆಂಟೈನ್ಸ್ ಡೇಗೆ ವೈಜ್ಞಾನಿಕ ತಿರುವು ನೀಡಿದ ಗೂಗಲ್ ಡೂಡಲ್
ವ್ಯಾಲೆಂಟೈನ್ಸ್ ಡೇಗೆ ವೈಜ್ಞಾನಿಕ ತಿರುವು ನೀಡಿದ ಗೂಗಲ್ ಡೂಡಲ್

ಇಂದು (ಫೆಬ್ರವರಿ 14) ವ್ಯಾಲೆಂಟೈನ್ಸ್ ಡೇ. ಪ್ರೇಮಿಗಳಿಗೆಂದು ಮೀಸಲಾದ ದಿನ. ವಿಶೇಷ ದಿನದವನ್ನು ಆಚರಿಸಲು ಗೂಗಲ್ ಡೂಡಲ್ (Google Doodle) ಕೂಡಾ ವಿಶೇಷ ಪ್ರಯತ್ನ ಮಾಡಿದೆ. ಪ್ರೇಮಿಗಳು ಅಥವಾ ಬಳಕೆದಾರರ ಕೆಮಿಸ್ಟ್ರಿಯನ್ನು ವೈಜ್ಞಾನಿಕ ತಿರುವಿನೊಂದಿಗೆ ವಿವರಿಸಲು ಗೂಗಲ್‌ ಮುಂದಾಗಿದೆ.

ಪ್ರೇಮಿಗಳ ದಿನಕ್ಕಾಗಿ ಗೂಗಲ್‌ ಸಂಸ್ಥೆಯು ಸಂವಾದಾತ್ಮಕ ಡೂಡಲ್ ಅನ್ನು ಅನಾವರಣಗೊಳಿಸಿದೆ. ಇದು ಒಂದು ರೀತಿಯ ಆಟ. 'ಕೆಮಿಸ್ಟ್ರಿ ಕ್ಯುಪಿಡ್' ಎಂಬ ಈ ಗೇಮ್‌ ಅನ್ನು ಫೆಬ್ರವರಿ 14ರ ಬುಧವಾರದಂದು ಸೆರ್ಚ್‌ ಇಂಜಿನ್‌ ಹೊರತಂದಿದೆ. ಗೂಗಲ್‌ನ ಮುಖಪುಟದ ಲೋಗೋ ಜಾಗದಲ್ಲಿ ಈ ಡೂಡಲ್‌ ತಾತ್ಕಾಲಿಕವಾಗಿ ಕಾಣಿಸಿಕೊಂಡಿದೆ.

ಇದನ್ನೂ ಓದಿ | ಇದನ್ನೂ ಓದಿ: ವೈಟ್‌ಡೇಯಿಂದ ಸಾಮೂಹಿಕ ವಿವಾಹದವರೆಗೆ; ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್‌ ಡೇಯನ್ನು ಹೇಗೆಲ್ಲಾ ಆಚರಿಸ್ತಾರೆ ನೋಡಿ

ಪ್ರೇಮಿಗಳ ದಿನವನ್ನು "ವೈಜ್ಞಾನಿಕ ತಿರುವಿನೊಂದಿಗೆ" ಆಚರಿಸಲು ಗೂಗಲ್‌ ಅವಕಾಶ ನೀಡಿದೆ. ಈ ಆಟವನ್ನು ಯಾವುದೇ ಬಳಕೆದಾರರು ಕೂಡಾ ಆಡಬಹುದು.

ಗೂಗಲ್ ಡೂಡಲ್ ಕೆಮಿಸ್ಟ್ರಿ ಕ್ಯೂಪಿಡ್ (Valentine's Day Google Doodle Chemistry CuPd) ನಿಮಗೆ ಆಟವನ್ನು ಆಡಲು ಅವಕಾಶವನ್ನು ನೀಡುತ್ತದೆ. ಇದರಲ್ಲಿ ನೀವು ಆವರ್ತಕ ಕೋಷ್ಟಕದಿಂದ ಅವತಾರ್‌ ಅನ್ನು ಆಯ್ಕೆ ಮಾಡಬಹುದು. ಅಲ್ಲದೆ ನಿಮ್ಮ ವ್ಯಕ್ತಿತ್ವಕ್ಕೆ ಸರಿಯಾಗಿ ಹೊಂದಿಕೆಯಾಗುವ ರಸಪ್ರಶ್ನೆ ಆಯ್ಕೆ ಮಾಡಬೇಕು.

