Google Doodle: ಜನವರಿ ಹಾಫ್ ಮೂನ್; ಗೂಗಲ್ ಡೂಡಲ್ ಮೂಲಕ ಚಂದ್ರನ ಪ್ರಯಾಣದ ಹಂತಗಳನ್ನು ಆನಂದಿಸಿ
ಪ್ರತಿ ವಿಶೇಷ ಕ್ಷಣಗಳನ್ನು ಗೂಗಲ್ ಡೂಡಲ್ ಮೂಲಕ ಸಂಭ್ರಮಿಸುತ್ತದೆ. ಜನವರಿಯ ಹಾಫ್ ಮೂನ್ ಅನ್ನು ಗೂಗಲ್ ವಿಶೇಷ ಆಕರ್ಷಣೆಯ ಡೂಡಲ್ ಮೂಲಕ ಪ್ರಸ್ತುತಪಡಿಸಿದೆ. ಮಕ್ಕಳಿಗೆ ಮಾತ್ರವಲ್ಲದೆ, ದೊಡ್ಡವರಿಗೂ ಗೂಗಲ್ ಡೂಡಲ್ ಮೂಲಕ ಚಂದ್ರನ ಚಲನೆಯ ವಿವಿಧ ಹಂತಗಳನ್ನು ಪರಿಚಯಿಸಿದೆ.

ಗೂಗಲ್ ಡೂಡಲ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಪ್ರತಿ ಹೊಸ ವಿಚಾರವನ್ನು, ದಿನ ವಿಶೇಷ, ಹುಟ್ಟುಹಬ್ಬ ಮತ್ತು ಆಚರಣೆಯನ್ನು ಗೂಗಲ್ ಆಕರ್ಷಕ ಡೂಡಲ್ ಮೂಲಕ ಆಯಾ ಪ್ರದೇಶಕ್ಕೆ ಅನುಗುಣವಾಗಿ ಒದಗಿಸುತ್ತದೆ. ಶೈಕ್ಷಣಿಕವಾಗಿಯೂ ಇದು ಹೆಚ್ಚು ಪ್ರಸ್ತುತವಾಗಿದ್ದು, ಮಕ್ಕಳಿಗೆ ಇಷ್ಟವಾಗುವಂತಿರುತ್ತದೆ.
ಚಂದ್ರನ ಪರಿಭ್ರಮಣೆ ಮತ್ತು ಭೂಮಿಯ ಚಲನೆ, ಗ್ರಹಗತಿ, ಸೌರಮಂಡಲದಲ್ಲಿ ಜರಗುವ ಅಪರೂಪದ ಖಗೋಳ ವಿದ್ಯಮಾನಗಳು ಮಕ್ಕಳಿಗೆ ಮಾತ್ರವಲ್ಲದೆ, ಜನರಿಗೂ ಆಸಕ್ತಿಯ ಸಂಗತಿಗಳಾಗಿವೆ. ಇಂತಹ ಪ್ರತಿ ಅಚ್ಚರಿಗಳನ್ನು ಮೋಜಿನ ಆಟದ ಮೂಲಕ ಗೂಗಲ್ ಡೂಡಲ್ ಪ್ರಸ್ತುತಪಡಿಸುತ್ತಿದೆ.
ಜನವರಿಯ ಹಾಫ್ ಮೂನ್ ಡೂಡಲ್
ಈ ಬಾರಿ ಗೂಗಲ್ ಜನವರಿಯ ಹಾಫ್ ಮೂನ್ ಅನ್ನು ಆಕರ್ಷಕ ಲೂನಾರ್ ಫೇಸ್ ಗೇಮ್ ಮೂಲಕ ಪರಿಚಯಿಸಿದೆ. ಜನವರಿಯ ಅರ್ಧ ಚಂದ್ರ, ಚಂದ್ರನ ವಿವಿಧ ಹಂತದ ಚಲನೆಯನ್ನು ಡೂಡಲ್ ಆಟದ ಮೂಲಕ ನಾವು ಗಮನಿಸಬಹುದು. ಸೃಜನಾತ್ಮಕ ವಿನ್ಯಾಸ ಮತ್ತು ರಚನೆಯ ಮೂಲಕ ಚಂದ್ರನ ವಿವಿಧ ಹಂತಗಳನ್ನು ಗೂಗಲ್ ಡೂಡಲ್ ಮೂಲಕ ಒದಗಿಸಿದೆ.
ಚಂದ್ರನ ಚಲನೆಯ ಪರಿಚಯ
ಹುಣ್ಣಿಮೆಯ ಪೂರ್ಣಚಂದ್ರ ಮತ್ತು ಹದಿನೈದು ದಿನ ಕಳೆದ ಬಳಿಕ ಚಂದ್ರನ ಆಕಾರದಲ್ಲಿ ಬದಲಾವಣೆ ಮತ್ತು ಅಮಾವಾಸ್ಯೆಗೆ ಕಣ್ಮರೆಯಾಗುವ ಚಂದ್ರ ಹೀಗೆ ಹಲವು ಸಂಗತಿಗಳನ್ನು ನಾವು ಗೂಗಲ್ ಡೂಡಲ್ ಆಟದ ಮೂಲಕ ತಿಳಿದುಕೊಳ್ಳಬಹುದು. ಡೂಡಲ್ ಗೇಮ್‌ನಲ್ಲಿ ಮೂರು ಹಂತದ ಆಟಗಳಿದ್ದು, ಆಟದ ಒಂದೊಂದೆ ಹಂತಗಳನ್ನು ಆಡುತ್ತಾ ಹೋದಂತೆ ನಮಗೆ ಹೆಚ್ಚಿನ ಪಾಯಿಂಟ್ ಸೇರ್ಪಡೆಯಾಗುತ್ತಾ ಹೋಗುತ್ತದೆ.
ಗೂಗಲ್ ಡೂಡಲ್ ಆಡಿ
ಚಂದ್ರನ ಚಲನೆ, ಸೌರಮಂಡಲದ ರಚನೆ ಮತ್ತು ಕಾರ್ಯವನ್ನು ಮಕ್ಕಳಿಗೆ ಪರಿಚಯಿಸಲು ಮತ್ತು ಖಗೋಳಶಾಸ್ತ್ರದ ಬಗ್ಗೆ ಅಚ್ಚರಿಯ ಸಂಗತಿಗಳನ್ನು ತಿಳಿಸಲು ಗೂಗಲ್‌ನ ಆಕರ್ಷಕ ಡೂಡಲ್‌ಗಳು ಸಹಾಯ ಮಾಡುತ್ತವೆ. ನೀವು ಕೂಡ ಗೂಗಲ್ ಹೋಮ್ ಪೇಜ್ ತೆರೆದಾಗ ಇಂದಿನ ವಿಶೇಷ ಡೂಡಲ್ ಕಾಣಿಸಿಕೊಳ್ಳುತ್ತದೆ. ಅಲ್ಲಿನ ಡೂಡಲ್ ಮೇಲೆ ಕ್ಲಿಕ್ ಮಾಡಿ, ಚಂದ್ರನ ಚಲನೆಯ ಹಂತಗಳನ್ನು ಗೇಮ್ ಮೂಲಕ ತಿಳಿದುಕೊಳ್ಳಬಹುದು.