ಇದನ್ನೂ ಓದಿ: Valentines Day: ಫೆ 14ರಂದೇ ಪ್ರೇಮಿಗಳ ದಿನವನ್ನು ಆಚರಿಸುವುದರ ಹಿಂದಿದೆ ಮಹತ್ವದ ಕಾರಣ; ಈ ದಿನದ ಇತಿಹಾಸ ತಿಳಿಯಿರಿ

ಪ್ರೇಮಿಗಳ ದಿನವನ್ನು ಹೇಗೆ ಪ್ರಾರಂಭಿಸುವುದು ಎಂದು ನೀವು ಯೋಚಿಸುತ್ತಿದ್ದರೆ, ಇದು ನಿಮಗೆ ಉತ್ತಮ ಆಯ್ಕೆ. ನಿಮ್ಮ ಕೆಮಿಕಲ್‌ ಎಲಿಮೆಂಟ್‌ ಅವತಾರ್‌ಗೆ ಹೊಂದಿಕೆಯಾಗಲು ಮತ್ತು ಕೆಲವು ಉತ್ತಮ ಬಂಧಗಳನ್ನು ರಚಿಸಲು ಈ ಮೋಜಿನ ಡೂಡಲ್ ಅನ್ನು ಕ್ಲಿಕ್ ಮಾಡಿ ನೋಡಿ.

ವ್ಯಾಲೆಂಟೈನ್ಸ್ ಡೇ ಗೂಗಲ್ ಡೂಡಲ್ ಆಟ
ವ್ಯಾಲೆಂಟೈನ್ಸ್ ಡೇ ಗೂಗಲ್ ಡೂಡಲ್ ಆಟ

“ನೀವು ಬೆರಿಲಿಯಮ್, ಚಿನ್ನ ಮತ್ತು ಟೈಟಾನಿಯಂನಿಂದ ಮಾಡಲ್ಪಟ್ಟಿದ್ದೀರಾ? ಏಕೆಂದರೆ ನೀವು BeAuTi-ful ಆಗಿದ್ದೀರ ಎಂದು "Google Doodle ಡಿಸ್ಕ್ರಿಪ್ಷನ್‌ನಲ್ಲಿ ಹಾಕಲಾಗಿದೆ.

ಡೂಡಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿ ಇಲ್ಲಿದೆ

  • ರಾಸಾಯನಿಕ ಅಂಶವನ್ನು ಆಯ್ಕೆಮಾಡಿ
  • ಇತರ ರ ಅಸಾಯನಿಕ ಅಂಶಗಳೊಂದಿಗೆ ಮ್ಯಾಚ್ ಮಾಡಿ
  • ಆ ಅಂಶಗಳ ಬಗ್ಗೆ ಸಂಕ್ಷಿಪ್ತ ಸಾರಾಂಶವನ್ನು ಓದಿ
  • ಆ ಅಂಶದೊಂದಿಗೆ ಬಾಂಡ್ ನೋಡಲು ಬಲಕ್ಕೆ ಸ್ವೈಪ್ ಮಾಡಿ
  • ವಿಭಿನ್ನ ಅಂಶದೊಂದಿಗೆ ಬಂಧವನ್ನು ರೂಪಿಸಲು ಎಡಕ್ಕೆ ಸ್ವೈಪ್ ಮಾಡಿ

ಇದೇ ವೇಳೆ, ಗೂಗಲ್ ಡೂಡಲ್ ರಸಪ್ರಶ್ನೆಯನ್ನು ಆಡಬಹುದು. ಇದರಲ್ಲಿ ಒಬ್ಬರ ವ್ಯಕ್ತಿತ್ವಕ್ಕೆ ಹೆಚ್ಚು ಹೊಂದಿಕೆಯಾಗುವ ಅಂಶವನ್ನು ಹುಡುಕಲು ಮತ್ತು ಹೊಂದಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ | Valentine Day 2024: ವ್ಯಾಲೆಂಟೈನ್‌ ಡೇ ಪಾರ್ಟಿಗೆ ಹೋಗ್ತಿದ್ದೀರಾ; ಎಲ್ಲರ ನಡುವೆ ಆಕರ್ಷಕವಾಗಿ ಕಾಣಲು ಈ ಮೇಕಪ್‌ ಟಿಪ್ಸ್‌ ಬಳಸಿ

ಪ್ರೇಮಿಗಳ ದಿನವನ್ನು ಪ್ರತಿವರ್ಷ ಫೆಬ್ರವರಿ 14ರಂದು ಆಚರಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಆಚರಣೆಗಳು 7 ದಿನ ಮುಂಚಿತವಾಗಿ ಆರಂಭವಾಗುತ್ತವೆ. ರೋಸ್ ಡೇಯಿಂದ ಪ್ರಾರಂಭವಾಗಿ ಕಿಸ್ ಡೇಯೊಂದಿಗೆ ಕೊನೆಗೊಳ್ಳುತ್ತವೆ. ರೋಸ್ ಡೇ (ಫೆಬ್ರವರಿ 7), ಪ್ರಪೋಸ್ ಡೇ (ಫೆಬ್ರವರಿ 8), ಚಾಕೊಲೇಟ್ ಡೇ (ಫೆಬ್ರವರಿ 9), ಟೆಡ್ಡಿ ಡೇ (ಫೆಬ್ರವರಿ 10), ಪ್ರಾಮಿಸ್ ಡೇ (ಫೆಬ್ರವರಿ 11), ಹಗ್ ಡೇ (ಫೆಬ್ರವರಿ 12) ಮತ್ತು ಕಿಸ್ ಡೇ (ಫೆಬ್ರವರಿ 13) ಪ್ರೇಮಿಗಳ ವಾರದ ಏಳು ದಿನಗಳು.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner